Petrol-Diesel Price Today: ಚುನಾವಣೆಯ ದಿನ ಎಲ್ಲೆಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದೆ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಎಂದಿನಂತೆ ಸ್ಥಿರವಾದ ಗತಿಯಲ್ಲಿದೆ. ಉಳಿದ ಜಿಲ್ಲೆಗಳ ಮಾಹಿತಿ ಇಲ್ಲಿದೆ.

  • Share this:

ಇಂದು ರಾಜ್ಯದಲ್ಲಿ ನೋಡುವುದಾದರೆ ಪೆಟ್ರೋಲ್ ಬೆಲೆ (Petrol Price) ಚಿತ್ರದುರ್ಗದಲ್ಲಿ ಮತ್ತೆ ಮೊನ್ನೆಯ ಹಾಗೆ 1 ರೂ. 68 ಪೈಸೆಗಳಷ್ಟು ಏರಿರುವುದನ್ನು ಗಮನಿಸಬಹುದು. ಮಿಕ್ಕಂತೆ ರಾಜ್ಯದ ಎಲ್ಲೆಡೆ ಕೆಲ ಪೈಸೆಗಳಷ್ಟು ಸಹಜ ವ್ಯತ್ಯಾಸ ಮುಂದುವರೆದಿದ್ದು ರಾಜಧಾನಿ ಬೆಂಗಳೂರಿನಲ್ಲಿ (Bengaluru) ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು (Petrol-Diesel Price) ಎಂದಿನಂತೆ ಸ್ಥಿರವಾದ ಗತಿಯಲ್ಲಿದೆ.


ಸಾಮಾನ್ಯವಾಗಿ ಭೂಗರ್ಭ ಅಥವಾ ಸಮುದ್ರದಾಳದೊಳಗಿರುವ ತೈಲ ನಿಕ್ಷೇಪಗಳಿಂದ ಹೊರತೆಗೆಯಲಾಗುವ ಕಚ್ಚಾ ತೈಲದಿಂದ ನಿತ್ಯ ಜಗತ್ತಿನೆಲ್ಲೆಡೆ ಅಗತ್ಯವಾಗಿ ಬೇಕಾಗಿರುವ ಇಂಧನಗಳಾದ ಪೆಟ್ರೋಲ್ ಹಾಗೂ ಡೀಸೆಲ್ ಗಳನ್ನು ಉತ್ಪಾದಿಸಲಾಗುತ್ತದೆ. ಹಾಗಾಗಿ ಕಚ್ಚಾ ತೈಲ ಎಂಬುದು ಸಾಕಷ್ಟು ಅಮೂಲ್ಯವಾಗಿದ್ದು ಜಗತ್ತಿನಾದ್ಯಂತ ಅಪಾರವಾದ ಬೇಡಿಕೆ ಹೊಂದಿದೆ.

ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು


ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


ಬಾಗಲಕೋಟೆ - ರೂ. 102.68 (6 ಪೈಸೆ ಏರಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 102.01 (1 ಪೈಸೆ ಏರಿಕೆ)
ಬೆಳಗಾವಿ - ರೂ. 102.13 (42 ಪೈಸೆ ಇಳಿಕೆ)
ಬಳ್ಳಾರಿ - ರೂ. 103.78 (12 ಪೈಸೆ ಇಳಿಕೆ)
ಬೀದರ್ - ರೂ. 102.28 (24 ಪೈಸೆ ಇಳಿಕೆ)
ವಿಜಯಪುರ - ರೂ. 102.12 (12 ಪೈಸೆ ಏರಿಕೆ)
ಚಾಮರಾಜನಗರ - ರೂ. 102.10 (17 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - ರೂ. 101.94 (46 ಪೈಸೆ ಇಳಿಕೆ)
ಚಿಕ್ಕಮಗಳೂರು - ರೂ. 102.36 (24 ಪೈಸೆ ಇಳಿಕೆ)
ಚಿತ್ರದುರ್ಗ - ರೂ. 104.41 (1 ರೂ. 68 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 101.13 (00)
ದಾವಣಗೆರೆ - ರೂ. 103.46 (1 ಪೈಸೆ ಇಳಿಕೆ)
ಧಾರವಾಡ - ರೂ. 101.71 (00)
ಗದಗ - ರೂ. 102.25 (54 ಪೈಸೆ ಇಳಿಕೆ)
ಕಲಬುರಗಿ - ರೂ. 101.71 (58 ಪೈಸೆ ಇಳಿಕೆ)
ಹಾಸನ - ರೂ. 102.13 (23 ಪೈಸೆ ಏರಿಕೆ)
ಹಾವೇರಿ - ರೂ. 102.85 (55 ಪೈಸೆ ಏರಿಕೆ)
ಕೊಡಗು - ರೂ. 103.17 (00)
ಕೋಲಾರ - ರೂ. 101.81 (00)
ಕೊಪ್ಪಳ - ರೂ. 103.05 (19 ಪೈಸೆ ಏರಿಕೆ)
ಮಂಡ್ಯ - ರೂ. 101.61 (44 ಪೈಸೆ ಇಳಿಕೆ)
ಮೈಸೂರು - ರೂ. 101.50 (28 ಪೈಸೆ ಇಳಿಕೆ)
ರಾಯಚೂರು - ರೂ. 101.84 (87 ಪೈಸೆ ಇಳಿಕೆ)
ರಾಮನಗರ - ರೂ. 102.40 (12 ಪೈಸೆ ಏರಿಕೆ)
ಶಿವಮೊಗ್ಗ - ರೂ. 103.26 (35 ಪೈಸೆ ಇಳಿಕೆ)
ತುಮಕೂರು - ರೂ. 102.45 (16 ಪೈಸೆ ಏರಿಕೆ)
ಉಡುಪಿ - ರೂ. 101.44 (48 ಪೈಸೆ ಇಳಿಕೆ)
ಉತ್ತರ ಕನ್ನಡ - ರೂ. 102.49 (47 ಪೈಸೆ ಇಳಿಕೆ)
ವಿಜಯನಗರ - ರೂ. 102.89 (31 ಪೈಸೆ ಇಳಿಕೆ)
ಯಾದಗಿರಿ - ರೂ. 102.43 (33 ಪೈಸೆ ಇಳಿಕೆ)


ಇದನ್ನೂ ಓದಿ: Karnataka Election 2023 Voting Live: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿರುಸಿನ ಮತದಾನ, ಬೆಳ್ಳಂಬೆಳಗ್ಗೆ ವಿಐಪಿ ವೋಟಿಂಗ್


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


ಬಾಗಲಕೋಟೆ - ರೂ. 88.59
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.95
ಬೆಳಗಾವಿ - ರೂ. 88.09
ಬಳ್ಳಾರಿ - ರೂ. 89.58
ಬೀದರ್ - ರೂ. 88.23
ವಿಜಯಪುರ - ರೂ. 88.07
ಚಾಮರಾಜನಗರ - ರೂ. 88.04
ಚಿಕ್ಕಬಳ್ಳಾಪುರ - ರೂ. 87.89
ಚಿಕ್ಕಮಗಳೂರು - ರೂ. 88.19
ಚಿತ್ರದುರ್ಗ - ರೂ. 90.03
ದಕ್ಷಿಣ ಕನ್ನಡ - ರೂ. 87.13
ದಾವಣಗೆರೆ - ರೂ. 89.17
ಧಾರವಾಡ - ರೂ. 87.71
ಗದಗ - ರೂ. 88.20
ಕಲಬುರಗಿ - ರೂ. 87.71
ಹಾಸನ - ರೂ. 87.96
ಹಾವೇರಿ - ರೂ. 88.74
ಕೊಡಗು - ರೂ. 88.86
ಕೋಲಾರ - ರೂ. 87.77
ಕೊಪ್ಪಳ - ರೂ. 88.91
ಮಂಡ್ಯ - ರೂ. 87.59
ಮೈಸೂರು - ರೂ. 87.49
ರಾಯಚೂರು - ರೂ. 87.84
ರಾಮನಗರ - ರೂ. 88.31
ಶಿವಮೊಗ್ಗ - 89.04
ತುಮಕೂರು - ರೂ. 88.36
ಉಡುಪಿ - ರೂ. 87.41
ಉತ್ತರ ಕನ್ನಡ - ರೂ. 88.36
ವಿಜಯನಗರ - ರೂ. 88.77
ಯಾದಗಿರಿ - ರೂ. 88.36


ಕಚ್ಚಾ ತೈಲದ ದೊಡ್ಡ ಅಂತಾರಾಷ್ಟ್ರೀಯ ಮಾರುಕಟ್ಟೆ ಇದ್ದು ಇಲ್ಲಿ ಹಲವಾರು ಜಾಗತಿಕ ಕಾರಣಗಳಿಂದಾಗಿ ಅದರ ಬೆಲೆ ಪ್ರಭಾವಿಸಲ್ಪಡುತ್ತಿರುತ್ತದೆ. ನಾವು ಅವಶ್ಯಕವಾಗಿ ಅವಲಂಬಿತರಾಗಿರುವ ಪೆಟ್ರೋಲ್ ಅಥವಾ ಡೀಸೆಲ್ ಇಂಧನಗಳು ನವೀಕರಿಸಲಾಗದ ಶಕ್ತಿಯ ಮೂಲಗಳಾಗಿರುವುದರಿಂದ ಇವುಗಳನ್ನು ಬಲು ಪ್ರಜ್ಞಾಪೂರ್ವಕವಾಗಿ ಬಳಸಬೇಕಾದ ಅಗತ್ಯವಿದೆ. ಹಾಗಾಗಿಯೇ ಇವುಗಳನ್ನು ದ್ರವ ರೂಪದ ಬಂಗಾರ ಎಂತಲೂ ಕರೆಯಲಾಗುತ್ತದೆ.


ಜಗತ್ತಿನಾದ್ಯಂತ ಕೆಲವೇ ಕೆಲವು ರಾಷ್ಟ್ರಗಳು ಕಚ್ಚಾ ತೈಲದ ನಿಕ್ಷೇಪಗಳನ್ನು ಹೊಂದಿದ್ದು ಆ ರಾಷ್ಟ್ರಗಳಿಂದ ಜಗತ್ತಿನ ಇತರೆ ರಾಷ್ಟ್ರಗಳು ಕಚ್ಚಾ ತೈಲ ಖರೀದಿಸುತ್ತವೆ ಅಥವಾ ಆಮದು ಮಾಡಿಕೊಳ್ಳುತ್ತವೆ. ಭಾರತ ಯಾವುದೇ ತೈಲದ ನಿಕ್ಷೇಪ ಹೊಂದಿರದ ಕಾರಣ ತನ್ನ ಬೃಹತ್ ಪ್ರಮಾಣದ ಇಂಧನದ ಅವಶ್ಯಕತೆಯನ್ನು ಪೂರೈಸಲು ತೈಲವನ್ನು ಆಮದು ಮಾಡಿಕೊಳ್ಳುತ್ತದೆ.


ಹಿಂದೊಮ್ಮೆ ಪ್ರತಿ ಹದಿನೈದು ದಿನಗಳಿಗೊಮ್ಮೆ ಭಾರತದಲ್ಲಿ ಇಂಧನ ಬೆಲೆಗಳನ್ನು ಪರಿಷ್ಕರಿಸಲಾಗುತ್ತಿತ್ತು. ಆದರೆ ಕಳೆದ ಹಲವು ವರ್ಷಗಳಿಂದ ನಿತ್ಯ ಇಂಧನ ಬೆಲೆಗಳನ್ನು ಪರಿಷ್ಕರಿಸಲಾಗುತ್ತಿದ್ದು ಪ್ರತಿದಿನ ಬೆಳಗ್ಗೆ ಆರು ಗಂಟೆಯ ಸುಮಾರಿಗೆ ಇದರ ಅಪ್ಡೇಟ್ ಸಿಗುತ್ತದೆ.

First published: