Petrol And Diesel Price: ಈ ಜಿಲ್ಲೆಗಳಲ್ಲಿ ಮತ್ತೆ ಪೆಟ್ರೋಲ್ ಬೆಲೆ ಇಳಿಕೆ: ಇಲ್ಲಿದೆ ಇವತ್ತಿನ ದರ

ರಾಜಧಾನಿ ಬೆಂಗಳೂರು (Bengaluru) ನಗರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಪೆಟ್ರೋಲ್ ಬೆಲೆಯಲ್ಲಿ (Petrol Price) ಹೆಚ್ಚಳವಾಗಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Petrol And Diesel Price Today: ರಾಜಧಾನಿ ಬೆಂಗಳೂರು (Bengaluru) ನಗರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಪೆಟ್ರೋಲ್ ಬೆಲೆಯಲ್ಲಿ (Petrol Price) ಹೆಚ್ಚಳವಾಗಿಲ್ಲ. ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.74, ರೂ. 111.35, ರೂ. 106.03 ಆಗಿದ್ದರೆ ಡೀಸೆಲ್ ದರಗಳು (Diesel Price) ಕ್ರಮವಾಗಿ ರೂ. 94.33, ರೂ. 97.28, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ (Delhi) ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು

ಬಾಗಲಕೋಟೆ - ರೂ. 102.43 (19 ಪೈಸೆ ಇಳಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 101.94 (7 ಪೈಸೆ ಇಳಿಕೆ)
ಬೆಳಗಾವಿ - ರೂ. 102.28 (22 ಪೈಸೆ ಏರಿಕೆ)
ಬಳ್ಳಾರಿ - ರೂ. 103.70 (5 ಪೈಸೆ ಇಳಿಕೆ)
ಬೀದರ್ - ರೂ. 102.90 (67 ಪೈಸೆ ಏರಿಕೆ)
ವಿಜಯಪುರ - ರೂ. 101.65 (40 ಪೈಸೆ ಇಳಿಕೆ)
ಚಾಮರಾಜನಗರ - ರೂ. 101.88 (18 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ - ರೂ. 102.67 (73 ಪೈಸೆ ಏರಿಕೆ)
ಚಿಕ್ಕಮಗಳೂರು - ರೂ. 103.62 (1 ರೂ. 14 ಪೈಸೆ ಏರಿಕೆ)
ಚಿತ್ರದುರ್ಗ - ರೂ. 103.19 (1 ರೂ. 32 ಪೈಸೆ ಇಳಿಕೆ)
ದಕ್ಷಿಣ ಕನ್ನಡ - ರೂ. 101.34 (21 ಪೈಸೆ ಏರಿಕೆ)
ದಾವಣಗೆರೆ - ರೂ. 103.90 (34 ಪೈಸೆ ಏರಿಕೆ)
ಧಾರವಾಡ - ರೂ. 101.96 (27 ಪೈಸೆ ಏರಿಕೆ)
ಗದಗ - ರೂ. 102.16 (6 ಪೈಸೆ ಇಳಿಕೆ)
ಕಲಬುರಗಿ - ರೂ. 102.44 (78 ಪೈಸೆ ಏರಿಕೆ)
ಹಾಸನ - ರೂ. 101.77 (46 ಪೈಸೆ ಇಳಿಕೆ)
ಹಾವೇರಿ - ರೂ. 102.55 (27 ಪೈಸೆ ಇಳಿಕೆ)
ಕೊಡಗು - ರೂ. 103.18 (21 ಪೈಸೆ ಇಳಿಕೆ)
ಕೋಲಾರ - ರೂ. 102.05 (24 ಪೈಸೆ ಏರಿಕೆ)
ಕೊಪ್ಪಳ - ರೂ. 102.83 (19 ಪೈಸೆ ಇಳಿಕೆ)
ಮಂಡ್ಯ - ರೂ. 101.82 (26 ಪೈಸೆ ಏರಿಕೆ)
ಮೈಸೂರು - ರೂ. 101.46 (00)
ರಾಯಚೂರು - ರೂ. 101.82 (6 ಪೈಸೆ ಏರಿಕೆ)
ರಾಮನಗರ - ರೂ. 102.40 (26 ಪೈಸೆ ಏರಿಕೆ)
ಶಿವಮೊಗ್ಗ - ರೂ. 103.61 (21 ಪೈಸೆ ಏರಿಕೆ)
ತುಮಕೂರು - ರೂ. 103.41 (96 ಪೈಸೆ ಏರಿಕೆ)
ಉಡುಪಿ - ರೂ. 102.02 (58 ಪೈಸೆ ಏರಿಕೆ)
ಉತ್ತರ ಕನ್ನಡ - ರೂ. 102.11 (38 ಪೈಸೆ ಇಳಿಕೆ)
ಯಾದಗಿರಿ - ರೂ. 102.74 (36 ಪೈಸೆ ಏರಿಕೆ)

ಇದನ್ನೂ ಓದಿ:  Money: ನೀವು ಜೀವನದಲ್ಲಿ ಈ ತಪ್ಪುಗಳನ್ನ ಮಾಡದಿದ್ರೆ ನಿಮಗೆ ಹಣದ ಕೊರತೆಯೇ ಇರಲ್ಲ

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ - ರೂ. 88.36
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.89
ಬೆಳಗಾವಿ - ರೂ. 88.23
ಬಳ್ಳಾರಿ - ರೂ. 89.50
ಬೀದರ್ - ರೂ. 88.78
ವಿಜಯಪುರ - ರೂ. 87.66
ಚಾಮರಾಜನಗರ - ರೂ. 87.84
ಚಿಕ್ಕಬಳ್ಳಾಪುರ - ರೂ. 88.55
ಚಿಕ್ಕಮಗಳೂರು - ರೂ. 89.31
ಚಿತ್ರದುರ್ಗ - ರೂ. 88.89
ದಕ್ಷಿಣ ಕನ್ನಡ - ರೂ. 87.31
ದಾವಣಗೆರೆ - ರೂ. 89.53
ಧಾರವಾಡ - ರೂ. 87.94
ಗದಗ - ರೂ. 88.11
ಕಲಬುರಗಿ - ರೂ. 88.36
ಹಾಸನ - ರೂ. 87.61
ಹಾವೇರಿ - ರೂ. 88.47
ಕೊಡಗು - ರೂ. 88.89
ಕೋಲಾರ - ರೂ. 87.99
ಕೊಪ್ಪಳ - ರೂ. 88.72
ಮಂಡ್ಯ - ರೂ. 87.78
ಮೈಸೂರು - ರೂ. 87.45
ರಾಯಚೂರು - ರೂ. 87.82
ರಾಮನಗರ - ರೂ. 88.31
ಶಿವಮೊಗ್ಗ - ರೂ. 89.31
ತುಮಕೂರು - ರೂ. 89.22
ಉಡುಪಿ - ರೂ. 87.93
ಉತ್ತರ ಕನ್ನಡ - ರೂ. 88.07
ಯಾದಗಿರಿ - ರೂ. 88.63

ಕೇಂದ್ರ ಸರ್ಕಾರವು ಎಕ್ಸೈಸ್ ಡ್ಯೂಟಿ ಕೈಬಿಟ್ಟಿದ್ದು ದೇಶದ ವಾಹನ ಸವಾರರಲ್ಲಿ ನೆಮ್ಮದಿಯ ಭಾವನೆ ಮೂಡಿಸಿದೆ. ಈ ಮುಂಚೆ ಹೆಚ್ಚಿದ್ದ ಇಂಧನ ಬೆಲೆಗಳಿಂದ ವಾಹನಸವಾರರು ಪರದಾಡುತ್ತಿದ್ದರು. ಮೂರು ದಿನಗಳ ಹಿಂದಿನ ದಿನಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಮನಾರ್ಹವಾಗಿ ಇಳಿದಿವೆ.

ಇದನ್ನೂ ಓದಿ:  Edible oil | Cooking oil : ಈ ಕೆಳಗಿನ ಕಾರಣಗಳಿಂದಾಗಿ ಇಳಿಕೆ ಆಗಲಿದೆ ಅಡುಗೆ ಎಣ್ಣೆ ದರ

ಪೆಟ್ರೋಲ್-ಡಿಸೆಲ್ ಬೆಲೆಯಲ್ಲಿ ಏರಿಳಿತ

ನಿನ್ನೆಗೆ ಹೋಲಿಸಿದರೆ ಬಹುತೇಕ ಇಂದು ಇಂಧನ ಬೆಲೆಗಳಲ್ಲಿ ಯಾವುದೇ ಗಮನಾರ್ಹ ವ್ಯತ್ಯಾಸವಾಗಿಲ್ಲವಾದರೂ ಕೆಲ ಪೈಸೆಗಳಷ್ಟು ಏರಿಳಿತ ಸಾಮಾನ್ಯವಾಗಿದೆ. ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯೂ ಇಳಿಯುತ್ತಿಲ್ಲ, ಇತ್ತ ದೇಶದಲ್ಲಿ ನಿತ್ಯ ಒಂದಿಷ್ಟು ಪೈಸೆಗಳಷ್ಟು ಪೆಟ್ರೋಲ್-ಡಿಸೆಲ್ ಬೆಲೆಯಲ್ಲಿ ಏರಿಳಿತ ನಡೆಯುತ್ತಲೇ ಇದೆ. ಕಳೆದ ಹತ್ತು ದಿನಗಳಲ್ಲಿ ದೇಶದೆಲ್ಲೆಡೆ ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ ಹತ್ತು ರೂಪಾಯಿಗಿಂತಲೂ ಹೆಚ್ಚಳವಾಗಿದ್ದು ಸುಳ್ಳಲ್ಲ. ಆದಾಗ್ಯೂ, ಈಗ ಬೆಲೆಗಳು ಮತ್ತೆ ಇಳಿತವಾಗಿವೆ.

ಕಚ್ಚಾ ತೈಲ ಗಗನಮುಖಿ

ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದ ಬೆಲೆಯಲ್ಲೇ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಶ್ರೀಸಾಮಾನ್ಯನ ಕೈಸುಡುವಂತಾಗಿದೆ. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಮುಕ್ತಾಯವಾಗುವ ಸೂಚನೆಯೂ ಕಾಣುತ್ತಿಲ್ಲ.
Published by:Mahmadrafik K
First published: