Petrol And Diesel Price: ಶೀಘ್ರದಲ್ಲೇ ಇಂಧನ ಬೆಲೆ ಭಾರೀ ಏರಿಕೆ? ಇಂದಿನ ಪೆಟ್ರೋಲ್‌, ಡೀಸೆಲ್‌ ಬೆಲೆ ನೋಡಿ

ಬೆಂಗಳೂರಿನಲ್ಲಿ ಮಾತ್ರ ಈ ವರ್ಷ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Petrol And Diesel Price Today: ರಷ್ಯಾ - ಉಕ್ರೇನ್‌ ಯುದ್ಧ (Russia Ukraine War) ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದರಿಂದ ಜಾಗತಿಕ ತೈಲದ ದರದ (Oil Price) ಮೇಲೂ ಪರಿಣಾಮ ಬೀರುತ್ತಿದೆ, ರಷ್ಯಾ - ಉಕ್ರೇನ್‌ ದರ ಸೇರಿ ನಾನಾ ಕಾರಣಗಳಿಂದ ದೇಶದಲ್ಲೂ ಇಂಧನ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೇ ರೀತಿ ಕಚ್ಚಾ ತೈಲ ದರ(Crude Oil)ದಲ್ಲಿ ಏರಿಕೆಯಾಗುತ್ತಿದೆ. ಆದರೆ ಸದ್ಯ ದೇಶದಲ್ಲಿ ಚುನಾವಣೆಗಳು ನಡೆಯುತ್ತಿರುವ ಕಾರಣದಿಂದ ಬೆಲೆಯನ್ನು ಹೆಚ್ಚಿಸಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಚುನಾವಣೆಗಳ ಫಲಿತಾಂಶದ (Elections Results) ಬಳಿಕ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆಯೂ ಇದೆ. ದೇಶದ ಬಹುತೇಕ ನಗರಗಳಲ್ಲಿ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ.

ಬೆಂಗಳೂರಿನಲ್ಲಿ ಮಾತ್ರ ಈ ವರ್ಷ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.

ಇದನ್ನೂ ಓದಿ:  Gold and Silver Price: ಶಿವರಾತ್ರಿ ಸಂದರ್ಭದಲ್ಲೇ ಇಳಿಕೆಯಾದ ಬಂಗಾರದ ಬೆಲೆ! ಇಂದಿನ ದರ ಎಷ್ಟು ಗೊತ್ತಾ?

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:

ಬಾಗಲಕೋಟೆ - 101.26 ರೂ. (7 ಪೈಸೆ ಏರಿಕೆ)

ಬೆಂಗಳೂರು - 100.58 ರೂ. (00)

ಬೆಂಗಳೂರು ಗ್ರಾಮಾಂತರ - 100.74 ರೂ. (3 ಪೈಸೆ ಏರಿಕೆ)

ಬೆಳಗಾವಿ - 101.05 ರೂ. (73 ಪೈಸೆ ಏರಿಕೆ)

ಬಳ್ಳಾರಿ - 102.39 ರೂ. (12 ಪೈಸೆ ಏರಿಕೆ)

ಬೀದರ್ - 100.88 ರೂ. (00)

ಬಿಜಾಪುರ - 100.50 ರೂ. (24 ಪೈಸೆ ಇಳಿಕೆ)

ಚಾಮರಾಜನಗರ - 100.71 ರೂ. (00)

ಚಿಕ್ಕಬಳ್ಳಾಪುರ - 101.04 ರೂ. (46 ಪೈಸೆ ಏರಿಕೆ)

ಚಿಕ್ಕಮಗಳೂರು - 101.32 ರೂ. (60 ಪೈಸೆ ಇಳಿಕೆ)

ಚಿತ್ರದುರ್ಗ - 102.42 ರೂ. (00)

ದಕ್ಷಿಣ ಕನ್ನಡ - 100.15 ರೂ. (24 ಪೈಸೆ ಇಳಿಕೆ)

ದಾವಣಗೆರೆ - 102.43 ರೂ. (26 ಪೈಸೆ ಇಳಿಕೆ)

ಧಾರವಾಡ - 100.30 ರೂ. (1 ಪೈಸೆ ಇಳಿಕೆ)

ಗದಗ – 100.87 ರೂ. (13 ಪೈಸೆ ಇಳಿಕೆ)

ಗುಲಬರ್ಗ - 100.28 ರೂ. (00)

ಹಾಸನ – 100.39 ರೂ. (34 ಪೈಸೆ ಇಳಿಕೆ)

ಹಾವೇರಿ - 101 ರೂ. (3 ಪೈಸೆ ಇಳಿಕೆ)

ಕೊಡಗು – 102.08 ರೂ. (19 ಪೈಸೆ ಏರಿಕೆ)

ಕೋಲಾರ - 100.51 ರೂ. (7 ಪೈಸೆ ಏರಿಕೆ)

ಕೊಪ್ಪಳ- 101.69 ರೂ. (00)

ಮಂಡ್ಯ – 100.78 ರೂ. (21 ಪೈಸೆ ಏರಿಕೆ)

ಮೈಸೂರು – 100.08 ರೂ. (00)

ರಾಯಚೂರು – 101 ರೂ. (61 ಪೈಸೆ ಏರಿಕೆ)

ರಾಮನಗರ – 101.04 ರೂ. (2 ಪೈಸೆ ಇಳಿಕೆ)

ಶಿವಮೊಗ್ಗ – 102.28 ರೂ. (18 ಪೈಸೆ ಏರಿಕೆ)

ತುಮಕೂರು – 101.48 ರೂ. (22 ಪೈಸೆ ಏರಿಕೆ)

ಉಡುಪಿ - 100.48 ರೂ. (46 ಪೈಸೆ ಏರಿಕೆ)

ಉತ್ತರ ಕನ್ನಡ – 103.03 ರೂ. (53 ಪೈಸೆ ಏರಿಕೆ)

ಯಾದಗಿರಿ – 100.91 ರೂ. (12 ಪೈಸೆ ಇಳಿಕೆ)

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ – 85.65

ಬೆಂಗಳೂರು – 85.01

ಬೆಂಗಳೂರು ಗ್ರಾಮಾಂತರ - 85.16

ಬೆಳಗಾವಿ – 85.46

ಬಳ್ಳಾರಿ – 86.67

ಬೀದರ್ - 85.30

ಬಿಜಾಪುರ – 84.96

ಚಾಮರಾಜನಗರ – 85.12

ಚಿಕ್ಕಬಳ್ಳಾಪುರ – 85.43

ಚಿಕ್ಕಮಗಳೂರು – 85.58

ಚಿತ್ರದುರ್ಗ – 86.55

ದಕ್ಷಿಣ ಕನ್ನಡ – 84.59

ದಾವಣಗೆರೆ - 86.55

ಧಾರವಾಡ – 84.78

ಗದಗ – 85.29

ಗುಲಬರ್ಗ – 84.77

ಹಾಸನ – 84.72

ಹಾವೇರಿ – 85.41

ಕೊಡಗು – 86.23

ಕೋಲಾರ – 84.95

ಕೊಪ್ಪಳ- 86.04

ಮಂಡ್ಯ – 85.19

ಮೈಸೂರು – 84.56

ರಾಯಚೂರು – 85.43

ರಾಮನಗರ – 85.43

ಶಿವಮೊಗ್ಗ – 86.47

ತುಮಕೂರು – 85.83

ಉಡುಪಿ – 84.89

ಉತ್ತರ ಕನ್ನಡ – 87.19

ಯಾದಗಿರಿ – 85.33

ಇದನ್ನೂ ಓದಿ:  TAX ಸೇರಿದಂತೆ March ತಿಂಗಳಲ್ಲಿ ಈ 5 ಕೆಲಸಗಳನ್ನು ಮಾಡಲೇಬೇಕು.. ಹಣದ ವಿಷ್ಯ ತಡ ಮಾಡಬೇಡಿ

ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.40 ರೂ ಇದ್ದರೆ ಡೀಸೆಲ್​ ಬೆಲೆ 91.43 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 109.98 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.14 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 104.67 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 89.79 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ರಾಜ್ಯ ರಾಜಧಾನಿ ಬೆಂಗಳೂರು ಸೇರಿ ದೇಶದ ಹಲವು ಪ್ರಮುಖ ನಗರಗಳಲ್ಲಿ ಹಲವು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಇನ್ನೊಂದೆಡೆ, ಕಚ್ಚಾ ತೈಲ ಬೆಲೆ 1 ಬ್ಯಾರೆಲ್‌ಗೆ 7901 ರೂ. (MCX) ಇದ್ದು, 610 ರೂ. ಅಂದರೆ ಶೇ. 8.37 ರಷ್ಟು ಹೆಚ್ಚಾಗಿದೆ.
Published by:Mahmadrafik K
First published: