• Home
  • »
  • News
  • »
  • business
  • »
  • Karnataka Petrol Price Today: ಉತ್ತರ ಕನ್ನಡದಲ್ಲಿ ಸ್ವಲ್ಪ ಇಳಿಕೆ ಕಂಡ ಪೆಟ್ರೋಲ್ ಬೆಲೆ, ಉಳಿದ ಜಿಲ್ಲೆಗಳಲ್ಲಿ ತೈಲ ದರ ಇಂತಿದೆ

Karnataka Petrol Price Today: ಉತ್ತರ ಕನ್ನಡದಲ್ಲಿ ಸ್ವಲ್ಪ ಇಳಿಕೆ ಕಂಡ ಪೆಟ್ರೋಲ್ ಬೆಲೆ, ಉಳಿದ ಜಿಲ್ಲೆಗಳಲ್ಲಿ ತೈಲ ದರ ಇಂತಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Petrol and Diesel Price Today: ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಅಲ್ಪ ಸ್ವಲ್ಪ ವ್ಯತ್ಯಾಸಗಳೊಂದಿಗೆ ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಇಂದು ಗಮನಿಸಬಹುದು.

ಮುಂದೆ ಓದಿ ...
  • Share this:

ದಿನ ನಿತ್ಯ ಕೆಲಸಕ್ಕೆ, ಆಫೀಸ್‌ಗೆ (Office) ಹೋಗುವವರು, ದೂರದೂರಿಗೆ ಪ್ರಯಾಣ ಬೆಳೆಸುವವರು ತಮ್ಮ ಬೈಕ್‌, ಕಾರಿಗೆ ಫುಲ್ ಟ್ಯಾಂಕ್‌ ಪೆಟ್ರೋಲ್‌, ಡೀಸೆಲ್‌ (Petrol And Diesel)  ಹಾಕಿಸಿಕೊಳ್ಳಬೇಕು ಅನ್ನೋರು ಬೆಲೆಯನ್ನು ಸಹ ತಿಳಿದುಕೊಳ್ಳಿ. ಈಗಂತೂ ಪೆಟ್ರೋಲ್-ಡೀಸೆಲ್‌ಗೂ ಚಿನ್ನದ ಬೆಲೆ ಬಂದಿದೆ ಅಂತಾ ನಮಗೆಲ್ಲಾ ಗೊತ್ತು. ಸುಖಾಸುಮ್ಮನೆ ಬೈಕ್‌, ಕಾರಿನಲ್ಲಿ ಹೋಗುತ್ತಿದ್ದರೆ ಮನೆಯಲ್ಲಿ ಪೆಟ್ರೋಲ್‌ ಏನು ನೀರಾ? ಅಂತಾ ಕೇಳುತ್ತಾರೆ. ಇಂಧನಗಳು ಈಗ ದ್ರವ ರೂಪದ ಚಿನ್ನವಾಗಿವೆ. ಅದರ ಬೆಲೆಯನ್ನು ನೋಡಿಕೊಂಡು ಅಗತ್ಯವಿದ್ದಲ್ಲಿ ವಾಹನಗಳನ್ನು (Vehicle) ಬಳಸುವುದು ಉತ್ತಮ.


ಪೆಟ್ರೋಲ್‌ ದರ ಹೀಗಿದೆ
ದೇಶದಲ್ಲಿ ಹಣದುಬ್ಬರ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಈ ನಡುವೆ ಮೇ 21ರಂದು ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡುವ ಮೂಲಕ ಜನತೆಗೆ ಬಿಗ್ ರಿಲೀಫ್ ನೀಡಿತ್ತು. ಅಂದಿನಿಂದ ಇಂದಿನವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಅಂತಹ ದೊಡ್ಡದಾದ ಯಾವುದೇ ಬದಲಾವಣೆಯಾಗಿಲ್ಲ.
ಪೆಟ್ರೋಲ್‌-ಡೀಸೆಲ್‌ ದರಗಳು ಸರ್ಕಾರದ ಆದೇಶದ ಹೊರತಾಗಿ ಹೆಚ್ಚಿನ ಏರಿಕೆ-ಇಳಿಕೆ ಕಾಣುವುದಿಲ್ಲ, ಬದಲಿಗೆ ಸಣ್ಣ ವ್ಯತ್ಯಾಸಗಳು ನಡೆಯುತ್ತಿರುತ್ತವೆ. ಅಂತೆಯೇ ಇಂದೂ ಸಹ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪೆಟ್ರೋಲ್-ಡೀಸೆಲ್ ದರಗಳಲ್ಲಿ ಮಾಮೂಲಿನಂತೆ ಕೆಲ ಪೈಸೆಗಳಷ್ಟು ವ್ಯತ್ಯಾಸ ಕಂಡು ಬಂದಿದೆ.


ಇಂದು ಇಂಧನ ಸಹ ಚಿನ್ನ-ಬೆಳ್ಳಿಯಂತೆ ಆಗಿದ್ದು, ಅಪಾರವಾದ ಬೇಡಿಕೆ ಹಾಗೂ ಅವಶ್ಯಕತೆಯನ್ನು ಹೊಂದಿದೆ. ಕೈಗಾರಿಕೆಗಳಿಂದ ಹಿಡಿದು ವಾಹನ ಚಾಲನೆಯವರೆಗೆ ಇಂಧನದ ಅಗತ್ಯ ಆಗತ್ಯವಾಗಿದ್ದು ನಿತ್ಯವೂ ಇದರ ಬೆಲೆಗಳಲ್ಲಿ ಬದಲಾವಣೆಗಳಾಗುತ್ತಿರುತ್ತದೆ. ಜಾಗತಿಕವಾಗಿ ಉಂಟಾಗುವ ಕಚ್ಚಾ ತೈಲದ ಬೆಲೆಗಳಲ್ಲಿನ ವ್ಯತ್ಯಾಸದಿಂದಾಗಿಯೇ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಪ್ರಭಾವಿತವಾಗುತ್ತಿರುತ್ತವೆ ಎಂಬುದರಲ್ಲಿ ಸಂಶಯವಿಲ್ಲ . ಅದಾಗ್ಯೂ ಇತರೆ ಜಾಗತಿಕ ಕಾರಣಗಳೂ ಸಹ ಇದರ ಬೆಲೆಗಳ ಮೇಲೆ ಪ್ರಭಾವ ಬೀರುತ್ತಿರುತ್ತವೆ.


ಕೆಲ ಸಮಯದ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆ ಗಗನಕ್ಕೇರಿದ್ದವು. ಆ ಸಮಯದಲ್ಲಿ ವಾಹನ ಸವಾರರರು ರಸ್ತೆ ಮೇಲೆ ವಾಹನ ಇಳಿಸಲೂ ಸಹ ಪರದಾಡುವಂತಾಗಿತ್ತು. ಆದರೆ ಪರಿಸ್ಥಿತಿ ಇಂದು ಹಾಗಿಲ್ಲ. ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಅಲ್ಪ ಸ್ವಲ್ಪ ವ್ಯತ್ಯಾಸಗಳೊಂದಿಗೆ ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಇಂದು ಗಮನಿಸಬಹುದು.


ಇನ್ನು, ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


ಬಾಗಲಕೋಟೆ - ರೂ. 102.63 (15 ಪೈಸೆ ಏರಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 101.94 (00)
ಬೆಳಗಾವಿ - ರೂ. 102.36 (56 ಪೈಸೆ ಏರಿಕೆ)
ಬಳ್ಳಾರಿ - ರೂ. 103.73 (39 ಪೈಸೆ ಏರಿಕೆ)


ಇದನ್ನೂ ಓದಿ: ಹೀಗೆ ಕಥೆ ಹೇಳಿ ನಿಮ್ಮ ಬ್ಯುಸಿನೆಸ್​ ಹೆಚ್ಚಿಸಿಕೊಳ್ಳಿ! ಈ ಟಿಪ್ಸ್​ ಎಲ್ಲ ಉದ್ಯಮದವರಿಗೂ ವರ್ಕ್​ ಆಗುತ್ತೆ!


ಬೀದರ್ - ರೂ. 102.96 (68 ಪೈಸೆ ಏರಿಕೆ)
ವಿಜಯಪುರ - ರೂ. 102.29 (5 ಪೈಸೆ ಏರಿಕೆ)
ಚಾಮರಾಜನಗರ - ರೂ. 102.07 (3 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - ರೂ. 101.94 (00)
ಚಿಕ್ಕಮಗಳೂರು - ರೂ. 102.92 (1.37 ಪೈಸೆ ಇಳಿಕೆ)
ಚಿತ್ರದುರ್ಗ - ರೂ. 103.11 (00)
ದಕ್ಷಿಣ ಕನ್ನಡ - ರೂ. 101.16 (32 ಪೈಸೆ ಇಳಿಕೆ)
ದಾವಣಗೆರೆ - ರೂ. 103.57 (22 ಪೈಸೆ ಏರಿಕೆ)
ಧಾರವಾಡ - ರೂ. 101.99 (98 ಪೈಸೆ ಏರಿಕೆ)
ಗದಗ - ರೂ. 102.38 (26 ಪೈಸೆ ಏರಿಕೆ)
ಕಲಬುರಗಿ - ರೂ. 102.42 (2 ಪೈಸೆ ಇಳಿಕೆ)
ಹಾಸನ - ರೂ. 102.03 (15 ಪೈಸೆ ಏರಿಕೆ)
ಹಾವೇರಿ - ರೂ. 102.65 (24 ಪೈಸೆ ಏರಿಕೆ)
ಕೊಡಗು - ರೂ. 103.26 (21 ಪೈಸೆ ಇಳಿಕೆ)
ಕೋಲಾರ - ರೂ. 102.14 (33 ಪೈಸೆ ಏರಿಕೆ)
ಕೊಪ್ಪಳ - ರೂ. 103.05 (19 ಪೈಸೆ ಏರಿಕೆ)
ಮಂಡ್ಯ - ರೂ. 101.50 (44 ಪೈಸೆ ಇಳಿಕೆ)
ಮೈಸೂರು - ರೂ. 101.73 (23 ಪೈಸೆ ಏರಿಕೆ)
ರಾಯಚೂರು - ರೂ. 102.29 (45 ಪೈಸೆ ಏರಿಕೆ)
ರಾಮನಗರ - ರೂ.102.25 (14 ಪೈಸೆ ಇಳಿಕೆ)
ಶಿವಮೊಗ್ಗ - ರೂ. 103.66 (9 ಪೈಸೆ ಏರಿಕೆ)
ತುಮಕೂರು - ರೂ. 102.26 (55 ಪೈಸೆ ಇಳಿಕೆ)
ಉಡುಪಿ - ರೂ. 102.02 (00)
ಉತ್ತರ ಕನ್ನಡ - ರೂ. 102.49 (1. 30 ಪೈಸೆ ಇಳಿಕೆ)
ಯಾದಗಿರಿ - ರೂ. 102.79 (36 ಪೈಸೆ ಏರಿಕೆ )


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


ಬಾಗಲಕೋಟೆ - ರೂ. 88.54
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.89
ಬೆಳಗಾವಿ - ರೂ. 88.30
ಬಳ್ಳಾರಿ - ರೂ. 89.53


ಇದನ್ನೂ ಓದಿ: ಟ್ವಿಟರ್​​ನಲ್ಲಿ ತುಟಿಕ್​-ಪಿಟಿಕ್​ ಅಂದ್ರೆ ಅಷ್ಟೇ! ಎಲಾನ್​ ಮಸ್ಕ್​ಗೆ ವಾರ್ನಿಂಗ್​ ಕೊಟ್ಟ ಆ್ಯಪಲ್​ ಸಂಸ್ಥೆ!


ಬೀದರ್ - ರೂ. 88.33
ವಿಜಯಪುರ - ರೂ. 88.23
ಚಾಮರಾಜನಗರ - ರೂ. 88.01
ಚಿಕ್ಕಬಳ್ಳಾಪುರ - ರೂ. 87.89
ಚಿಕ್ಕಮಗಳೂರು - ರೂ. 88.48
ಚಿತ್ರದುರ್ಗ - ರೂ. 88.79
ದಕ್ಷಿಣ ಕನ್ನಡ - ರೂ. 87.15
ದಾವಣಗೆರೆ - ರೂ. 89.20
ಧಾರವಾಡ - ರೂ. 87.96
ಗದಗ - ರೂ. 88.55
ಕಲಬುರಗಿ - ರೂ. 88.35
ಹಾಸನ - ರೂ. 87.81
ಹಾವೇರಿ - ರೂ. 88.56
ಕೊಡಗು - ರೂ. 88.92
ಕೋಲಾರ - ರೂ. 88.08
ಕೊಪ್ಪಳ - ರೂ. 88.91
ಮಂಡ್ಯ - ರೂ. 87.49
ಮೈಸೂರು - ರೂ. 87.71
ರಾಯಚೂರು - ರೂ. 88.25
ರಾಮನಗರ - ರೂ. 88.17
ಶಿವಮೊಗ್ಗ - 89.33
ತುಮಕೂರು - ರೂ. 88.18
ಉಡುಪಿ - ರೂ. 87.93
ಉತ್ತರ ಕನ್ನಡ - ರೂ. 88.56
ಯಾದಗಿರಿ - ರೂ. 88.68

Published by:Sandhya M
First published: