ಬೆಂಗಳೂರು: ಇಂದು ಜಗತ್ತಿನಲ್ಲಿ ಇಂಧನ (Fuel Price) ಎಂಬುದು ಸಾಕಷ್ಟು ಅವಶ್ಯಕತೆ ಹೊಂದಿರುವ ಸಂಪನ್ಮೂಲವಾಗಿದೆ. ಹಲವು ಕೈಗಾರಿಕೆಗಳಿಂದ ಹಿಡಿದು ಪ್ರಮುಖವಾಗಿ ವಾಹನಗಳ ಓಡಾಟಕ್ಕೆ ಇಂಧನ ಅತಿ ಅವಶ್ಯಕವಾಗಿದೆ. ಹಾಗಾಗಿಯೇ ಪೆಟ್ರೋಲ್ (Petrol Rate) ಮತ್ತು ಡೀಸೆಲ್ ಗೆ (Diesel Price) ಜಗತ್ತಿನಾದ್ಯಂತ ಎಲ್ಲ ಕಡೆ ಅಪಾರವಾದ ಬೇಡಿಕೆಯಿದೆ. ಇನ್ನು ಪೆಟ್ರೋಲ್ ಹಾಗೂ ಡೀಸೆಲ್ ನಂತಹ ಇಂಧನಗಳಿಗೆ ಕಚ್ಚಾ ತೈಲ ಎಂಬುದು ಪ್ರಮುಖ ಮೂಲವಾಗಿದ್ದು ಇದಕ್ಕೆಂದೇ ದೊಡ್ಡದಾದ ಅಂತಾರಾಷ್ಟ್ರೀಯ ಮಾರುಕಟ್ಟೆಯೇ ಇದೆ.
ಇನ್ನು ತೈಲದ ಈ ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಸದಾ ಸ್ಥಿರವಾಗಿರುವುದಿಲ್ಲ. ಹಲವು ಜಾಗತಿಕ ವಿದ್ಯಮಾನಗಳಿಂದಾಗಿ ಅದರ ಬೆಲೆ ಸದಾ ಪ್ರಭಾವಿಸಲ್ಪಡುತ್ತಿರುತ್ತದೆ. ಉದಾಹರಣೆಗೆ ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದ್ದಾಗ ಕಚ್ಚಾ ತೈಲದ ಬೆಲೆ ಅಂತಾರಾಷ್ಟ್ರೀಯವಾಗಿ ಆಗಸಕ್ಕೇರಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಇನ್ನು ಸಂಸ್ಕರಿಸಿದ ಪೆಟ್ರೋಲ್ ಅಥವಾ ಡೀಸೆಲ್ ಇಂಧನವನ್ನು ಮೂಲತಃ ಕಚ್ಚಾ ತೈಲದಿಂದ ಉತ್ಪಾದಿಸಲಾಗುತ್ತದೆ ಹಾಗೂ ಭಾರತದಲ್ಲಿ ಯಾವುದೇ ತೈಲ ನಿಕ್ಷೇಪಗಳಿರದ ಕಾರಣ ಭಾರತ ತನ್ನ ಅತಿ ದೊಡ್ಡ ಇಂಧನ ಅವಶ್ಯಕತೆಗಾಗಿ ವಿದೇಶಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ.
ಉತ್ತರ ಕನ್ನಡ ಒಂದನ್ನು ಹೊರತುಪಡಿಸಿ ಮಿಕ್ಕಂತೆ ರಾಜ್ಯದಲ್ಲಿ ಎಂದಿನಂತೆ ಇಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ಸಹಜವಾದ ಸಣ್ಣ ಪುಟ್ಟ ಕೆಲ ಪೈಸೆಗಳಷ್ಟು ವ್ಯತ್ಯಾಸವನ್ನು ಕಾಣಬಹುದಾಗಿದೆ. ನಿನ್ನೆಗೆ ಹೋಲಿಸಿದರೆ ಇಂದು ಉತ್ತರ ಕನ್ನಡದಲ್ಲಿ ಪೆಟ್ರೋಲ್ ಬೆಲೆ ಒಂದು ರೂ. ಏರಿಕೆಯಾಗಿದೆ.
ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ - ರೂ. 102.37 (13 ಪೈಸೆ ಇಳಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 102 (00)
ಬೆಳಗಾವಿ - ರೂ. 102.84 (45 ಪೈಸೆ ಏರಿಕೆ)
ಬಳ್ಳಾರಿ - ರೂ. 103.90 (00)
ಬೀದರ್ - ರೂ. 102.52 (8 ಪೈಸೆ ಏರಿಕೆ)
ವಿಜಯಪುರ - ರೂ. 101.72 (00)
ಚಾಮರಾಜನಗರ - ರೂ. 102.07 (6 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ - ರೂ. 101.94 (46 ಪೈಸೆ ಇಳಿಕೆ)
ಚಿಕ್ಕಮಗಳೂರು - ರೂ. 103.46 (34 ಪೈಸೆ ಏರಿಕೆ)
ಚಿತ್ರದುರ್ಗ - ರೂ. 102.79 (00)
ದಕ್ಷಿಣ ಕನ್ನಡ - ರೂ. 101.21 (00)
ದಾವಣಗೆರೆ - ರೂ. 104.10 (19 ಪೈಸೆ ಏರಿಕೆ)
ಧಾರವಾಡ - ರೂ. 101.71 (00)
ಗದಗ - ರೂ. 102.25 (54 ಪೈಸೆ ಇಳಿಕೆ)
ಕಲಬುರಗಿ - ರೂ. 102.29 (00)
ಹಾಸನ - ರೂ. 102.45 (51 ಪೈಸೆ ಏರಿಕೆ)
ಹಾವೇರಿ - ರೂ. 102.58 (00)
ಕೊಡಗು - ರೂ. 103.26 (00)
ಕೋಲಾರ - ರೂ. 102.31 (00)
ಕೊಪ್ಪಳ - ರೂ. 103.03 (17 ಪೈಸೆ ಏರಿಕೆ)
ಮಂಡ್ಯ - ರೂ. 101.78 (28 ಪೈಸೆ ಏರಿಕೆ)
ಮೈಸೂರು - ರೂ. 101.72 (00)
ರಾಯಚೂರು - ರೂ. 102.29 (45 ಪೈಸೆ ಏರಿಕೆ)
ರಾಮನಗರ - ರೂ. 102.28 (3 ಪೈಸೆ ಏರಿಕೆ)
ಶಿವಮೊಗ್ಗ - ರೂ. 103.93 (00)
ತುಮಕೂರು - ರೂ. 102.76 (00)
ಉಡುಪಿ - ರೂ. 101.44 (48 ಪೈಸೆ ಇಳಿಕೆ)
ಉತ್ತರ ಕನ್ನಡ - ರೂ. 103.01 (1 ರೂ. ಏರಿಕೆ)
ವಿಜಯನಗರ - ರೂ. 102.89 (31 ಪೈಸೆ ಇಳಿಕೆ)
ಯಾದಗಿರಿ - ರೂ. 102.79 (00)
ಇದನ್ನೂ ಓದಿ: Online Marketing: ಸಣ್ಣ ವ್ಯಾಪಾರಿಗಳಿಗೆ ಸೋಶಿಯಲ್ ಮೀಡಿಯಾಗಳಿಂದ ಏನು ಲಾಭ? ಇವುಗಳಿಂದ ಉತ್ಪನ್ನ ಪ್ರಚಾರ ಮಾಡುವುದು ಹೇಗೆ?
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ - ರೂ. 88.31
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.95
ಬೆಳಗಾವಿ - ರೂ. 88.73
ಬಳ್ಳಾರಿ - ರೂ. 89.68
ಬೀದರ್ - ರೂ. 88.44
ವಿಜಯಪುರ - ರೂ. 87.71
ಚಾಮರಾಜನಗರ - ರೂ. 88.01
ಚಿಕ್ಕಬಳ್ಳಾಪುರ - ರೂ. 87.89
ಚಿಕ್ಕಮಗಳೂರು - ರೂ. 89.07
ಚಿತ್ರದುರ್ಗ - ರೂ. 88.48
ದಕ್ಷಿಣ ಕನ್ನಡ - ರೂ. 87.20
ದಾವಣಗೆರೆ - ರೂ. 89.66
ಧಾರವಾಡ - ರೂ. 87.71
ಗದಗ - ರೂ. 88.20
ಕಲಬುರಗಿ - ರೂ. 88.24
ಹಾಸನ - ರೂ. 88.17
ಹಾವೇರಿ - ರೂ. 88.49
ಕೊಡಗು - ರೂ. 88.92
ಕೋಲಾರ - ರೂ. 88.22
ಕೊಪ್ಪಳ - ರೂ. 88.92
ಮಂಡ್ಯ - ರೂ. 87.75
ಮೈಸೂರು - ರೂ. 87.70
ರಾಯಚೂರು - ರೂ. 88.25
ರಾಮನಗರ - ರೂ. 88.20
ಶಿವಮೊಗ್ಗ - 89.55
ತುಮಕೂರು - ರೂ. 88.64
ಉಡುಪಿ - ರೂ. 87.41
ಉತ್ತರ ಕನ್ನಡ - ರೂ. 88.80
ವಿಜಯನಗರ - ರೂ. 88.77
ಯಾದಗಿರಿ - ರೂ. 88.68
ಇದನ್ನೂ ಓದಿ: DigiLocker: ಡಿಜಿಲಾಕರ್ನಿಂದ ವ್ಯಾಪಾರಿಗಳಿಗಿದೆ ಇಷ್ಟೆಲ್ಲ ಪ್ರಯೋಜನ! ನೀವೂ ಚೆಕ್ ಮಾಡಿ
ಭಾರತದಲ್ಲಿ ಕಚ್ಚಾ ತೈಲವು ಆಮದುಗೊಂಡ ಮೇಲೆ ಇಲ್ಲಿ ಅದನ್ನು ರಿಫೈನರಿಗಳ ಮೂಲಕ ಸಂಸ್ಕರಿಸಿ ಬಳಕೆಯೋಗ್ಯ ಇಂಧನಗಳಾಗಿ ಪರಿವರ್ತಿಸಲಾಗುತ್ತದೆ ಹಾಗೂ ಈ ಒಟ್ಟಾರೆ ಪ್ರಕ್ರಿಯೆ ಸಾಕಷ್ಟು ದುಬಾರಿಯಾಗಿರುತ್ತದೆ. ತದನಂತರ ಇವುಗಳಿಗೆ ಸುಂಕಗಳನ್ನು ವಿಧಿಸಿ ನಂತರ ರಾಜ್ಯಗಳಿಗೆ ವಿತರಿಸಲಾಗುತ್ತದೆ. ಹಾಗಾಗಿ ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಗಳ ಒಂದೇ ಸ್ಥಿರವಾದ ಬೆಲೆಯನ್ನು ನಿರೀಕ್ಷಿಸಲಾಗದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ