Petrol, Diesel Price: ಈ 16 ಜಿಲ್ಲೆಗಳಲ್ಲಿ ನಿನ್ನೆಯ ಬೆಲೆಯಲ್ಲಿಯೇ ಪೆಟ್ರೋಲ್ ತುಂಬಿಸಿಕೊಳ್ಳಿ; ದರದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ

ರಾಷ್ಟ್ರ ರಾಜಧಾನಿ ದೆಹಲಿ (Delhi), ವಾಣಿಜ್ಯ ರಾಜಧಾನಿ ಮುಂಬೈ (Mumbai), ಬೆಂಗಳೂರು (Bengaluru) ಸೇರಿ ದೇಶದ ಮಹಾನಗರಗಳಲ್ಲಿ ಹಾಗೂ ಹಲವೆಡೆ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೂ, ಇತರೆ ಹಲವು ನಗರಗಳಲ್ಲಿ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡುಬರುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೇಶದ ಮಹಾ ನಗರಗಳು ಸೇರಿ ಹಲವೆಡೆ ಪೆಟ್ರೋಲ್‌, ಡೀಸೆಲ್‌ ಬೆಲೆ (Petrol And Diesel Price) ಏರಿಕೆಗೆ ಕಳೆದ 19 ದಿನಗಳಿಂದ ಬ್ರೇಕ್‌ ಬಿದ್ದಿದೆ. ಹೌದು, ರಾಷ್ಟ್ರ ರಾಜಧಾನಿ ದೆಹಲಿ (Delhi), ವಾಣಿಜ್ಯ ರಾಜಧಾನಿ ಮುಂಬೈ (Mumbai), ಬೆಂಗಳೂರು (Bengaluru) ಸೇರಿ ದೇಶದ ಮಹಾನಗರಗಳಲ್ಲಿ ಹಾಗೂ ಹಲವೆಡೆ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೂ, ಇತರೆ ಹಲವು ನಗರಗಳಲ್ಲಿ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡುಬರುತ್ತಿದೆ. ದೇಶದ ಬಹುತೇಕ ಕಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇಂದು 1 ಲೀಟರ್ ಪೆಟ್ರೋಲ್ ಅನ್ನು 111.09 ರೂ. ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್ ಅನ್ನು 94.79 ರೂ. ಗೆ ಮಾರಾಟ ಮಾಡಲಾಗುತ್ತಿದೆ.

ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:

ಬಾಗಲಕೋಟೆ - 111.59 ರೂ. (00)
ಬೆಂಗಳೂರು - 111.09 ರೂ. (00)
ಬೆಂಗಳೂರು ಗ್ರಾಮಾಂತರ - 110.74 ರೂ. (42 ಪೈಸೆ ಇಳಿಕೆ)
ಬೆಳಗಾವಿ - 111.10 ರೂ. (00)
ಬಳ್ಳಾರಿ - 113.03 ರೂ. (00)
ಬೀದರ್ - 111.63 ರೂ. (00)
ಬಿಜಾಪುರ - 111.21 ರೂ. (00
ಚಾಮರಾಜನಗರ - 111.18 ರೂ. (00)
ಚಿಕ್ಕಬಳ್ಳಾಪುರ - 111.54 ರೂ. (45 ಪೈಸೆ ಏರಿಕೆ)
ಚಿಕ್ಕಮಗಳೂರು - 112.78 ರೂ. (71 ಪೈಸೆ ಏರಿಕೆ)
ಚಿತ್ರದುರ್ಗ - 112.16 ರೂ. (35 ಪೈಸೆ ಇಳಿಕೆ)
ದಕ್ಷಿಣ ಕನ್ನಡ - 110.29 ರೂ. (34 ಪೈಸೆ ಇಳಿಕೆ)
ದಾವಣಗೆರೆ - 113.09 ರೂ. (00)
ಧಾರವಾಡ - 110.84 ರೂ. (00)
ಗದಗ – 111.38 ರೂ. (00)
ಗುಲಬರ್ಗ - 111.10 ರೂ. (00)
ಹಾಸನ – 111.19 ರೂ. (3 ಪೈಸೆ ಏರಿಕೆ)
ಹಾವೇರಿ - 111.53 ರೂ. (45 ಪೈಸೆ ಇಳಿಕೆ)
ಕೊಡಗು – 112.36 ರೂ. (00)
ಕೋಲಾರ - 110.79 ರೂ. (53 ಪೈಸೆ ಇಳಿಕೆ)
ಕೊಪ್ಪಳ- 112.26 ರೂ. (15 ಪೈಸೆ ಏರಿಕೆ)
ಮಂಡ್ಯ – 110.90 ರೂ. (00)
ಮೈಸೂರು – 110.61 ರೂ. (00)
ರಾಯಚೂರು – 111.36 ರೂ. (00)
ರಾಮನಗರ – 111.40 ರೂ. (16 ಪೈಸೆ ಇಳಿಕೆ)
ಶಿವಮೊಗ್ಗ – 112.74 ರೂ. (18 ಪೈಸೆ ಏರಿಕೆ)
ತುಮಕೂರು – 111.32 ರೂ. (28 ಪೈಸೆ ಇಳಿಕೆ)
ಉಡುಪಿ - 110.64 ರೂ. (3 ಪೈಸೆ ಇಳಿಕೆ)
ಉತ್ತರ ಕನ್ನಡ – 111.53 ರೂ. (1.34 ರೂ. ಇಳಿಕೆ)
ಯಾದಗಿರಿ – 111.53 ರೂ. (00)

ಇದನ್ನೂ ಓದಿ:  India Post Fact Check: ಅಂಚೆ ಇಲಾಖೆ 170ನೇ ವಾರ್ಷಿಕೋತ್ಸವಕ್ಕೆ ಲಕ್ಕಿ ಡ್ರಾ ಆಯೋಜಿಸಿದೆಯೇ?

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ – 95.26
ಬೆಂಗಳೂರು – 94.79
ಬೆಂಗಳೂರು ಗ್ರಾಮಾಂತರ - 94.48
ಬೆಳಗಾವಿ – 94.82
ಬಳ್ಳಾರಿ – 96.56
ಬೀದರ್ - 95.30
ಬಿಜಾಪುರ – 94.92
ಚಾಮರಾಜನಗರ – 94.87
ಚಿಕ್ಕಬಳ್ಳಾಪುರ – 95.20
ಚಿಕ್ಕಮಗಳೂರು – 96.21
ಚಿತ್ರದುರ್ಗ – 95.62
ದಕ್ಷಿಣ ಕನ್ನಡ – 94.03
ದಾವಣಗೆರೆ - 96.46
ಧಾರವಾಡ – 94.59
ಗದಗ – 95.07
ಗುಲಬರ್ಗ – 94.82
ಹಾಸನ – 94.75
ಹಾವೇರಿ – 95.21
ಕೊಡಗು – 95.80
ಕೋಲಾರ – 94.52
ಕೊಪ್ಪಳ- 95.86
ಮಂಡ್ಯ – 94.61
ಮೈಸೂರು – 94.35
ರಾಯಚೂರು – 95.07
ರಾಮನಗರ – 95.07
ಶಿವಮೊಗ್ಗ – 96.19
ತುಮಕೂರು – 94.87
ಉಡುಪಿ – 94.35
ಉತ್ತರ ಕನ್ನಡ – 95.15
ಯಾದಗಿರಿ – 95.21

ಇದನ್ನೂ ಓದಿ:  Yes Bank-DHFL Case: 5,050 ಕೋಟಿ ಹಣ ವಂಚನೆ! ಅಬ್ಬಬ್ಬಾ, ಈ ಸ್ಕ್ಯಾಮ್ ಯಾವ್ದು?

ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 110.85 ರೂ ಇದ್ದರೆ ಡೀಸೆಲ್ ಬೆಲೆ 100.94 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 105.41 ರೂ ಮತ್ತು ಡೀಸೆಲ್ 96.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 120.51 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 104.77 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 115.12 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 99.83 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಇನ್ನೊಂದೆಡೆ, ಕಚ್ಚಾ ತೈಲ ಬೆಲೆ 1 ಬ್ಯಾರೆಲ್‌ಗೆ 7,838 ರೂ. (MCX) ಇದ್ದು, 27 ರೂ. ಅಂದರೆ ಶೇ. 0.34 ರಷ್ಟು ಕಡಿಮೆಯಾಗಿದೆ.
Published by:Mahmadrafik K
First published: