Paytm: ನೀವು ಪೇಟಿಎಂ ಷೇರುಗಳನ್ನು ಖರೀದಿಸಿದ್ದೀರಾ? ಹಾಗಿದ್ರೆ ಇಲ್ಲಿದೆ ನೋಡಿ ಗುಡ್​ ನ್ಯೂಸ್​!

ಪೇಟಿಎಂ ನ ಮೂಲ ಕಂಪನಿ One97 ಕಮ್ಯುನಿಕೇಷನ್ಸ್ ಲಿಮಿಟೆಡ್, ಕೆಲವು ತಿಂಗಳ ಹಿಂದೆ ಷೇರು ಮಾರುಕಟ್ಟೆ(Share Market) ಯಲ್ಲಿ ತನ್ನ ಪಟ್ಟಿಯಿಂದ ನಿರಂತರ ನಷ್ಟ(Loss) ವನ್ನು ಅನುಭವಿಸುತ್ತಿದೆ, ಸೆಪ್ಟೆಂಬರ್ 2023 ರ ವೇಳೆಗೆ ಲಾಭದಾಯಕವಾಗುವ ನಿರೀಕ್ಷೆಯಿದೆ.

ಪೇಟಿಯಂ

ಪೇಟಿಯಂ

  • Share this:
Paytm: ಪೇಟಿಎಂ ನ ಮೂಲ ಕಂಪನಿ One97 ಕಮ್ಯುನಿಕೇಷನ್ಸ್ ಲಿಮಿಟೆಡ್, ಕೆಲವು ತಿಂಗಳ ಹಿಂದೆ ಷೇರು ಮಾರುಕಟ್ಟೆ(Share Market) ಯಲ್ಲಿ ತನ್ನ ಪಟ್ಟಿಯಿಂದ ನಿರಂತರ ನಷ್ಟ(Loss) ವನ್ನು ಅನುಭವಿಸುತ್ತಿದೆ, ಸೆಪ್ಟೆಂಬರ್ 2023 ರ ವೇಳೆಗೆ ಲಾಭದಾಯಕವಾಗುವ ನಿರೀಕ್ಷೆಯಿದೆ. ನಾವು ಮುಂದಿನ ದಿನಗಳಲ್ಲಿ ಹೆಚ್ಚು ಲಾಭ (Profit) ವನ್ನು ಗಳಿಸುತ್ತೇವೆ ಎಂದು ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ (Paytm CEO Vijay Shekar Sharma) ಹೇಳಿದ್ದಾರೆ. ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ವಿಜಯ್ ಶೇಖರ್ ಶರ್ಮಾ ಅವರು ಕಂಪನಿಯನ್ನು ಲಾಭಕ್ಕೆ ತರಲು Paytm ಆಡಳಿತ ಮಂಡಳಿ ನಿರಂತರ ಪ್ರಯತ್ನ ನಡೆಸುತ್ತಿದ್ದು, ಶೀಘ್ರದಲ್ಲೇ ಫಲಿತಾಂಶ ಹೊರಬೀಳಲಿದೆ ಎಂದರು. ಕಂಪನಿಯು ಷೇರು ಬೆಲೆಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುವುದಿಲ್ಲ ಎಂದು ಶರ್ಮಾ ಹೇಳಿದ್ದಾರೆ.

 ಸೆಪ್ಟೆಂಬರ್​​ ವೇಳೆಗೆ ಲಾಭದ ನಿರೀಕ್ಷೆಯಲ್ಲಿ ಪೇಟಿಎಂ!

2018-19 ರವರೆಗೆ ಕಂಪನಿಯು ವಿಸ್ತರಣೆಯ ಹಂತದಲ್ಲಿದೆ ಎಂದು ಶರ್ಮಾ ಹೇಳಿದರು. 2019-20 ರಿಂದ ಲಾಭ ಗಳಿಸುವತ್ತ ಗಮನ ಹರಿಸಲಾಗಿದೆ. ಮುಂದಿನ ವರ್ಷ ಸೆಪ್ಟೆಂಬರ್‌ಗೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ಲಾಭ ಗಳಿಸಲಿದೆ ಎಂದು ಕಂಪನಿ ತಿಳಿಸಿದೆ. Paytm ನಷ್ಟವು ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ 380.2 ಕೋಟಿ ರೂಪಾಯಿಗಳಿಂದ 2023 ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ₹ 644 ಕೋಟಿಗಳಿಗೆ ವಿಸ್ತರಿಸಿದೆ. ಇದೇ ಅವಧಿಯಲ್ಲಿ ಕಂಪನಿಯ ಆದಾಯ ಶೇ.86ರಷ್ಟು ಹೆಚ್ಚಿದೆ. ಶುಕ್ರವಾರದಂದು Paytm ಷೇರಿನ ಬೆಲೆ 771 ರ ಆಸುಪಾಸಿನಲ್ಲಿ ಕೊನೆಗೊಂಡಿತು. ಕಳೆದ ತಿಂಗಳು ಶೇ.4.66ರಷ್ಟು ಏರಿಕೆ ಕಂಡಿದೆ.

ಪೇಟಿಎಂ ಷೇರುಗಳು ಕುಸಿಯಲು ಕಾರಣವೇನು?

ಎಜಿಎಂ ಸಭೆಯಲ್ಲಿ ಹೂಡಿಕೆದಾರರು ಶರ್ಮಾ ಅವರಿಗೆ ತುಂಬಾ ಕಠಿಣ ಪ್ರಶ್ನೆಗಳನ್ನು ಕೇಳಿದರು. ಕಂಪನಿಯ ಷೇರುಗಳ ನಿರಂತರ ಕುಸಿತದ ಕಾರಣವನ್ನು ಶರ್ಮಾ ವಿವರಿಸಿದರು. "ಮ್ಯಾಕ್ರೋ, ಮೈಕ್ರೋ, ಅಂತರಾಷ್ಟ್ರೀಯ ಹೂಡಿಕೆದಾರರು, ವಿವಿಧ ಭಾವನೆಗಳು ಷೇರು ಬೆಲೆಗಳ ಮೇಲೆ ದೊಡ್ಡ ಪ್ರಭಾವ ಬೀರುತ್ತವೆ" ಎಂದು ಅವರು ಹೇಳಿದರು. ಕಂಪನಿಯನ್ನು ಲಾಭದಾಯಕವಾಗಿಡಲು ಆಡಳಿತ ಮಂಡಳಿ ಪ್ರಯತ್ನಿಸುತ್ತಿದೆ ಎಂದು ಶರ್ಮಾ ಹೇಳಿದರು. ವ್ಯಾಪಾರ ವಿಸ್ತರಣೆಗೆ ಉತ್ತಮ ಲಾಭ ಅಗತ್ಯ ಎಂದರು.

ಇದನ್ನೂ ಓದಿ: ಮಹಿಳೆಯರಿಗೆ ಹೇಳಿ ಮಾಡಿಸಿದ ಕೆಲಸಗಳಿವು, ಕೈ ತುಂಬಾ ದುಡ್ಡು ಮಾಡುವ ದಾರಿ ಇಲ್ಲಿದೆ ನೋಡಿ!

ಮೊದಲು ನಷ್ಟದಿಂದ ಹೊರಬರಲಿ ಎಂದ ಹೂಡಿಕೆದಾರರು!

ಎಜಿಎಂನಲ್ಲಿ ಕೆಲವು ಷೇರುದಾರರು ಕಂಪನಿಯ ವ್ಯವಹಾರ ಮಾದರಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರೆ, ಇನ್ನು ಕೆಲವರು ಷೇರುಗಳ ಬೆಲೆ ಕುಸಿತದಿಂದ ಉಂಟಾದ ನಷ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಶೇರುದಾರರಾದ ಮಂಜೀತ್ ಸಿಂಗ್, Paytm ಉತ್ತಮ ವ್ಯಾಪಾರ ಮಾದರಿಯನ್ನು ಹೊಂದಿದೆ, ಅದು ಎಲ್ಲೆಡೆಯೂ ಇದೆ, ಆದರೆ ಷೇರುಗಳ ಬೆಲೆಗಳು IPO ಮಟ್ಟಕ್ಕಿಂತ ಹೆಚ್ಚು ಕುಸಿದಿದೆ ಎಂದು ಹೇಳಿದರು. ಈ ಬಗ್ಗೆ ಸಂಸ್ಥೆ ಚಿಂತನೆ ನಡೆಸಬೇಕು ಎಂದರು. ಕಂಪನಿಯು ನಷ್ಟದಿಂದ ಚೇತರಿಸಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಇನ್ನೊಬ್ಬ ಷೇರುದಾರರು ಕೇಳಿದರು. ಕಂಪನಿಯ ಷೇರಿನ ಮೌಲ್ಯವನ್ನು ರೂ.2150 ಎಂದು ನಿಗದಿಪಡಿಸಿದವರು ಯಾರು ಎಂದು ಕೇಳಿದರು.

ಇದನ್ನೂ ಓದಿ: ನೀವೂ ಸಣ್ಣ ಉದ್ಯಮ ಸ್ಟಾರ್ಟ್ ಮಾಡ್ಬೇಕಾ? ಇಲ್ಲಿದೆ ಉದ್ಯಮಗಳ ಆಯ್ಕೆಯ ಬಗ್ಗೆ ಉಪಯುಕ್ತ ಮಾಹಿತಿ

ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಮಧುರ್ ದೇವರ ಮಾತನಾಡಿ, ಅಲ್ಪ ಮತ್ತು ಮಧ್ಯಮ ಅವಧಿಯಲ್ಲಿ ಯಾವುದೇ ಕಂಪನಿಯನ್ನು ಖರೀದಿಸುವ ಯೋಜನೆ ಇಲ್ಲ. ಕಂಪನಿಗೆ ಖರೀದಿಸುವುದಕ್ಕಿಂತ ದೊಡ್ಡ ಪ್ರಮಾಣದಲ್ಲಿ ನಿರ್ಮಿಸುವುದು ಸುಲಭ ಎಂದು ದೇವರಾ ಹೇಳಿದರು. ಯಾವುದೇ ಕಂಪನಿಯ ಷೇರುಗಳನ್ನು ಖರೀದಿಸುವ ಮುನ್ನ ತಜ್ಞರ ಜೊತೆ ಚರ್ಚಿಸಿ ಖರೀದಿಸಬೇಕು
Published by:Vasudeva M
First published: