Petrol Diesel Price: ಪ್ರವಾಸಕ್ಕೆ ಹೊರಟಿದ್ದೀರಾ? ಈ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ 2 ರೂ ಏರಿಕೆ; ಇವತ್ತಿನ ಪರಿಷ್ಕೃತ ದರ ಇಲ್ಲಿದೆ

ರಾಜಧಾನಿ ಬೆಂಗಳೂರು ನಗರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಹಲವು ದಿನಗಳೇ ಕಳೆದಿದೆ. ಪರಿಣಾಮ ದೇಶದ ಎಲ್ಲೆಡೆಗಳಲ್ಲಿ ಕಳೆದ ಕೆಲ ದಿನಗಳಿಂದ ಇಂಧನ ಬೆಲೆಗಳು ಈ ಮುಂಚೆ ಇದ್ದ ಭಾರಿ ಬೆಲೆಗಳಿಂದ ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಒಂದು ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು. ಚಿಕ್ಕಪುಟ್ಟ ಏರಿಳಿತ ಸಾಮಾನ್ಯ. ರಾಜ್ಯದ ಇತರೆ ಜಿಲ್ಲೆಗಳಲ್ಲಿ ಇಂಧನ ಬೆಲೆಯಲ್ಲಿ (Fuel Price) ಯಾವುದೇ ಗಮನಾರ್ಹ ವ್ಯತ್ಯಾಸವಾಗಿಲ್ಲವಾದರೂ ಕೆಲ ಪೈಸೆಗಳಷ್ಟು ಏರಿಳಿತ ಸಾಮಾನ್ಯವಾಗಿದೆ. ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude Oil) ಬೆಲೆ ಮೊದಲಿನ ಸ್ಥಿತಿಗೆ ಇಳಿಯುತ್ತಿಲ್ಲ, ಬದಲಾಗಿ ಸ್ಥಿರವಾಗಿ ಏರಿಕೆಯತ್ತ ಸಾಗುತ್ತಿವೆ. ಇತ್ತ ದೇಶದಲ್ಲಿ ನಿತ್ಯ ಒಂದಿಷ್ಟು ಪೈಸೆಗಳಷ್ಟು ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ (Petrol Diesel Price) ಏರಿಳಿತ ನಡೆಯುತ್ತಲೇ ಇದೆ.

ರಾಜಧಾನಿ ಬೆಂಗಳೂರು ನಗರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 111.35, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 97.28, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು

ಬಾಗಲಕೋಟೆ - ರೂ. 102.43 (00)

ಬೆಂಗಳೂರು - ರೂ. 101.94 (00)

ಬೆಂಗಳೂರು ಗ್ರಾಮಾಂತರ - ರೂ. 102.05 (4 ಪೈಸೆ ಏರಿಕೆ)

ಬೆಳಗಾವಿ - ರೂ. 102.40 (4 ಪೈಸೆ ಏರಿಕೆ)

ಬಳ್ಳಾರಿ - ರೂ. 103.87 (95 ಪೈಸೆ ಏರಿಕೆ)

ಬೀದರ್ - ರೂ. 102.70 (00)

ವಿಜಯಪುರ - ರೂ. 101.71 (25 ಪೈಸೆ ಇಳಿಕೆ)

ಚಾಮರಾಜನಗರ - ರೂ. 102.03 (15 ಪೈಸೆ ಏರಿಕೆ)

ಚಿಕ್ಕಬಳ್ಳಾಪುರ - ರೂ. 101.94 (18 ಪೈಸೆ ಇಳಿಕೆ)

ಚಿಕ್ಕಮಗಳೂರು - ರೂ. 102.85 (21 ಪೈಸೆ ಇಳಿಕೆ)

ಚಿತ್ರದುರ್ಗ - ರೂ. 103.22 (42 ಪೈಸೆ ಏರಿಕೆ)

ದಕ್ಷಿಣ ಕನ್ನಡ - ರೂ. 101.82 (9 ಪೈಸೆ ಇಳಿಕೆ)

ದಾವಣಗೆರೆ - ರೂ. 103.18 (73 ಪೈಸೆ ಇಳಿಕೆ)

ಧಾರವಾಡ - ರೂ. 102.02 (19 ಪೈಸೆ ಏರಿಕೆ)

ಗದಗ - ರೂ. 102.76 (4 ಪೈಸೆ ಏರಿಕೆ)

ಕಲಬುರಗಿ - ರೂ. 102.40 (00)

ಹಾಸನ - ರೂ. 101.63 (52 ಪೈಸೆ ಇಳಿಕೆ)

ಹಾವೇರಿ - ರೂ. 102.38 (50 ಪೈಸೆ ಏರಿಕೆ)

ಕೊಡಗು - ರೂ. 103.35 (8 ಪೈಸೆ ಇಳಿಕೆ)

ಕೋಲಾರ - ರೂ. 101.87 (00)

ಕೊಪ್ಪಳ - ರೂ. 102.79 (4 ಪೈಸೆ ಇಳಿಕೆ)

ಮಂಡ್ಯ - ರೂ. 101.74 (10 ಪೈಸೆ ಇಳಿಕೆ)

ಮೈಸೂರು - ರೂ. 101.46 (23 ಪೈಸೆ ಇಳಿಕೆ)

ರಾಯಚೂರು - ರೂ. 102.75 (4 ಪೈಸೆ ಇಳಿಕೆ )

ರಾಮನಗರ - ರೂ. 102.71(00)

ಶಿವಮೊಗ್ಗ- ರೂ. 103.26 (1 ಪೈಸೆ ಇಳಿಕೆ)

ತುಮಕೂರು - ರೂ. 101.97 (6 ಪೈಸೆ ಇಳಿಕೆ)

ಉಡುಪಿ - ರೂ. 101. 43 (54 ಪೈಸೆ ಇಳಿಕೆ)

ಉತ್ತರ ಕನ್ನಡ - ರೂ. 104.14 (2.16 ಪೈಸೆ ಏರಿಕೆ)

ಯಾದಗಿರಿ - ರೂ. 102.59 (15 ಪೈಸೆ ಇಳಿಕೆ)

ಇದನ್ನೂ ಓದಿ:  Gold: ಚಿನ್ನ ಖರೀದಿ ಇನ್ನೂ ಸುಲಭ! 100 ರೂ. ಇದ್ದರೆ ಸಾಕು!

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ - ರೂ. 88.36

ಬೆಂಗಳೂರು - ರೂ. 87.89

ಬೆಂಗಳೂರು ಗ್ರಾಮಾಂತರ - ರೂ. 87.99

ಬೆಳಗಾವಿ - ರೂ. 88.33

ಬಳ್ಳಾರಿ - ರೂ. 88.69

ಬೀದರ್ - ರೂ. 88.60

ವಿಜಯಪುರ - ರೂ. 87.71

ಚಾಮರಾಜನಗರ - ರೂ. 87.89

ಚಿಕ್ಕಬಳ್ಳಾಪುರ - ರೂ. 88.68

ಚಿಕ್ಕಮಗಳೂರು - ರೂ. 88.68

ಚಿತ್ರದುರ್ಗ - ರೂ. 88.95

ದಕ್ಷಿಣ ಕನ್ನಡ - ರೂ. 87.75

ದಾವಣಗೆರೆ - ರೂ. 88.91

ಧಾರವಾಡ - ರೂ. 87.98

ಗದಗ - ರೂ. 88.65

ಕಲಬುರಗಿ - ರೂ. 88.33

ಹಾಸನ - ರೂ. 87.52

ಹಾವೇರಿ - ರೂ. 87.31

ಕೊಡಗು - ರೂ. 89.02

ಕೋಲಾರ - ರೂ. 87.83

ಕೊಪ್ಪಳ - ರೂ. 88.68

ಮಂಡ್ಯ - ರೂ. 87.71

ಮೈಸೂರು - ರೂ. 87.45

ರಾಯಚೂರು - ರೂ. 88.63

ರಾಮನಗರ - ರೂ. 88.36

ಶಿವಮೊಗ್ಗ - ರೂ. 89.04

ತುಮಕೂರು - ರೂ. 87.82

ಉಡುಪಿ - ರೂ. 87.40

ಉತ್ತರ ಕನ್ನಡ - ರೂ. 89.77

ಯಾದಗಿರಿ - ರೂ. 88.50

ಇದನ್ನೂ ಓದಿ: ಬ Dan Bilzerian: ಭೂಮಿ ಮೇಲೆ ಇವನಂತೆ ಬದುಕೋರು ಯಾರು ಇಲ್ಲ! ಸದಾ ಇವನ ಸುತ್ತ ಇರ್ತಾರೆ ರಂಭೆ, ಊವರ್ಶಿಯರು

ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದ ಬೆಲೆಯಲ್ಲೇ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಶ್ರೀಸಾಮಾನ್ಯನ ಕೈಸುಡುವಂತಾಗಿದೆ. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಮುಕ್ತಾಯವಾಗುವ ಸೂಚನೆಯೂ ಕಾಣುತ್ತಿಲ್ಲ.
Published by:Mahmadrafik K
First published: