• Home
  • »
  • News
  • »
  • business
  • »
  • Karnataka Petrol Price Today: ಬಹುತೇಕ ಯಥಾಸ್ಥಿತಿ ಕಾಯ್ದುಕೊಂಡ ಡೀಸೆಲ್​, ಪೆಟ್ರೋಲ್ ಹಾಕಿಸುವ ಮೊದ್ಲು ಬೆಲೆ ಚೆಕ್ ಮಾಡ್ಕೊಳಿ

Karnataka Petrol Price Today: ಬಹುತೇಕ ಯಥಾಸ್ಥಿತಿ ಕಾಯ್ದುಕೊಂಡ ಡೀಸೆಲ್​, ಪೆಟ್ರೋಲ್ ಹಾಕಿಸುವ ಮೊದ್ಲು ಬೆಲೆ ಚೆಕ್ ಮಾಡ್ಕೊಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Petrol and Diesel Price Today: ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದ್ದ ಸಂದರ್ಭದಲ್ಲಿ ಜಾಗತಿಕವಾಗಿ ಕಚ್ಚಾ ತೈಲದ ಮೇಲೆ ಭಾರಿ ಪರಿಣಾಮ ಉಂಟಾಗಿ ತೈಲದ ಬೆಲೆ ಗಗನಕ್ಕೇರಿತ್ತು. ಭಾರತವೂ ಸಹ ಇದಕ್ಕೆ ಹೊರತಾಗಿರಲಿಲ್ಲ.

  • Share this:

ನಿನ್ನೆಗೆ ಹೋಲಿಸಿದರೆ ಇಂದು ರಾಜ್ಯದ ಉತ್ತರ ಕನ್ನಡದಲ್ಲಿ( Uttar Kannada Petrol Price) ಪೆಟ್ರೋಲ್ ಬೆಲೆ 52 ಪೈಸೆಯಷ್ಟು ಏರಿಕೆಯಾಗಿರುವುದನ್ನು ಗಮನಿಸಬಹುದು. ಆದರೆ ಮಿಕ್ಕಂತೆ ಇನ್ನುಳಿದ ನಗರಗಳಲ್ಲಿ ದೊಡ್ಡದಾದಂತಹ ಯಾವುದೇ ಬದಲಾವಣೆ ಆಗಿಲ್ಲ. ಆದರೂ ಎಲ್ಲೆಡೆ ಎಂದಿನಂತೆ ಕೆಲ ಪೈಸೆಗಳಷ್ಟು ಚಿಕ್ಕ ಪುಟ್ಟ ವ್ಯತ್ಯಾಸಗಳು ಸ್ಥಿರವಾಗಿ ಮುಂದುವರೆದಿವೆ ಅಂತಾನೇ ಹೇಳಬಹುದು. ಸಾಮಾನ್ಯವಾಗಿ ಕಚ್ಚಾ ತೈಲದಿಂದ (Crude Oil) ಪ್ರೂಸೆಸ್ ಮಾಡಿ ಉತ್ಪತ್ತಿ ಮಾಡಲಾಗುವ ಪೆಟ್ರೋಲ್ ಹಾಗೂ ಡೀಸೆಲ್ ಗಳು (Petrol And Diesel Price) ಜಗತ್ತಿನಾದ್ಯಂತ ಅಪಾರವಾದ ಬೇಡಿಕೆ (Demand) ಪಡೆದಿವೆ. ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ (International Market) ಕಚ್ಚಾ ತೈಲಕ್ಕೆ ಡಿಮ್ಯಾಂಡ್ ಇದ್ದು ಅದರ ಬೆಲೆಯು ಹಲವು ಜಾಗತಿಕ ಅಂಶಗಳಿಂದಾಗಿ ಪ್ರಭಾವಿಸಲ್ಪಡುತ್ತಿರುತ್ತದೆ.


ಇನ್ನು ಕಚ್ಚಾ ತೈಲದ ಬೆಲೆಗನುಗುಣವಾಗಿ ಪೆಟ್ರೋಲ್-ಡೀಸೆಲ್ ದರಗಳಲ್ಲಿ ಏರಿಳಿತ ಕಂಡುಬರುತ್ತಿರುತ್ತದೆ. ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದ್ದ ಸಂದರ್ಭದಲ್ಲಿ ಜಾಗತಿಕವಾಗಿ ಕಚ್ಚಾ ತೈಲದ ಮೇಲೆ ಭಾರಿ ಪರಿಣಾಮ ಉಂಟಾಗಿ ತೈಲದ ಬೆಲೆ ಗಗನಕ್ಕೇರಿತ್ತು. ಭಾರತವೂ ಸಹ ಇದಕ್ಕೆ ಹೊರತಾಗಿರಲಿಲ್ಲ.


ಆದರೆ, ಕೇಂದ್ರದ ಕೆಲ ಉಪಕ್ರಮದಿಂದ ಇಂಧನ ಬೆಲೆ ಸದ್ಯ ಸ್ಥಿರವಾದ ಗತಿಯಲ್ಲಿ ಇಂದು ಸಾಗುತ್ತಿದೆ. ಪ್ರಮುಖ ಕೈಗಾರಿಕಾ ಚಟುವಟಿಕೆಗಳು ಹಾಗೂ ವಾಹನಗಳ ಸಂಚಾರಕ್ಕೆ ಇಂಧನವೇ ಅವಶ್ಯಕವಾಗಿರುವ ಕಾರಣ ಕಚ್ಚಾ ತೈಲಕ್ಕೆ ಜಗತ್ತಿನಾದ್ಯಂತ ಅಪಾರವಾದ ಬೇಡಿಕೆಯಿದೆ.


ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


ಇದನ್ನೂ ಓದಿ: ಕಳೆದ ಸೀಸನ್​ 14 ಕೋಟಿ, ಈಗ 8 ಕೋಟಿ! ಮಯಾಂಕ್​ಗೆ 6 ಕೋಟಿ ಕಡಿಮೆಯಾಗಿದ್ದು ಇದೇ ಕಾರಣಕ್ಕಾ?


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


ಬಾಗಲಕೋಟೆ - ರೂ. 102.77 (9 ಪೈಸೆ ಏರಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 102.01 (00)
ಬೆಳಗಾವಿ - ರೂ. 102.47 (34 ಪೈಸೆ ಏರಿಕೆ)
ಬಳ್ಳಾರಿ - ರೂ. 103.90 (12 ಪೈಸೆ ಏರಿಕೆ)
ಬೀದರ್ - ರೂ. 102.52 (24 ಪೈಸೆ ಏರಿಕೆ)
ವಿಜಯಪುರ - ರೂ. 102.16 (4 ಪೈಸೆ ಏರಿಕೆ)
ಚಾಮರಾಜನಗರ - ರೂ. 102.7 (3 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ - ರೂ. 101.69 (25 ಪೈಸೆ ಇಳಿಕೆ)
ಚಿಕ್ಕಮಗಳೂರು - ರೂ. 103.32 (5 ಪೈಸೆ ಏರಿಕೆ)
ಚಿತ್ರದುರ್ಗ - ರೂ. 103.47 (1 ರೂ. 15 ಪೈಸೆ ಇಳಿಕೆ)
ದಕ್ಷಿಣ ಕನ್ನಡ - ರೂ. 101.47 (34 ಪೈಸೆ ಏರಿಕೆ)
ದಾವಣಗೆರೆ - ರೂ. 104.4 (37 ಪೈಸೆ ಏರಿಕೆ)
ಧಾರವಾಡ - ರೂ. 101.71 (00)
ಗದಗ - ರೂ. 102.25 (00)
ಕಲಬುರಗಿ - ರೂ. 101.71 (00)
ಹಾಸನ - ರೂ. 102.34 (33 ಪೈಸೆ ಏರಿಕೆ)
ಹಾವೇರಿ - ರೂ. 101.88 (97 ಪೈಸೆ ಇಳಿಕೆ)
ಕೊಡಗು - ರೂ. 103.26 (25 ಪೈಸೆ ಏರಿಕೆ)
ಕೋಲಾರ - ರೂ. 101.81 (00)
ಕೊಪ್ಪಳ - ರೂ. 103.03 (2 ಪೈಸೆ ಇಳಿಕೆ)
ಮಂಡ್ಯ - ರೂ. 101.78 (17 ಪೈಸೆ ಏರಿಕೆ)
ಮೈಸೂರು - ರೂ. 101.50 (00)
ರಾಯಚೂರು - ರೂ. 102.29 (45 ಪೈಸೆ ಏರಿಕೆ)
ರಾಮನಗರ - ರೂ. 102.24 (15 ಪೈಸೆ ಇಳಿಕೆ)
ಶಿವಮೊಗ್ಗ - ರೂ. 103.45 (2 ಪೈಸೆ ಏರಿಕೆ)
ತುಮಕೂರು - ರೂ. 102.45 (00)
ಉಡುಪಿ - ರೂ. 101.44 (00)
ಉತ್ತರ ಕನ್ನಡ - ರೂ.  103.1 (52 ಪೈಸೆ ಏರಿಕೆ)
ವಿಜಯನಗರ - ರೂ. 102.89 (00)
ಯಾದಗಿರಿ - ರೂ. 103.7 (04 ಪೈಸೆ ಏರಿಕೆ)


ಇದನ್ನೂ ಓದಿ:ರೈತ ಬಂಧು ಯೋಜನೆ ಅಡಿ ನಿಮ್ಮ ಖಾತೆಗೆ ಜಮಾ ಆಗಲಿದೆ ಭಾರಿ ಮೊತ್ತದ ಹಣ!


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


ಬಾಗಲಕೋಟೆ - ರೂ. 88.66
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.95
ಬೆಳಗಾವಿ - ರೂ. 88.39
ಬಳ್ಳಾರಿ - ರೂ. 89.68
ಬೀದರ್ - ರೂ. 88.44
ವಿಜಯಪುರ - ರೂ. 88.11
ಚಾಮರಾಜನಗರ - ರೂ. 88.01
ಚಿಕ್ಕಬಳ್ಳಾಪುರ - ರೂ. 87.67
ಚಿಕ್ಕಮಗಳೂರು - ರೂ. 88.98
ಚಿತ್ರದುರ್ಗ - ರೂ. 90.10
ದಕ್ಷಿಣ ಕನ್ನಡ - ರೂ. 87.43
ದಾವಣಗೆರೆ - ರೂ. 89.63
ಧಾರವಾಡ - ರೂ. 87.71
ಗದಗ - ರೂ. 88.20
ಕಲಬುರಗಿ - ರೂ. 87.71
ಹಾಸನ - ರೂ. 87.67
ಹಾವೇರಿ - ರೂ. 88.74
ಕೊಡಗು - ರೂ. 88.92
ಕೋಲಾರ - ರೂ. 87.77
ಕೊಪ್ಪಳ - ರೂ. 88.92
ಮಂಡ್ಯ - ರೂ. 87.75
ಮೈಸೂರು - ರೂ. 87.49
ರಾಯಚೂರು - ರೂ. 88.25
ರಾಮನಗರ - ರೂ. 88.17
ಶಿವಮೊಗ್ಗ - 89.16
ತುಮಕೂರು - ರೂ. 88.36
ಉಡುಪಿ - ರೂ. 87.41
ಉತ್ತರ ಕನ್ನಡ - ರೂ. 88.80
ವಿಜಯನಗರ - 88.77
ಯಾದಗಿರಿ - ರೂ. 88.94

Published by:Sandhya M
First published: