Petrol Price Today: ರಾಜ್ಯದ 18 ಜಿಲ್ಲೆಗಳಲ್ಲಿ ಇಳಿಕೆ ಕಂಡ ಪೆಟ್ರೋಲ್ ದರ, ನಿಮ್ಮೂರಿನ ತೈಲ ಬೆಲೆ ಹೀಗಿದೆ ನೋಡಿ

Petrol And Diesel Price Today: ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದ ಬೆಲೆಯಲ್ಲೇ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಶ್ರೀಸಾಮಾನ್ಯನ ಕೈಸುಡುವಂತಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂದು ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ (Petrol-Diesel) ಬೆಲೆಗಳಲ್ಲಿ (Price)  ಗಮನಾರ್ಹವಾದ ಏರಿಕೆ ಅಥವಾ ಇಳಿಕೆ ಕಂಡುಬಂದಿಲ್ಲ. ಆದಾಗ್ಯೂ, ಚಿಕ್ಕಪುಟ್ಟ ವ್ಯತ್ಯಾಸಗಳು ಸಾಮಾನ್ಯವಾಗಿದ್ದು ನಿತ್ಯವು ಒಂದಿಷ್ಟು ಪೈಸೆಗಳಷ್ಟು ಏರಿಳಿತ ಇದ್ದೆ ಇರುತ್ತದೆ. ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ (International Market) ಕಚ್ಚಾ ತೈಲದ ಬೆಲೆ ಮೊದಲಿನ ಸ್ಥಿತಿಗೆ ಇಳಿಯುತ್ತಿಲ್ಲ, ಹಾಗಾಗಿ, ಬೆಲೆ ಏರಿಳಿತಗಳ ಈ ಕಣ್ಣು ಮುಚ್ಚಾಲೆ ಆಟ ನಡೆಯುತ್ತಲೇ ಇದೆ. ಅಷ್ಟಕ್ಕೂ, ಈ ಹಿಂದೆ ವಾಹನ ಸವಾರರರು ರಸ್ತೆ ಮೇಲೆ ವಾಹನ ಇಳಿಸಲೂ ಸಹ ಪರದಾಡುವಂತಾಗಿತ್ತು, ಏಕೆಂದರೆ ಪೆಟ್ರೋಲ್-ಡೀಸೆಲ್ ದರಗಳು ಅಷ್ಟು ದುಬಾರಿಯಾಗಿದ್ದವು. ತದನಂತರ ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ (Country) ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು.

ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದ ಬೆಲೆಯಲ್ಲೇ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಶ್ರೀಸಾಮಾನ್ಯನ ಕೈಸುಡುವಂತಾಗಿದೆ. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಮುಕ್ತಾಯವಾಗುವ ಸೂಚನೆಯೂ ಕಾಣುತ್ತಿಲ್ಲ.

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.

ಇದನ್ನೂ ಓದಿ: ಒಂದಕ್ಕಿಂತ ಹೆಚ್ಚು ಹೆಲ್ತ್​​ ಇನ್ಶೂರೆನ್ಸ್ ಇದ್ಯಾ? ಒಟ್ಟಿಗೆ ಕ್ಲೈಮ್​ ಮಾಡೋದು ಹೇಗೆ ಅಂತ ಇಲ್ಲಿದೆ ನೋಡಿ

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ - ರೂ. 102.39 (23 ಪೈಸೆ ಇಳಿಕೆ )
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ – ರೂ. 101.94 (36 ಪೈಸೆ ಏರಿಕೆ)
ಬೆಳಗಾವಿ - ರೂ. 102.65 (8 ಪೈಸೆ ಇಳಿಕೆ)
ಬಳ್ಳಾರಿ - ರೂ. 103.60 ( 30 ಪೈಸೆ ಏರಿಕೆ)
ಬೀದರ್ - ರೂ. 103.13 (55 ಪೈಸೆ ಏರಿಕೆ)
ವಿಜಯಪುರ - ರೂ. 101.72 (30 ಪೈಸೆ ಇಳಿಕೆ)
ಚಾಮರಾಜನಗರ - ರೂ. 102.79 (72 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - ರೂ. 101.94 (73 ಪೈಸೆ ಇಳಿಕೆ)
ಚಿಕ್ಕಮಗಳೂರು - ರೂ. 103.06 ( 32 ಪೈಸೆ ಇಳಿಕೆ)
ಚಿತ್ರದುರ್ಗ - ರೂ. 104.12 (57 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 101.21 ( 56 ಪೈಸೆ ಇಳಿಕೆ)
ದಾವಣಗೆರೆ - ರೂ. 104.29 (63 ಪೈಸೆ ಏರಿಕೆ)
ಧಾರವಾಡ - ರೂ. 101.70 (1 ಪೈಸೆ ಇಳಿಕೆ)
ಗದಗ - ರೂ. 102.75 (4 ಪೈಸೆ ಇಳಿಕೆ)
ಕಲಬುರಗಿ - ರೂ. 101.71 (29 ಪೈಸೆ ಇಳಿಕೆ)
ಹಾಸನ - ರೂ. 102.20 (23 ಪೈಸೆ ಇಳಿಕೆ)
ಹಾವೇರಿ - ರೂ. 102.58 (17 ಪೈಸೆ ಏರಿಕೆ)
ಕೊಡಗು - ರೂ. 103.58 (22 ಪೈಸೆ ಇಳಿಕೆ)
ಕೋಲಾರ - ರೂ. 101.87 (00)
ಕೊಪ್ಪಳ - ರೂ. 102.86 (00)
ಮಂಡ್ಯ - ರೂ. 101.78 (16 ಪೈಸೆ ಇಳಿಕೆ)
ಮೈಸೂರು - ರೂ. 101.78 (10 ಪೈಸೆ ಏರಿಕೆ)
ರಾಯಚೂರು - ರೂ. 101.84 (87 ಪೈಸೆ ಇಳಿಕೆ)
ರಾಮನಗರ - ರೂ. 102.25 (25 ಪೈಸೆ ಇಳಿಕೆ)
ಶಿವಮೊಗ್ಗ - ರೂ. 103.60 (22 ಪೈಸೆ ಇಳಿಕೆ)
ತುಮಕೂರು - ರೂ. 103.13 (68 ಪೈಸೆ ಇಳಿಕೆ)
ಉಡುಪಿ - ರೂ. 101.83 ( 39 ಪೈಸೆ ಏರಿಕೆ)
ಉತ್ತರ ಕನ್ನಡ - ರೂ. 102.01 (00)
ಯಾದಗಿರಿ - ರೂ. 102.79 (28 ಪೈಸೆ ಇಳಿಕೆ )

ಇದನ್ನೂ ಓದಿ: ಚಿನ್ನ ಖರೀದಿಯ ಯೋಚನೆ ಇದ್ದರೆ ಇಂದೇ ಖರೀದಿಸಿ; ಮಾರುಕಟ್ಟೆಯಲ್ಲಿ ಬಂಗಾರ-ಬೆಳ್ಳಿ ಎರಡರ ದರವೂ ಇಳಿಕೆ

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ - ರೂ. 88.32
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.89
ಬೆಳಗಾವಿ - ರೂ. 88.55
ಬಳ್ಳಾರಿ - ರೂ. 89.41
ಬೀದರ್ - ರೂ. 88.99
ವಿಜಯಪುರ - ರೂ. 87.71
ಚಾಮರಾಜನಗರ - ರೂ.88.66
ಚಿಕ್ಕಬಳ್ಳಾಪುರ - ರೂ. 87.89
ಚಿಕ್ಕಮಗಳೂರು - ರೂ. 88.87
ಚಿತ್ರದುರ್ಗ - ರೂ. 89.66
ದಕ್ಷಿಣ ಕನ್ನಡ - ರೂ. 87.20
ದಾವಣಗೆರೆ - ರೂ. 89.81
ಧಾರವಾಡ - ರೂ. 87.70
ಗದಗ - ರೂ. 88.65
ಕಲಬುರಗಿ - ರೂ. 87.71
ಹಾಸನ - ರೂ. 87.93
ಹಾವೇರಿ - ರೂ. 88.64
ಕೊಡಗು - ರೂ. 88.99
ಕೋಲಾರ - ರೂ. 87.83
ಕೊಪ್ಪಳ - ರೂ. 88.75
ಮಂಡ್ಯ - ರೂ. 87.75
ಮೈಸೂರು - ರೂ. 87.75
ರಾಯಚೂರು - ರೂ. 87.64
ರಾಮನಗರ - ರೂ. 88.17
ಶಿವಮೊಗ್ಗ - ರೂ. 89.28
ತುಮಕೂರು - ರೂ. 89.28
ಉಡುಪಿ - ರೂ. 87.76
ಉತ್ತರ ಕನ್ನಡ - ರೂ. 87.98
ಯಾದಗಿರಿ - ರೂ. 88.68
Published by:Sandhya M
First published: