Petrol And Diesel Price: ಏರುತ್ತಲೇ ಇದೆ ಇಂಧನ ಬೆಲೆ: ನಿಮ್ಮ ನಗರಗಳಲ್ಲಿ ಇಂದಿನ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ ನೋಡಿ..!

ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್ ಅನ್ನು 104.46 ರೂ. ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್ ಅನ್ನು 88.67 ರೂ. ಗೆ ಮಾರಾಟ ಮಾಡಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ದೇಶದಲ್ಲಿ ಪಂಚ ರಾಜ್ಯ ಚುನಾವಣೆ ಫಲಿತಾಂಶ (Assembly Election Results) ಬಂದ ತಕ್ಷಣವೇ ಪೆಟ್ರೋಲ್‌, ಡೀಸೆಲ್ ದರ(Petrol And Diesel Price)ದಲ್ಲಿ ತೀವ್ರ ಹೆಚ್ಚಳವಾಗಲಿದೆ ಎಂದು ವರದಿಗಳು ಹೇಳುತ್ತಿದ್ದವು. ಆದರೂ, ಬಳಿಕ ಕಚ್ಚಾ ತೈಲ ದರ (Crude Oil Price) ಇಳಿಕೆಯಾದ ನಂತರ ದೇಶದಲ್ಲೂ ಪೆಟ್ರೋಲ್‌, ಡೀಸೆಲ್‌ ದರಗಳು ಏರಿಕೆಯಾಗಿರಲಿಲ್ಲ. ಆದರೆ, ಕಳೆದ ವಾರದಿಂದ ಕಚ್ಚಾ ತೈಲ ಬೆಲೆ ಮತ್ತಷ್ಟು ಹೆಚ್ಚಾಗಿದ್ದರಿಂದ ಮಾರ್ಚ್‌ 22 ರಂದು ಬೆಂಗಳೂರು ಸೇರಿ ದೇಶದ ನಾನಾ ನಗರಗಳಲ್ಲಿ ಈ ವರ್ಷದಲ್ಲೇ ಮೊದಲ ಬಾರಿಗೆ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಮಾಡಲಾಯಿತು. ರಷ್ಯಾ - ಉಕ್ರೇನ್‌ ಯುದ್ಧ (Russia And Ukraine War) ಪರಿಣಾಮ ಕಚ್ಚಾ ತೈಲ ಬೆಲೆ ಏರುತ್ತಲೇ ಇದೆ. ಇದೇ ರೀತಿ, ದೇಶದಲ್ಲೂ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಹೆಚ್ಚಾಗುತ್ತಿದೆ. ದೇಶದ ಬಹುತೇಕ ನಗರಗಳಲ್ಲಿ ಇಂಧನ ದರ (Oil Price) ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ.


ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್ ಅನ್ನು 104.46 ರೂ. ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್ ಅನ್ನು 88.67 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.


ಇದನ್ನೂ ಓದಿ:  Gold and Silver Price: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನ, ಬೆಳ್ಳಿ ದರ; ನಿಮ್ಮ ನಗರಗಳಲ್ಲಿ ಇಂದು ಬೆಲೆ ಎಷ್ಟಿದೆ ನೋಡಿ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:


ಬಾಗಲಕೋಟೆ - 104.59 ರೂ. (4 ಪೈಸೆ ಏರಿಕೆ)
ಬೆಂಗಳೂರು - 104.46 ರೂ. (53 ಪೈಸೆ ಏರಿಕೆ)
ಬೆಂಗಳೂರು ಗ್ರಾಮಾಂತರ - 104.53 ರೂ. (52 ಪೈಸೆ ಏರಿಕೆ)
ಬೆಳಗಾವಿ - 104.60 ರೂ. (18 ಪೈಸೆ ಏರಿಕೆ)
ಬಳ್ಳಾರಿ - 105.49 ರೂ. (25 ಪೈಸೆ ಏರಿಕೆ)
ಬೀದರ್ - 104.96 ರೂ. (73 ಪೈಸೆ ಏರಿಕೆ)
ಬಿಜಾಪುರ - 104.70 ರೂ. (71 ಪೈಸೆ ಏರಿಕೆ)
ಚಾಮರಾಜನಗರ - 104.97 ರೂ. (95 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - 104.52 ರೂ. (59 ಪೈಸೆ ಏರಿಕೆ)
ಚಿಕ್ಕಮಗಳೂರು - 106.13 ರೂ. (1.66 ರೂ. ಏರಿಕೆ)
ಚಿತ್ರದುರ್ಗ - 106.25 ರೂ. (54 ಪೈಸೆ ಏರಿಕೆ)
ದಕ್ಷಿಣ ಕನ್ನಡ - 103.74 ರೂ. (61 ಪೈಸೆ ಏರಿಕೆ)
ದಾವಣಗೆರೆ - 105.74 ರೂ. (1 ಪೈಸೆ ಏರಿಕೆ)
ಧಾರವಾಡ - 104.19 ರೂ. (23 ಪೈಸೆ ಏರಿಕೆ)
ಗದಗ – 104.75 ರೂ. (53 ಪೈಸೆ ಏರಿಕೆ)
ಗುಲಬರ್ಗ - 104.83 ರೂ. (1.18 ರೂ. ಏರಿಕೆ)
ಹಾಸನ – 104.37 ರೂ. (61 ಪೈಸೆ ಏರಿಕೆ)
ಹಾವೇರಿ - 104.90 ರೂ. (00)
ಕೊಡಗು – 106.01 ರೂ. (76 ಪೈಸೆ ಏರಿಕೆ)
ಕೋಲಾರ - 104.20 ರೂ. (4 ಪೈಸೆ ಏರಿಕೆ)
ಕೊಪ್ಪಳ- 105.36 ರೂ. (24 ಪೈಸೆ ಏರಿಕೆ)
ಮಂಡ್ಯ – 104.33 ರೂ. (49 ಪೈಸೆ ಏರಿಕೆ)
ಮೈಸೂರು – 104.26 ರೂ. (68 ಪೈಸೆ ಏರಿಕೆ)
ರಾಯಚೂರು – 104.88 ರೂ. (34 ಪೈಸೆ ಏರಿಕೆ)
ರಾಮನಗರ – 104.80 ರೂ. (40 ಪೈಸೆ ಏರಿಕೆ)
ಶಿವಮೊಗ್ಗ – 106.27 ರೂ. (87 ಪೈಸೆ ಏರಿಕೆ)
ತುಮಕೂರು – 105.14 ರೂ. (69 ಪೈಸೆ ಏರಿಕೆ)
ಉಡುಪಿ - 104.34 ರೂ. (95 ಪೈಸೆ ಏರಿಕೆ)
ಉತ್ತರ ಕನ್ನಡ – 105.86 ರೂ. (92 ಪೈಸೆ ಏರಿಕೆ)
ಯಾದಗಿರಿ – 105.23 ರೂ. (97 ಪೈಸೆ ಏರಿಕೆ)

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ


ಬಾಗಲಕೋಟೆ – 88.82
ಬೆಂಗಳೂರು – 88.67
ಬೆಂಗಳೂರು ಗ್ರಾಮಾಂತರ - 88.74
ಬೆಳಗಾವಿ – 88.83
ಬಳ್ಳಾರಿ – 89.64
ಬೀದರ್ - 89.15
ಬಿಜಾಪುರ – 88.91
ಚಾಮರಾಜನಗರ – 89.13
ಚಿಕ್ಕಬಳ್ಳಾಪುರ – 88.73
ಚಿಕ್ಕಮಗಳೂರು – 90.09
ಚಿತ್ರದುರ್ಗ – 90.16
ದಕ್ಷಿಣ ಕನ್ನಡ – 87.99
ದಾವಣಗೆರೆ - 89.85
ಧಾರವಾಡ – 88.45
ಗದಗ – 88.95
ಗುಲಬರ್ಗ – 89.03
ಹಾಸನ – 88.46
ಹಾವೇರಿ – 89.09
ಕೊಡಗು – 89.95
ಕೋಲಾರ – 88.44
ಕೊಪ್ಪಳ- 89.50
ಮಂಡ್ಯ – 88.56
ಮೈಸೂರು – 88.49
ರಾಯಚೂರು – 89.09
ರಾಮನಗರ – 88.98
ಶಿವಮೊಗ್ಗ – 90.22
ತುಮಕೂರು – 89.29
ಉಡುಪಿ – 88.53
ಉತ್ತರ ಕನ್ನಡ – 89.90
ಯಾದಗಿರಿ – 89.39


ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 105.18 ರೂ ಇದ್ದರೆ ಡೀಸೆಲ್ ಬೆಲೆ 95.33 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 99.41 ರೂ ಮತ್ತು ಡೀಸೆಲ್ 90.77 ರೂ.ಗೆ ಮಾರಾಟ ಮಾಡಲಾಗುತ್ತಿದೆ.


ಇದನ್ನೂ ಓದಿ:  Post Office Account: ಅಂಚೆ ಕಚೇರಿ ಖಾತೆದಾರರೇ ಅಲರ್ಟ್.. ಏ.1ರಿಂದ ದೊಡ್ಡ ಬದಲಾವಣೆ.. ಸಂಪೂರ್ಣ ಮಾಹಿತಿ ಇಲ್ಲಿದೆ

ಮುಂಬೈನಲ್ಲಿ ಪೆಟ್ರೋಲ್ 114.19 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 98.50 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 108.85 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 93.92 ರೂ.ಗೆ ಮಾರಾಟ ಮಾಡಲಾಗುತ್ತಿದೆ.


ರಾಷ್ಟ್ರ ರಾಜಧಾನಿ ಹೊಸದಿಲ್ಲಿ, ರಾಜ್ಯ ರಾಜಧಾನಿ ಬೆಂಗಳೂರು ಸೇರಿ ದೇಶದ ಹಲವು ಪ್ರಮುಖ ನಗರಗಳಲ್ಲಿ ಹಲವು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.


ಇನ್ನೊಂದೆಡೆ, ಕಚ್ಚಾ ತೈಲ ಬೆಲೆ 1 ಬ್ಯಾರೆಲ್‌ಗೆ 8,622 ರೂ. (MCX) ಇದ್ದು, 44 ರೂ. ಅಂದರೆ ಶೇ. 0.51 ರಷ್ಟು ಕಡಿಮೆಯಾಗಿದೆ

Published by:Mahmadrafik K
First published: