• Home
  • »
  • News
  • »
  • business
  • »
  • Petrol-Diesel Price Today: ಪೆಟ್ರೋಲ್ ಬೆಲೆಯಲ್ಲಿ ₹2.16 ಹೆಚ್ಚಳ: ಇಂದಿನ ದರ ಎಷ್ಟಾಗಿದೆ ನೋಡಿ

Petrol-Diesel Price Today: ಪೆಟ್ರೋಲ್ ಬೆಲೆಯಲ್ಲಿ ₹2.16 ಹೆಚ್ಚಳ: ಇಂದಿನ ದರ ಎಷ್ಟಾಗಿದೆ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ.

  • Share this:

     ಈಗಂತೂ ಪೆಟ್ರೋಲ್-ಡೀಸೆಲ್‌ಗೂ (Petrol-Diesel) ಚಿನ್ನದ ಬೆಲೆ ಬಂದಿದೆ ಅಂತಾ ನಮಗೆಲ್ಲಾ ಗೊತ್ತು.  ಇಂಧನಗಳು ಈಗ ದ್ರವ ರೂಪದ ಚಿನ್ನವಾಗಿವೆ. ಅದರ ಬೆಲೆಯನ್ನು (Fuel Price) ನೋಡಿಕೊಂಡು ಅಗತ್ಯವಿದ್ದಲ್ಲಿ ವಾಹನಗಳನ್ನು ಬಳಸುವುದು ಉತ್ತಮ. ಬೇಡಿಕೆ ಹೆಚ್ಚಾದಲ್ಲಿ ಬೆಲೆಯೂ ಹೆಚ್ಚಾಗುತ್ತದೆ. ವಿಶ್ವದಲ್ಲಿ ತೈಲಕ್ಕೆ ಹೆಚ್ಚಿನ ಬೇಡಿಕೆ ಎನ್ನುವುದಕ್ಕಿಂತ ಅವಶ್ಯಕತೆ ಇದೆ. ಪ್ರತಿದಿನ ಮಿಲಿಯನ್‌ಗಟ್ಟಲೇ ವಾಹನಗಳು ರಸ್ತೆಗಿಳಿಯುತ್ತವೆ. ಹೀಗಾಗಿ ತೈಲ ಪೂರೈಕೆ ಜಗತ್ತಿನಾದ್ಯಂತ ಪ್ರತಿ ಪುಟ್ಟ ಹಳ್ಳಿಗೂ ಬೇಕಿರುವಂತದ್ದು. ಈಗಾಗ್ಲೇ ನೂರರ ಗಡಿ ದಾಟಿರುವ ಪೆಟ್ರೋಲ್‌ ನ (Petrol  Price) ಇಂದಿನ ಬೆಲೆಯನ್ನು ತಿಳಿಯೋಣ ಬನ್ನಿ.


    ಪೆಟ್ರೋಲ್‌ ದರ
    ಮೇ 21ರ ಶನಿವಾರ ಪೆಟ್ರೋಲ್ ಮೇಲೆ 8 ರೂಪಾಯಿ, ಡೀಸೆಲ್ ಮೇಲೆ 6 ರೂಪಾಯಿ ಅಬಕಾರಿ ಸುಂಕವನ್ನು ಕಡಿತಗೊಳಿಸಲಾಗಿದೆ. ಇದರಿಂದ ಪೆಟ್ರೋಲ್ ಬೆಲೆಯಲ್ಲಿ 9.50 ರೂಪಾಯಿ ಹಾಗೂ ಡೀಸೆಲ್ ದರದಲ್ಲಿ 7 ರೂಪಾಯಿ ಇಳಿಕೆಯಾಗಿತ್ತು. ಈ ಮೂಲಕ ಜನತೆಗೆ ಬಿಗ್ ರಿಲೀಫ್ ಸಿಕ್ಕಿತ್ತು. ಅಂದಿನಿಂದ ಇಂದಿನವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಅಂತಹ ದೊಡ್ಡದಾದ ಯಾವುದೇ ಬದಲಾವಣೆಯಾಗಿಲ್ಲ.


    ಮಹಾನಗರಗಳಲ್ಲಿ ಬೆಲೆ ಎಷ್ಟಿದೆ? 


    ಇನ್ನು, ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


    ಬಾಗಲಕೋಟೆ - ರೂ. 102.71 (22 ಪೈಸೆ ಏರಿಕೆ)
    ಬೆಂಗಳೂರು - ರೂ. 101.94 (00)
    ಬೆಂಗಳೂರು ಗ್ರಾಮಾಂತರ - ರೂ. 102.09 (4 ಪೈಸೆ ಏರಿಕೆ)
    ಬೆಳಗಾವಿ - ರೂ. 102.47 (59 ಪೈಸೆ ಏರಿಕೆ)
    ಬಳ್ಳಾರಿ - ರೂ. 103.90 (83 ಪೈಸೆ ಏರಿಕೆ)
    ಬೀದರ್ - ರೂ. 102.28 (16 ಪೈಸೆ ಇಳಿಕೆ)
    ವಿಜಯಪುರ - ರೂ. 101.93 (16 ಪೈಸೆ ಏರಿಕೆ)
    ಚಾಮರಾಜನಗರ - ರೂ. 102.10 (17 ಪೈಸೆ ಏರಿಕೆ)
    ಚಿಕ್ಕಬಳ್ಳಾಪುರ - ರೂ. 101.94 (6 ಪೈಸೆ ಇಳಿಕೆ)
    ಚಿಕ್ಕಮಗಳೂರು - ರೂ. 102.69 (16 ಪೈಸೆ ಇಳಿಕೆ)
    ಚಿತ್ರದುರ್ಗ - ರೂ. 103.84 (54 ಪೈಸೆ ಏರಿಕೆ)
    ದಕ್ಷಿಣ ಕನ್ನಡ - ರೂ. 101.51 (31 ಪೈಸೆ ಇಳಿಕೆ)
    ದಾವಣಗೆರೆ - ರೂ. 103.85 (45 ಪೈಸೆ ಏರಿಕೆ)
    ಧಾರವಾಡ - ರೂ. 101.70 (34 ಪೈಸೆ ಇಳಿಕೆ)
    ಗದಗ - ರೂ. 102.25 (54 ಪೈಸೆ ಇಳಿಕೆ)
    ಕಲಬುರಗಿ - ರೂ. 101.71 (50 ಪೈಸೆ ಇಳಿಕೆ)
    ಹಾಸನ - ರೂ. 101.88 (44 ಪೈಸೆ ಇಳಿಕೆ)
    ಹಾವೇರಿ - ರೂ. 102.38 (14 ಪೈಸೆ ಏರಿಕೆ)
    ಕೊಡಗು - ರೂ. 103.56 (13 ಪೈಸೆ ಇಳಿಕೆ)
    ಕೋಲಾರ - ರೂ. 101.87 (00)
    ಕೊಪ್ಪಳ - ರೂ. 103.21 (19 ಪೈಸೆ ಏರಿಕೆ)
    ಮಂಡ್ಯ - ರೂ. 101.94 (20 ಪೈಸೆ ಇಳಿಕೆ)
    ಮೈಸೂರು - ರೂ. 101.50 (00)
    ರಾಯಚೂರು - ರೂ. 102.43 (00)
    ರಾಮನಗರ - ರೂ.102.39 (6 ಪೈಸೆ ಇಳಿಕೆ)
    ಶಿವಮೊಗ್ಗ - ರೂ. 103.61 (18 ಪೈಸೆ ಏರಿಕೆ)
    ತುಮಕೂರು - ರೂ. 102.81 (60 ಪೈಸೆ ಏರಿಕೆ)
    ಉಡುಪಿ - ರೂ. 101.83 (50 ಪೈಸೆ ಏರಿಕೆ)
    ಉತ್ತರ ಕನ್ನಡ - ರೂ. 104.30 (2.16 ಪೈಸೆ ಏರಿಕೆ)
    ಯಾದಗಿರಿ - ರೂ. 102.31 (34 ಪೈಸೆ ಇಳಿಕೆ)


    ಇದನ್ನೂ ಓದಿ: Small Business Ideas: ಇದೊಂದು ಹೊಸ ಬ್ಯುಸಿನೆಸ್​ ಐಡಿಯಾ, ತಿಂಗಳಿಗೆ 1 ಲಕ್ಷ ಆದಾಯ ಮಿಸ್ಸೇ ಇಲ್ಲ!


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


    ಬಾಗಲಕೋಟೆ - ರೂ. 88.61
    ಬೆಂಗಳೂರು - ರೂ. 87.89
    ಬೆಂಗಳೂರು ಗ್ರಾಮಾಂತರ - ರೂ. 88.03
    ಬೆಳಗಾವಿ - ರೂ. 88.39
    ಬಳ್ಳಾರಿ - ರೂ. 89.68
    ಬೀದರ್ - ರೂ. 88.23
    ವಿಜಯಪುರ - ರೂ. 87.90
    ಚಾಮರಾಜನಗರ - ರೂ. 88.04
    ಚಿಕ್ಕಬಳ್ಳಾಪುರ - ರೂ. 87.89
    ಚಿಕ್ಕಮಗಳೂರು - ರೂ. 88.14
    ಚಿತ್ರದುರ್ಗ - ರೂ. 89.44
    ದಕ್ಷಿಣ ಕನ್ನಡ - ರೂ. 87.47
    ದಾವಣಗೆರೆ - ರೂ. 89.45
    ಧಾರವಾಡ - ರೂ. 87.70
    ಗದಗ - ರೂ. 88.20
    ಕಲಬುರಗಿ - ರೂ. 87.71
    ಹಾಸನ - ರೂ. 87.67
    ಹಾವೇರಿ - ರೂ. 88.31
    ಕೊಡಗು - ರೂ. 89.20
    ಕೋಲಾರ - ರೂ. 87.83
    ಕೊಪ್ಪಳ - ರೂ. 89.08
    ಮಂಡ್ಯ - ರೂ. 87.89
    ಮೈಸೂರು - ರೂ. 87.49
    ರಾಯಚೂರು - ರೂ. 88.38
    ರಾಮನಗರ - ರೂ. 88.29
    ಶಿವಮೊಗ್ಗ - 89.30
    ತುಮಕೂರು - ರೂ. 88.68
    ಉಡುಪಿ - ರೂ. 87.76
    ಉತ್ತರ ಕನ್ನಡ - ರೂ. 89.99
    ಯಾದಗಿರಿ - ರೂ. 88.25


    ಕೆಲ ಸಮಯದ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆ ಗಗನಕ್ಕೇರಿದ್ದವು. ಆ ಸಮಯದಲ್ಲಿ ವಾಹನ ಸವಾರರರು ರಸ್ತೆ ಮೇಲೆ ವಾಹನ ಇಳಿಸಲೂ ಸಹ ಪರದಾಡುವಂತಾಗಿತ್ತು. ಆದರೆ ಪರಿಸ್ಥಿತಿ ಇಂದು ಹಾಗಿಲ್ಲ. ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಅಲ್ಪ ಸ್ವಲ್ಪ ವ್ಯತ್ಯಾಸಗಳೊಂದಿಗೆ ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಇಂದು ಗಮನಿಸಬಹುದು.

    Published by:Kavya V
    First published: