UPI ಪಾವತಿ ಶುಲ್ಕ ಗೊಂದಲಕ್ಕೆ ಸ್ಪಷ್ಟನೆ, ಪೇಟಿಎಂ ಸಂಸ್ಥಾಪಕ ವಿಜಯ್​ ಶೇಖರ್ ಹೇಳಿದ್ದೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನ್ಯಾಷನಲ್ ಪೇಮೆಂಟ್​​ ಕೌನ್ಸಿಲ್ ಆಫ್ ಇಂಡಿಯಾ ಇಂಟರ್​​ಚೇಂಜ್​​ ಶುಲ್ಕವನ್ನು ವಿಧಿಸಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ ಎಂದು ಪೇಟಿಎಂ ಸಂಸ್ಥಾಪಕರು ಹೇಳಿದ್ದಾರೆ.

  • Share this:

ದಿನಗಳು ಎಷ್ಟು ಬದಲಾಗಿವೆ ಅಂದ್ರೆ ಪರ್ಸ್ (Purse)​ ಇಟ್ಟುಕೊಳ್ಳುವವರ ಸಂಖ್ಯೆಯೇ ಕಡಿಮೆ ಆಗಿದೆ. ಅಂಗಡಿಯಲ್ಲಿ ಏನೇ ಕೊಂಡರು ಮೊಬೈಲ್ ಸ್ವೈಪ್ (Mobile Swipe) ಮಾಡಿ ಯುಪಿಐ (UPI) ಮೂಲಕ ಕ್ಷಣಾರ್ಧದಲ್ಲಿ ಬಿಲ್ ಪಾವತಿ (Bill Payment) ಮಾಡುತ್ತೇವೆ. ಬೆರಳ ತುದಿಯಲ್ಲಿ ಚಿಲ್ಲರೆ ಪೀಕಲಾಟ, ಹಳೆ ನೋಟಿನ ಕಿರಿಕಿರಿ ಇದ್ಯಾವುದು ಇಲ್ಲದೇ ನೆಮ್ಮದಿಯ ಶಾಪಿಂಗ್ (Shopping) ಮುಗಿಸಿ ಮನೆಗೆ ಬರ್ತೀವಿ ಅದಕ್ಕೆ ಕಾರಣ ಡಿಜಿಟಲ್ ಪೇಮೆಂಟ್ (Digital Payments) . ಆದರೆ ಈಗ ಯುಪಿಐ ಪೇಮೆಂಟ್​ ಮೇಲೆ ಶುಲ್ಕ ವಿಧಿಸುತ್ತಾರೆ ಎನ್ನುವ ಮಾತು ಶ್ರೀ ಸಾಮಾನ್ಯ ಕೈ ಕೈ ಹಿಸುಕಿಕೊಳ್ಳುವಂತೆ ಮಾಡಿದೆ. ಆದರೆ ಹಾಗೇನೂ ಆಗಿಲ್ಲ, ಇದು ತಪ್ಪು ಗ್ರಹಿಕೆ ಎಂದು ಪೇಟಿಎಂ ಸಂಸ್ಥಾಪಕ ಮತ್ತು ಸಿಇಒ ವಿಜಯ್​ ಶೇಖರ್​ ಶರ್ಮಾ ಅವರು ಟ್ವಿಟರ್​​ನಲ್ಲಿ ಸ್ಪಷ್ಟನೆ ನೀಡಿ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದ್ದಾರೆ.


ಏಪ್ರಿಲ್​ 1 ರಿಂದ 2000 ರೂಗಳಿಗಿಂತ ಹೆಚ್ಚಿನ ಯುಪಿಐ ವಹಿವಾಟುಗಳಿಗೆ ಶೇಕಡಾ 1.1 ರಷ್ಟು ​ಇಂಟರ್​ಚೇಂಜ್​​ ಶುಲ್ಕಪಾವತಿಸಬೇಕು ಎನ್ನುವ ನಿಯಮ ಜಾರಿಗೆ ಬರುತ್ತಿದೆ. ನ್ಯಾಷನಲ್ ಪೇಮೆಂಟ್​​ ಕೌನ್ಸಿಲ್ ಆಫ್ ಇಂಡಿಯಾ ಇಂಟರ್​​ಚೇಂಜ್​​ ಶುಲ್ಕವನ್ನು ವಿಧಿಸಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ ಎಂದು ಪೇಟಿಎಂ ಸಂಸ್ಥಾಪಕರು ಹೇಳಿದ್ದಾರೆ.


ಪೇಟಿಎಂ ನಲ್ಲಿ ಕ್ಯೂಆರ್​ ಕೋಡ್!


‘UPI ಪೇಮೆಂಟ್​ ಮೇಲೆ ಶುಲ್ಕ ವಿಧಿಸಲಾಗುತ್ತಿದೆ ಎಂದು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದು ಅದನ್ನೇ ಸುದ್ದಿಯಾಗಿಯೂ ಬಿತ್ತರಿಸುತ್ತಿದ್ದಾರೆ. ಆದರೆ ಇದರಲ್ಲಿ ಯಾವುದೇ ಸತ್ಯವಿಲ್ಲ. ಆದರೆ ಇಲ್ಲಿ ಗಮನಿಸಬೇಕಾದ ಕೆಲವು ಅಂಶಗಳಿವೆ’ ಎಂದು ಟ್ವಿಟರ್​​ನಲ್ಲಿ ಬರೆದುಕೊಂಡಿದ್ದಾರೆ.


ಆ ನಂತರ ಮುಂದುವರೆದು ‘UPI ಮೊದಲು ಪ್ರಾರಂಭವಾದಾಗ ಇದು ಫ್ರಮ್​ ಸೈಡ್​ನ ಪೇಮೆಂಟ್​​ ಮೂಲವಾಗಿತ್ತು. ಅಂದ್ರೆ ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ಯಾವುದಾದರೂ UPI ಆಪ್​ಗೆ ಲಿಂಕ್​​ ಮಾಡಬೇಕು. ಆ ಮೂಲಕ ಪೇಮೆಂಟ್​ ಮಾಡಬೇಕು. ಹೀಗೆ UPI ಪೇಮೆಂಟ್​ ಜರ್ನಿ ಆರಂಭವಾಗಿತ್ತು. ಡಿಜಿಟಲ್ ವ್ಯಾಲೆಟ್​ ಆಗಿದ್ದ ಪೇಟಿಎಂ ನಲ್ಲಿ UPI ವಿಧಾನವನ್ನು ಪ್ರಾರಂಭಿಸಲಾಯಿತು. ಕ್ಯೂ ಆರ್​ ಕೋಡ್​ ಸ್ಕ್ಯಾನ್​ ಮಾಡಿ ಸುಲಭವಾಗಿ ಪೇಮೆಂಟ್​ ಮಾಡುವುದು ಸಾಧ್ಯವಾಯಿತು ಎನ್ನುವ ಮೂಲಕ ವಿಜಯ್ ಶೇಖರ್ ಕ್ಯೂಆರ್​​ ಕೋಡ್​ ಬಳಕೆ ಹೇಗೆ ಆರಂಭವಾಯಿತು ಎನ್ನುವುದನ್ನು ತಿಳಿಸಿದ್ದಾರೆ.


ಪೇಮೆಂಟ್​ನಲ್ಲಿ ಕ್ರಾಂತಿಯಾಯಿತು!


‘UPI ಕ್ಯೂ ಆರ್​ ಕೋಡ್​ ಪೇಮೆಂಟ್​ನ ಮೂಲವಾಯಿತು. ಆರ್​​ಬಿಐ ಸಂಭವನೀಯ ಪಾವತಿ ಮೂಲಗಳನ್ನು ವಿಸ್ತರಿಸಲು ಮತ್ತು ಕ್ಯೂ ಆರ್​​ ನೆಟ್​ವರ್ಕ್​ ಅನ್ನು ಹೆಚ್ಚುವರಿ ಮೂಲಗಳಿಗೆ ವಿಸ್ತರಿಸಲು ಪ್ರಾರಂಭಿಸಿದೆ. ಆ ಮೂಲಕ UPI, QR CODE, PAYTM ಪಾವತಿಯ ಮೂಲಗಳು ಭಾರತದಲ್ಲಿ ಕ್ರಾಂತಿಗೆ ಕಾರಣವಾಗಿವೆ’ ಎಂದು ಶೇಖರ್ ಹೇಳಿದ್ದಾರೆ.


ಆದ್ದರಿಂದ ಗ್ರಾಹಕರು QR ಕೋಡ್​ ಮೂಲಕ ಬೇರೆ ಬೇರೆ ಪಾವತಿ ಮೂಲಗಳನ್ನು ಹೊಂದಿರುವಾಗ POS/EDC/ ಕಾರ್ಡ್​​ ಮೆಷಿನ್​ನಲ್ಲಿ ಬೇರೆ ಬೇರೆ ಕಾರ್ಡ್​ ಬಳಸಿದಂತಿರುತ್ತದೆ. ಆ ಮೂಲಕ ವ್ಯಾಪಾರಿಗಳು ಬಳಸುವ ಕಾರ್ಡ್​​ ಮೆಷಿನ್​​ಗೆ ಶುಲ್ಕವನ್ನು ಆಯಾ ಕಾರ್ಡ್​​ಗೆ ಅನುಗುಣವಾಗಿ ವಿಧಿಸಲಾಗುತ್ತದೆ. ಈ ನಿಟ್ಟಿನಲ್ಲಿ ಡೆಬಿಟ್, ಕ್ರೆಡಿಟ್ ಮತ್ತು ಪ್ರೀಪೇಯ್ಡ್​​​ ಕಾರ್ಡ್​ಗಳು ವಿಭಿನ್ನ ಶುಲ್ಕವನ್ನು ಹೊಂದಿರುತ್ತವೆ.


ಇಂಟರ್​ಚೇಂಜ್​ ಶುಲ್ಕ!


ಕಾರ್ಡ್ ಮೆಷಿನ್ ಪೂರೈಕೆದಾರರು ಪೇಮೆಂಟ್ ಉಪಕರಣದ ಕಂಪನಿಗೆ ಪಾವತಿಸುವ ಶುಲ್ಕವನ್ನು​ ಇಂಟರ್​ಚೇಂಜ್​ ಪೇಮೆಂಟ್ ಎಂದು ಕರೆಯುತ್ತಾರೆ. ಇದನ್ನು ವ್ಯಾಪಾರಿ​ಗಳೇ ಭರಿಸಬೇಕಾಗುತ್ತದೆ. ಇದನ್ನು ಮರ್ಚೆಂಟ್​​ ಡಿಸ್ಕೌಂಟ್​ ರೇಟ್(ವ್ಯಾಪಾರಿ ರಿಯಾಯಿತಿ ದರ)​ ಎನ್ನಲಾಗುತ್ತದೆ. ಈ ಎಂಡಿಆರ್​ಗಳು ಇಂಟರ್​ಚೇಂಜ್​ಗಿಂತ ಹೆಚ್ಚು ಅಥವಾ ಕಡಿಮೆಯೂ ಆಗಿರಬಹುದು. ಇದಕ್ಕೆ ವ್ಯಾವಹಾರಿಕ ಕಾರಣಗಳು ಇರಬಹುದು.

top videos


    ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಎನ್​ಪಿಸಿಐ ವ್ಯಾಲೆಟ್​ ಕಂಪನಿಗಳಿಗೆ ಕಾರ್ಯಾಸಾಧ್ಯವಾಗುವಂತೆ ಹೆಚ್ಚುವರಿ ವೇರಿಯಬಲ್​ ಅನ್ನು ಸೇರಿಸಿದೆ. ಇನ್ನುಳಿದ ಪೇಮೆಂಟ್​ ಮೂಲದಂತೆ ವ್ಯಾಲೆಟ್​ ಕಂಪನಿಗೆ ಪಾವತಿಸಲು ಕೆಲವು ಬೆಲೆಗಳು ಅಗತ್ಯವಿದೆ.

    First published: