Petrol-Diesel Rate Today: ನಿಮ್ಮ ನಗರದಲ್ಲಿ ಇಂದು ಪೆಟ್ರೋಲ್-ಡೀಸೆಲ್ ದರ ಹೇಗಿವೆ? ಇಲ್ಲಿದೆ ಪೂರ್ಣ ವಿವರ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ರಾಜ್ಯದೆಲ್ಲೆಡೆ ಇಂದು ಇಂಧನ ದರದಲ್ಲಿ ದೊಡ್ಡ ವ್ಯತ್ಯಾಸವಿಲ್ಲ, ಆದರೂ ವಾಹನ ಸವಾರರ ಅರಿವಿಗಾಗಿ ರಾಜ್ಯದ ಪ್ರತಿಯೊಂದು ನಗರದಲ್ಲಿ ಇಂದು ಪೆಟ್ರೋಲ್-ಡೀಸೆಲ್ ದರಗಳು ಎಷ್ಟಿವೆ ಅನ್ನೋದನ್ನು ಇಲ್ಲಿ ಕೊಡಲಾಗಿದೆ.

  • Share this:

Karnataka Petrol and Diesel Rate Today: ಇಂದು ಎಂದಿನಂತೆ ರಾಜ್ಯದೆಲ್ಲೆಡೆ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ದೊಡ್ಡ ವ್ಯತ್ಯಾಸ ಕಂಡುಬಂದಿಲ್ಲ, ಆದಾಗ್ಯೂ ಪ್ರತಿನಿತ್ಯದಂತೆ ಕೆಲ ಪೈಸೆಗಳಷ್ಟು ವ್ಯತ್ಯಾಸವಿರುವುದನ್ನು ಗಮನಿಸಬಹುದಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಪೆಟ್ರೋಲ್ (Petrol Price) ಹಾಗೂ ಡೀಸೆಲ್ ದರ (Diesel Price) ನಿತ್ಯದಂತೆ ಸ್ಥಿರವಾದ ಬೆಲೆಯಲ್ಲೇ ಮುಂದುವರೆದಿದೆ.


ನವೀಕರಿಸಲಾಗದ ಶಕ್ತಿ ಮೂಲಗಳಾಗಿರುವ ಪೆಟ್ರೋಲ್ ಹಾಗೂ ಡೀಸೆಲ್ ಇಂಧನಗಳು ಇಂದು ಜಗತ್ತಿನಾದ್ಯಂತ ಅತಿ ಅವಶ್ಯಕವಾಗಿ ಬೇಕಾಗಿರುವ ವಸ್ತುವಾಗಿದೆ. ವಾಹನಗಳ ಓಡಾಟದಿಂದ ಹಿಡಿದು ಹಲವು ಕೈಗಾರಿಕೆಗಳ ನಿತ್ಯ ಕಾರ್ಯಾಚರಣೆಗೆ ಈ ಇಂಧನ ಎಂಬುದು ಅತ್ಯಾವಶ್ಯಕವಾಗಿ ಬೇಕಾಗಿರುವ ವಸ್ತುವಾಗಿದೆ.


ಹಾಗಾಗಿಯೇ ಪೆಟ್ರೋಲ್ ಅಥವಾ ಡೀಸೆಲ್ ಇಂಧನಗಳಿಗೆ ಪ್ರಪಂಚಾದ್ಯಂತ ಅಪಾರ ಬೇಡಿಕೆಯಿದೆ. ಇನ್ನು ಈ ಸಂಸ್ಕರಿಸಿದ ಶಕ್ತಿ ಮೂಲಗಳನ್ನು ಪ್ರಮುಖವಾಗಿ ಕಚ್ಚಾ ತೈಲದಿಂದ ಉತ್ಪಾದಿಸಲಾಗುತ್ತದೆ. ಆದ್ದರಿಂದ ಈ ಕಚ್ಚಾ ತೈಲಕ್ಕ ಜಗತ್ತಿನಾದ್ಯಂತ ಅಪಾರ ಬೇಡಿಕೆಯಿದ್ದು ಇದು ಅಂತಾರಾಷ್ಟ್ರೀಯ ಮಾಟದಲ್ಲಿ ದೊಡ್ಡ ಮಾರುಕಟ್ಟೆಯನ್ನೇ ಹೊಂದಿದೆ.


ಕಚ್ಚಾ ತೈಲದ ನಿಕ್ಷೇಪಗಳಿರುವ ಅಧಿಕೃತ ರಾಷ್ಟ್ರಗಳಿಂದ ಜಗತ್ತಿನ ಇತರೆ ರಾಷ್ಟ್ರಗಳು ತಮಗೆ ಬೇಕಾಗುವಷ್ಟು ಕಚ್ಚಾ ತೈಲವನ್ನು ಖರೀದಿಸುತ್ತವೆ. ಭಾರತ ಸಹ ಇದಕ್ಕೆ ಹೊರತಾಗಿಲ್ಲ. ತನ್ನ ದೊಡ್ಡ ಜನಸಂಖ್ಯೆಗನುಗುಣವಾದ ಬೇಡಿಕೆಯನ್ನು ಪೂರೈಸಲು ಭಾರತ ಅಪಾರ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಂಡು ತನ್ನಲ್ಲಿರುವ ರಿಫೈನರಿಗಳ ಮೂಲಕ ಅದನ್ನು ಸಂಸ್ಕರಿಸಿ ಇತರೆ ಭಾಗಗಳಿಗೆ ವಿತರಿಸುತ್ತದೆ.


ಇದನ್ನೂ ಓದಿ: Pension Rule: ಪಿಂಚಣಿ ಬಗ್ಗೆ ಸರ್ಕಾರ ಕೈಗೊಂಡಿದೆ ಈ ಮಹತ್ವದ ನಿರ್ಧಾರ!


ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು


ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


ಬಾಗಲಕೋಟೆ - ರೂ. 102.55 (5 ಪೈಸೆ ಏರಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 102.09 (51 ಪೈಸೆ ಏರಿಕೆ)
ಬೆಳಗಾವಿ - ರೂ. 102.64 (9 ಪೈಸೆ ಇಳಿಕೆ)
ಬಳ್ಳಾರಿ - ರೂ. 103.73 (17 ಪೈಸೆ ಇಳಿಕೆ)
ಬೀದರ್ - ರೂ. 102.28 (16 ಪೈಸೆ ಇಳಿಕೆ)
ವಿಜಯಪುರ - ರೂ. 101.72 (85 ಪೈಸೆ ಇಳಿಕೆ)
ಚಾಮರಾಜನಗರ - ರೂ. 102.06 (30 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - ರೂ. 102.39 (56 ಪೈಸೆ ಏರಿಕೆ)
ಚಿಕ್ಕಮಗಳೂರು - ರೂ. 102.80 (20 ಪೈಸೆ ಏರಿಕೆ)
ಚಿತ್ರದುರ್ಗ - ರೂ. 103.63 (90 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 101.13 (64 ಪೈಸೆ ಇಳಿಕೆ)
ದಾವಣಗೆರೆ - ರೂ. 103.63 (00)
ಧಾರವಾಡ - ರೂ. 101.70 (29 ಪೈಸೆ ಇಳಿಕೆ)
ಗದಗ - ರೂ. 102.25 (6 ಪೈಸೆ ಏರಿಕೆ)
ಕಲಬುರಗಿ - ರೂ. 101.71 (00)
ಹಾಸನ - ರೂ. 101.90 (23 ಪೈಸೆ ಏರಿಕೆ)
ಹಾವೇರಿ - ರೂ. 102.89 (42 ಪೈಸೆ ಏರಿಕೆ)
ಕೊಡಗು - ರೂ. 103.19 (6 ಪೈಸೆ ಏರಿಕೆ)
ಕೋಲಾರ - ರೂ. 101.87 (23 ಪೈಸೆ ಏರಿಕೆ)
ಕೊಪ್ಪಳ - ರೂ. 103.05 (19 ಪೈಸೆ ಏರಿಕೆ)
ಮಂಡ್ಯ - ರೂ. 102.17 (43 ಪೈಸೆ ಏರಿಕೆ)
ಮೈಸೂರು - ರೂ. 101.50 (33 ಪೈಸೆ ಇಳಿಕೆ)
ರಾಯಚೂರು - ರೂ. 102.67 (83 ಪೈಸೆ ಏರಿಕೆ)
ರಾಮನಗರ - ರೂ. 102.39 (11 ಪೈಸೆ ಏರಿಕೆ)
ಶಿವಮೊಗ್ಗ - ರೂ. 102.62 (64 ಪೈಸೆ ಇಳಿಕೆ)
ತುಮಕೂರು - ರೂ. 102.45 (19 ಪೈಸೆ ಇಳಿಕೆ)
ಉಡುಪಿ - ರೂ. 101.59 (33 ಪೈಸೆ ಇಳಿಕೆ)
ಉತ್ತರ ಕನ್ನಡ - ರೂ. 102.94 (93 ಪೈಸೆ ಏರಿಕೆ)
ವಿಜಯನಗರ - ರೂ. 103.12 (8 ಪೈಸೆ ಇಳಿಕೆ)
ಯಾದಗಿರಿ - ರೂ. 102.31 (48 ಪೈಸೆ ಇಳಿಕೆ)


ಇದನ್ನೂ ಓದಿ: 7th Pay Commission: ರಾಜ್ಯದ ಸರ್ಕಾರಿ ನೌಕರರ ಡಿಎ ಶೇ.3ರಷ್ಟು ಹೆಚ್ಚಳ!


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


ಬಾಗಲಕೋಟೆ - ರೂ. 88.46
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 88.03
ಬೆಳಗಾವಿ - ರೂ. 88.55
ಬಳ್ಳಾರಿ - ರೂ. 89.53
ಬೀದರ್ - ರೂ. 88.23
ವಿಜಯಪುರ - ರೂ. 87.71
ಚಾಮರಾಜನಗರ - ರೂ. 88
ಚಿಕ್ಕಬಳ್ಳಾಪುರ - ರೂ. 88.29
ಚಿಕ್ಕಮಗಳೂರು - ರೂ. 88.55
ಚಿತ್ರದುರ್ಗ - ರೂ. 89.32
ದಕ್ಷಿಣ ಕನ್ನಡ - ರೂ. 87.13
ದಾವಣಗೆರೆ - ರೂ. 89.33
ಧಾರವಾಡ - ರೂ. 87.70
ಗದಗ - ರೂ. 88.20
ಕಲಬುರಗಿ - ರೂ. 87.71
ಹಾಸನ - ರೂ. 87.76
ಹಾವೇರಿ - ರೂ. 88.77
ಕೊಡಗು - ರೂ. 88.90
ಕೋಲಾರ - ರೂ. 87.83
ಕೊಪ್ಪಳ - ರೂ. 88.91
ಮಂಡ್ಯ - ರೂ. 88.10
ಮೈಸೂರು - ರೂ. 87.49
ರಾಯಚೂರು - ರೂ. 88.59
ರಾಮನಗರ - ರೂ. 88.29
ಶಿವಮೊಗ್ಗ - 88.45
ತುಮಕೂರು - ರೂ. 88.36
ಉಡುಪಿ - ರೂ. 87.54
ಉತ್ತರ ಕನ್ನಡ - ರೂ. 88.76
ವಿಜಯನಗರ - ರೂ. 88.98
ಯಾದಗಿರಿ - ರೂ. 88.25

top videos


    ಇನ್ನು ಕಚ್ಚಾ ತೈಲವನ್ನು ಸಾಮಾನ್ಯವಾಗಿ ಬ್ಯಾರೆಲ್ ಗಳಲ್ಲಿ ಮಾರಾಟ ಮಾಡಲಾಗುತ್ತದೆ ಹಾಗೂ ಬ್ಯಾರೆಲ್ ಒಂದಕ್ಕೆ ಇಂತಿಷ್ಟು ಡಾಲರ್ ಮೌಲ್ಯ ಎಂದಿರುತ್ತದೆ. ಪ್ರತಿ ಬ್ಯಾರೆಲ್ ಬೆಲೆಗಳು ಸಹಜವಾಗಿ ಹಲವಾರು ಅಂತಾರಾಷ್ಟ್ರೀಯ ವಿದ್ಯಮಾನಗಳಿಂದಾಗಿ ಪ್ರಭಾವಿಸಲ್ಪಡುತ್ತಿರುತ್ತವೆ.

    First published: