• Home
  • »
  • News
  • »
  • business
  • »
  • Petrol, Diesel Price Today: ನಿಮ್ಮ ವಾಹನಕ್ಕೆ ಪೆಟ್ರೋಲ್​-ಡೀಸೆಲ್ ಹಾಕಿಸೋ ಮುನ್ನ​ ಬೆಲೆ ಎಷ್ಟಿದೆ ಅಂತ ಇಲ್ಲಿ ಚೆಕ್​ ಮಾಡಿ!

Petrol, Diesel Price Today: ನಿಮ್ಮ ವಾಹನಕ್ಕೆ ಪೆಟ್ರೋಲ್​-ಡೀಸೆಲ್ ಹಾಕಿಸೋ ಮುನ್ನ​ ಬೆಲೆ ಎಷ್ಟಿದೆ ಅಂತ ಇಲ್ಲಿ ಚೆಕ್​ ಮಾಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ, ಡೀಸೆಲ್ ದರ ರೂ. 87.89 ಆಗಿದೆ.

  • Share this:

ಇಂದು ರಾಜ್ಯದಲ್ಲಿ ಬಹುತೇಕ ಎಲ್ಲೆಡೆ ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ (Petrol, Diesel Price) ಯಾವುದೇ ಗಮನಾರ್ಹ ಏರಿಳಿತಗಳಾಗಿಲ್ಲ. ಆದಾಗ್ಯೂ ಎಂದಿನಂತೆ ಕೆಲವು ಪೈಸೆಗಳ ಚಿಕ್ಕ ಪುಟ್ಟ ವ್ಯತ್ಯಾಸಗಳಿರುವುದನ್ನು ಗಮನಿಸಬಹುದು. ಆದರೆ, ನಿನ್ನೆಗೆ ಹೋಲಿಸಿದರೆ ಇಂದು ಉತ್ತರ ಕನ್ನಡದಲ್ಲಿ ( Uttara Kannada) ಪೆಟ್ರೋಲ್ ಬೆಲೆ 1 ರೂ. 81 ಪೈಸೆಗಳಷ್ಟು ಏರಿಕೆಯಾಗಿದೆ. ಹಿಂದೊಮ್ಮೆ ಅತಿರೇಕಕ್ಕೆ ಹೋಗಿದ್ದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆಯಿಂದಾಗಿ ಪೆಟ್ರೋಲ್-ಡೀಸೆಲ್ ಬೆಲೆಗಳು ಗಗನಕ್ಕೇರಿದ್ದವು, ವಾಹನ ಸವಾರರರು ರಸ್ತೆ ಮೇಲೆ ವಾಹನ ಇಳಿಸಲೂ ಸಹ ಪರದಾಡುವಂತಾಗಿತ್ತು.


ಇಂದಿನ ಪೆಟ್ರೋಲ್​-ಡೀಸೆಲ್​ ದರ ಹೀಗಿದೆ


ಆದರೆ ಪರಿಸ್ಥಿತಿ ಇಂದು ಹಾಗಿಲ್ಲ. ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು. ಆದಾಗ್ಯೂ, ಬೆಲೆ ಏರಿಳಿತಗಳ ಈ ಕಣ್ಣು ಮುಚ್ಚಾಲೆ ಆಟ ನಡೆಯುತ್ತಲೇ ಇರುತ್ತದೆ.


ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ-ತೈಲದ ಬೆಲೆ ಏರಿಳಿತಗಳು ನಿರಂತರವಾಗಿದ್ದು ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಳಿತವಾಗುವುದು ಸಹಜವೇ ಆಗಿದೆ. ಅಷ್ಟಕ್ಕೂ ಆಗಾಗ ಈ ಇಂಧನ ಬೆಲೆಗಳು ಎಂಬುದು ಶ್ರೀಸಾಮಾನ್ಯನ ಕೈಸುಡುವಂತೆ ಮಾಡುವುದು ಸುಳ್ಳಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಹಾಗೆ ಮುಂದುವರೆದಿದ್ದು ಭವಿಷ್ಯದಲ್ಲಿ ಇಂಧನದ ಬೆಲೆಗಳು ಏನಾಗುವುದೋ ಕಾದು ನೋಡಬೇಕು.


ಇದನ್ನೂ ಓದಿ: ವಾರಾಂತ್ಯದಲ್ಲಿ ಚಿನ್ನ, ಬೆಳ್ಳಿ ದರ ಮತ್ತೆ ಏರಿಕೆ: ಹೀಗಿದೆ ನೋಡಿ ಇಂದಿನ ದರ!


ಇನ್ನು, ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ, ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.



ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
ಬಾಗಲಕೋಟೆ - ರೂ. 102.70
ಬೆಂಗಳೂರು - ರೂ. 101.94
ಬೆಂಗಳೂರು ಗ್ರಾಮಾಂತರ - ರೂ. 101.58
ಬೆಳಗಾವಿ - ರೂ. 102.69
ಬಳ್ಳಾರಿ - ರೂ. 102.89
ಬೀದರ್ - ರೂ. 102.58
ವಿಜಯಪುರ - ರೂ. 101.72
ಚಾಮರಾಜನಗರ - ರೂ. 102.10
ಚಿಕ್ಕಬಳ್ಳಾಪುರ - ರೂ. 101.94
ಚಿಕ್ಕಮಗಳೂರು - ರೂ. 102.94
ಚಿತ್ರದುರ್ಗ - ರೂ. 103.84
ದಕ್ಷಿಣ ಕನ್ನಡ - ರೂ. 101.26
ದಾವಣಗೆರೆ - ರೂ. 103.85
ಧಾರವಾಡ - ರೂ. 101.71
ಗದಗ - ರೂ. 102.25
ಕಲಬುರಗಿ - ರೂ. 101.71
ಹಾಸನ - ರೂ. 102.01
ಹಾವೇರಿ - ರೂ. 102.85
ಕೊಡಗು - ರೂ. 103.28
ಕೋಲಾರ - ರೂ. 101.64
ಕೊಪ್ಪಳ - ರೂ. 103.02
ಮಂಡ್ಯ - ರೂ. 101.74
ಮೈಸೂರು - ರೂ. 101.50
ರಾಯಚೂರು - ರೂ. 102.83
ರಾಮನಗರ - ರೂ. 102.40
ಶಿವಮೊಗ್ಗ - ರೂ. 103.43
ತುಮಕೂರು - ರೂ. 102.54
ಉಡುಪಿ - ರೂ. 101.23
ಉತ್ತರ ಕನ್ನಡ - ರೂ. 102.32
ಯಾದಗಿರಿ - ರೂ. 102.43


ಇದನ್ನೂ ಓದಿ: ನಿಮ್ಮ ಕೈಯಲ್ಲಿ 25 ಸಾವಿರ ಇದ್ರೆ ಸಾಕು! ಈ ನಾಲ್ಕು ಬ್ಯುಸಿನೆಸ್​ನಿಂದ ತಿಂಗಳಿಗೆ 50 ಸಾವಿರ ಗಳಿಸಿ!


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:
ಬಾಗಲಕೋಟೆ - ರೂ. 88.60
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.57
ಬೆಳಗಾವಿ - ರೂ. 88.60
ಬಳ್ಳಾರಿ - ರೂ. 88.77
ಬೀದರ್ - ರೂ. 88.50
ವಿಜಯಪುರ - ರೂ. 87.71
ಚಾಮರಾಜನಗರ - ರೂ. 88.04
ಚಿಕ್ಕಬಳ್ಳಾಪುರ - ರೂ. 87.89
ಚಿಕ್ಕಮಗಳೂರು - ರೂ. 88.67
ಚಿತ್ರದುರ್ಗ - ರೂ. 89.44
ದಕ್ಷಿಣ ಕನ್ನಡ - ರೂ. 87.25
ದಾವಣಗೆರೆ - ರೂ. 89.45
ಧಾರವಾಡ - ರೂ. 87.71
ಗದಗ - ರೂ. 88.20
ಕಲಬುರಗಿ - ರೂ. 87.71
ಹಾಸನ - ರೂ. 87.79
ಹಾವೇರಿ - ರೂ. 88.74
ಕೊಡಗು - ರೂ. 88.94
ಕೋಲಾರ - ರೂ. 87.62
ಕೊಪ್ಪಳ - ರೂ. 88.89
ಮಂಡ್ಯ - ರೂ. 87.71
ಮೈಸೂರು - ರೂ. 87.49
ರಾಯಚೂರು - ರೂ. 88.73
ರಾಮನಗರ - ರೂ. 88.31
ಶಿವಮೊಗ್ಗ - ರೂ. 89.15
ತುಮಕೂರು - ರೂ. 88.43
ಉಡುಪಿ - ರೂ. 87.22
ಉತ್ತರ ಕನ್ನಡ - ರೂ. 88.26
ಯಾದಗಿರಿ - ರೂ. 88.36


Published by:ವಾಸುದೇವ್ ಎಂ
First published: