Petrol Price: ಇಂದು ದಾವಣಗೆರೆಯಲ್ಲಿ ಪೆಟ್ರೋಲ್ ಬೆಲೆ ಅತ್ಯಧಿಕ; ನಿಮ್ಮ ನಗರದ ತೈಲ ದರ ಇಲ್ಲಿದೆ

ರಾಜಧಾನಿ ಬೆಂಗಳೂರು ನಗರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೇಂದ್ರ ಸರ್ಕಾರದ ಎಕ್ಸೈಸ್ ಡ್ಯೂಟಿ (Excise Duty) ಕೈಬಿಟ್ಟಾಗಿನಿಂದ ದೇಶದ ವಾಹನ ಸವಾರರಲ್ಲಿ ಕೊಂಚ ನೆಮ್ಮದಿ ಮೂಡಿದೆ ಅಂತ ಹೇಳಬಹುದು. ಇದರಿಂದಾಗಿ ಕಳೆದ 8-10 ದಿನಗಳ ಹಿಂದಿದ್ದ ಇಂಧನ ಬೆಲೆಗಳಿಗೆ (Oil Price) ಹೋಲಿಸಿದರೆ ಈಗ ಬಹಳಷ್ಟು ಬೆಲೆ ಕಡಿಮೆಯಾಗಿದೆ. ನಿನ್ನೆಗೆ ಹೋಲಿಸಿದರೆ ಇಂದು ಸಹ ಯಥಾಸ್ಥಿತಿ ಕಾಯ್ದುಕೊಂಡಿರುವ ಇಂಧನ ಬೆಲೆ ರಾಜ್ಯದ ಇತರೆ ಜಿಲ್ಲೆಗಳಲ್ಲಿಯೂ ಯಾವುದೇ ಗಮನಾರ್ಹ ವ್ಯತ್ಯಾಸವಾಗಿಲ್ಲವಾದರೂ ಕೆಲ ಪೈಸೆಗಳಷ್ಟು ಏರಿಳಿತ ಸಾಮಾನ್ಯವಾಗಿದೆ. ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International Market) ಕಚ್ಚಾ ತೈಲದ ಬೆಲೆಯೂ (Crude Oil Price) ಇಳಿಯುತ್ತಿಲ್ಲ, ಇತ್ತ ದೇಶದಲ್ಲಿ ನಿತ್ಯ ಒಂದಿಷ್ಟು ಪೈಸೆಗಳಷ್ಟು ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಳಿತ ನಡೆಯುತ್ತಲೇ ಇದೆ.

ರಾಜಧಾನಿ ಬೆಂಗಳೂರು ನಗರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ.

ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 111.35, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 97.28, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.

ಇದನ್ನೂ ಓದಿ:  Gold Price: ಮತ್ತೆ ದುಬಾರಿಯಾಯ್ತು ಚಿನ್ನ! ಇಂದಿನ ಗೋಲ್ಡ್-ಸಿಲ್ವರ್ ರೇಟ್ ಎಷ್ಟಿದೆ ಅಂತ ನೋಡಿ

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು

ಬಾಗಲಕೋಟೆ - ರೂ. 102.43 (00)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 102. (00)
ಬೆಳಗಾವಿ - ರೂ. 102.40 (8 ಪೈಸೆ ಇಳಿಕೆ)
ಬಳ್ಳಾರಿ - ರೂ. 103.87 (74 ಪೈಸೆ ಏರಿಕೆ)
ಬೀದರ್ - ರೂ. 102.47 (61 ಪೈಸೆ ಇಳಿಕೆ)
ವಿಜಯಪುರ - ರೂ. 102.06 (43 ಪೈಸೆ ಏರಿಕೆ)
ಚಾಮರಾಜನಗರ - ರೂ. 102.06 (3 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - ರೂ. 101.69 (30 ಪೈಸೆ ಏರಿಕೆ)
ಚಿಕ್ಕಮಗಳೂರು - ರೂ. 103.27 (6 ಪೈಸೆ ಏರಿಕೆ)
ಚಿತ್ರದುರ್ಗ - ರೂ. 103.35 (59 ಪೈಸೆ ಇಳಿಕೆ)
ದಕ್ಷಿಣ ಕನ್ನಡ - ರೂ. 101.41 (20 ಪೈಸೆ ಏರಿಕೆ)
ದಾವಣಗೆರೆ - ರೂ. 103.93 (16 ಪೈಸೆ ಏರಿಕೆ)
ಧಾರವಾಡ - ರೂ. 101.69 (11 ಪೈಸೆ ಇಳಿಕೆ)
ಗದಗ - ರೂ. 102.22(50 ಪೈಸೆ ಇಳಿಕೆ)
ಕಲಬುರಗಿ - ರೂ. 101.95 (30 ಪೈಸೆ ಏರಿಕೆ)
ಹಾಸನ - ರೂ. 101.79 (79 ಪೈಸೆ ಏರಿಕೆ)
ಹಾವೇರಿ - ರೂ. 102.82 (27 ಪೈಸೆ ಏರಿಕೆ)
ಕೊಡಗು - ರೂ. 103.39 (21 ಪೈಸೆ ಏರಿಕೆ)
ಕೋಲಾರ - ರೂ. 102.87 (7 ಪೈಸೆ ಏರಿಕೆ)
ಕೊಪ್ಪಳ - ರೂ. 102.95 (12 ಪೈಸೆ ಏರಿಕೆ)
ಮಂಡ್ಯ - ರೂ. 101.74 (00)
ಮೈಸೂರು - ರೂ. 101.46 (22 ಪೈಸೆ ಇಳಿಕೆ)
ರಾಯಚೂರು - ರೂ. 102.75 (5 ಪೈಸೆ ಏರಿಕೆ)
ರಾಮನಗರ - ರೂ. 102.40 (35 ಪೈಸೆ ಏರಿಕೆ)
ಶಿವಮೊಗ್ಗ - ರೂ. 103.42 (33 ಪೈಸೆ ಏರಿಕೆ)
ತುಮಕೂರು - ರೂ. 102.45 (00)
ಉಡುಪಿ - ರೂ. 101.23 (60 ಪೈಸೆ ಇಳಿಕೆ)
ಉತ್ತರ ಕನ್ನಡ - ರೂ. 104.14 (2 ರೂ. 46 ಪೈಸೆ ಏರಿಕೆ)
ಯಾದಗಿರಿ - ರೂ. 102.38 (36 ಪೈಸೆ ಏರಿಕೆ)

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ - ರೂ. 88.36
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.95
ಬೆಳಗಾವಿ - ರೂ. 88.33
ಬಳ್ಳಾರಿ - ರೂ. 89.66
ಬೀದರ್ - ರೂ. 88.39
ವಿಜಯಪುರ - ರೂ. 88.13
ಚಾಮರಾಜನಗರ - ರೂ. 88
ಚಿಕ್ಕಬಳ್ಳಾಪುರ - ರೂ. 87.67
ಚಿಕ್ಕಮಗಳೂರು - ರೂ. 88.97
ಚಿತ್ರದುರ್ಗ - ರೂ. 89.04
ದಕ್ಷಿಣ ಕನ್ನಡ - ರೂ. 87.38
ದಾವಣಗೆರೆ - ರೂ. 89.6
ಧಾರವಾಡ - ರೂ. 87.68
ಗದಗ - ರೂ. 88.17
ಕಲಬುರಗಿ - ರೂ. 87.98
ಹಾಸನ - ರೂ. 87.63
ಹಾವೇರಿ - ರೂ. 88.71
ಕೊಡಗು - ರೂ. 89.06
ಕೋಲಾರ - ರೂ. 87.83
ಕೊಪ್ಪಳ - ರೂ. 88.84
ಮಂಡ್ಯ - ರೂ. 87.71
ಮೈಸೂರು - ರೂ. 87.45
ರಾಯಚೂರು - ರೂ. 88.66
ರಾಮನಗರ - ರೂ. 88.31
ಶಿವಮೊಗ್ಗ - ರೂ. 89.14
ತುಮಕೂರು - ರೂ. 88.36
ಉಡುಪಿ - ರೂ. 87.22
ಉತ್ತರ ಕನ್ನಡ - ರೂ. 87.78
ಯಾದಗಿರಿ - ರೂ. 88.31

ಇದನ್ನೂ ಓದಿ:  Money Saving Tips: ನಿಮ್ಮ ಹಣವನ್ನು ಬೇರೆಯವರು ಉಳಿಸಲ್ಲ ನೆನಪಿಡಿ! ನೀವೇ ಹೇಗೆ ಹಣ ಉಳಿಸೋದು ತಿಳಿಯಿರಿ

ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದ ಬೆಲೆಯಲ್ಲೇ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಶ್ರೀಸಾಮಾನ್ಯನ ಕೈಸುಡುವಂತಾಗಿದೆ. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಮುಕ್ತಾಯವಾಗುವ ಸೂಚನೆಯೂ ಕಾಣುತ್ತಿಲ್ಲ.
Published by:Mahmadrafik K
First published: