• Home
  • »
  • News
  • »
  • business
  • »
  • Karnataka Petrol Price Today: ನಿಮ್ಮ ವಾಹನಕ್ಕೆ ಪೆಟ್ರೋಲ್​-ಡೀಸೆಲ್​ ಹಾಕ್ಸೋ ಮುನ್ನ ಇಂದಿನ ರೇಟ್​ ಇಲ್ಲಿ ಚೆಕ್​ ಮಾಡಿ!

Karnataka Petrol Price Today: ನಿಮ್ಮ ವಾಹನಕ್ಕೆ ಪೆಟ್ರೋಲ್​-ಡೀಸೆಲ್​ ಹಾಕ್ಸೋ ಮುನ್ನ ಇಂದಿನ ರೇಟ್​ ಇಲ್ಲಿ ಚೆಕ್​ ಮಾಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Petrol and Diesel Price Today: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವುದು, ಹಾಗೆಯೇ ದರ ಕಡಿಮೆಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಬೆಲೆಗಳನ್ನು ಇಳಿಸುವುದು ಸಾಮಾನ್ಯವಾದ ಸಂಗತಿ.

ಮುಂದೆ ಓದಿ ...
  • Share this:

ಇಂದು ರಾಜ್ಯದಲ್ಲಿ ಬಹುತೇಕ ಎಲ್ಲೆಡೆ ಪೆಟ್ರೋಲ್-ಡೀಸೆಲ್ (Petrol- Diesel Price) ಬೆಲೆಗಳಲ್ಲಿ ದೊಡ್ಡ ಪ್ರಮಾಣದ ಏರಿಕೆ ಅಥವಾ ಇಳಿಕೆಯಾಗಲಿ ಕಂಡುಬಂದಿಲ್ಲ. ಆದಾಗ್ಯೂ ಚಿಕ್ಕಪುಟ್ಟ ವ್ಯತ್ಯಾಸಗಳು ಸಾಮಾನ್ಯವಾಗಿದ್ದು ಒಂದಿಷ್ಟು ಪೈಸೆಗಳಷ್ಟು ಏರಿಳಿತಗಳನ್ನು ಕಾಣಬಹುದು. ಹಿಂದೊಮ್ಮೆ ಅತಿರೇಕಕ್ಕೆ ಹೋಗಿದ್ದ ಅಂತಾರಾಷ್ಟ್ರೀಯ ಮಾರುಕಟ್ಟೆ (International Market) ಯಲ್ಲಿನ ಕಚ್ಚಾ ತೈಲ (Crud Oil ದ ಬೆಲೆಯಿಂದಾಗಿ ಪೆಟ್ರೋಲ್-ಡೀಸೆಲ್ ಬೆಲೆ (Petrol-Diesel Price) ಗಳು ಗಗನಕ್ಕೇರಿದ್ದವು, ವಾಹನ ಸವಾರರರು ರಸ್ತೆ ಮೇಲೆ ವಾಹನ (Vehicle's) ಇಳಿಸಲೂ ಸಹ ಪರದಾಡುವಂತಾಗಿತ್ತು. ಆದರೆ ಪರಿಸ್ಥಿತಿ ಇಂದು ಹಾಗಿಲ್ಲ. ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು.


ಇಂದಿನ ಪೆಟ್ರೋಲ್​-ಡೀಸೆಲ್​ ದರ ಏನಿದೆ?


ಆದಾಗ್ಯೂ, ಬೆಲೆ ಏರಿಳಿತಗಳ ಈ ಕಣ್ಣು ಮುಚ್ಚಾಲೆ ಆಟ ನಡೆಯುತ್ತಲೇ ಇರುತ್ತದೆ.ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ-ತೈಲದ ಬೆಲೆ ಏರಿಳಿತಗಳು ನಿರಂತರವಾಗಿದ್ದು ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಳಿತವಾಗುವುದು ಸಹಜವೇ ಆಗಿದೆ. ಅಷ್ಟಕ್ಕೂ ಆಗಾಗ ಈ ಇಂಧನ ಬೆಲೆಗಳು ಎಂಬುದು ಶ್ರೀಸಾಮಾನ್ಯನ ಕೈಸುಡುವಂತೆ ಮಾಡುವುದು ಸುಳ್ಳಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಹಾಗೆ ಮುಂದುವರೆದಿದ್ದು ಭವಿಷ್ಯದಲ್ಲಿ ಇಂಧನದ ಬೆಲೆಗಳು ಏನಾಗುವುದೋ ಕಾದು ನೋಡಬೇಕು.


ಇನ್ನು, ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63 ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


ಇದನ್ನೂ ಓದಿ: ಆಭರಣ ಪ್ರಿಯರಿಗೆ ಡಬಲ್ ಶಾಕ್, ದುಬಾರಿಯಾದ ಚಿನ್ನ-ಬೆಳ್ಳಿ: ಹೀಗಿದೆ ಇಂದಿನ ಬೆಲೆ


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


ಬಾಗಲಕೋಟೆ - ರೂ. 102.60 (12 ಪೈಸೆ ಏರಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 102.09 (9 ಪೈಸೆ ಏರಿಕೆ)
ಬೆಳಗಾವಿ - ರೂ. 102.64 (16 ಪೈಸೆ ಏರಿಕೆ)
ಬಳ್ಳಾರಿ - ರೂ. 103.90 (29 ಪೈಸೆ ಏರಿಕೆ)
ಬೀದರ್ - ರೂ. 102.83 (55 ಪೈಸೆ ಏರಿಕೆ)
ವಿಜಯಪುರ - ರೂ. 102.06 (18 ಪೈಸೆ ಇಳಿಕೆ)
ಚಾಮರಾಜನಗರ - ರೂ. 102.06 (4 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ - ರೂ. 101.69 (25 ಪೈಸೆ ಇಳಿಕೆ)
ಚಿಕ್ಕಮಗಳೂರು - ರೂ. 102.92 (1.39 ಪೈಸೆ ಇಳಿಕೆ)
ಚಿತ್ರದುರ್ಗ - ರೂ. 103.84 (73 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 101.13 (38 ಪೈಸೆ ಇಳಿಕೆ)
ದಾವಣಗೆರೆ - ರೂ. 103.85 (40 ಪೈಸೆ ಏರಿಕೆ)
ಧಾರವಾಡ - ರೂ. 101.71 (00)
ಗದಗ - ರೂ. 102.25 (13 ಪೈಸೆ ಇಳಿಕೆ)
ಕಲಬುರಗಿ - ರೂ. 101.71 (73 ಪೈಸೆ ಇಳಿಕೆ)
ಹಾಸನ - ರೂ. 101.88 (00)
ಹಾವೇರಿ - ರೂ. 102.89 (51 ಪೈಸೆ ಏರಿಕೆ)
ಕೊಡಗು - ರೂ. 103.31 (25 ಪೈಸೆ ಇಳಿಕೆ)
ಕೋಲಾರ - ರೂ. 101.87 (6 ಪೈಸೆ ಏರಿಕೆ)
ಕೊಪ್ಪಳ - ರೂ. 102.21 (65 ಪೈಸೆ ಇಳಿಕೆ)
ಮಂಡ್ಯ - ರೂ. 102.17 (00)
ಮೈಸೂರು - ರೂ. 101.63 (13 ಪೈಸೆ ಏರಿಕೆ)
ರಾಯಚೂರು - ರೂ. 102.62 (78 ಪೈಸೆ ಏರಿಕೆ)
ರಾಮನಗರ - ರೂ. 102.39 (00)
ಶಿವಮೊಗ್ಗ - ರೂ. 102.79 (3 ಪೈಸೆ ಏರಿಕೆ)
ತುಮಕೂರು - ರೂ. 102.45 (36 ಪೈಸೆ ಇಳಿಕೆ)
ಉಡುಪಿ - ರೂ. 101.39 (42 ಪೈಸೆ ಇಳಿಕೆ)
ಉತ್ತರ ಕನ್ನಡ - ರೂ. 102.94 (6 ಪೈಸೆ ಇಳಿಕೆ)
ಯಾದಗಿರಿ - ರೂ. 102.79 (36 ಪೈಸೆ ಏರಿಕೆ )


ಇದನ್ನೂ ಓದಿ: ಮಹಿಳೆಯರು ಇಲ್ಲಿ ಇನ್ವೆಸ್ಟ್​ ಮಾಡಿದ್ರೆ ಡಬಲ್​ ಪ್ರಾಫಿಟ್! ನಿಮ್ಗೆ ಅಂತಾನೇ ಹೇಳಿ ಮಾಡಿಸಿದ ಯೋಜನೆಗಳಿವು


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


ಬಾಗಲಕೋಟೆ - ರೂ. 88.51
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 88.03
ಬೆಳಗಾವಿ - ರೂ. 88.55
ಬಳ್ಳಾರಿ - ರೂ. 89.68
ಬೀದರ್ - ರೂ. 88.72
ವಿಜಯಪುರ - ರೂ. 88.02
ಚಾಮರಾಜನಗರ - ರೂ. 88
ಚಿಕ್ಕಬಳ್ಳಾಪುರ - ರೂ. 87.67
ಚಿಕ್ಕಮಗಳೂರು - ರೂ. 88.62
ಚಿತ್ರದುರ್ಗ - ರೂ. 89.44
ದಕ್ಷಿಣ ಕನ್ನಡ - ರೂ. 87.13
ದಾವಣಗೆರೆ - ರೂ. 89.45
ಧಾರವಾಡ - ರೂ. 87.71
ಗದಗ - ರೂ. 88.20
ಕಲಬುರಗಿ - ರೂ. 87.71
ಹಾಸನ - ರೂ. 87.67
ಹಾವೇರಿ - ರೂ. 88.77
ಕೊಡಗು - ರೂ. 88.97
ಕೋಲಾರ - ರೂ. 87.83
ಕೊಪ್ಪಳ - ರೂ. 89.08
ಮಂಡ್ಯ - ರೂ. 88.10
ಮೈಸೂರು - ರೂ. 87.61
ರಾಯಚೂರು - ರೂ. 87.54
ರಾಮನಗರ - ರೂ. 88.29
ಶಿವಮೊಗ್ಗ - 88.56
ತುಮಕೂರು - ರೂ. 88.36
ಉಡುಪಿ - ರೂ. 87.36
ಉತ್ತರ ಕನ್ನಡ - ರೂ. 88.76
ಯಾದಗಿರಿ - ರೂ. 88.68

Published by:ವಾಸುದೇವ್ ಎಂ
First published: