• Home
  • »
  • News
  • »
  • business
  • »
  • Petrol, Diesel Price Today: ಚಿಕ್ಕಮಗಳೂರಲ್ಲಿ ಏರಿಕೆ, ಚಿತ್ರದುರ್ಗದಲ್ಲಿ ಇಳಿಕೆ: ನಿಮ್ಮ ಜಿಲ್ಲೆಯಲ್ಲಿ ಪೆಟ್ರೋಲ್ ರೇಟ್ ಎಷ್ಟಿದೆ?

Petrol, Diesel Price Today: ಚಿಕ್ಕಮಗಳೂರಲ್ಲಿ ಏರಿಕೆ, ಚಿತ್ರದುರ್ಗದಲ್ಲಿ ಇಳಿಕೆ: ನಿಮ್ಮ ಜಿಲ್ಲೆಯಲ್ಲಿ ಪೆಟ್ರೋಲ್ ರೇಟ್ ಎಷ್ಟಿದೆ?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಇಂದು ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡದಲ್ಲಿ ಪೆಟ್ರೋಲ್ ಬೆಲೆ ಕ್ರಮವಾಗಿ 1 ರೂ. 77 ಮತ್ತು 1 ರೂ. 30 ಪೈಸೆಗಳಷ್ಟು ಏರಿಕೆಯಾದರೆ, ಚಿತ್ರದುರ್ಗದಲ್ಲಿ 1 ರೂ. 51 ಪೈಸೆಗಳಷ್ಟು ಇಳಿಕೆಯಾಗಿದೆ.

  • Trending Desk
  • Last Updated :
  • Karnataka, India
  • Share this:

    ಇಂದು ರಾಜ್ಯದಲ್ಲಿ ಬಹುತೇಕ ಎಲ್ಲೆಡೆ ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ (Petrol, Diesel Price) ಯಾವುದೇ ಗಮನಾರ್ಹ ಏರಿಳಿತಗಳಾಗಿಲ್ಲ. ಆದಾಗ್ಯೂ ಎಂದಿನಂತೆ ಕೆಲವು ಪೈಸೆಗಳ ಚಿಕ್ಕ ಪುಟ್ಟ ವ್ಯತ್ಯಾಸಗಳಿರುವುದನ್ನು ಗಮನಿಸಬಹುದು. ಆದರೆ, ನಿನ್ನೆಗೆ ಹೋಲಿಸಿದರೆ ಇಂದು ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡದಲ್ಲಿ ಪೆಟ್ರೋಲ್ ಬೆಲೆ ಕ್ರಮವಾಗಿ 1 ರೂ. 77 ಮತ್ತು 1 ರೂ. 30 ಪೈಸೆಗಳಷ್ಟು ಏರಿಕೆಯಾದರೆ, (Petrol Price Hike) ಚಿತ್ರದುರ್ಗದಲ್ಲಿ 1 ರೂ. 51 ಪೈಸೆಗಳಷ್ಟು ಇಳಿಕೆಯಾಗಿದೆ.


    ಹಿಂದೊಮ್ಮೆ ಅತಿರೇಕಕ್ಕೆ ಹೋಗಿದ್ದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆಯಿಂದಾಗಿ (Petrol Price) ಪೆಟ್ರೋಲ್-ಡೀಸೆಲ್ ಬೆಲೆಗಳು ಗಗನಕ್ಕೇರಿದ್ದವು, ವಾಹನ ಸವಾರರರು ರಸ್ತೆ ಮೇಲೆ ವಾಹನ ಇಳಿಸಲೂ ಸಹ ಪರದಾಡುವಂತಾಗಿತ್ತು. ಆದರೆ ಪರಿಸ್ಥಿತಿ ಇಂದು ಹಾಗಿಲ್ಲ. ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು. ಆದಾಗ್ಯೂ, ಬೆಲೆ ಏರಿಳಿತಗಳ ಈ ಕಣ್ಣು ಮುಚ್ಚಾಲೆ ಆಟ ನಡೆಯುತ್ತಲೇ ಇರುತ್ತದೆ.


    ಇದನ್ನೂ ಓದಿ: Money Mantra: ದುಡ್ಡೇ ದೊಡ್ಡಪ್ಪ ಅಂದ ಶಿವಪ್ಪ! ಈ ರಾಶಿಯವರಿಗಿಂದು ಸಿಕ್ಕಾಪಟ್ಟೆ ಹಣ ಬರುತ್ತಪ್ಪಾ!


     ಇನ್ನು, ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


    ರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


    ಬಾಗಲಕೋಟೆ - ರೂ. 102.48 (20 ಪೈಸೆ ಇಳಿಕೆ)
    ಬೆಂಗಳೂರು - ರೂ. 101.94 (00)
    ಬೆಂಗಳೂರು ಗ್ರಾಮಾಂತರ - ರೂ. 101.58 (43 ಪೈಸೆ ಇಳಿಕೆ)
    ಬೆಳಗಾವಿ - ರೂ. 102.34 (21 ಪೈಸೆ ಏರಿಕೆ)
    ಬಳ್ಳಾರಿ - ರೂ. 103.61 (17 ಪೈಸೆ ಇಳಿಕೆ)
    ಬೀದರ್ - ರೂ. 102.28 (00)
    ವಿಜಯಪುರ - ರೂ. 102.24 (12 ಪೈಸೆ ಏರಿಕೆ)
    ಚಾಮರಾಜನಗರ - ರೂ. 102.10 (00)
    ಚಿಕ್ಕಬಳ್ಳಾಪುರ - ರೂ. 101.94 (00)
    ಚಿಕ್ಕಮಗಳೂರು - ರೂ. 104.29 (1 ರೂ. 77 ಪೈಸೆ ಏರಿಕೆ)
    ಚಿತ್ರದುರ್ಗ - ರೂ. 103.11 (1 ರೂ. 51 ಪೈಸೆ ಇಳಿಕೆ)
    ದಕ್ಷಿಣ ಕನ್ನಡ - ರೂ. 101.48 (35 ಪೈಸೆ ಏರಿಕೆ)
    ದಾವಣಗೆರೆ - ರೂ. 103.35 (32 ಪೈಸೆ ಇಳಿಕೆ)
    ಧಾರವಾಡ - ರೂ. 101.71 (00)
    ಗದಗ - ರೂ. 102.38 (13 ಪೈಸೆ ಏರಿಕೆ)
    ಕಲಬುರಗಿ - ರೂ. 102.44 (73 ಪೈಸೆ ಏರಿಕೆ)
    ಹಾಸನ - ರೂ. 101.88 (46 ಪೈಸೆ ಇಳಿಕೆ)
    ಹಾವೇರಿ - ರೂ. 102.41 (00)
    ಕೊಡಗು - ರೂ. 103.28 (2 ಪೈಸೆ ಏರಿಕೆ)
    ಕೋಲಾರ - ರೂ. 101.81 (00)
    ಕೊಪ್ಪಳ - ರೂ. 102.86 (19 ಪೈಸೆ ಇಳಿಕೆ)
    ಮಂಡ್ಯ - ರೂ. 101.94 (33 ಪೈಸೆ ಏರಿಕೆ)
    ಮೈಸೂರು - ರೂ. 101.50 (00)
    ರಾಯಚೂರು - ರೂ. 101.84 (00)
    ರಾಮನಗರ - ರೂ. 102.39 (25 ಪೈಸೆ ಏರಿಕೆ)
    ಶಿವಮೊಗ್ಗ - ರೂ. 102.76 (67 ಪೈಸೆ ಇಳಿಕೆ)
    ತುಮಕೂರು - ರೂ. 102.81 (36 ಪೈಸೆ ಏರಿಕೆ)
    ಉಡುಪಿ - ರೂ. 102.02 (58 ಪೈಸೆ ಏರಿಕೆ)
    ಉತ್ತರ ಕನ್ನಡ - ರೂ. 103.79 (1 ರೂ. 30 ಪೈಸೆ ಏರಿಕೆ)
    ಯಾದಗಿರಿ - ರೂ. 102.43 (00)


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


    ಬಾಗಲಕೋಟೆ - ರೂ. 88.40
    ಬೆಂಗಳೂರು - ರೂ. 87.89
    ಬೆಂಗಳೂರು ಗ್ರಾಮಾಂತರ - ರೂ. 87.57
    ಬೆಳಗಾವಿ - ರೂ. 88.28
    ಬಳ್ಳಾರಿ - ರೂ. 89.42
    ಬೀದರ್ - ರೂ. 88.23
    ವಿಜಯಪುರ - ರೂ. 88.19
    ಚಾಮರಾಜನಗರ - ರೂ. 88.04
    ಚಿಕ್ಕಬಳ್ಳಾಪುರ - ರೂ. 87.89
    ಚಿಕ್ಕಮಗಳೂರು - ರೂ. 89.90
    ಚಿತ್ರದುರ್ಗ - ರೂ. 88.79
    ದಕ್ಷಿಣ ಕನ್ನಡ - ರೂ. 87.44
    ದಾವಣಗೆರೆ - ರೂ. 89
    ಧಾರವಾಡ - ರೂ. 87.71
    ಗದಗ - ರೂ. 88.31
    ಕಲಬುರಗಿ - ರೂ. 88.37
    ಹಾಸನ - ರೂ. 87.67
    ಹಾವೇರಿ - ರೂ. 88.34
    ಕೊಡಗು - ರೂ. 88.94
    ಕೋಲಾರ - ರೂ. 87.77
    ಕೊಪ್ಪಳ - ರೂ. 88.75
    ಮಂಡ್ಯ - ರೂ. 87.89
    ಮೈಸೂರು - ರೂ. 87.49
    ರಾಯಚೂರು - ರೂ. 87.84
    ರಾಮನಗರ - ರೂ. 88.29
    ಶಿವಮೊಗ್ಗ - 88.54
    ತುಮಕೂರು - ರೂ. 88.68
    ಉಡುಪಿ - ರೂ. 87.93
    ಉತ್ತರ ಕನ್ನಡ - ರೂ. 89.52
    ಯಾದಗಿರಿ - ರೂ. 88.36

    Published by:Kavya V
    First published: