• Home
  • »
  • News
  • »
  • business
  • »
  • Karnataka Petrol Price Today: ಕೆಲ ಜಿಲ್ಲೆಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಪೆಟ್ರೋಲ್ ದರ, ಡೀಸೆಲ್ ಬೆಲೆ ಎಷ್ಟಿದೆ ನೋಡಿ

Karnataka Petrol Price Today: ಕೆಲ ಜಿಲ್ಲೆಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಪೆಟ್ರೋಲ್ ದರ, ಡೀಸೆಲ್ ಬೆಲೆ ಎಷ್ಟಿದೆ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Petrol and Diesel Price Today: ಕೆಲ ಸಮಯದ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆ ಗಗನಕ್ಕೇರಿದ್ದವು. ಆ ಸಮಯದಲ್ಲಿ ವಾಹನ ಸವಾರರರು ರಸ್ತೆ ಮೇಲೆ ವಾಹನ ಇಳಿಸಲೂ ಸಹ ಪರದಾಡುವಂತಾಗಿತ್ತು.

  • Share this:

ಈಗಂತೂ ಪೆಟ್ರೋಲ್-ಡೀಸೆಲ್‌ಗೂ (Petrol-Diesel) ಚಿನ್ನದ ಬೆಲೆ (Price) ಬಂದಿದೆ ಅಂತಾ ನಮಗೆಲ್ಲಾ ಗೊತ್ತು. ಸುಖಾಸುಮ್ಮನೆ ಬೈಕ್‌, ಕಾರಿನಲ್ಲಿ ಹೋಗುತ್ತಿದ್ದರೆ ಮನೆಯಲ್ಲಿ ಪೆಟ್ರೋಲ್‌ ಏನು ನೀರಾ? ಅಂತಾ ಕೇಳುತ್ತಾರೆ. ಇಂಧನಗಳು (Fuel) ಈಗ ದ್ರವ ರೂಪದ ಚಿನ್ನವಾಗಿವೆ. ಅದರ ಬೆಲೆಯನ್ನು ನೋಡಿಕೊಂಡು ಅಗತ್ಯವಿದ್ದಲ್ಲಿ ವಾಹನಗಳನ್ನು ಬಳಸುವುದು ಉತ್ತಮ. ಬೇಡಿಕೆ ಹೆಚ್ಚಾದಲ್ಲಿ ಬೆಲೆಯೂ ಹೆಚ್ಚಾಗುತ್ತದೆ. ವಿಶ್ವದಲ್ಲಿ ತೈಲಕ್ಕೆ ಹೆಚ್ಚಿನ ಬೇಡಿಕೆ ಎನ್ನುವುದಕ್ಕಿಂತ ಅವಶ್ಯಕತೆ ಇದೆ. ಪ್ರತಿದಿನ ಮಿಲಿಯನ್‌ಗಟ್ಟಲೇ ವಾಹನಗಳು ರಸ್ತೆಗಿಳಿಯುತ್ತವೆ. ಹೀಗಾಗಿ ತೈಲ ಪೂರೈಕೆ ಜಗತ್ತಿನಾದ್ಯಂತ ಪ್ರತಿ ಪುಟ್ಟ ಹಳ್ಳಿಗೂ ಬೇಕಿರುವಂತದ್ದು. ಈಗಾಗ್ಲೇ ನೂರರ ಗಡಿ ದಾಟಿರುವ ಪೆಟ್ರೋಲ್‌ ದರದ ಇಂದಿನ ಬೆಲೆಯನ್ನು ತಿಳಿಯೋಣ ಬನ್ನಿ.


ಪೆಟ್ರೋಲ್‌ ದರ
ದೇಶದಲ್ಲಿ ಹಣದುಬ್ಬರ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಈ ನಡುವೆ ಮೇ 21ರಂದು ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡುವ ಮೂಲಕ ಜನತೆಗೆ ಬಿಗ್ ರಿಲೀಫ್ ನೀಡಿತ್ತು. ಅಂದಿನಿಂದ ಇಂದಿನವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಅಂತಹ ದೊಡ್ಡದಾದ ಯಾವುದೇ ಬದಲಾವಣೆಯಾಗಿಲ್ಲ. ಪೆಟ್ರೋಲ್‌-ಡೀಸೆಲ್‌ ದರಗಳು ಸರ್ಕಾರದ ಆದೇಶದ ಹೊರತಾಗಿ ಹೆಚ್ಚಿನ ಏರಿಕೆ-ಇಳಿಕೆ ಕಾಣುವುದಿಲ್ಲ, ಬದಲಿಗೆ ಸಣ್ಣ ವ್ಯತ್ಯಾಸಗಳು ನಡೆಯುತ್ತಿರುತ್ತವೆ. ಅಂತೆಯೇ ಇಂದೂ ಸಹ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪೆಟ್ರೋಲ್-ಡೀಸೆಲ್ ದರಗಳಲ್ಲಿ ಮಾಮೂಲಿನಂತೆ ಕೆಲ ಪೈಸೆಗಳಷ್ಟು ವ್ಯತ್ಯಾಸ ಕಂಡು ಬಂದಿದೆ.


ಇಂದು ಇಂಧನ ಸಹ ಚಿನ್ನ-ಬೆಳ್ಳಿಯಂತೆ ಆಗಿದ್ದು, ಅಪಾರವಾದ ಬೇಡಿಕೆ ಹಾಗೂ ಅವಶ್ಯಕತೆಯನ್ನು ಹೊಂದಿದೆ. ಕೈಗಾರಿಕೆಗಳಿಂದ ಹಿಡಿದು ವಾಹನ ಚಾಲನೆಯವರೆಗೆ ಇಂಧನದ ಅಗತ್ಯ ಆಗತ್ಯವಾಗಿದ್ದು ನಿತ್ಯವೂ ಇದರ ಬೆಲೆಗಳಲ್ಲಿ ಬದಲಾವಣೆಗಳಾಗುತ್ತಿರುತ್ತದೆ. ಜಾಗತಿಕವಾಗಿ ಉಂಟಾಗುವ ಕಚ್ಚಾ ತೈಲದ ಬೆಲೆಗಳಲ್ಲಿನ ವ್ಯತ್ಯಾಸದಿಂದಾಗಿಯೇ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಪ್ರಭಾವಿತವಾಗುತ್ತಿರುತ್ತವೆ ಎಂಬುದರಲ್ಲಿ ಸಂಶಯವಿಲ್ಲ . ಅದಾಗ್ಯೂ ಇತರೆ ಜಾಗತಿಕ ಕಾರಣಗಳೂ ಸಹ ಇದರ ಬೆಲೆಗಳ ಮೇಲೆ ಪ್ರಭಾವ ಬೀರುತ್ತಿರುತ್ತವೆ.


ಕೆಲ ಸಮಯದ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆ ಗಗನಕ್ಕೇರಿದ್ದವು. ಆ ಸಮಯದಲ್ಲಿ ವಾಹನ ಸವಾರರರು ರಸ್ತೆ ಮೇಲೆ ವಾಹನ ಇಳಿಸಲೂ ಸಹ ಪರದಾಡುವಂತಾಗಿತ್ತು. ಆದರೆ ಪರಿಸ್ಥಿತಿ ಇಂದು ಹಾಗಿಲ್ಲ. ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಅಲ್ಪ ಸ್ವಲ್ಪ ವ್ಯತ್ಯಾಸಗಳೊಂದಿಗೆ ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಇಂದು ಗಮನಿಸಬಹುದು.


ಇನ್ನು, ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


ಬಾಗಲಕೋಟೆ - ರೂ. 102.93 (30 ಪೈಸೆ ಏರಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 101.58 (36 ಪೈಸೆ ಇಳಿಕೆ)
ಬೆಳಗಾವಿ - ರೂ. 102.53 (17 ಪೈಸೆ ಏರಿಕೆ)
ಬಳ್ಳಾರಿ - ರೂ. 103.90 (17 ಪೈಸೆ ಏರಿಕೆ)
ಬೀದರ್ - ರೂ. 102.64 (32 ಪೈಸೆ ಇಳಿಕೆ)
ವಿಜಯಪುರ - ರೂ. 102.27 (2 ಪೈಸೆ ಇಳಿಕೆ)
ಚಾಮರಾಜನಗರ - ರೂ. 102.13 (6 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - ರೂ. 102.12 (18 ಪೈಸೆ ಏರಿಕೆ)
ಚಿಕ್ಕಮಗಳೂರು - ರೂ. 102.90 (2 ಪೈಸೆ ಇಳಿಕೆ)
ಚಿತ್ರದುರ್ಗ - ರೂ. 103.35 (24 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 101.16 (00)
ದಾವಣಗೆರೆ - ರೂ. 103.85 (28 ಪೈಸೆ ಏರಿಕೆ)
ಧಾರವಾಡ - ರೂ. 101.91 (8 ಪೈಸೆ ಏರಿಕೆ)


ಇದನ್ನೂ ಓದಿ: ಸಿಂಗಾಪುರದಲ್ಲಿ ಟೆಕ್ ಉದ್ಯೋಗಿಗಳ ವಜಾ, ಭಾರತಕ್ಕೆ ಹೇಗೆಲ್ಲಾ ಎಫೆಕ್ಟ್ ಆಗ್ತಿದೆ ಗೊತ್ತೇ?


ಗದಗ - ರೂ. 102.38 (26 ಪೈಸೆ ಇಳಿಕೆ)
ಕಲಬುರಗಿ - ರೂ. 102.34 (8 ಪೈಸೆ ಇಳಿಕೆ)
ಹಾಸನ - ರೂ. 102.03 (15 ಪೈಸೆ ಇಳಿಕೆ)
ಹಾವೇರಿ - ರೂ. 102.24 (41 ಪೈಸೆ ಇಳಿಕೆ)
ಕೊಡಗು - ರೂ. 102.69 (57 ಪೈಸೆ ಇಳಿಕೆ)
ಕೋಲಾರ - ರೂ. 101.87 (27 ಪೈಸೆ ಇಳಿಕೆ)
ಕೊಪ್ಪಳ - ರೂ. 103.24 (19 ಪೈಸೆ ಏರಿಕೆ)
ಮಂಡ್ಯ - ರೂ. 101.61 (11 ಪೈಸೆ ಏರಿಕೆ)
ಮೈಸೂರು - ರೂ. 101.83 (10 ಪೈಸೆ ಏರಿಕೆ)
ರಾಯಚೂರು - ರೂ. 102.78 (39 ಪೈಸೆ ಏರಿಕೆ)
ರಾಮನಗರ - ರೂ.102.39 (14 ಪೈಸೆ ಏರಿಕೆ)
ಶಿವಮೊಗ್ಗ - ರೂ. 102.79 (87 ಪೈಸೆ ಇಳಿಕೆ)
ತುಮಕೂರು - ರೂ. 102.45 (19 ಪೈಸೆ ಏರಿಕೆ)
ಉಡುಪಿ - ರೂ. 101.81 (21 ಪೈಸೆ ಇಳಿಕೆ)
ಉತ್ತರ ಕನ್ನಡ - ರೂ. 102.94 (45 ಪೈಸೆ ಏರಿಕೆ)
ಯಾದಗಿರಿ - ರೂ. 102.79 (00)


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


ಬಾಗಲಕೋಟೆ - ರೂ. 88.81
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.57
ಬೆಳಗಾವಿ - ರೂ. 88.45
ಬಳ್ಳಾರಿ - ರೂ. 89.68
ಬೀದರ್ - ರೂ. 88.54
ವಿಜಯಪುರ - ರೂ. 88.21
ಚಾಮರಾಜನಗರ - ರೂ. 88.07
ಚಿಕ್ಕಬಳ್ಳಾಪುರ - ರೂ. 88.05
ಚಿಕ್ಕಮಗಳೂರು - ರೂ. 88.62


ಇದನ್ನೂ ಓದಿ: ಇಂದಿನಿಂದ ಡಿಜಿಟಲ್ ರೂಪಾಯಿ; ಎಲ್ಲಿ ಸಿಗುತ್ತೆ? ಬಳಕೆ ಹೇಗೆ?


ಚಿತ್ರದುರ್ಗ - ರೂ. 89.18
ದಕ್ಷಿಣ ಕನ್ನಡ - ರೂ. 87.15
ದಾವಣಗೆರೆ - ರೂ. 89.45
ಧಾರವಾಡ - ರೂ. 87.89
ಗದಗ - ರೂ. 88.31
ಕಲಬುರಗಿ - ರೂ. 88.27
ಹಾಸನ - ರೂ. 87.67
ಹಾವೇರಿ - ರೂ. 88.19
ಕೊಡಗು - ರೂ. 88.54
ಕೋಲಾರ - ರೂ. 87.83
ಕೊಪ್ಪಳ - ರೂ. 88.09
ಮಂಡ್ಯ - ರೂ. 87.59
ಮೈಸೂರು - ರೂ. 87.80
ರಾಯಚೂರು - ರೂ. 88.69
ರಾಮನಗರ - ರೂ. 88.29
ಶಿವಮೊಗ್ಗ - 88.56
ತುಮಕೂರು - ರೂ. 88.36
ಉಡುಪಿ - ರೂ. 87.74
ಉತ್ತರ ಕನ್ನಡ - ರೂ. 88.76
ಯಾದಗಿರಿ - ರೂ. 88.68

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು