• Home
  • »
  • News
  • »
  • business
  • »
  • PepsiCo Layoff: ಎಲ್ರದ್ದೂ ಆಯ್ತು,ಈಗ ಪೆಪ್ಸಿಕೋ ಸರದಿ; 100 ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಗೇಟ್​ಪಾಸ್!

PepsiCo Layoff: ಎಲ್ರದ್ದೂ ಆಯ್ತು,ಈಗ ಪೆಪ್ಸಿಕೋ ಸರದಿ; 100 ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಗೇಟ್​ಪಾಸ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉತ್ತರ ಅಮೇರಿಕಾ ಮಾತ್ರವಲ್ಲದೆ, ನ್ಯೂಯಾರ್ಕ್, ಟೆಕ್ಸಾಸ್ ಮತ್ತು ಚಿಕಾಗೋ ಕಾರ್ಖಾನೆಗಳಲ್ಲಿನ ಉದ್ಯೋಗಿಗಳ ದೊಡ್ಡ ಭಾಗಗಳಲ್ಲಿ ಸಹ ಉದ್ಯೋಗಿಗಳನ್ನು ವಜಾಗೊಳಿಸುವ ಸಾಧ್ಯತೆಯಿದೆ.

  • Share this:

ಆರ್ಥಿಕ ಹಿಂಜರಿತ (Economic Recession) ದ ಭಯದಿಂದ ಹಲವಾರು ಕಂಪನಿಗಳು ಕೆಲಸಗಾರರನ್ನು (Layoff) ವಜಾಗೊಳಿಸಲು ಪ್ರಾರಂಭಿಸಿವೆ. ಐಟಿ (IT) ಮತ್ತು ತಂತ್ರಜ್ಞಾನ (Technology) ವಲಯದಲ್ಲಿ ಲೇ ಆಫ್​ ಕ್ರಾಂತಿ ಮುಂದುವರೆದಿದೆ. ಇದೀಗ ಪೆಪ್ಸಿಕೋ (PepsiCo) ತನ್ನ ಉದ್ಯೋಗಿಗಳನ್ನು ಕೆಸಲದಿಂದ ವಜಾ ಮಾಡಲು ಮುಂದಾಗಿದೆ. ವಾಲ್ ಸ್ಟ್ರೀಟ್ ಜರ್ನಲ್‌ನ ವರದಿಯ ಪ್ರಕಾರ, ಪೆಪ್ಸಿಕೋದ ಉತ್ತರ ಅಮೆರಿಕಾ (America) ದ ಕಾರ್ಖಾನೆಗಳಲ್ಲಿ ನೂರಾರು ಕಾರ್ಮಿಕರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳಬಹುದು. ಉತ್ತರ ಅಮೇರಿಕಾ ಮಾತ್ರವಲ್ಲದೆ, ನ್ಯೂಯಾರ್ಕ್, ಟೆಕ್ಸಾಸ್ ಮತ್ತು ಚಿಕಾಗೋ ಕಾರ್ಖಾನೆಗಳಲ್ಲಿನ ಉದ್ಯೋಗಿಗಳ ದೊಡ್ಡ ಭಾಗಗಳಲ್ಲಿ ಸಹ ಉದ್ಯೋಗಿಗಳನ್ನು ವಜಾಗೊಳಿಸುವ ಸಾಧ್ಯತೆಯಿದೆ.


ಪೆಪ್ಸಿಕೋದಿಂದ ಉದ್ಯೋಗಿಗಳು ವಜಾ!?


ಪೆಪ್ಸಿಕೋ ವಜಾಗಳನ್ನು ಒಪ್ಪಿಕೊಂಡಿದೆ. ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಮತ್ತು ಕಂಪನಿಯ ರಚನೆಯನ್ನು ಸರಳಗೊಳಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದ್ಯಂತೆ. ವಿವಿಧ ಮಾಧ್ಯಮಗಳ ವರದಿಗಳ ಪ್ರಕಾರ, ತಿಂಡಿ ಕಾರ್ಖಾನೆಗಳಿಗಿಂತ ಪಾನೀಯ ಕಾರ್ಖಾನೆಗಳಲ್ಲಿ ಹೆಚ್ಚು ವಜಾಗೊಳಿಸಲಾಗುವುದು. ಸ್ಕಾಕ್ಸ್ ಕಾರ್ಖಾನೆಯಲ್ಲಿ ಈಗಾಗಲೇ ಹಲವು ಕಾರ್ಮಿಕರು ಸ್ವಯಂ ನಿವೃತ್ತಿ ಪಡೆಯುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ.


ಹಾಗಾಗಿ ಈ ಬಾರಿ ಪಾನೀಯ ಕಾರ್ಖಾನೆಯ ಕಾರ್ಮಿಕರನ್ನೇ ಕೆಲಸದಿಂದ ತೆಗೆಯಬಹುದು ಎಂದು ಊಹಿಸಲಾಗಿದೆ. ಬೃಹತ್ ವಜಾಗೊಳಿಸುವಿಕೆಯಿಂದ ಕಂಪನಿಯ ಉತ್ಪಾದನೆಯು ಹಾನಿಗೊಳಗಾಗುತ್ತದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ.


ಆಹಾರ ಮತ್ತು ಪಾನೀಯ ವಿಭಾಗದಲ್ಲಿ ಬೆಲೆ ಏರಿಕೆ!


ಹೆಚ್ಚುತ್ತಿರುವ ಹಣದುಬ್ಬರವನ್ನು ತಡೆಯಲು ಪೆಪ್ಸಿಕೋ ಸೇರಿದಂತೆ ಹಲವಾರು ಆಹಾರ ಮತ್ತು ಪಾನೀಯ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸಿವೆ. ಈ ಕಂಪನಿಗಳು ಬಳಸುವ ಕಾರ್ನ್, ಸಕ್ಕರೆ, ಆಲೂಗಡ್ಡೆ, ಸಾರಿಗೆ ಮತ್ತು ಕಾರ್ಮಿಕ ವೆಚ್ಚಗಳಂತಹ ಕಚ್ಚಾ ವಸ್ತುಗಳ ಬೆಲೆ ಇತ್ತೀಚಿನ ದಿನಗಳಲ್ಲಿ ವೇಗವಾಗಿ ಹೆಚ್ಚಾಗಿದೆ. ಆದರೆ, ಬೆಲೆ ಹೆಚ್ಚಿದ್ದರೂ ಬೇಡಿಕೆ ಸ್ವಲ್ಪವೂ ಕಡಿಮೆಯಾಗಿಲ್ಲ. ತಿಂಡಿಗಳು ಮತ್ತು ಪಾನೀಯಗಳನ್ನು ಅದೇ ರೀತಿಯಲ್ಲಿ ಮಾರಾಟ ಮಾಡಲಾಗುತ್ತದೆ.


ಇದನ್ನೂ ಓದಿ: ಈ ವರ್ಷ ಕಿರಿಕ್​ ಮಾಡಿ ಸುದ್ದಿಯಾದ ಸಿಇಒಗಳಿವ್ರು, ಅದ್ರಲ್ಲೂ ಎಲಾನ್​ ಮಸ್ಕ್​​ ಅಂತೂ ಫಸ್ಟ್​ ಪ್ಲೇಸ್​!


ಪೆಪ್ಸಿಕೋ ಮಾರಾಟ ಹೆಚ್ಚಳ!


ಈ ವರ್ಷದ ಅಕ್ಟೋಬರ್‌ನಲ್ಲಿ ಪೆಪ್ಸಿಕೋ ತನ್ನ ಆದಾಯದ ಹೇಳಿಕೆಯನ್ನು ಪ್ರಸ್ತುತಪಡಿಸಿದೆ. ಕಂಪನಿಯ ಮಾರಾಟವು ಹಲವಾರು ಪಟ್ಟು ಹೆಚ್ಚಾಗಿದೆ ಎಂದು ಅಲ್ಲಿ ಕಾಣಬಹುದು. ಬೆಲೆ ಏರಿಕೆಯ ಹೊರತಾಗಿಯೂ, ಕಂಪನಿಯ ಮೂರನೇ ತ್ರೈಮಾಸಿಕ ಮಾರಾಟವು ನಿರೀಕ್ಷೆಗಳನ್ನು ಮೀರಿಸಿದೆ. "ಗ್ರಾಹಕರು ಏನು ಬಯಸುತ್ತಾರೆ ಎಂಬುದು ನಮಗೆ ತಿಳಿದಿದೆ" ಎಂದು ಪೆಪ್ಸಿಕೋ ಸಿಎಫ್‌ಒ ಹ್ಯೂ ಜಾನ್ಸ್ಟನ್ ಹೂಡಿಕೆದಾರರಿಗೆ ಕಾನ್ಫರೆನ್ಸ್ ಕರೆಯಲ್ಲಿ ಹೇಳಿದರು. 


ಈ ಬಗ್ಗೆ ಆಳವಾದ ಅವಲೋಕನ ಮಾಡಿದ್ದೇವೆ. ಮೂರನೇ ತ್ರೈಮಾಸಿಕದಲ್ಲಿ ನಾವು ಸುಧಾರಿಸಿದ್ದೇವೆ. ಕಂಪನಿಯ ಬಗ್ಗೆ ಗ್ರಾಹಕರ ವರ್ತನೆ ಉತ್ತಮವಾಗಿದೆ. ಹಣದುಬ್ಬರ ಮತ್ತು ಆರ್ಥಿಕ ಹಿಂಜರಿತದ ಭಯವು ಅನೇಕ ಕಂಪನಿಗಳು ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸುವಂತೆ ಮಾಡಿದೆ.


ಇದನ್ನೂ ಓದಿ: ಅಮೆಜಾನ್​ನಲ್ಲಿ 10 ಅಲ್ಲ, 20 ಸಾವಿರ ಉದ್ಯೋಗಿಗಳ ವಜಾಗೆ ಚಿಂತನೆ! ಲಿಸ್ಟ್​​ನಲ್ಲಿ ಎಲ್ರೂ ಇದ್ದಾರಂತೆ


ದೊಡ್ಡ ದೊಡ್ಡ ಕಂಪನಿಗಳಲ್ಲಿ ಲೇ ಆಫ್​!


ಪೆಪ್ಸಿಕೋ, ಅಮೆಜಾನ್, ಮೆಟಾ, ಡೋರ್‌ಡ್ಯಾಶ್, ಎಎಮ್‌ಸಿ ನೆಟ್‌ವರ್ಕ್ಸ್, ಸಿಟಿಗ್ರೂಪ್, ಸಿಎನ್‌ಎನ್, ಮೋರ್ಗಾನ್ ಸ್ಟಾನ್ಲಿ, ಇಂಟೆಲ್, ಮೈಕ್ರೋಸಾಫ್ಟ್ ಮತ್ತು ಟ್ವಿಟರ್ ಸಹ ಕಾರ್ಮಿಕರನ್ನು ವಜಾಗೊಳಿಸಲು ನಿರ್ಧರಿಸಿವೆ. US ನಲ್ಲಿ ಹಣದುಬ್ಬರ ಮತ್ತು ಆರ್ಥಿಕ ಮಂದಗತಿಯ ಭಯಗಳು ತಂತ್ರಜ್ಞಾನ, ಆಹಾರ ಪೂರೈಕೆ ಮತ್ತು ಬ್ಯಾಂಕುಗಳು ಸೇರಿದಂತೆ ಹಲವಾರು ವಲಯಗಳಲ್ಲಿನ ಕಂಪನಿಗಳು ವೆಚ್ಚವನ್ನು ಕಡಿತಗೊಳಿಸುವಂತೆ ಮಾಡಿದೆ.

Published by:ವಾಸುದೇವ್ ಎಂ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು