ರಾಜ್ಯದ (Karnataka) ಪ್ರತಿ ಜಿಲ್ಲೆಯಲ್ಲೂ ಪೆಟ್ರೋಲ್- ಡೀಸೆಲ್ ದರದಲ್ಲಿ (Petrol-Diesel Price) ವ್ಯತ್ಯಾಸ ಉಂಟಾಗುತ್ತಲೇ ಇರುತ್ತದೆ. ದರ ವ್ಯತ್ಯಾಸವೆಂಬುದು ಹಾವು ಏಣಿ ಆಟವಿದ್ದಂತೆ. ಹೆಚ್ಚಿನ ವ್ಯತ್ಯಾಸ ಕಂಡುಬರದಿದ್ದರೂ ಚಿಕ್ಕ ಪುಟ್ಟ ವ್ಯತ್ಯಾಸ ಇದ್ದೇ ಇರುತ್ತದೆ. ಶಕ್ತಿಯ ಮೂಲವೆಂದೆನಿಸಿರುವ ಪೆಟ್ರೋಲ್ ಹಾಗೂ ಡೀಸೆಲ್ ಇಂಧನ ಜಗತ್ತಿನ ಅತ್ಯವಶ್ಯಕ ಸಂಪನ್ಮೂಲ ಎಂದೆನಿಸಿವೆ. ವಾಹನಗಳ ಓಡಾಟಕ್ಕೆ ಅಗತ್ಯವಾಗಿರುವುದರಿಂದ ಹಿಡಿದು ಕಾರ್ಖಾನೆಗಳಲ್ಲಿನ ಯಂತ್ರ ಚಲನೆಗಳಿಗೂ ಇಂಧನಗಳ ಅವಶ್ಯಕತೆ ಇದೆ.
ಬಹುಮೂಲ್ಯ ಇಂಧನಗಳು
ಪೆಟ್ರೋಲ್ ಡೀಸೆಲ್‌ನಂತಹ ಬಹುಮೂಲ್ಯ ಇಂಧನಗಳನ್ನು ಸಮುದ್ರದಾಳದಲ್ಲಿ ದೊರೆಯುವ ಕಚ್ಚಾತೈಲಗಳಾಗಿದ್ದು ಇವುಗಳನ್ನು ಸಂಸ್ಕರಿಸಿ ತಯಾರಿಸಲಾಗುತ್ತದೆ. ವಿಶ್ವದಾದ್ಯಂತ ಕೆಲವೇ ಕೆಲವು ದೇಶಗಳು ಇಂತಹ ತೈಲಗಳ ನಿಕ್ಷೇಪಗಳನ್ನು ಹೊಂದಿದ್ದು ಆ ರಾಷ್ಟ್ರಗಳಿಂದ ಇತರೆ ರಾಷ್ಟ್ರಗಳು ಕಚ್ಚಾ ತೈಲ ಖರೀದಿಸುತ್ತವೆ.
ಭಾರತ ಸಹ ತನ್ನ ದೊಡ್ಡ ಜನಸಂಖ್ಯೆಗನುಗುಣವಾದ ಬೇಡಿಕೆಯನ್ನು ಪೂರೈಸಲು ಅಪಾರ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಂಡು ತನ್ನಲ್ಲಿರುವ ರಿಫೈನರಿಗಳ ಮೂಲಕ ಅದನ್ನು ಸಂಸ್ಕರಿಸಿ ತನ್ನ ರಾಜ್ಯಗಳಾದ್ಯಂತ ವಿತರಿಸುತ್ತದೆ.
ಏರಿಳಿತಗೊಳ್ಳುವ ಇಂಧನ ಬೆಲೆಗಳು
ಆದರೆ ಕಚ್ಚಾ ತೈಲದ ಬೆಲೆ ಸಾಮಾನ್ಯವಾಗಿ ಒಂದೇ ತೆರನಾಗಿರುವುದಿಲ್ಲ. ಹಲವಾರು ಜಾಗತಿಕ ವಿದ್ಯಮಾನಗಳಿಂದಾಗಿ ಅದರ ಬೆಲೆ ಪ್ರಭಾವಿಸಲ್ಪಡುತ್ತಿರುತ್ತದೆ. ಕಳೆದ ಬಾರಿ ರಷ್ಯಾ-ಉಕ್ರೇನ್ ಯುದ್ಧದ ಪ್ರಾರಂಭವಾದಾಗ ಕಚ್ಚಾ ತೈಲದ ಬೆಲೆ ಗಗನಕ್ಕೇರಿತ್ತು.
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.73, ರೂ. 106.31 ರೂ, 106.03, ರೂ. ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.33, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ - ರೂ. 102.48 (1 ಪೈಸೆ ಇಳಿಕೆ)
ಬೆಂಗಳೂರು - ರೂ. 101.94 (5 ಪೈಸೆ ಏರಿಕೆ)
ಬೆಂಗಳೂರು ಗ್ರಾಮಾಂತರ - ರೂ. 101.94 (31 ಪೈಸೆ ಏರಿಕೆ)
ಬೆಳಗಾವಿ - ರೂ. 102.59 (35 ಪೈಸೆ ಏರಿಕೆ)
ಬಳ್ಳಾರಿ - ರೂ. 103.61 (1 ಪೈಸೆ ಏರಿಕೆ)
ಬೀದರ್ - ರೂ. 102.28 (64 ಪೈಸೆ ಏರಿಕೆ)
ಬಿಜಯಪುರ - ರೂ. 101.72 (4 ಪೈಸೆ ಇಳಿಕೆ)
ಚಾಮರಾಜನಗರ - ರೂ. 102.10 (17 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - ರೂ. 101.94 (6 ಪೈಸೆ ಇಳಿಕೆ)
ಚಿಕ್ಕಮಗಳೂರು - ರೂ. 102.60 (61 ಪೈಸೆ ಇಳಿಕೆ)
ಚಿತ್ರದುರ್ಗ - ರೂ. 102.73
ದಕ್ಷಿಣ ಕನ್ನಡ - ರೂ. 101.85 (72 ಪೈಸೆ ಏರಿಕೆ)
ದಾವಣಗೆರೆ - ರೂ. 103.14 (85 ಪೈಸೆ ಇಳಿಕೆ)
ಧಾರವಾಡ - ರೂ. 101.71 (9 ಪೈಸೆ ಇಳಿಕೆ)
ಗದಗ - ರೂ. 102.38 (19 ಪೈಸೆ ಏರಿಕೆ )
ಕಲಬುರಗಿ - ರೂ. 101.71 (74 ಪೈಸೆ ಏರಿಕೆ)
ಹಾಸನ - ರೂ. 102.05 (5 ಪೈಸೆ ಇಳಿಕೆ)
ಹಾವೇರಿ - ರೂ. 102.41 (55 ಪೈಸೆ ಇಳಿಕೆ)
ಕೊಡಗು - ರೂ. 103.17 (48 ಪೈಸೆ ಏರಿಕೆ)
ಕೋಲಾರ - ರೂ. 101.81 (6 ಪೈಸೆ ಇಳಿಕೆ)
ಕೊಪ್ಪಳ - ರೂ. 103.10 (24 ಪೈಸೆ ಏರಿಕೆ)
ಮಂಡ್ಯ - ರೂ. 102.17 (34 ಪೈಸೆ ಏರಿಕೆ)
ಮೈಸೂರು - ರೂ. 101.50 (00)
ರಾಯಚೂರು - ರೂ. 101.84 (00)
ರಾಮನಗರ - ರೂ. 102.39 (34 ಪೈಸೆ ಏರಿಕೆ)
ಶಿವಮೊಗ್ಗ - ರೂ. 102.59 (67 ಪೈಸೆ ಇಳಿಕೆ)
ತುಮಕೂರು - ರೂ. 102.81 (55 ಪೈಸೆ ಏರಿಕೆ)
ಉಡುಪಿ - ರೂ. 101.81 (1 ಪೈಸೆ ಇಳಿಕೆ)
ಉತ್ತರ ಕನ್ನಡ - ರೂ. 102.37 (12 ಪೈಸೆ ಇಳಿಕೆ)
ವಿಜಯನಗರ - ರೂ. 103.34 (14 ಪೈಸೆ ಏರಿಕೆ)
ಯಾದಗಿರಿ - ರೂ. 102.43 (1 ಪೈಸೆ ಇಳಿಕೆ)
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ - ರೂ. 88.40
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 88.89
ಬೆಳಗಾವಿ - ರೂ. 88.50
ಬಳ್ಳಾರಿ - ರೂ. 89.42
ಬೀದರ್ - ರೂ. 88.23
ವಿಜಯಪುರ - ರೂ. 88.71
ಚಾಮರಾಜನಗರ - ರೂ. 88.04
ಚಿಕ್ಕಬಳ್ಳಾಪುರ - ರೂ. 87.89
ಚಿಕ್ಕಮಗಳೂರು - ರೂ. 88.29
ಚಿತ್ರದುರ್ಗ - ರೂ. 88.51
ದಕ್ಷಿಣ ಕನ್ನಡ - ರೂ. 87.78
ದಾವಣಗೆರೆ - ರೂ. 88.88
ಧಾರವಾಡ - ರೂ. 87.71
ಗದಗ - ರೂ. 88.31
ಕಲಬುರಗಿ - ರೂ. 87.71
ಹಾಸನ - ರೂ. 87.90
ಹಾವೇರಿ - ರೂ. 88.34
ಕೊಡಗು - ರೂ. 88.86
ಕೋಲಾರ - ರೂ. 87.77
ಕೊಪ್ಪಳ - ರೂ. 88.96
ಮಂಡ್ಯ - ರೂ. 88.10
ಮೈಸೂರು - ರೂ. 87.49
ರಾಯಚೂರು - ರೂ. 87.84
ರಾಮನಗರ - ರೂ. 88.29
ಶಿವಮೊಗ್ಗ – 88.43
ತುಮಕೂರು - ರೂ. 88.68
ಉಡುಪಿ - ರೂ. 87.74
ಉತ್ತರ ಕನ್ನಡ - ರೂ. 88.25
ವಿಜಯನಗರ - ರೂ. 89.18
ಯಾದಗಿರಿ - ರೂ. 88.36
ಇನ್ನು ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ವಾಸ್ತವಿಕವಾಗಿ ಡೈನಮಿಕ್ ಆಗಿದ್ದು ಬದಲಾವಣೆಗೊಳಪಡುತ್ತಿರುತ್ತದೆ. ಈ ಹಿಂದೆ ಪೆಟ್ರೋಲ್, ಡೀಸೆಲ್ ಗಳಂತಹ ಇಂಧನ ಬೆಳೆಗಳು ಪ್ರತಿ ಹದಿನೈದು ದಿನಗಳಿಗೊಮ್ಮೆ ಪರಿಷ್ಕರಿಸಲ್ಪಡುತ್ತಿದ್ದವು. ಆದರೆ, ಕೆಲ ವರ್ಷಗಳಿಂದ ಈಗ ಪ್ರತಿನಿತ್ಯ ಇದರ ಬೆಳೆಗಳು ಪರಿಷ್ಕರಿಸಲ್ಪಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ