Cauvery: ಕಾವೇರಿ ನದಿಯಲ್ಲಿ ಯಾತ್ರಾರ್ಥಿಗಳು ಬಿಸಾಡಿದ ಬಟ್ಟೆಗಳೇ ಇವರ ಆದಾಯದ ಮೂಲ

ಈ ನದಿಗಳ ಕಡೆಗೆ ಹೋದಾಗ ಅಲ್ಲಿ ಕೆಲವು ಜನರು ಅಲ್ಲಿ ಎಸೆಯಲಾದ ಬಟ್ಟೆಗಳನ್ನು ತೆಗೆದುಕೊಂಡು ಬರುವುದನ್ನು ನೋಡಿರುತ್ತೀರಿ ಅಲ್ಲವೇ? ಏನಿದು, ಇವರು ನದಿಯನ್ನು ಸ್ವಚ್ಛ ಮಾಡುತ್ತಿದ್ದಾರೆಯೇ ಅಂತ ನೀವು ಅಂದುಕೊಂಡರೆ ಅದು ಅರ್ಧ ಸತ್ಯ ಸಹ ಆಗಿರುತ್ತದೆ. ಏಕೆಂದರೆ ಇವರು ಹೀಗೆ ಯಾತ್ರಾರ್ಥಿಗಳು ಬಿಟ್ಟು ಹೋದ ಮತ್ತು ಬೀಸಾಡಿ ಹೋದ ಬಟ್ಟೆಗಳನ್ನು ಸಂಗ್ರಹಿಸುವುದು ಇವರ ಹೊಟ್ಟೆ ಪಾಡಿಗಂತೆ ಅಂತ ಹೇಳಿದರೆ ನಿಮಗೆ ಒಂದು ಕ್ಷಣ ಆಶ್ಚರ್ಯವಾಗಬಹುದು.

ಯಾತ್ರಾರ್ಥಿಗಳು ಬಿಸಾಡಿದ ಬಟ್ಟೆಗಳಿಂದ ಹಣ ಸಂಪಾದನೇ ಮಾಡುವ ಜನ

ಯಾತ್ರಾರ್ಥಿಗಳು ಬಿಸಾಡಿದ ಬಟ್ಟೆಗಳಿಂದ ಹಣ ಸಂಪಾದನೇ ಮಾಡುವ ಜನ

  • Share this:
ಸಾಮಾನ್ಯವಾಗಿ ಈ ನಗರ ಪಾಲಿಕೆಯವರು ಮತ್ತು ಜಿಲ್ಲಾಡಳಿತವು ಎಷ್ಟೇ ಸಾರಿ ಸಾರ್ವಜನಿಕರಿಗೆ (Public) ಹತ್ತಿರವಿರುವ ನದಿಗಳಲ್ಲಿ (River) ಸ್ನಾನ ಮಾಡಿದ ಮೇಲೆ ತಮ್ಮ ಬಟ್ಟೆ ಬರೆಗಳನ್ನು ಅಲ್ಲಿಯೇ ನೀರಿಗೆ ಎಸೆದು ಹೋಗಬೇಡಿ ಅಂತ ಹೇಳುತ್ತಲೇ ಇದ್ದರೂ ಸಹ ಜನರು ಮಾತ್ರ ಯಾವುದೇ ಆದೇಶಗಳನ್ನು ಗಂಭೀರವಾಗಿ ತೆಗೆದುಕೊಂಡವರಂತೆ ಕಾಣಿಸುತ್ತಿಲ್ಲ. ತಮ್ಮ ಬಟ್ಟೆಗಳನ್ನು (Clothes) ಹಾಗೆಯೇ ನೀರಿಗೆ ಎಸೆದು ಹೋಗುವುದರಿಂದ ನದಿಯಲ್ಲಿ ತುಂಬಾನೇ ತ್ಯಾಜ್ಯ ಜಮೆ ಆಗುತ್ತದೆ, ಇದರಿಂದ ನೀರು ಸಹ ಕಲುಷಿತವಾಗುತ್ತದೆ ಮತ್ತು ನೀರಿನಲ್ಲಿರುವ ಜೀವಿಗಳಿಗೂ ಸಹ ತೊಂದರೆ ಆಗಬಹುದು. ಇದೆಲ್ಲವೂ ಗೊತ್ತಿದ್ದರೂ ಸಹ ಮನುಷ್ಯ ಮಾತ್ರ ನದಿಗಳಿಗೆ ಹೋಗಿ ಸ್ನಾನ (Bath) ಮಾಡಿ, ನಂತರ ಬಟ್ಟೆಗಳನ್ನು ಅಲ್ಲಿಯೇ ಬೀಸಾಡಿ ಹೋಗುವುದನ್ನು ನಾವು ಅನೇಕ ಬಾರಿ ನೋಡಿರುತ್ತೇವೆ.

ನದಿಯಲ್ಲಿ ಬಿಟ್ಟುಹೋದ ಬಟ್ಟೆಗಳ ಸಂಗ್ರಹ

ನೀವು ಈ ನದಿಗಳ ಕಡೆಗೆ ಹೋದಾಗ ಅಲ್ಲಿ ಕೆಲವು ಜನರು ಅಲ್ಲಿ ಎಸೆಯಲಾದ ಬಟ್ಟೆಗಳನ್ನು ತೆಗೆದುಕೊಂಡು ಬರುವುದನ್ನು ನೋಡಿರುತ್ತೀರಿ ಅಲ್ಲವೇ? ಏನಿದು, ಇವರು ನದಿಯನ್ನು ಸ್ವಚ್ಛ ಮಾಡುತ್ತಿದ್ದಾರೆಯೇ ಅಂತ ನೀವು ಅಂದುಕೊಂಡರೆ ಅದು ಅರ್ಧ ಸತ್ಯ ಸಹ ಆಗಿರುತ್ತದೆ.

ಏಕೆಂದರೆ ಇವರು ಹೀಗೆ ಯಾತ್ರಾರ್ಥಿಗಳು ಬಿಟ್ಟು ಹೋದ ಮತ್ತು ಬೀಸಾಡಿ ಹೋದ ಬಟ್ಟೆಗಳನ್ನು ಸಂಗ್ರಹಿಸುವುದು ಇವರ ಹೊಟ್ಟೆ ಪಾಡಿಗೆ ಅಂತ ಹೇಳಿದರೆ ನಿಮಗೆ ಒಂದು ಕ್ಷಣ ಆಶ್ಚರ್ಯವಾಗಬಹುದು.

ನೀವು ತಮಿಳುನಾಡಿನ ತಿರುಚ್ಚಿ ಸಮೀಪವಿರುವ ಅಮ್ಮ ಮಂಟಪಂ ಘಾಟ್ ಗೆ ಅಮಾವಾಸ್ಯೆಯ ದಿನ ಅಥವಾ ಅದರ ಮರುದಿವಸ ಬಂದು ನೋಡಿದರೆ ನಿಮಗೆ ಈ ದೃಶ್ಯ ಕಾಣಿಸುತ್ತದೆ. ಮೃತರಿಗೆ ಧಾರ್ಮಿಕ ವಿಧಿವಿಧಾನಗಳನ್ನು ಮಾಡಿಸಲು ಬರುವ ಪ್ರವಾಸಿಗರ ದಂಡು ತುಂಬಾನೇ ಇರುತ್ತದೆ ಮತ್ತು ಅವರಲ್ಲಿ ಕೆಲವರು ನಿಗಮದ ಆದೇಶವನ್ನು ಲೆಕ್ಕಿಸದೆ, ತಮ್ಮ ಒದ್ದೆಯಾದ ಬಟ್ಟೆಗಳನ್ನು ಕಾವೇರಿ ನದಿಯಲ್ಲಿ ಎಸೆದು ಹೋಗುವುದನ್ನು ನಾವು ನೋಡಬಹುದು. ಅವರೆಲ್ಲರೂ ಹೋದ ನಂತರ ಅಲ್ಲಿ ತೇಲುವ ಉಡುಪುಗಳನ್ನು ಸಂಗ್ರಹಿಸಲು ಕೆಲವರು ನದಿಗೆ ಧುಮುಕುವುದನ್ನು ಸಹ ನೋಡಬಹುದು.

person making money from the clothes thrown by the pilgrims in the Cauvery river
ನದಿಯಲ್ಲಿ ಬಟ್ಟೆ ಎಸೆದಿರೋದು


ಇದೇ ಕಸುಬನ್ನಾಗಿ ಮಾಡಿಕೊಂಡಿರುವ ವ್ಯಕ್ತಿ ಏನು ಹೇಳಿದ್ದಾರೆ ನೋಡಿ 

ಯಾತ್ರಾರ್ಥಿಗಳು ಘಾಟ್ ನಲ್ಲಿ ಬಿಟ್ಟು ಹೋದ ಬಟ್ಟೆಗಳನ್ನು ಸಂಗ್ರಹಿಸಿ ಒಣಗಿಸುತ್ತಾರೆ. ಅರಸನ್ ಎಂಬ ವ್ಯಕ್ತಿ ಮಾತನಾಡುತ್ತಾ "ನಾನು ಕಳೆದ 20 ವರ್ಷಗಳಿಂದ ಇದನ್ನು ಮಾಡುತ್ತಿದ್ದೇನೆ. ನಿಗಮವು ಹೀಗೆ ಬಟ್ಟೆಗಳನ್ನು ನದಿಗೆ ಎಸೆಯಬಾರದು ಎಂದು ಅನೇಕ ಸಾರಿ ಹೇಳಿದ್ದರೂ ಸಹ ಕೆಲವರು ನೀರಿನಲ್ಲಿ ತಮ್ಮ ಬಟ್ಟೆಗಳನ್ನು ಹಾಕಿ ಹೋಗುತ್ತಾರೆ.

ಅವರು ನಮಗೆ ಜೀವನೋಪಾಯದ ಮಾರ್ಗವನ್ನು ಒದಗಿಸಿದ್ದಾರೆ ಅಂತ ಅಂದುಕೊಂಡು ನದಿಗೆ ಹಾರಿ ಈಜಿಕೊಂಡು ಹೋಗಿ ಅವುಗಳನ್ನು ಸಂಗ್ರಹಿಸುತ್ತೇವೆ. ನದಿಯಲ್ಲಿ ಈ ರೀತಿ ಬಟ್ಟೆಗಳನ್ನು ಹಾಕುವುದನ್ನು ಜನರು ಯಾವಾಗ ನಿಲ್ಲಿಸುತ್ತಾರೆ ಎಂದು ನಮಗೆ ತಿಳಿದಿಲ್ಲ, ಆದರೆ ಇದರಿಂದ ಇಷ್ಟು ವರ್ಷಗಳ ಕಾಲ ನಮ್ಮ ಜೀವನೋಪಾಯ ಸಾಗಿದೆ" ಎಂದು ಅವರು ಹೇಳಿದರು.

ಇದನ್ನೂ ಓದಿ:  GST On Rice: ಅಕ್ಕಿ ಮೇಲಿನ ಜಿಎಸ್​ಟಿ ಉಳಿಸಲು ತಮಿಳುನಾಡಿನಲ್ಲಿ ಹೊಸ ಉಪಾಯ!

ಆದಿ ಋತುವಿನ ನಂತರ, ಅರಸನ್ ನಂತಹ ಚಿಂದಿ ಆಯುವವರು ನಗರದ ಬೀದಿಗಳಿಂದ ತ್ಯಾಜ್ಯ ಸಂಗ್ರಹಣೆಯನ್ನು ಪುನರಾರಂಭಿಸುತ್ತಿದ್ದರು. ಬಟ್ಟೆಗಳನ್ನು ಸಂಗ್ರಹಿಸುತ್ತಿದ್ದ ಮೀನುಗಾರ ಪಳನಿ ಈ ಬಟ್ಟೆಗಳಿಂದ ಬರುವ ಸಣ್ಣ ಸಂಪಾದನೆಯಿಂದ ಉಡುಗೊರೆಗಳನ್ನು ಖರೀದಿಸುವುದಾಗಿ ಹೇಳಿದನು.

ಇದರಿಂದ ಸಂಪಾನೆಯಾಗುವ ಹಣವೆಷ್ಟು 

"ಮಧುರೈ ಮತ್ತು ಚೆನ್ನೈನ ಮರುಬಳಕೆದಾರರು ಈ ಬಟ್ಟೆಗಳನ್ನು ಸಂಗ್ರಹಿಸಲು ಬರುತ್ತಿದ್ದರು. ನಮ್ಮಲ್ಲಿ ಕೆಲವರು 15 ಕೆಜಿಯಿಂದ 25 ಕೆಜಿಯಷ್ಟು ಸಂಗ್ರಹಿಸುತ್ತಿದ್ದೆವು. ಸಾಮಾನ್ಯವಾಗಿ, ನಾವು ಅದನ್ನು ಮಾರಾಟ ಮಾಡುವುದರಿಂದ ಸುಮಾರು 1500 ರೂಪಾಯಿ ಗಳಿಸುತ್ತೇವೆ. ಇದರಿಂದ ನನ್ನ ಮಗಳಿಗೆ ಉಡುಗೊರೆಗಳನ್ನು ಖರೀದಿಸುತ್ತೇನೆ.

ಇದನ್ನೂ ಓದಿ:  Business Ideas: ಖುಷಿ ತಂದ ಮೆಣಸಿನ ಕೃಷಿ, 1 ಲಕ್ಷದ 80 ಸಾವಿರ ಲಾಭ ಗಳಿಸಿದ ಮಹಿಳೆಯರು!

ಜನರು ತಮ್ಮ ಮನೋಭಾವವನ್ನು ಬದಲಾಯಿಸದಿದ್ದರೂ, ನಾವು ಅವುಗಳನ್ನು ಸಂಗ್ರಹಿಸುವುದನ್ನು ಮುಂದುವರಿಸುವುದರಿಂದ ನಿಗಮವು ಜಲರಾಶಿಯಲ್ಲಿ ಬಿಟ್ಟು ಹೋದ ಬಟ್ಟೆಗಳ ಬಗ್ಗೆ ಚಿಂತಿಸಬೇಕಾಗಿಲ್ಲ.

person making money from the clothes thrown by the pilgrims in the Cauvery river
ಸಾಂದರ್ಭಿಕ ಚಿತ್ರ


ನನ್ನ ಮಗಳಿಗೆ ಉಡುಗೊರೆಗಳನ್ನು ಖರೀದಿಸಲು ಮಾತ್ರವಲ್ಲ, ನನ್ನ ಜೀವನವು ಕಾವೇರಿಯನ್ನು ಅವಲಂಬಿಸಿರುವುದರಿಂದ ಜಲಚರಗಳನ್ನು ರಕ್ಷಿಸಲು ನಾನು ಇದನ್ನು ಮಾಡುತ್ತಲೇ ಇರುತ್ತೇನೆ" ಎಂದು ಅವರು ಹೇಳಿದರು.
Published by:Ashwini Prabhu
First published: