• Home
  • »
  • News
  • »
  • business
  • »
  • Karnataka Petrol Price Today: ಇಂದು ಮತ್ತೆ ಯಥಾಸ್ಥಿತಿ ಕಾಯ್ದುಕೊಂಡ ಪೆಟ್ರೋಲ್, ಟ್ಯಾಂಕ್ ಫುಲ್ ಮಾಡಿಸುವ ಮುನ್ನ ಬೆಲೆ ಚೆಕ್ ಮಾಡ್ಕೊಳಿ

Karnataka Petrol Price Today: ಇಂದು ಮತ್ತೆ ಯಥಾಸ್ಥಿತಿ ಕಾಯ್ದುಕೊಂಡ ಪೆಟ್ರೋಲ್, ಟ್ಯಾಂಕ್ ಫುಲ್ ಮಾಡಿಸುವ ಮುನ್ನ ಬೆಲೆ ಚೆಕ್ ಮಾಡ್ಕೊಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Petrol and Diesel Price Today: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವುದು, ಹಾಗೆಯೇ ದರ ಕಡಿಮೆಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಬೆಲೆಗಳನ್ನು ಇಳಿಸುವುದು ಸಾಮಾನ್ಯವಾದ ಸಂಗತಿ.

ಮುಂದೆ ಓದಿ ...
  • News18 Kannada
  • Last Updated :
  • Karnataka, India
  • Share this:

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ (Petrol- Diesel Price) ಪ್ರತಿದಿನ ಏರಿಳಿತಗಳು ಉಂಟಾಗುತ್ತಲೇ ಇರುತ್ತವೆ. ಕಳೆದ ವಾರದಿಂದ ಬಹುತೇಕ ಜಿಲ್ಲೆಗಳಲ್ಲಿ (District) ಯಥಾಸ್ಥಿತಿ ಕಾಯ್ದುಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ, ಕೆಲವೆಡೆ ಮಾತ್ರ ಏರಿಕೆ ಕಂಡಿದ್ದರೆ, ಇನ್ನು ಕೆಲವೆಡೆ ಇಳಿಕೆ ಕಂಡಿದೆ. ಬೆಂಗಳೂರು (Bengaluru), ದೆಹಲಿ (Delhi), ಮುಂಬೈ (Mumbai) ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ದರವೆಷ್ಟು ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಬಹುತೇಕ ಎಲ್ಲ ನಗರಗಳಲ್ಲೂ ನಿನ್ನೆಯ ಪೆಟ್ರೋಲ್ ಬೆಲೆ ಇಂದೂ ಮುಂದುವರೆದಿದ್ದು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪೆಟ್ರೋಲ್ ಯಥಾಸ್ಥಿತಿ ಕಾಯ್ದುಕೊಂಡಿದೆ.


ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವುದು, ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸುವುದು ಸಾಮಾನ್ಯವಾದ ಸಂಗತಿ. ಆದರೆ, ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು.


ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ-ತೈಲದ ಬೆಲೆ ಏರಿಳಿತಗಳು ನಿರಂತರವಾಗಿದ್ದು ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಳಿತವಾಗುವುದು ಸಹಜವೇ ಆಗಿದೆ. ಅಷ್ಟಕ್ಕೂ ಆಗಾಗ ಈ ಇಂಧನ ಬೆಲೆಗಳು ಎಂಬುದು ಶ್ರೀಸಾಮಾನ್ಯನ ಕೈಸುಡುವಂತೆ ಮಾಡುವುದು ಸುಳ್ಳಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಹಾಗೆ ಮುಂದುವರೆದಿದ್ದು ಭವಿಷ್ಯದಲ್ಲಿ ಇಂಧನದ ಬೆಲೆಗಳು ಏನಾಗುವುದೋ ಕಾದು ನೋಡಬೇಕು.


ದೇಶದ ವಿವಿಧ ನಗರಗಳಲ್ಲಿ ಎಷ್ಟಿದೆ ಬೆಲೆ


ಇನ್ನು, ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63 ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


ಇದನ್ನೂ ಓದಿ: EPF ಖಾತೆದಾರರಿಗೆ ಬಿಗ್​ ನ್ಯೂಸ್​, ಇದೊಂದು ಕೆಲ್ಸ ಮಾಡಿಲ್ಲ ಅಂದ್ರೆ ನಿಲ್ಲುತ್ತೆ ಬಡ್ಡಿ ಹಣ!


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ - ರೂ. 102.55 (ಯಥಾಸ್ಥಿತಿ)
ಬೆಂಗಳೂರು - ರೂ. 101.94 (ಯಥಾಸ್ಥಿತಿ)
ಬೆಂಗಳೂರು ಗ್ರಾಮಾಂತರ - ರೂ. 102 .09 (ಯಥಾಸ್ಥಿತಿ)
ಬೆಳಗಾವಿ - ರೂ. 102.64 (ಯಥಾಸ್ಥಿತಿ)
ಬಳ್ಳಾರಿ - ರೂ. 103.73 (ಯಥಾಸ್ಥಿತಿ)
ಬೀದರ್ - ರೂ. 102.28 (ಯಥಾಸ್ಥಿತಿ)
ವಿಜಯಪುರ - ರೂ. 101.72 (ಯಥಾಸ್ಥಿತಿ)
ಚಾಮರಾಜನಗರ - ರೂ. 102.06 (ಯಥಾಸ್ಥಿತಿ)
ಚಿಕ್ಕಬಳ್ಳಾಪುರ - ರೂ. 101.94 (ಯಥಾಸ್ಥಿತಿ)
ಚಿಕ್ಕಮಗಳೂರು - ರೂ. 102.90 (ಯಥಾಸ್ಥಿತಿ)
ಚಿತ್ರದುರ್ಗ - ರೂ. 103.84 (ಯಥಾಸ್ಥಿತಿ)
ದಕ್ಷಿಣ ಕನ್ನಡ - ರೂ. 101.13 (ಯಥಾಸ್ಥಿತಿ)
ದಾವಣಗೆರೆ - ರೂ. 103.85 (ಯಥಾಸ್ಥಿತಿ)
ಧಾರವಾಡ - ರೂ. 101.70 (ಯಥಾಸ್ಥಿತಿ)
ಗದಗ - ರೂ. 102.25 (ಯಥಾಸ್ಥಿತಿ)
ಕಲಬುರಗಿ - ರೂ. 101.71 (ಯಥಾಸ್ಥಿತಿ)
ಹಾಸನ - ರೂ. 102.12 (ಯಥಾಸ್ಥಿತಿ)
ಹಾವೇರಿ - ರೂ. 102.89 (ಯಥಾಸ್ಥಿತಿ)
ಕೊಡಗು - ರೂ. 103.31 (ಯಥಾಸ್ಥಿತಿ)
ಕೋಲಾರ - ರೂ. 101.087 (ಯಥಾಸ್ಥಿತಿ)
ಕೊಪ್ಪಳ - ರೂ. 103.05 (ಯಥಾಸ್ಥಿತಿ)
ಮಂಡ್ಯ - ರೂ. 102.17 (ಯಥಾಸ್ಥಿತಿ)
ಮೈಸೂರು - ರೂ. 101.50 (ಯಥಾಸ್ಥಿತಿ)
ರಾಯಚೂರು - ರೂ. 102.67 (ಯಥಾಸ್ಥಿತಿ)
ರಾಮನಗರ - ರೂ. 102.39 (ಯಥಾಸ್ಥಿತಿ)
ಶಿವಮೊಗ್ಗ - ರೂ. 102.79 (ಯಥಾಸ್ಥಿತಿ)
ತುಮಕೂರು - ರೂ. 102.45 (ಯಥಾಸ್ಥಿತಿ)
ಉಡುಪಿ - ರೂ. 101.59 (ಯಥಾಸ್ಥಿತಿ)
ಉತ್ತರ ಕನ್ನಡ - ರೂ. 102.94 (ಯಥಾಸ್ಥಿತಿ)
ಯಾದಗಿರಿ - ರೂ. 102.31 (ಯಥಾಸ್ಥಿತಿ)


ಇದನ್ನೂ ಓದಿ: ಮುತ್ತು ಪೋಣಿಸಿದಂತಿರಬೇಕು ಮಾತು ಅಂತಾರೆ! ಈ ರಾಶಿಯವರಿಂದು ಸುಮ್ನಿದ್ದಷ್ಟು ಹೆಚ್ಚು ಲಾಭ


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ - ರೂ. 88.40
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.57
ಬೆಳಗಾವಿ - ರೂ. 88.41
ಬಳ್ಳಾರಿ - ರೂ. 89.42
ಬೀದರ್ - ರೂ. 88.23
ವಿಜಯಪುರ - ರೂ. 88.19
ಚಾಮರಾಜನಗರ - ರೂ. 88.04
ಚಿಕ್ಕಬಳ್ಳಾಪುರ - ರೂ. 87.89
ಚಿಕ್ಕಮಗಳೂರು - ರೂ. 89.90
ಚಿತ್ರದುರ್ಗ - ರೂ. 88.79
ದಕ್ಷಿಣ ಕನ್ನಡ - ರೂ. 87.47
ದಾವಣಗೆರೆ - ರೂ. 89
ಧಾರವಾಡ - ರೂ. 87.71
ಗದಗ - ರೂ. 88.31
ಕಲಬುರಗಿ - ರೂ. 88.37
ಹಾಸನ - ರೂ. 87.67
ಹಾವೇರಿ - ರೂ. 88.31
ಕೊಡಗು - ರೂ. 89.20
ಕೋಲಾರ - ರೂ. 88.75
ಕೊಪ್ಪಳ - ರೂ. 88.75
ಮಂಡ್ಯ - ರೂ. 88.10
ಮೈಸೂರು - ರೂ. 87. 49
ರಾಯಚೂರು - ರೂ. 87.84
ರಾಮನಗರ - ರೂ. 88.29
ಶಿವಮೊಗ್ಗ - 88.54
ತುಮಕೂರು - ರೂ. 88.68
ಉಡುಪಿ - ರೂ. 87.54
ಉತ್ತರ ಕನ್ನಡ - ರೂ. 88.82
ಯಾದಗಿರಿ - ರೂ. 88.36

Published by:Sandhya M
First published: