ಇಂದು ರಾಜ್ಯದಲ್ಲಿ (State) ಇಂಧನದ ಬೆಲೆಯಲ್ಲಿ (Fuel Price) ಯಾವುದೇ ಗಮನಾರ್ಹ ವ್ಯತ್ಯಾಸ (Difference) ಕಂಡುಬಂದಿಲ್ಲ. ಆದಾಗ್ಯೂ ಎಂದಿನಂತೆ ರಾಜ್ಯದ ವಿವಿಧ ನಗರಗಳಲ್ಲಿ ಪೆಟ್ರೋಲ್ (Petrol) ಹಾಗೂ ಡೀಸೆಲ್(Diesel) ದರಗಳಲ್ಲಿ ಕೆಲ ಪೈಸೆಗಳಷ್ಟು ಚಿಕ್ಕಪುಟ್ಟ ವ್ಯತ್ಯಾಸಗಳಿರುವುದನ್ನು ನೋಡಬಹುದು. ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇಂಧನದ ಬೆಲೆ ಎಂದಿನಂತೆ ಸ್ಥಿರವಾಗಿದೆ.
ಇಂಧನ ಎಂಬುದು ನಿತ್ಯ ಅಗತ್ಯತೆಗಳಲ್ಲಿ ಒಂದಾಗಿದ್ದು ಜಾಗತಿಕವಾಗಿ ಅಪಾರವಾದ ಬೇಡಿಕೆ ಹೊಂದಿದೆ. ಇಂಧನಗಳಾದ ಪೆಟ್ರೋಲ್ ಹಾಗೂ ಡೀಸೆಲ್ ಅನ್ನು ಸಾಮಾನ್ಯವಾಗಿ ಕಚ್ಚಾ ತೈಲದಿಂದ ಸಂಸ್ಕರಿಸಿ ಉತ್ಪಾದಿಸಲಾಗುತ್ತದೆ ಹಾಗೂ ಕಚ್ಚಾ ತೈಲದ ಯಾವುದೇ ನಿಕ್ಷೇಪ ಭಾರತ ಹೊಂದಿರದ ಕಾರಣ ದೇಶವು ತನ್ನ ನಿತ್ಯದ ಇಂಧನದ ಅವಶಯಕತೆ ಪೂರೈಸಲೆಂದು ಕಚ್ಚಾ ತೈಲವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಕೊಳ್ಳುತ್ತದೆ.
ಈ ಇಂಧನದಿಂದಲೇ ನಿತ್ಯ ಸಾವಿರಾರು ಕೈಗಾರಿಕಾ ಚಟುವಟಿಕೆಗಳು ನಡೆಯುವುದಲ್ಲದೆ ವಿಶ್ವಾದ್ಯಂತ ಶತಕೋಟಿಗಳಷ್ಟು ವ್ಯವಹಾರ ನಡೆಯುತ್ತದೆ ಹಾಗೂ ಪ್ರತಿನಿತ್ಯ ಸಾರಿಗೆ ಸಂಚಾರಕ್ಕೆ ಅಗತ್ಯವಾಗಿ ಬೇಕಾಗಿರುವ ಇಂಧನ ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಬೇಡಿಕೆ ಹೊಂದಿದೆ. ಹಾಗಾಗಿ ಕಚ್ಚಾ ತೈಲಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಪಾರವಾದ ಬೇಡಿಕೆಯಿದ್ದು ನಿತ್ಯ ಅದರ ಬೆಲೆಗಳು ಹಲವು ಜಾಗತಿಕ ಅಂಶಗಳಿಂದಾಗಿ ಪ್ರಭಾವಿಸಲ್ಪಡುತ್ತಿರುತ್ತದೆ.
ಉದಾಹರಣೆಗೆ ಕಳೆದ ವರ್ಷವಷ್ಟೇ ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದ ಕೆಲ ಸಮಯದ ನಂತರ ವಿಶ್ವದಲ್ಲೆಲ್ಲ ತೈಲದ ಅಪಾರ ಬಿಕ್ಕಟ್ಟುಂಟಾಗಿತ್ತು. ಇದರಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಆಕಾಶದೆತ್ತರಕ್ಕೆ ಏರಿದ್ದವು. ಭಾರತ ಸೇರಿದಂತೆ ಜಗತ್ತಿನಾದ್ಯಂತ ಬಹುತೇಕ ಎಲ್ಲ ದೇಶಗಳು ತೈಲಕ್ಕಾಗಿ ಪರದಾಡಿದ್ದವು. ಆದರೆ ತದನಂತರ ಮತ್ತೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎನ್ನಬಹುದು.
ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ - ರೂ. 102.27 (23 ಪೈಸೆ ಇಳಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 102.07 (6 ಪೈಸೆ ಏರಿಕೆ)
ಬೆಳಗಾವಿ - ರೂ. 101.76 (21 ಪೈಸೆ ಇಳಿಕೆ)
ಬಳ್ಳಾರಿ - ರೂ. 103.61 (29 ಪೈಸೆ ಇಳಿಕೆ)
ಬೀದರ್ - ರೂ. 102.28 (24 ಪೈಸೆ ಇಳಿಕೆ)
ವಿಜಯಪುರ - ರೂ. 102.16 (4 ಪೈಸೆ ಏರಿಕೆ)
ಚಾಮರಾಜನಗರ - ರೂ. 102.10 (3 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - ರೂ. 101.94 (00)
ಇದನ್ನೂ ಓದಿ: ನಷ್ಟದ ಸುಳಿಯಲ್ಲಿ ಸಿಲುಕಿದ ಮತ್ತೊಂದು ಕಂಪನಿ, 225 ನಗರಗಳಲ್ಲಿ ಝೊಮ್ಯಾಟೊ ಸೇವೆ ಸ್ಥಗಿತ!
ಚಿಕ್ಕಮಗಳೂರು - ರೂ. 103.12 (34 ಪೈಸೆ ಇಳಿಕೆ)
ಚಿತ್ರದುರ್ಗ - ರೂ. 103.90 (4 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 101.75 (60 ಪೈಸೆ ಏರಿಕೆ)
ದಾವಣಗೆರೆ - ರೂ. 103.73 (37 ಪೈಸೆ ಇಳಿಕೆ)
ಧಾರವಾಡ - ರೂ. 101.71 (00)
ಗದಗ - ರೂ. 102.38 (13 ಪೈಸೆ ಇಳಿಕೆ)
ಕಲಬುರಗಿ - ರೂ. 102 (00)
ಹಾಸನ - ರೂ. 102.26 (9 ಪೈಸೆ ಏರಿಕೆ)
ಹಾವೇರಿ - ರೂ. 102.38 (3 ಪೈಸೆ ಇಳಿಕೆ)
ಕೊಡಗು - ರೂ. 103.28 (28 ಪೈಸೆ ಇಳಿಕೆ)
ಕೋಲಾರ - ರೂ. 101.81 (35 ಪೈಸೆ ಇಳಿಕೆ)
ಕೊಪ್ಪಳ - ರೂ. 103.05 (8 ಪೈಸೆ ಇಳಿಕೆ)
ಮಂಡ್ಯ - ರೂ. 101.97 (19 ಪೈಸೆ ಏರಿಕೆ)
ಮೈಸೂರು - ರೂ. 101.50 (00)
ರಾಯಚೂರು - ರೂ. 101.84 (45 ಪೈಸೆ ಇಳಿಕೆ)
ರಾಮನಗರ - ರೂ. 102.40 (00)
ಶಿವಮೊಗ್ಗ - ರೂ. 102.90 (69 ಪೈಸೆ ಇಳಿಕೆ)
ತುಮಕೂರು - ರೂ. 102.60 (36 ಪೈಸೆ ಏರಿಕೆ)
ಉಡುಪಿ - ರೂ. 101.38 (8 ಪೈಸೆ ಇಳಿಕೆ)
ಉತ್ತರ ಕನ್ನಡ - ರೂ. 103 (21 ಪೈಸೆ ಏರಿಕೆ)
ವಿಜಯನಗರ - ರೂ. 103.34 (5 ಪೈಸೆ ಏರಿಕೆ)
ಯಾದಗಿರಿ - ರೂ. 102.43 (00)
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ - ರೂ. 88.21
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 88.01
ಬೆಳಗಾವಿ - ರೂ. 87.76
ಬಳ್ಳಾರಿ - ರೂ. 89.42
ಬೀದರ್ - ರೂ. 88.23
ವಿಜಯಪುರ - ರೂ. 88.11
ಚಾಮರಾಜನಗರ - ರೂ. 88.04
ಚಿಕ್ಕಬಳ್ಳಾಪುರ - ರೂ. 87.89
ಚಿಕ್ಕಮಗಳೂರು - ರೂ. 88.60
ಚಿತ್ರದುರ್ಗ - ರೂ. 89.48
ದಕ್ಷಿಣ ಕನ್ನಡ - ರೂ. 87.68
ದಾವಣಗೆರೆ - ರೂ. 89.33
ಧಾರವಾಡ - ರೂ. 87.71
ಗದಗ - ರೂ. 88.31
ಕಲಬುರಗಿ - ರೂ. 87.97
ಹಾಸನ - ರೂ. 88
ಹಾವೇರಿ - ರೂ. 88.31
ಕೊಡಗು - ರೂ. 88.94
ಕೋಲಾರ - ರೂ. 87.77
ಕೊಪ್ಪಳ - ರೂ. 88.91
ಇದನ್ನೂ ಓದಿ: ಇಂದಿನ ಯುವಜನತೆಗೆ ಪಾಕೆಟ್ ಮನಿ ಆ್ಯಪ್ಗಳು ಎಷ್ಟು ಸಹಕಾರಿಯಾಗಿವೆ?
ಮಂಡ್ಯ - ರೂ. 87.92
ಮೈಸೂರು - ರೂ. 87.49
ರಾಯಚೂರು - ರೂ. 87.84
ರಾಮನಗರ - ರೂ. 88.31
ಶಿವಮೊಗ್ಗ - 88.63
ತುಮಕೂರು - ರೂ. 88.49
ಉಡುಪಿ - ರೂ. 87.36
ಉತ್ತರ ಕನ್ನಡ - ರೂ. 88.82
ವಿಜಯನಗರ - ರೂ. 89.18
ಯಾದಗಿರಿ - ರೂ. 88.36
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ