• Home
  • »
  • News
  • »
  • business
  • »
  • Petrol-Diesel Price Today: ಉತ್ತರ ಕನ್ನಡದಲ್ಲಿ ಪೆಟ್ರೋಲ್ ದರ ಏರಿಕೆ: ಬೆಂಗಳೂರಲ್ಲಿ ಎಷ್ಟಾಗಿದೆ ಬೆಲೆ?

Petrol-Diesel Price Today: ಉತ್ತರ ಕನ್ನಡದಲ್ಲಿ ಪೆಟ್ರೋಲ್ ದರ ಏರಿಕೆ: ಬೆಂಗಳೂರಲ್ಲಿ ಎಷ್ಟಾಗಿದೆ ಬೆಲೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ.

  • Share this:

    ಇಂದು ಉತ್ತರ ಕನ್ನಡದಲ್ಲಿ ಪೆಟ್ರೋಲ್ ಬೆಲೆಯಲ್ಲಿ (Petrol Price)  1 ರೂ. 93 ಪೈಸೆಗಳಷ್ಟು ಏರಿಕೆಯಾಗಿರುವುದನ್ನು ನೋಡಬಹುದಾಗಿದೆ. ಮಿಕ್ಕಂತೆ ರಾಜ್ಯದ ವಿವಿಧ ನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳಲ್ಲಿ (Petrol, Diesel Price) ಕೆಲ ಪೈಸೆಗಳಷ್ಟು ಸಾಮಾನ್ಯ ಏರಿಳಿತ ಸ್ಥಿರವಾಗಿ ಮುಂದುವರೆದಿರುವುದನ್ನು ಗಮನಿಸಬಹುದು. ಜಾಗತಿಕವಾಗಿ ಉಂಟಾಗುವ ಕಚ್ಚಾ ತೈಲದ ಬೆಲೆಗಳಲ್ಲಿನ ವ್ಯತ್ಯಾಸದಿಂದಾಗಿಯೇ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಪ್ರಭಾವಿತವಾಗುತ್ತಿರುತ್ತವೆ . ಅಲ್ಲದೆ, ಸದ್ಯ ನಡೆಯುತ್ತಿರುವ ಯುದ್ಧದ ಪರಿಣಾಮದಿಂದಾಗಿಯೂ ಇಂಧನ ಬೆಲೆಯಲ್ಲಿ ಪ್ರಭಾವ ಉಂಟಾಗಿರುವುದು ಸುಳ್ಳಲ್ಲ.


    ಇನ್ನು, ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.73, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.33, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


    ಬಾಗಲಕೋಟೆ - ರೂ. 102.71 (9 ಪೈಸೆ ಏರಿಕೆ)
    ಬೆಂಗಳೂರು - ರೂ. 101.94 (00)
    ಬೆಂಗಳೂರು ಗ್ರಾಮಾಂತರ - ರೂ. 102.09 (51 ಪೈಸೆ ಏರಿಕೆ)
    ಬೆಳಗಾವಿ - ರೂ. 102.47 (44 ಪೈಸೆ ಇಳಿಕೆ)
    ಬಳ್ಳಾರಿ - ರೂ. 103.90 (70 ಪೈಸೆ ಏರಿಕೆ)
    ಬೀದರ್ - ರೂ. 102.28 (24 ಪೈಸೆ ಇಳಿಕೆ)
    ವಿಜಯಪುರ - ರೂ. 101.77 (25 ಪೈಸೆ ಇಳಿಕೆ)
    ಚಾಮರಾಜನಗರ - ರೂ. 102.10 (3 ಪೈಸೆ ಏರಿಕೆ)
    ಚಿಕ್ಕಬಳ್ಳಾಪುರ - ರೂ. 101.94 (00)
    ಚಿಕ್ಕಮಗಳೂರು - ರೂ. 102.69 (96 ಪೈಸೆ ಇಳಿಕೆ)
    ಚಿತ್ರದುರ್ಗ - ರೂ. 103.84 (37 ಪೈಸೆ ಏರಿಕೆ)
    ದಕ್ಷಿಣ ಕನ್ನಡ - ರೂ. 101.48 (22 ಪೈಸೆ ಏರಿಕೆ)
    ದಾವಣಗೆರೆ - ರೂ. 103.85 (28 ಪೈಸೆ ಏರಿಕೆ)
    ಧಾರವಾಡ - ರೂ. 101.70 (1 ಪೈಸೆ ಇಳಿಕೆ)
    ಗದಗ - ರೂ. 102.25 (54 ಪೈಸೆ ಇಳಿಕೆ)
    ಕಲಬುರಗಿ - ರೂ. 101.71 (29 ಪೈಸೆ ಇಳಿಕೆ)
    ಹಾಸನ - ರೂ. 101.88 (00)
    ಹಾವೇರಿ - ರೂ. 102.41 (17 ಪೈಸೆ ಇಳಿಕೆ)
    ಕೊಡಗು - ರೂ. 103.28 (00)
    ಕೋಲಾರ - ರೂ. 101.87 (29 ಪೈಸೆ ಇಳಿಕೆ)
    ಕೊಪ್ಪಳ - ರೂ. 103.21 (35 ಪೈಸೆ ಏರಿಕೆ)
    ಮಂಡ್ಯ - ರೂ. 102.17 (23 ಪೈಸೆ ಏರಿಕೆ)
    ಮೈಸೂರು - ರೂ. 101.50 (18 ಪೈಸೆ ಇಳಿಕೆ)
    ರಾಯಚೂರು - ರೂ. 102.43 (28 ಪೈಸೆ ಇಳಿಕೆ)
    ರಾಮನಗರ - ರೂ. 102.39 (11 ಪೈಸೆ ಇಳಿಕೆ)
    ಶಿವಮೊಗ್ಗ - ರೂ. 103.61 (17 ಪೈಸೆ ಇಳಿಕೆ)
    ತುಮಕೂರು - ರೂ. 102.81 (36 ಪೈಸೆ ಏರಿಕೆ)
    ಉಡುಪಿ - ರೂ. 101.83 (13 ಪೈಸೆ ಏರಿಕೆ)
    ಉತ್ತರ ಕನ್ನಡ - ರೂ. 104.30 (1 ರೂ. 93 ಪೈಸೆ ಏರಿಕೆ)
    ಯಾದಗಿರಿ - ರೂ. 102.31 (12 ಪೈಸೆ ಇಳಿಕೆ)


    ಇದನ್ನೂ ಓದಿ: Cheapest Cars: ಕಾರ್ ಕ್ರೇಜ್ ಇರುವವರಿಗೆ ಸಖತ್ ಸುದ್ದಿ, ಜಸ್ಟ್ ₹4 ಲಕ್ಷಕ್ಕೆ ಸೂಪರ್ ಕಾರುಗಳು ಲಭ್ಯ


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


    ಬಾಗಲಕೋಟೆ - ರೂ. 88.61
    ಬೆಂಗಳೂರು - ರೂ. 87.89
    ಬೆಂಗಳೂರು ಗ್ರಾಮಾಂತರ - ರೂ. 88.03
    ಬೆಳಗಾವಿ - ರೂ. 88.39
    ಬಳ್ಳಾರಿ - ರೂ. 89.68
    ಬೀದರ್ - ರೂ. 88.23
    ವಿಜಯಪುರ - ರೂ. 87.77
    ಚಾಮರಾಜನಗರ - ರೂ. 88.04
    ಚಿಕ್ಕಬಳ್ಳಾಪುರ - ರೂ. 87.89
    ಚಿಕ್ಕಮಗಳೂರು - ರೂ. 88.44
    ಚಿತ್ರದುರ್ಗ - ರೂ. 89.44
    ದಕ್ಷಿಣ ಕನ್ನಡ - ರೂ. 87.44
    ದಾವಣಗೆರೆ - ರೂ. 89.45
    ಧಾರವಾಡ - ರೂ. 87.70
    ಗದಗ - ರೂ. 88.20
    ಕಲಬುರಗಿ - ರೂ. 87.71
    ಹಾಸನ - ರೂ. 87.67
    ಹಾವೇರಿ - ರೂ. 88.34
    ಕೊಡಗು - ರೂ. 88.94
    ಕೋಲಾರ - ರೂ. 87.83
    ಕೊಪ್ಪಳ - ರೂ. 89.08
    ಮಂಡ್ಯ - ರೂ. 88.10
    ಮೈಸೂರು - ರೂ. 87.49
    ರಾಯಚೂರು - ರೂ. 88.38
    ರಾಮನಗರ - ರೂ. 88.29
    ಶಿವಮೊಗ್ಗ - 89.30
    ತುಮಕೂರು - ರೂ. 88.68
    ಉಡುಪಿ - ರೂ. 87.76
    ಉತ್ತರ ಕನ್ನಡ - ರೂ. 89.99
    ಯಾದಗಿರಿ - ರೂ. 88.25


    ಕೆಲ ಸಮಯದ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆ ಗಗನಕ್ಕೇರಿದ್ದವು. ಆ ಸಮಯದಲ್ಲಿ ವಾಹನ ಸವಾರರರು ರಸ್ತೆ ಮೇಲೆ ವಾಹನ ಇಳಿಸಲೂ ಸಹ ಪರದಾಡುವಂತಾಗಿತ್ತು. ಆದರೆ ಪರಿಸ್ಥಿತಿ ಇಂದು ಹಾಗಿಲ್ಲ. ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಇಂದು ಕಾಣಬಹುದು.

    Published by:Kavya V
    First published: