• Home
  • »
  • News
  • »
  • business
  • »
  • Karnataka Petrol Price: ರಾಜಧಾನಿ ಬೆಂಗಳೂರಿನಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಪೆಟ್ರೋಲ್, ನಿಮ್ಮ ಊರಿನಲ್ಲಿ ಬೆಲೆ ಎಷ್ಟಿದೆ ಚೆಕ್ ಮಾಡ್ಕೊಳಿ

Karnataka Petrol Price: ರಾಜಧಾನಿ ಬೆಂಗಳೂರಿನಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಪೆಟ್ರೋಲ್, ನಿಮ್ಮ ಊರಿನಲ್ಲಿ ಬೆಲೆ ಎಷ್ಟಿದೆ ಚೆಕ್ ಮಾಡ್ಕೊಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Petrol and Diesel Price Today: ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು. ಆದಾಗ್ಯೂ, ಬೆಲೆ ಏರಿಳಿತಗಳ ಈ ಕಣ್ಣು ಮುಚ್ಚಾಲೆ ಆಟ ನಡೆಯುತ್ತಲೇ ಇರುತ್ತದೆ.

ಮುಂದೆ ಓದಿ ...
  • News18 Kannada
  • Last Updated :
  • Karnataka, India
  • Share this:

ಇಂದು ರಾಜ್ಯದಲ್ಲಿ (State) ಬಹುತೇಕ ಎಲ್ಲೆಡೆ ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ ದೊಡ್ಡ ಪ್ರಮಾಣದ ಏರಿಕೆ ಅಥವಾ ಇಳಿಕೆಯಾಗಲಿ (petrol-Diesel Price) ಕಂಡುಬಂದಿಲ್ಲ. ಆದಾಗ್ಯೂ ಚಿಕ್ಕಪುಟ್ಟ ವ್ಯತ್ಯಾಸಗಳು ಸಾಮಾನ್ಯವಾಗಿದ್ದು ಒಂದಿಷ್ಟು ಪೈಸೆಗಳಷ್ಟು ಏರಿಳಿತಗಳನ್ನು ಕಾಣಬಹುದು. ಹಿಂದೊಮ್ಮೆ ಅತಿರೇಕಕ್ಕೆ ಹೋಗಿದ್ದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ (International Market) ಕಚ್ಚಾ ತೈಲದ ಬೆಲೆಯಿಂದಾಗಿ ಪೆಟ್ರೋಲ್-ಡೀಸೆಲ್ ಬೆಲೆಗಳು ಗಗನಕ್ಕೇರಿದ್ದವು, ವಾಹನ ಸವಾರರರು ರಸ್ತೆ ಮೇಲೆ ವಾಹನ ಇಳಿಸಲೂ ಸಹ ಪರದಾಡುವಂತಾಗಿತ್ತು. ಆದರೆ ಪರಿಸ್ಥಿತಿ ಇಂದು ಹಾಗಿಲ್ಲ. ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು. ಆದಾಗ್ಯೂ, ಬೆಲೆ ಏರಿಳಿತಗಳ ಈ ಕಣ್ಣು ಮುಚ್ಚಾಲೆ ಆಟ ನಡೆಯುತ್ತಲೇ ಇರುತ್ತದೆ.


ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ-ತೈಲದ ಬೆಲೆ ಏರಿಳಿತಗಳು ನಿರಂತರವಾಗಿದ್ದು ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಳಿತವಾಗುವುದು ಸಹಜವೇ ಆಗಿದೆ. ಅಷ್ಟಕ್ಕೂ ಆಗಾಗ ಈ ಇಂಧನ ಬೆಲೆಗಳು ಎಂಬುದು ಶ್ರೀಸಾಮಾನ್ಯನ ಕೈಸುಡುವಂತೆ ಮಾಡುವುದು ಸುಳ್ಳಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಹಾಗೆ ಮುಂದುವರೆದಿದ್ದು ಭವಿಷ್ಯದಲ್ಲಿ ಇಂಧನದ ಬೆಲೆಗಳು ಏನಾಗುವುದೋ ಕಾದು ನೋಡಬೇಕು.


ಇನ್ನು, ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.65 ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.25, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


ಇದನ್ನೂ ಓದಿ: ಮತ್ತಷ್ಟು ದುಬಾರಿಯಾಯ್ತು ಕಿಯಾ, ಈ ಕಾರು ಬೇಕಂದ್ರೆ 1 ವರ್ಷಕ್ಕಿಂತ ಹೆಚ್ಚು ಕಾಯಬೇಕು!


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ - ರೂ. 102.55 (05 ಪೈಸೆ ಏರಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 102 .09(09 ಪೈಸೆ ಏರಿಕೆ)
ಬೆಳಗಾವಿ - ರೂ. 102.64 (09 ಪೈಸೆ ಏರಿಕೆ)
ಬಳ್ಳಾರಿ - ರೂ. 103.73 (17 ಪೈಸೆ ಇಳಿಕೆ)
ಬೀದರ್ - ರೂ. 102.28 (24 ಪೈಸೆ ಇಳಿಕೆ)
ವಿಜಯಪುರ - ರೂ. 101.72 (00)
ಚಾಮರಾಜನಗರ - ರೂ. 102.06 (13 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - ರೂ. 101.94 (46 ಪೈಸೆ ಇಳಿಕೆ)
ಚಿಕ್ಕಮಗಳೂರು - ರೂ. 102.90 (02 ಪೈಸೆ ಇಳಿಕೆ)
ಚಿತ್ರದುರ್ಗ - ರೂ. 103.84 (1.11 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 101.13 (08 ಪೈಸೆ ಇಳಿಕೆ)
ದಾವಣಗೆರೆ - ರೂ. 103.85 (28 ಪೈಸೆ ಏರಿಕೆ)
ಧಾರವಾಡ - ರೂ. 101.70 (01 ಪೈಸೆ ಇಳಿಕೆ)
ಗದಗ - ರೂ. 102.25 (06 ಪೈಸೆ ಏರಿಕೆ)
ಕಲಬುರಗಿ - ರೂ. 101.71 (69.71 ಪೈಸೆ ಇಳಿಕೆ)
ಹಾಸನ - ರೂ. 102.12 (00)
ಹಾವೇರಿ - ರೂ. 102.89 (24 ಪೈಸೆ ಏರಿಕೆ)
ಕೊಡಗು - ರೂ. 103.31 (01 ಪೈಸೆ ಇಳಿಕೆ)
ಕೋಲಾರ - ರೂ. 101.087 (20 ಪೈಸೆ ಇಳಿಕೆ)
ಕೊಪ್ಪಳ - ರೂ. 103.05 (19 ಪೈಸೆ ಏರಿಕೆ)
ಮಂಡ್ಯ - ರೂ. 102.17 (27 ಪೈಸೆ ಏರಿಕೆ)
ಮೈಸೂರು - ರೂ. 101.50 (22 ಪೈಸೆ ಇಳಿಕೆ)
ರಾಯಚೂರು - ರೂ. 102.67 (83 ಪೈಸೆ ಏರಿಕೆ)
ರಾಮನಗರ - ರೂ. 102.39 (11 ಪೈಸೆ ಏರಿಕೆ)
ಶಿವಮೊಗ್ಗ - ರೂ. 102.79 (1 ರೂಪಾಯಿ 1  ಪೈಸೆ ಏರಿಕೆ)
ತುಮಕೂರು - ರೂ. 102.45 (31 ಪೈಸೆ ಇಳಿಕೆ)
ಉಡುಪಿ - ರೂ. 101.59 (33 ಪೈಸೆ ಇಳಿಕೆ)
ಉತ್ತರ ಕನ್ನಡ - ರೂ. 102.94 (7 ಪೈಸೆ ಏರಿಕೆ)
ಯಾದಗಿರಿ - ರೂ. 102.31 (39 ಪೈಸೆ ಇಳಿಕೆ )


ಇದನ್ನೂ ಓದಿ: ವಾರೆವ್ಹಾ, ಚಿನ್ನದ ದರದಲ್ಲಿ ಭರ್ಜರಿ ಇಳಿಕೆ, ಖರೀದಿಗೆ ಇದಕ್ಕಿಂತ ಸೂಕ್ತ ಸಮಯ ಬೇಕೇ?


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ - ರೂ. 88.46
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 88.03
ಬೆಳಗಾವಿ - ರೂ. 88.55
ಬಳ್ಳಾರಿ - ರೂ. 89.53
ಬೀದರ್ - ರೂ. 88.23
ವಿಜಯಪುರ - ರೂ. 87.71
ಚಾಮರಾಜನಗರ - ರೂ. 88
ಚಿಕ್ಕಬಳ್ಳಾಪುರ - ರೂ. 87.89
ಚಿಕ್ಕಮಗಳೂರು - ರೂ. 88.62
ಚಿತ್ರದುರ್ಗ - ರೂ. 89.44
ದಕ್ಷಿಣ ಕನ್ನಡ - ರೂ. 87.13
ದಾವಣಗೆರೆ - ರೂ. 89.45
ಧಾರವಾಡ - ರೂ. 87.70
ಗದಗ - ರೂ. 88.20
ಕಲಬುರಗಿ - ರೂ. 87.71
ಹಾಸನ - ರೂ. 87.79
ಹಾವೇರಿ - ರೂ. 88.77
ಕೊಡಗು - ರೂ. 88.97
ಕೋಲಾರ - ರೂ. 87.83
ಕೊಪ್ಪಳ - ರೂ. 88.91
ಮಂಡ್ಯ - ರೂ. 88.10
ಮೈಸೂರು - ರೂ. 87. 49
ರಾಯಚೂರು - ರೂ. 88.59
ರಾಮನಗರ - ರೂ. 88.29
ಶಿವಮೊಗ್ಗ - 88.56
ತುಮಕೂರು - ರೂ. 88.36
ಉಡುಪಿ - ರೂ. 87.54
ಉತ್ತರ ಕನ್ನಡ - ರೂ. 88.76
ಯಾದಗಿರಿ - ರೂ. 88.25

Published by:Sandhya M
First published: