Paytm Shares: 2 ದಿನಗಳ ಕುಸಿತದ ನಂತರ 5% ಏರಿಕೆ ಕಂಡ ಪೇಟಿಎಂ ಷೇರುಗಳು; ಹೂಡಿಕೆದಾರರು ಈ ಸಮಯದಲ್ಲಿ ಏನು ಮಾಡಬೇಕು?

ಭಾರತೀಯ ಷೇರು ಮಾರುಕಟ್ಟೆಯಲ್ಲಿ ದುರ್ಬಲ ಪ್ರವೇಶ ನಡೆಸಿರುವ ಪೇಟಿಎಂ, ಇದೇ ಸಮಯದಲ್ಲಿ ಅಕ್ಟೋಬರ್ ತಿಂಗಳ ಹಣಕಾಸು ವಿವರಗಳನ್ನು ಕೂಡ ಬಿಡುಗಡೆ ಮಾಡಿದೆ.

Paytm

Paytm

  • Share this:
ಪೇಟಿಎಂನ ಮೂಲ ಕಂಪನಿಯಾದ One97 ಕಮ್ಯುನಿಕೇಷನ್ಸ್‌ನ ಷೇರುಗಳು ಸತತ ಎರಡು ಸೆಷನ್‌ಗಳಲ್ಲಿ ಕುಸಿತ ಕಂಡ ನಂತರ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಸುಮಾರು 5% ಏರಿಕೆ ಕಂಡಿದೆ. ಗುರುವಾರದ ಲಿಸ್ಟಿಂಗ್ ನಂತರ 27% ಕುಸಿತ ಕಂಡ ನಂತರ ಪೇಟಿಎಂ ಷೇರುಗಳು 10% ಕುಸಿತ ದಾಖಲಿಸಿದ್ದು ಪ್ರತಿ ಷೇರಿಗೆ 51.80 ರೂ. ಗಳಂತೆ ನ್ಯೂನತೆಯೊಂದಿಗೆ ಪೇಟಿಎಂ ಷೇರುಗಳು ಆರಂಭಗೊಂಡಿತು ಹಾಗೂ NSEಯಲ್ಲಿನ ಪ್ರತಿ ಷೇರಿಗೆ 1560.80 ರೂ. ಗಳಂತೆ ಲಿಸ್ಟಿಂಗ್ ದಿನಾಂಕದ ಮುಕ್ತಾಯದಂದು 17% ನಷ್ಟ ದಾಖಲಿಸಿತ್ತು.

ಏರಿಕೆ ಕಂಡ ಪೇಟಿಎಂ ಷೇರುಗಳು:

ಮಂಗಳವಾರ ಬೆಳಗ್ಗೆ 10 ಗಂಟೆಗೆ, ಪೇಟಿಎಂ ಷೇರುಗಳು ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ (BSE) 1425.15 ರಷ್ಟು 4.77%ನಷ್ಟು ಏರಿಕೆಯಾಗಿ ವಹಿವಾಟು ನಡೆಸುತ್ತಿವೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (ಎನ್‌ಎಸ್‌ಇ), ಪೇಟಿಎಂ ಷೇರುಗಳು ಅದೇ ಸಮಯದಲ್ಲಿ 4.90%ದಷ್ಟು ಹೆಚ್ಚಿಗೆ ವಹಿವಾಟು ನಡೆಸುತ್ತಿವೆ.

ಇದನ್ನೂ ಓದಿ: Earning Tips: ಮನೆಯಲ್ಲೇ ಕೂತು SBIನಿಂದ ತಿಂಗಳಿಗೆ 60-80 ಸಾವಿರ ಹಣ ಗಳಿಸಬಹುದು..! ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ

ಭಾರತೀಯ ಷೇರು ಮಾರುಕಟ್ಟೆಯಲ್ಲಿ ದುರ್ಬಲ ಪ್ರವೇಶ ನಡೆಸಿರುವ ಪೇಟಿಎಂ, ಇದೇ ಸಮಯದಲ್ಲಿ ಅಕ್ಟೋಬರ್ ತಿಂಗಳ ಹಣಕಾಸು ವಿವರಗಳನ್ನು ಕೂಡ ಬಿಡುಗಡೆ ಮಾಡಿದೆ. ಒಟ್ಟು ಸ್ಟಾಕ್ ಮೌಲ್ಯವು ತಿಂಗಳಿಗೆ 832 ಶತಕೋಟಿ ರೂಪಾಯಿಗಳಿಗೆ ($11.2 ಶತಕೋಟಿ) 131% ದಷ್ಟು ಏರಿಕೆಯಾಗಿದೆ ಎಂದು ಕಂಪನಿ ತಿಳಿಸಿದ್ದು, ಪೇಟಿಎಂ ಲಾಭಕರ ವಹಿವಾಟು ನಡೆಸಲು ವಿಶ್ಲೇಷಕರು ಪ್ರಮುಖವಾಗಿ ನೋಡುವ ಸಾಲ ವಿತರಣೆಯು 6.27% ರೂಪಾಯಿಗಳಿಗೆ 400ರಷ್ಟು ಹೆಚ್ಚಾಗಿದೆ.

ದುಬಾರಿ ಮೌಲ್ಯಮಾಪನ ಕುರಿತಂತೆ ಟೀಕೆ:

ಪೇಟಿಎಂ ಷೇರುಗಳು ಸೋಮವಾರದಂದು ತನ್ನ ಐಪಿಒ (IPO) ದುಬಾರಿ ಮೌಲ್ಯಮಾಪನದ ಕುರಿತಂತೆ ಟೀಕೆಗಳನ್ನು ಎದುರಿಸಿದ ಮೇಲೆ 17% ಕುಸಿತ ಕಂಡಿತು. ನಂತರ ಚೇತರಿಕೆ ಕಂಡರೂ, ದಿನದ ಅಂತ್ಯದಲ್ಲಿ 12% ಕಡಿಮೆ ದರದಲ್ಲಿ ಕೊನೆಗೊಂಡಿತು. ಇದರಿಂದಾಗಿ, ಸಂಸ್ಥೆಯ ಮಾರುಕಟ್ಟೆ ಬಂಡವಾಳವು 1 ಲಕ್ಷ ಕೋಟಿ ರೂ. ಗಳಿಗಿಂತ ಕಡಿಮೆಯಾಗಿದ್ದು ಹೂಡಿಕೆದಾರರು ನಷ್ಟ ಅನುಭವಿಸುವಂತಾಗಿದೆ. ಪೇಟಿಎಂನ ಕಳೆದ ವಾರದ ಮಾರುಕಟ್ಟೆ ಪ್ರವೇಶವು ಹೂಡಿಕೆದಾರರ 38,000 ಕೋಟಿ ರೂ. ಸಂಪತ್ತನ್ನು ಅಳಿಸಿಹಾಕಿತು. ತನ್ನ ಸ್ಟಾಕ್ ಮೌಲ್ಯಮಾಪನದ ಕುರಿತಾಗಿ ಸಾಕಷ್ಟು ಟೀಕೆಗಳನ್ನು ಎದುರಿಸಿದ ನಂತರ ಸಂಸ್ಥೆಯು ತನ್ನ ಮೊದಲ ವಹಿವಾಟಿನ ಅವಧಿಯನ್ನು 28% ದಷ್ಟು ಕಡಿಮೆಗೊಳಿಸಿತು.

ಪ್ರತಿಸ್ಪರ್ಧಿಗಳಿಗಿಂತ ಹೆಚ್ಚಿನ ವಹಿವಾಟು:

ಪೇಟಿಎಂ ತನ್ನ ಷೇರುಗಳ ಬೆಲೆಯನ್ನು 2,150 ರೂ.ಗೆ ನಿಗದಿಪಡಿಸಿದ್ದು ಈ ಮೌಲ್ಯವು ಇತರ ಲಿಸ್ಟ್ ಮಾಡಿರುವ ಸಹವರ್ತಿಗಳಿಗಿಂತ ಹೆಚ್ಚಾಗಿದೆ. ಮೊದಲ ದಿನವೇ ತೀವ್ರ ಕುಸಿತ ಕಂಡರೂ, ಪೇಟಿಎಂ ಷೇರುಗಳು ತನ್ನ ಹೆಚ್ಚಿನ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚಿನ ವಹಿವಾಟು ನಡೆಸುತ್ತಿವೆ ಎಂದೇ ವಿಶ್ಲೇಷಕರು ಭಾವಿಸಿದ್ದಾರೆ. ಇದೇ ಸಮಯದಲ್ಲಿ ಕಂಪನಿಯ ಲಾಭ ಹಾಗೂ ಅಭಿವೃದ್ಧಿಯ ಕುರಿತು ವಿಶ್ಲೇಷಕರು ಪ್ರಶ್ನೆಗಳನ್ನು ಮಾಡಿದ್ದಾರೆ.

ಮ್ಯಾಕ್ವಾರಿ (Macquarie ) ಸಂಶೋಧನೆ:

ವಿದೇಶಿ ಬ್ರೋಕರೇಜ್ ಮ್ಯಾಕ್ವಾರಿ (Macquarie ) ಪೇಟಿಎಂನ ವ್ಯವಹಾರ ಮತ್ತು ಇತರ ಅಂಶಗಳೊಂದಿಗೆ ದುಬಾರಿ ಮೌಲ್ಯಮಾಪನದ ಕುರಿತು ಹೆಚ್ಚು ಸ್ಥಿರವಾದ ಸಂಶೋಧನೆಗಳನ್ನು ನಡೆಸಿದೆ. ಪೇಟಿಎಂನ ದುಬಾರಿ ವಿಶ್ಲೇಷಣೆಯನ್ನು ಟೀಕಿಸಿದ ನಂತರ ಬ್ರೋಕರೇಜ್, ಸಂಸ್ಥೆಯ ಷೇರಿಗೆ 1,200 ರೂ. ಗಳಂತೆ ಮೌಲ್ಯೀಕರಿಸಿದೆ.

ಬ್ರೋಕರೇಜ್ ದುಬಾರಿ ವಿಶ್ಲೇಷಣೆ ಕುರಿತಂತೆ ತನ್ನ ಅಭಿಪ್ರಾಯಗಳನ್ನು ಮಂಡಿಸಿದ್ದು ಪೇಟಿಎಂ ಲಾಭ ಗಳಿಸುವ ದೂರದೃಷ್ಟಿ ಹೊಂದದೆಯೇ ವ್ಯವಹಾರ ವಿಧಾನಗಳನ್ನು ಮಾರ್ಪಡಿಸುತ್ತಿದೆ. ಸಂಸ್ಥೆಯು ಸಾಲ ನೀಡದ ಹೊರತು, ಬರೇ ವಿತರಕನಂತೆ ಆರ್ಥಿಕ ಲಾಭ ಗಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ತಂತ್ರಜ್ಞಾನ ಕಂಪನಿಯ ಕೆಟ್ಟ ಪ್ರದರ್ಶನ:

GCL ಸೆಕ್ಯುರಿಟೀಸ್‌ನ ಉಪಾಧ್ಯಕ್ಷ ರವಿ ಸಿಂಘಾಲ್ ತಿಳಿಸಿರುವಂತೆ ಮಾರುಕಟ್ಟೆಯಲ್ಲಿ ಪೇಟಿಎಂ ಹೆಚ್ಚಿನ ಸ್ಪರ್ಧೆ ಎದುರಿಸುತ್ತಿರುವುದರಿಂದ ಸಂಸ್ಥೆಯ ಲಾಭವು ಪರಿಶೀಲನೆಯಲ್ಲಿದೆ. ಅದೇ ರೀತಿ ಪ್ರತಿ ಷೇರಿಗೆ IPO 2150 ರೂ. ಗಳಂತೆ ಹೆಚ್ಚಿನ ಮೌಲ್ಯದಲ್ಲಿದೆ. ಈ ಸಮಯದಲ್ಲಿ ಸಂಸ್ಥೆಯು ಯಾವುದೇ ಹೊಸ ಸಾಹಸಕ್ಕೆ ಕೈ ಹಾಕುವುದಕ್ಕಿಂತ ಷೇರುಗಳನ್ನು ಹೊಂದಿರುವವರು ತಮ್ಮ ಹಿಂದಿನ ಪರಿಸ್ಥಿತಿಗೆ ಮರಳಿ ನಿರ್ಗಮಿಸುವುದು ಒಳಿತು ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: RD Interest Rate: ಆರ್​ಡಿ ಡಿಪಾಸಿಟ್​ ಮೇಲೆ ಹೆಚ್ಚಿನ ಬಡ್ಡಿದರ ಸಿಗಬೇಕು ಅಂದ್ರೆ ಈ ಮಾರ್ಗ ಆಯ್ಕೆ ಮಾಡಿ..!

ತನ್ನ ಮೊಲದ ದಿನದ ವಹಿವಾಟಿನಲ್ಲೇ ಪೇಟಿಎಂ 25% ಮೌಲ್ಯದ ಕುಸಿತ ಕಂಡಿದ್ದು, ಅತ್ಯಂತ ಪ್ರಮುಖ ತಂತ್ರಜ್ಞಾನ ಕಂಪನಿಯ ಅತ್ಯಂತ ಕೆಟ್ಟ ಪ್ರದರ್ಶನ ಗುರುತಿಸಿದೆ. ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಕಂಪನಿಯ ಷೇರುಗಳ ಸತತ ಕುಸಿತಗಳಿಂದಾಗಿ ಚಂಚಲಗೊಂಡಿದ್ದು, ಈ ಕ್ಷೇತ್ರದಲ್ಲಿ ದೀರ್ಘ ಸಮಯದವರೆಗೆ ನಾವಿರಲಿದ್ದೇವೆ. ಹಾಗಾಗಿ ನಾವು ನಮ್ಮೆಲ್ಲಾ ಪರಿಶ್ರಮ ವಿನಿಯೋಗಿಸಿ ಕಾರ್ಯಗತಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ.
Published by:Latha CG
First published: