Petrol-Diesel Price Today: ಇದೇ ಮೊದಲ ಬಾರಿಗೆ ಪೆಟ್ರೋಲ್ ದರ ಭಾರೀ ಇಳಿಕೆ! ನಿಮ್ಮ ನಗರದ ತೈಲ ಬೆಲೆ ಇಲ್ಲಿ ಗಮನಿಸಿ

ಪೆಟ್ರೋಲ್ ಬೆಲೆ

ಪೆಟ್ರೋಲ್ ಬೆಲೆ

ರಾಜ್ಯದೆಲ್ಲೆಡೆ ಇಂದು ಇಂಧನ ದರದಲ್ಲಿ ದೊಡ್ಡ ವ್ಯತ್ಯಾಸವಿಲ್ಲ, ಆದರೂ ವಾಹನ ಸವಾರರ ಅರಿವಿಗಾಗಿ ರಾಜ್ಯದ ಪ್ರತಿಯೊಂದು ನಗರದಲ್ಲಿ ಇಂದು ಪೆಟ್ರೋಲ್-ಡೀಸೆಲ್ ದರಗಳು ಎಷ್ಟಿವೆ ಅನ್ನೋದನ್ನು ಇಲ್ಲಿ ಕೊಡಲಾಗಿದೆ.

  • Trending Desk
  • 2-MIN READ
  • Last Updated :
  • Bangalore, India
  • Share this:

Petrol and Diesel Rate Today: ಇಂದು ರಾಜ್ಯದ ಉತ್ತರ ಕನ್ನಡದಲ್ಲಿ 1 ರೂ. 78 ಪೈಸೆಗಳಷ್ಟು ಪೆಟ್ರೋಲ್ ಬೆಲೆ ಇಳಿದಿದ್ದರೆ ಶಿವಮೊಗ್ಗದಲ್ಲಿ 1 ರೂ. 2 ಪೈಸೆಗಳಷ್ಟು ಏರಿದೆ. ಮಿಕ್ಕಂತೆ ದೊಡ್ಡ ವ್ಯತ್ಯಾಸ ಕಂಡುಬಂದಿಲ್ಲ, ಆದಾಗ್ಯೂ ಪ್ರತಿನಿತ್ಯದಂತೆ ಕೆಲ ಪೈಸೆಗಳಷ್ಟು ವ್ಯತ್ಯಾಸವಿರುವುದನ್ನು ನೋಡಬಹುದು. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಪೆಟ್ರೋಲ್ (Petrol Price) ಹಾಗೂ ಡೀಸೆಲ್ ದರ (Diesel Price) ಪ್ರತಿದಿನದಂತೆ ಸ್ಥಿರವಾದ ಬೆಲೆಯಲ್ಲೇ ಮುಂದುವರೆದಿದೆ.


ಇಂಧನ ಅದರಲ್ಲೂ ವಿಶೇಷವಾಗಿ ನವೀಕರಿಸಲಾಗದ ಶಕ್ತಿಯ ಮೂಲಗಳಾದ ಪೆಟ್ರೋಲ್ ಹಾಗೂ ಡೀಸೆಲ್ ಎಂಬುದು ಜಗತ್ತಿನ ಅತಿ ಅಗತ್ಯ ಅವಶ್ಯಕತೆಗಳಲ್ಲಿ ಒಂದಾಗಿದೆ. ಹಾಗಾಗಿ ಎರಡಕ್ಕೂ ಜಗತ್ತಿನಾದ್ಯಂತ ಎಲ್ಲಿಲ್ಲದ ಬೇಡಿಕೆಯಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.


ನಿತ್ಯ ವಾಹನಗಳ ಓಡಾಟದಿಂದ ಹಲವು ಅವಶ್ಯಕ ಕಾರ್ಖಾನೆಗಳ ಕಾರ್ಯಾಚರಣೆಗೆ ಈ ಇಂಧನದ ಅವಶ್ಯಕತೆ ಇರುತ್ತದೆ ಹಾಗೂ ಪೆಟ್ರೋಲ್ ಮತ್ತು ಡೀಸೆಲ್ ಗಳಂತಹ ಇಂಧನವನ್ನು ಸಮುದ್ರ ಗರ್ಭದಾಳದಲ್ಲಿ ದೊರಕುವ ಕಚ್ಚಾ ತೈಲದಿಂದ ಉತ್ಪಾದಿಸಲಾಗುತ್ತದೆ. ಜಗತ್ತಿನಾದ್ಯಂತ ಕೆಲವೇ ರಾಷ್ಟ್ರಗಳು ಹೀಗೆ ಕಚ್ಚಾ ತೈಲದ ನಿಕ್ಷೇಪಗಳನ್ನು ಹೊಂದಿದ್ದು ಅವುಗಳಿಂದ ಜಗತ್ತಿನ ಇತರೆ ರಾಷ್ಟ್ರಗಳು ತೈಲ ಖರೀದಿಸುತ್ತವೆ.


ಇದನ್ನೂ ಓದಿ: Best Airports: ವಿಶ್ವದ ಬೆಸ್ಟ್​ ಏರ್​ಪೋರ್ಟ್​​ಗಳ ಪಟ್ಟಿಯಲ್ಲಿ ಬೆಂಗಳೂರು ವಿಮಾನ ನಿಲ್ದಾಣ!


ಭಾರತ ಸಹ ತನ್ನ ದೊಡ್ಡ ಜನಸಂಖ್ಯೆಗನುಗುಣವಾದ ಬೇಡಿಕೆಯನ್ನು ಪೂರೈಸಲು ಅಪಾರ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಂಡು ತನ್ನಲ್ಲಿರುವ ರಿಫೈನರಿಗಳ ಮೂಲಕ ಅದನ್ನು ಸಂಸ್ಕರಿಸಿ ಇತರೆ ಭಾಗಗಳಿಗೆ ವಿತರಿಸುತ್ತದೆ.


ಇನ್ನು ಕಚ್ಚಾ ತೈಲವನ್ನು ಸಾಮಾನ್ಯವಾಗಿ ಬ್ಯಾರೆಲ್ ಗಳಲ್ಲಿ ಮಾರಾಟ ಮಾಡಲಾಗುತ್ತದೆ ಹಾಗೂ ಬ್ಯಾರೆಲ್ ಒಂದಕ್ಕೆ ಇಂತಿಷ್ಟು ಡಾಲರ್ ಮೌಲ್ಯ ಎಂದಿರುತ್ತದೆ. ಪ್ರತಿ ಬ್ಯಾರೆಲ್ ಬೆಲೆಗಳು ಸಹಜವಾಗಿ ಹಲವಾರು ಅಂತಾರಾಷ್ಟ್ರೀಯ ವಿದ್ಯಮಾನಗಳಿಂದಾಗಿ ಪ್ರಭಾವಿಸಲ್ಪಡುತ್ತಿರುತ್ತವೆ.


ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು


ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


ಬಾಗಲಕೋಟೆ - ರೂ. 102.50 (2 ಪೈಸೆ ಏರಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 102.25 (31 ಪೈಸೆ ಏರಿಕೆ)
ಬೆಳಗಾವಿ - ರೂ. 101.97 (62 ಪೈಸೆ ಇಳಿಕೆ)
ಬಳ್ಳಾರಿ - ರೂ. 103.73 (12 ಪೈಸೆ ಏರಿಕೆ)
ಬೀದರ್ - ರೂ. 102.44 (16 ಪೈಸೆ ಏರಿಕೆ)
ವಿಜಯಪುರ - ರೂ. 101.72 (00)
ಚಾಮರಾಜನಗರ - ರೂ. 101.76 (34 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ - ರೂ. 102.40 (46 ಪೈಸೆ ಏರಿಕೆ)
ಚಿಕ್ಕಮಗಳೂರು - ರೂ. 103.47 (87 ಪೈಸೆ ಏರಿಕೆ)
ಚಿತ್ರದುರ್ಗ - ರೂ. 102.73 (00)
ದಕ್ಷಿಣ ಕನ್ನಡ - ರೂ. 101.21 (64 ಪೈಸೆ ಇಳಿಕೆ)
ದಾವಣಗೆರೆ - ರೂ. 103.36 (22 ಪೈಸೆ ಏರಿಕೆ)
ಧಾರವಾಡ - ರೂ. 101.71 (00)
ಗದಗ - ರೂ. 102.25 (13 ಪೈಸೆ ಇಳಿಕೆ)
ಕಲಬುರಗಿ - ರೂ. 101.71 (00)
ಹಾಸನ - ರೂ. 101.90 (15 ಪೈಸೆ ಇಳಿಕೆ)
ಹಾವೇರಿ - ರೂ. 102.30 (11 ಪೈಸೆ ಇಳಿಕೆ)
ಕೊಡಗು - ರೂ. 103.17 (00)
ಕೋಲಾರ - ರೂ. 101.81 (00)
ಕೊಪ್ಪಳ - ರೂ. 102.86 (24 ಪೈಸೆ ಇಳಿಕೆ)
ಮಂಡ್ಯ - ರೂ. 101.74 (43 ಪೈಸೆ ಇಳಿಕೆ)
ಮೈಸೂರು - ರೂ. 101.83 (33 ಪೈಸೆ ಏರಿಕೆ)
ರಾಯಚೂರು - ರೂ. 101.84 (00)
ರಾಮನಗರ - ರೂ. 102.25 (14 ಪೈಸೆ ಇಳಿಕೆ)
ಶಿವಮೊಗ್ಗ - ರೂ. 103.61 (1 ರೂ. 2 ಪೈಸೆ ಏರಿಕೆ)
ತುಮಕೂರು - ರೂ. 102.64 (17 ಪೈಸೆ ಇಳಿಕೆ)
ಉಡುಪಿ - ರೂ. 101.59 (22 ಪೈಸೆ ಇಳಿಕೆ)
ಉತ್ತರ ಕನ್ನಡ - ರೂ. 102.01 (1 ರೂ. 78 ಪೈಸೆ ಇಳಿಕೆ)
ವಿಜಯನಗರ - ರೂ. 103.54 (20 ಪೈಸೆ ಏರಿಕೆ)
ಯಾದಗಿರಿ - ರೂ. 102.79 (36 ಪೈಸೆ ಏರಿಕೆ)


ಇದನ್ನೂ ಓದಿ: Mulberry Farming: 20 ವರ್ಷಗಳಲ್ಲಿ ದುಡಿಯಬಹುದಾದ ಹಣವನ್ನು ಒಂದೇ ವರ್ಷದಲ್ಲಿ ಗಳಿಸಲು ಈ ಹಣ್ಣು ಬೆಳೆಯಿರಿ


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


ಬಾಗಲಕೋಟೆ - ರೂ. 88.42
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 88.17
ಬೆಳಗಾವಿ - ರೂ. 87.94
ಬಳ್ಳಾರಿ - ರೂ. 89.53
ಬೀದರ್ - ರೂ. 88.37
ವಿಜಯಪುರ - ರೂ. 87.71
ಚಾಮರಾಜನಗರ - ರೂ. 87.73
ಚಿಕ್ಕಬಳ್ಳಾಪುರ - ರೂ. 88.31
ಚಿಕ್ಕಮಗಳೂರು - ರೂ. 89.22
ಚಿತ್ರದುರ್ಗ - ರೂ. 88.51
ದಕ್ಷಿಣ ಕನ್ನಡ - ರೂ. 87.20
ದಾವಣಗೆರೆ - ರೂ. 89.07
ಧಾರವಾಡ - ರೂ. 87.71
ಗದಗ - ರೂ. 88.20
ಕಲಬುರಗಿ - ರೂ. 87.71
ಹಾಸನ - ರೂ. 87.76
ಹಾವೇರಿ - ರೂ. 88.24
ಕೊಡಗು - ರೂ. 88.86
ಕೋಲಾರ - ರೂ. 87.77
ಕೊಪ್ಪಳ - ರೂ. 88.75
ಮಂಡ್ಯ - ರೂ. 87.71
ಮೈಸೂರು - ರೂ. 87.80
ರಾಯಚೂರು - ರೂ. 87.84
ರಾಮನಗರ - ರೂ. 88.17
ಶಿವಮೊಗ್ಗ - 89.35
ತುಮಕೂರು - ರೂ. 88.52
ಉಡುಪಿ - ರೂ. 87.54
ಉತ್ತರ ಕನ್ನಡ - ರೂ. 87.98
ವಿಜಯನಗರ - ರೂ. 89.36
ಯಾದಗಿರಿ - ರೂ. 88.68



ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹಾಗೂ ಮಾರುಕಟ್ಟೆ ಎರಡೂ ಇದೆ. ಇನ್ನು ಈ ಇಂಧನಗಳನ್ನು ಕಚ್ಚಾತೈಲದಿಂದ ಉತ್ಪಾದಿಸಲಾಗುತ್ತದೆ ಹಾಗೂ ಕಚ್ಚಾ ತೈಲದ ನಿಕ್ಷೇಪಗಳಿರುವ ರಾಷ್ಟ್ರಗಳು ಇದನ್ನು ಹೊರತೆಗೆದು ಮಾರಾಟ ಮಾಡುತ್ತವೆ.

First published: