ಇಂದು ಇಂಧನಗಳಾದ ಪೆಟ್ರೋಲ್ (Petrol) ಆಗಲಿ ಅಥವಾ ಡೀಸೆಲ್ (Diesel) ಆಗಲಿ ಮಾನವನ ಬದುಕಿನ ಅವಿಭಾಜ್ಯ ಅಂಗಗಳಂತೆಯೇ ಗುರುತಿಸಲ್ಪಡುತ್ತಿವೆ. ಏಕೆಂದರೆ ಪ್ರತಿನಿತ್ಯ ಬೆಳಗಾದರೆ ಸಾಕು ಕೋಟ್ಯಂತರ ವಾಹನಗಳು (Vehicles) ನಿತ್ಯದ ಕೆಲಸಕ್ಕಾಗಿ ರಸ್ತೆಗಿಳಿಯುತ್ತವೆ ಹಾಗೂ ಅವುಗಳ ಸಂಚಾರಕ್ಕೆ ಇಂಧನ (Fuel) ಅವಶ್ಯಕವಾಗಿ ಬೇಕಾಗಿರುತ್ತದೆ. ಇದರಿಂದಾಗಿಯೇ ಪೆಟ್ರೋಲ್/ಡೀಸೆಲ್ ಅನ್ನು ದ್ರವರೂಪದ ಬಂಗಾರ ಎಂದೇ ಪರಿಗಣಿಸಲಾಗುತ್ತದೆ.
ಕರ್ನಾಟಕದಲ್ಲೂ ಸಹ ಪ್ರತಿನಿತ್ಯ ತೈಲದ ಬೆಲೆಯಲ್ಲಿ ವ್ಯತ್ಯಾಸಗಳಾಗುತ್ತಲೇ ಇರುತ್ತದೆ. ಇಂದು ಸಹ ರಾಜ್ಯದ ಎಲ್ಲೆಡೆ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಕೆಲ ಚಿಕ್ಕ ಪುಟ್ಟ ಪೈಸೆಗಳನ್ನು ಕಾಣಬಹುದಾಗಿದ್ದು , ಎಂದಿನಂತೆ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಸ್ಥಿರವಾದ ಗತಿಯಲ್ಲೇ ಸಾಗುತ್ತಿವೆ. ಮಿಕ್ಕಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆಲ ಪೈಸೆಗಳಷ್ಟು ವ್ಯತ್ಯಾಸ ಸಾಮಾನ್ಯವಾಗಿದೆ.
ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ - ರೂ. 102.60 (33 ಪೈಸೆ ಏರಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 102.09 (02 ಪೈಸೆ ಏರಿಕೆ)
ಬೆಳಗಾವಿ - ರೂ. 102.64 (44 ಪೈಸೆ ಏರಿಕೆ)
ಬಳ್ಳಾರಿ - ರೂ. 103.90 (29 ಪೈಸೆ ಏರಿಕೆ)
ಬೀದರ್ - ರೂ. 102.28 (00)
ವಿಜಯಪುರ - ರೂ. 102.50 (78 ಪೈಸೆ ಏರಿಕೆ)
ಚಾಮರಾಜನಗರ - ರೂ. 102.06 (4 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ - ರೂ. 102.39 (45 ಪೈಸೆ ಏರಿಕೆ)
ಚಿಕ್ಕಮಗಳೂರು - ರೂ. 102.66 (80 ಪೈಸೆ ಇಳಿಕೆ)
ಚಿತ್ರದುರ್ಗ - ರೂ. 103.90 (00)
ದಕ್ಷಿಣ ಕನ್ನಡ - ರೂ. 101.13 (62 ಪೈಸೆ ಇಳಿಕೆ)
ದಾವಣಗೆರೆ - ರೂ. 103.31 (45 ಪೈಸೆ ಇಳಿಕೆ)
ಧಾರವಾಡ - ರೂ. 101.71 (00)
ಗದಗ - ರೂ. 102.28 (13 ಪೈಸೆ ಇಳಿಕೆ)
ಕಲಬುರಗಿ - ರೂ. 101.71 (00)
ಹಾಸನ - ರೂ. 101.94 (32 ಪೈಸೆ ಇಳಿಕೆ)
ಹಾವೇರಿ - ರೂ. 102.89 (51 ಪೈಸೆ ಏರಿಕೆ)
ಕೊಡಗು - ರೂ. 103.31 (16 ಪೈಸೆ ಇಳಿಕೆ)
ಕೋಲಾರ - ರೂ. 101.87 (06 ಪೈಸೆ ಏರಿಕೆ)
ಕೊಪ್ಪಳ - ರೂ. 103.05 (00)
ಮಂಡ್ಯ - ರೂ. 102.17 (20 ಪೈಸೆ ಏರಿಕೆ)
ಮೈಸೂರು - ರೂ. 101.63 (13 ಪೈಸೆ ಏರಿಕೆ)
ರಾಯಚೂರು - ರೂ. 102.62 (81 ಪೈಸೆ ಏರಿಕೆ)
ರಾಮನಗರ - ರೂ. 102.39 (01 ಪೈಸೆ ಇಳಿಕೆ)
ಶಿವಮೊಗ್ಗ - ರೂ. 102.93 (65 ಪೈಸೆ ಇಳಿಕೆ)
ತುಮಕೂರು - ರೂ. 102.45 (15 ಪೈಸೆ ಇಳಿಕೆ)
ಉಡುಪಿ - ರೂ. 101.39 (01 ಪೈಸೆ ಇಳಿಕೆ)
ಉತ್ತರ ಕನ್ನಡ - ರೂ. 102.94 (6 ಪೈಸೆ ಇಳಿಕೆ)
ವಿಜಯನಗರ - ರೂ. 102.89 (1 ರೂ. 29 ಪೈಸೆ ಇಳಿಕೆ)
ಯಾದಗಿರಿ - ರೂ. 102.79 (36 ಪೈಸೆ ಏರಿಕೆ)
ಇದನ್ನೂ ಓದಿ: ಈ ಬಾರಿ ಕೇಂದ್ರ ಬಜೆಟ್ನಲ್ಲಿ ಈ ಐದು ಘೋಷಣೆ ಫಿಕ್ಸ್!
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ - ರೂ. 88.51
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 88.03
ಬೆಳಗಾವಿ - ರೂ. 88.55
ಬಳ್ಳಾರಿ - ರೂ. 89.68
ಬೀದರ್ - ರೂ. 88.23
ವಿಜಯಪುರ - ರೂ. 88.15
ಚಾಮರಾಜನಗರ - ರೂ. 88
ಚಿಕ್ಕಬಳ್ಳಾಪುರ - ರೂ. 88.29
ಚಿಕ್ಕಮಗಳೂರು - ರೂ. 88.64
ಚಿತ್ರದುರ್ಗ - ರೂ. 89.48
ದಕ್ಷಿಣ ಕನ್ನಡ - ರೂ. 87.13
ದಾವಣಗೆರೆ - ರೂ. 89.48
ಧಾರವಾಡ - ರೂ. 87.71
ಗದಗ - ರೂ. 88.20
ಕಲಬುರಗಿ - ರೂ. 87.71
ಹಾಸನ - ರೂ. 87.71
ಹಾವೇರಿ - ರೂ. 88.77
ಕೊಡಗು - ರೂ. 89.97
ಕೋಲಾರ - ರೂ. 87.83
ಕೊಪ್ಪಳ - ರೂ. 88.91
ಮಂಡ್ಯ - ರೂ. 88.10
ಮೈಸೂರು - ರೂ. 87.61
ರಾಯಚೂರು - ರೂ. 88.54
ರಾಮನಗರ - ರೂ. 88.29
ಶಿವಮೊಗ್ಗ - 88.65
ತುಮಕೂರು - ರೂ. 88.36
ಉಡುಪಿ - ರೂ. 87.36
ಉತ್ತರ ಕನ್ನಡ - ರೂ. 88.76
ವಿಜಯನಗರ - ರೂ. 88.77
ಯಾದಗಿರಿ - ರೂ. 88.68
ಈ ಇಂಧನ ಶಕ್ತಿಗಳಾದ ಪೆಟ್ರೋಲ್ ಹಾಗೂ ಡೀಸೆಲ್ ಗಳು ಹಾಗೇ ಸರಳವಾಗಿ ದೊರೆಯುವ ವಸ್ತುಗಳಲ್ಲ. ಇದು ಕಚ್ಚಾ ತೈಲದ ರೂಪದಲ್ಲಿದ್ದು ಸಮುದ್ರದಾಳ ಅಥವಾ ಭೂಗತವಾಗಿ ಲಭಿಸುತ್ತದೆ. ಅಲ್ಲಿಂದ ಇದನ್ನು ಹೊರತೆಗೆದು ಸಂಸ್ಕರಿಸಿ ಅದರಿಂದ ಬೇಕಾದ ಇಂಧನಗಳನ್ನು ಉತ್ಪಾದಿಸಲಾಗುತ್ತದೆ. ಈ ಇಂಧನ ಶಕ್ತಿಗಳ ಅವಶ್ಯಕತೆ ನಿತ್ಯ ಜಾಗತಿಕವಾಗಿ ಎಲ್ಲೆಡೆ ಇರುವುದರಿಂದ ಇದರ ಬೆಲೆಗಳು ಸಹ ಡೈನಮಿಕ್ ಆಗಿರುತ್ತವೆ ಹಾಗೂ ಹಲವು ಜಾಗತಿಕವಾಗಿ ಏರ್ಪಡುವ ಕಾರಣಗಳಿಂದಾಗಿ ಪ್ರತಿನಿತ್ಯ ಪ್ರಭಾವಿಸಲ್ಪಡುತ್ತಿರುತ್ತದೆ.
ಹೀಗೆ ಕೆಲ ತೈಲ ನಿಕ್ಷೇಪಗಳಿರುವ ದೇಶಗಳಿಂದ ಹೊರತೆಗೆಯಲಾಗುವ ಕಚ್ಚಾ ತೈಲವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ ಮತ್ತು ಬ್ಯಾರಲ್ ಒಂದಕ್ಕೆ ಇಂತಿಷ್ಟು ಡಾಲರ್ ಕೊಟ್ಟು ಅದನ್ನು ಖರೀದಿ ಮಾಡಲಾಗುತ್ತಿರುತ್ತದೆ.
ಇದನ್ನೂ ಓದಿ: ಈ ಯೋಜನೆಗಳಲ್ಲಿ ದುಡ್ಡು ಹಾಕಿದ್ರೆ, ಪಕ್ಕಾ ಡಬಲ್ ಪ್ರಾಫಿಟ್!
ಭಾರತದಲ್ಲಿ ಯಾವುದೇ ತೈಲದ ನಿಕ್ಷೇಪವಿರದ ಕಾರಣ ಭಾರತ ತನ್ನ ದಿನನಿತ್ಯದ ತೈಲದ ಅವಶ್ಯಕತೆಗಾಗಿ ಕಚ್ಚಾ ತೈಲವನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತದೆ. ಇತ್ತೀಚಿಗಷ್ಟೇ ರಷ್ಯಾದಿಂದಲೂ ಸಹ ಭಾರತ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಹೀಗೆ ಆಮದು ಮಾಡಿಕೊಂಡ ಕಚ್ಚಾ ತೈಲವನ್ನು ತದನಂತರ ಇಲ್ಲಿ ಸಂಸ್ಕರಿಸಿ ಪೆಟ್ರೋಲ್ ಹಾಗೂ ಡೀಸೆಲ್ ಗಳನ್ನು ದೇಶಾದ್ಯಂತ ವಿತರಿಸಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ