Petrol-Diesel Price Today: ವಾಹನ ಸವಾರರಿಗೆ ಸಮಾಧಾನಕರ ಸುದ್ದಿ; ಪೆಟ್ರೋಲ್-ಡೀಸೆಲ್ ದರದಲ್ಲಿ ಕೊಂಚ ಇಳಿಕೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ವಿಜಯನಗರದಲ್ಲಿ ಪೆಟ್ರೋಲ್ ದರ ನಿನ್ನೆಗೆ ಹೋಲಿಸಿದರೆ ಇಂದು 1 ರೂ. 10 ಪೈಸೆಗಳಷ್ಟು ಇಳಿಕೆಯಾಗಿದೆ. ಉಳಿದ ಜಿಲ್ಲೆಗಳಲ್ಲಿ ಪೆಟ್ರೋಲ್​-ಡೀಸೆಲ್​ ದರ ಎಷ್ಟಿದೆ ನೋಡಿ.

  • Trending Desk
  • 5-MIN READ
  • Last Updated :
  • Karnataka, India
  • Share this:

ಇಂದು ರಾಜ್ಯದಲ್ಲಿ ವಿಜಯನಗರ ಜಿಲ್ಲೆ (Vijayanagar District) ಒಂದನ್ನು ಹೊರತುಪಡಿಸಿ ಮಿಕ್ಕೆಲ್ಲ ಜಿಲ್ಲಾ ಕೇಂದ್ರಗಳಲ್ಲಿ ಇಂಧನದ ದರಗಳನ್ನು ನೋಡುವುದಾದರೆ ಎಲ್ಲೆಡೆ ಎಂದಿನಂತೆ ಸ್ಥಿರವಾದ ಗತಿಯಯಲ್ಲಿ ದರಗಳು (Petrol-Diesel Price) ಮುಂದುವರೆದಿದ್ದು ಯಾವುದೇ ರೀತಿಯ ದೊಡ್ಡ ವ್ಯಾತ್ಯಾಸ ಕಂಡುಬಂದಿಲ್ಲ. ಆದಾಗ್ಯೂ ಮಾಮೂಲಿನಂತೆ ಕೆಲ ಪೈಸೆಗಳಷ್ಟು ವ್ಯತ್ಯಾಸಗಳಿರುವುದನ್ನು ಗಮನಿಸಬಹುದಾಗಿದೆ. ಆದರೆ ವಿಜಯನಗರದಲ್ಲಿ ಮಾತ್ರ ಪೆಟ್ರೋಲ್ ದರ (Petrol Price) ನಿನ್ನೆಗೆ ಹೋಲಿಸಿದರೆ ಇಂದು 1 ರೂ. 10 ಪೈಸೆಗಳಷ್ಟು ಇಳಿಕೆಯಾಗಿದೆ.


ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು


ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


ಬಾಗಲಕೋಟೆ - ರೂ. 102.50 (2 ಪೈಸೆ ಏರಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 102.01 (7 ಪೈಸೆ ಏರಿಕೆ)
ಬೆಳಗಾವಿ - ರೂ. 101.91 (68 ಪೈಸೆ ಇಳಿಕೆ)
ಬಳ್ಳಾರಿ - ರೂ. 103.07 (54 ಪೈಸೆ ಇಳಿಕೆ)
ಬೀದರ್ - ರೂ. 102.70 (42 ಪೈಸೆ ಏರಿಕೆ)
ವಿಜಯಪುರ - ರೂ. 101.92 (32 ಪೈಸೆ ಇಳಿಕೆ)
ಚಾಮರಾಜನಗರ - ರೂ. 102.13 (3 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - ರೂ. 102 (6 ಪೈಸೆ ಏರಿಕೆ)
ಚಿಕ್ಕಮಗಳೂರು - ರೂ. 103.70 (58 ಪೈಸೆ ಏರಿಕೆ)
ಚಿತ್ರದುರ್ಗ - ರೂ. 103.36 (36 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 101.34 (31 ಪೈಸೆ ಇಳಿಕೆ)
ದಾವಣಗೆರೆ - ರೂ. 103.29 (12 ಪೈಸೆ ಇಳಿಕೆ)
ಧಾರವಾಡ - ರೂ. 102.04 (23 ಪೈಸೆ ಏರಿಕೆ)
ಗದಗ - ರೂ. 102.19 (19 ಪೈಸೆ ಇಳಿಕೆ)
ಕಲಬುರಗಿ - ರೂ. 102.49 (5 ಪೈಸೆ ಏರಿಕೆ)
ಹಾಸನ - ರೂ. 101.94 (00)
ಹಾವೇರಿ - ರೂ. 102.24 (14 ಪೈಸೆ ಇಳಿಕೆ)
ಕೊಡಗು - ರೂ. 103.56 (30 ಪೈಸೆ ಏರಿಕೆ)
ಕೋಲಾರ - ರೂ. 102.10 (29 ಪೈಸೆ ಏರಿಕೆ)
ಕೊಪ್ಪಳ - ರೂ. 102.94 (8 ಪೈಸೆ ಏರಿಕೆ)
ಮಂಡ್ಯ - ರೂ. 101.86 (8 ಪೈಸೆ ಇಳಿಕೆ)
ಮೈಸೂರು - ರೂ. 101.92 (42 ಪೈಸೆ ಏರಿಕೆ)
ರಾಯಚೂರು - ರೂ. 101.90 (6 ಪೈಸೆ ಏರಿಕೆ)
ರಾಮನಗರ - ರೂ. 102.45 (6 ಪೈಸೆ ಏರಿಕೆ)
ಶಿವಮೊಗ್ಗ - ರೂ. 103.44 (54 ಪೈಸೆ ಏರಿಕೆ)
ತುಮಕೂರು - ರೂ. 102.64 (17 ಪೈಸೆ ಇಳಿಕೆ)
ಉಡುಪಿ - ರೂ. 102.25 (23 ಪೈಸೆ ಏರಿಕೆ)
ಉತ್ತರ ಕನ್ನಡ - ರೂ. 102.79 (42 ಪೈಸೆ ಏರಿಕೆ)
ವಿಜಯನಗರ - ರೂ. 103.07 (1 ರೂ. 10 ಪೈಸೆ ಇಳಿಕೆ)
ಯಾದಗಿರಿ - ರೂ. 102.65 (22 ಪೈಸೆ ಏರಿಕೆ)


ಇದನ್ನೂ ಓದಿ: Gold Price Down: ಚಿನ್ನ ಖರೀದಿಗೆ ಇದೇ ಬೆಸ್ಟ್ ಟೈಮ್​, ಅಕ್ಷಯ ತೃತೀಯವರೆಗೂ ಕಾಯಬೇಡಿ!


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


ಬಾಗಲಕೋಟೆ - ರೂ. 88.42
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.95
ಬೆಳಗಾವಿ - ರೂ. 87.90
ಬಳ್ಳಾರಿ - ರೂ. 88.95
ಬೀದರ್ - ರೂ. 88.60
ವಿಜಯಪುರ - ರೂ. 87.90
ಚಾಮರಾಜನಗರ - ರೂ. 88.07
ಚಿಕ್ಕಬಳ್ಳಾಪುರ - ರೂ. 87.95
ಚಿಕ್ಕಮಗಳೂರು - ರೂ. 89.36
ಚಿತ್ರದುರ್ಗ - ರೂ. 88.99
ದಕ್ಷಿಣ ಕನ್ನಡ - ರೂ. 87.31
ದಾವಣಗೆರೆ - ರೂ. 88.92
ಧಾರವಾಡ - ರೂ. 88.01
ಗದಗ - ರೂ. 88.14
ಕಲಬುರಗಿ - ರೂ. 88.41
ಹಾಸನ - ರೂ. 87.71
ಹಾವೇರಿ - ರೂ. 88.19
ಕೊಡಗು - ರೂ. 89.20
ಕೋಲಾರ - ರೂ. 88.03
ಕೊಪ್ಪಳ - ರೂ. 88.83
ಮಂಡ್ಯ - ರೂ. 87.82
ಮೈಸೂರು - ರೂ. 87.87
ರಾಯಚೂರು - ರೂ. 87.89
ರಾಮನಗರ - ರೂ. 88.36
ಶಿವಮೊಗ್ಗ - 89.21
ತುಮಕೂರು - ರೂ. 88.52
ಉಡುಪಿ - ರೂ. 88.14
ಉತ್ತರ ಕನ್ನಡ - ರೂ. 88.63
ವಿಜಯನಗರ - ರೂ. 88.94
ಯಾದಗಿರಿ - ರೂ. 88.55


ಪೆಟ್ರೋಲ್ ಹಾಗೂ ಡೀಸೆಲ್ ನಂತಹ ಇಂಧನಗಳು ಮುಖ್ಯವಾಗಿ ನವೀಕರಿಸಲಾಗದಂತಹ ಶಕ್ತಿಮೂಲಗಳು. ಈ ಇಂಧನಗಳನ್ನು ಮೂಲವಾಗಿ ಕಚ್ಚಾ ತೈಲವನ್ನು ಸಂಸ್ಕರಿಸಿ ಉತ್ಪಾದಿಸಲಾಗುತ್ತದೆ. ಹಾಗಾಗಿ ಇವುಗಳನ್ನು ಅವಶ್ಯಕತೆಗನುಸಾರವಾಗಿ ಹಾಗೂ ಸಮಯೋಚಿತವಾಗಿ ಬಳಸಬೇಕಾಗಿರುವುದು ಅಗತ್ಯ ಹಾಗೂ ಅನಿವಾರ್ಯ.


ಕಚ್ಚಾ ತೈಲ ತನ್ನದೆ ಆದ ದೊಡ್ಡ ಮಟ್ಟದ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಹೊಂದಿದೆ ಹಾಗೂ ಇಲ್ಲಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್ ಗೆ ಇಂತಿಷ್ಟು ಎಂದು ನಿಗದಿಯಾಗುತ್ತಿರುತ್ತದೆ. ಜಾಗತಿಕವಾಗಿ ಏರ್ಪಡುವ ಹಲವಾರು ಅಂಶಗಳಿಂದಾಗಿ ಇದರ ಬೆಲೆ ಪ್ರಭಾವಿಸಲ್ಪಡುತ್ತಿರುತ್ತದೆ.




ಹಾಗಾಗಿ ಕಚ್ಚಾ ತೈಲವನ್ನು ಉತ್ಪಾದಿಸುವ ರಾಷ್ಟ್ರಗಳಿಂದ ಇತರೆ ದೇಶಗಳು ಇದನ್ನು ಖರೀದಿಸುತ್ತಲೇ ಇರುತ್ತವೆ. ಅದರಲ್ಲೂ ವಿಶೇಷವಾಗಿ ಭಾರತ ತನ್ನ ಅಗಾಧ ಪ್ರಮಾಣದ ಇಂಧನದ ಅವಶ್ಯಕತೆಯನ್ನು ಪೂರೈಸಲು ಕಚ್ಚಾ ತೈಲವನ್ನು ಇತರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತದೆ.


ಭಾರತದಲ್ಲೂ ಸಹ ಅಂತಾರಾಷ್ಟ್ರೀಯ ಮಾರುಕಟ್ಟೆಗನುಗುಣವಾಗಿ ಪೆಟ್ರೋಲ್ ಅಥವಾ ಡೀಸೆಲ್ ಇಂಧನಗಳ ದರಗಳಲ್ಲಿ ನಿತ್ಯ ಏರಿಳಿತಗಳು ಸಹಜವಾಗಿದೆ. ಹಾಗಾಗಿ ನಿತ್ಯದ ಇಂಧನ ದರಗಳಲ್ಲಾಗುವ ಅಪ್ಡೇಟ್ ಪ್ರತಿದಿನ ವಾಹನ ಬಳಸುವ ಸವಾರರಿಗೆ ಸಾಕಷ್ಟು ಉಪಯುಕ್ತ ಎನ್ನಬಹುದು.

top videos
    First published: