• Home
 • »
 • News
 • »
 • business
 • »
 • ಭಾರತದಲ್ಲಿ Paytm ಮೊಬೈಲ್ ಪಾವತಿಗಳ ಪ್ರವರ್ತಕವಾಗಿದೆ - ಗ್ರಾಹಕರಿಗೆ Paytm UPI ಅನ್ನು ಉನ್ನತ ಆಯ್ಕೆಯನ್ನಾಗಿ ಮಾಡಿರುವುದು ಯಾವುದು ಎಂಬುದು ಇಲ್ಲಿದೆ

ಭಾರತದಲ್ಲಿ Paytm ಮೊಬೈಲ್ ಪಾವತಿಗಳ ಪ್ರವರ್ತಕವಾಗಿದೆ - ಗ್ರಾಹಕರಿಗೆ Paytm UPI ಅನ್ನು ಉನ್ನತ ಆಯ್ಕೆಯನ್ನಾಗಿ ಮಾಡಿರುವುದು ಯಾವುದು ಎಂಬುದು ಇಲ್ಲಿದೆ

ಪೇಟಿಯಂ

ಪೇಟಿಯಂ

UPI ನ ತ್ವರಿತ ಮತ್ತು ತಡೆ-ರಹಿತ ಹಣ ವರ್ಗಾವಣೆ ವ್ಯವಸ್ಥೆಯು ಸ್ಮಾರ್ಟ್‌ಫೋನ್ ಬಳಸುವ ಬಹುತೇಕ ಎಲ್ಲರಿಗೂ ಹಣಕಾಸು ವ್ಯವಹಾರವನ್ನು ಇತ್ಯರ್ಥಪಡಿಸುವುದನ್ನು ಹಿಂದೆಂದಿಗಿಂತಲೂ ಸುಲಭಗೊಳಿಸಿದೆ.

 • Share this:

  ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನದಲ್ಲಿ ವಹಿವಾಟುಗಳನ್ನು ನಡೆಸಲು UPI ಆ್ಯಪ್‌ಗಳು ಅತ್ಯಂತ ಜನಪ್ರಿಯ ವಿಧಾನಗಳಲ್ಲಿ ಒಂದಾಗಿವೆ ಎಂಬುದು ರಹಸ್ಯವೇನಲ್ಲ. ಚೆಕ್‌ಗಳು ಮತ್ತು ಬ್ಯಾಂಕ್ ವರ್ಗಾವಣೆಗಳಂತಹ ಸಾಂಪ್ರದಾಯಿಕ ಹಣ ವರ್ಗಾವಣೆಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವ ಹೊಸ ತಂತ್ರಜ್ಞಾನವಾಗಿದ್ದು, UPI ನ ತ್ವರಿತ ಮತ್ತು ತಡೆ-ರಹಿತ ಹಣ ವರ್ಗಾವಣೆ ವ್ಯವಸ್ಥೆಯು ಸ್ಮಾರ್ಟ್‌ಫೋನ್ ಬಳಸುವ ಬಹುತೇಕ ಎಲ್ಲರಿಗೂ ಹಣಕಾಸು ವ್ಯವಹಾರವನ್ನು ಇತ್ಯರ್ಥಪಡಿಸುವುದನ್ನು ಹಿಂದೆಂದಿಗಿಂತಲೂ ಸುಲಭಗೊಳಿಸಿದೆ.


  ಅತ್ಯುತ್ತಮ UPI ಆ್ಯಪ್‌ ಅನ್ನು ಆಯ್ಕೆ ಮಾಡುವುದು


  ಅದರ ಪರಿಣಾಮಕಾರಿತ್ವದ ಬಗ್ಗೆ ಯಾವುದೇ ಸಂದೇಹವಿಲ್ಲದಿದ್ದರೂ, ಮಾತುಕತೆಯಲ್ಲಿ ಸಾಮಾನ್ಯವಾಗಿ ಬರುವ ಪ್ರಶ್ನೆಗಳಲ್ಲಿ ಒಂದೆಂದರೆ UPI ವಹಿವಾಟುಗಳಿಗೆ ಯಾವ ಆ್ಯಪ್‌ ಸೂಕ್ತವಾಗಿರುತ್ತದೆ. ನೆನಪಿನಲ್ಲಿಡಿ, ಯಾವ ಆ್ಯಪ್‌ ಉತ್ತಮ ಡೀಲ್ ಅನ್ನು ನೀಡುತ್ತದೆ ಎಂಬುದನ್ನು ನಿರ್ಧರಿಸುವ ಮೊದಲು ವಿವಿಧ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಈ ಅಂಶಗಳು ಸುಲಭವಾಗಿ ಬಳಸಬಹುದಾದ ಇಂಟರ್‌ಫೇಸ್, ವಂಚನೆಯ ಸಂದರ್ಭದಲ್ಲಿ ಪರಿಹಾರ ಒದಗಿಸುವುದು ಮತ್ತು ವಹಿವಾಟುಗಳನ್ನು ಟ್ರ್ಯಾಕ್ ಮಾಡಲು ಸುಲಭವಾಗಿ ದೊರಕುವ ಖಾತೆಗಳ ಸ್ಟೇಟ್‌ಮೆಂಟ್‌ಗಳು ಇಂತಹವೇ ಮುಂತಾದ ಪ್ರಮುಖ ಅಂಶಗಳನ್ನು ಒಳಗೊಂಡಿವೆ.


  ಎಲ್ಲಾ ಡಿಜಿಟಲ್ ಆ್ಯಪ್‌ಗಳು ಈ ಎಲ್ಲಾ ಸೇವೆಗಳನ್ನು ನೀಡುವುದಿಲ್ಲ ಆದರೆ ಎಲ್ಲವನ್ನೂ ಮಾಡುವ ಒಂದು ಆ್ಯಪ್‌ ಇದೆ ಮತ್ತು UPI ವಹಿವಾಟುಗಳನ್ನು ನಡೆಸುವಾಗ ಇದು ಸ್ಪಷ್ಟವಾದ ನೆಚ್ಚಿನದಾಗಿದೆ - Paytm. ನಿಮ್ಮ ಎಲ್ಲಾ UPI ಅಗತ್ಯಗಳಿಗಾಗಿ Paytm ಬಳಸುವುದನ್ನು ನೀವು ಏಕೆ ಪರಿಗಣಿಸಬೇಕು ಎಂಬುದು ಇಲ್ಲಿದೆ.


  Paytm ಏಕೆ ಅತ್ಯುತ್ತಮ UPI ಆ್ಯಪ್‌ ಆಗಿದೆ


  1 - ಅತ್ಯುತ್ತಮ ಭದ್ರತೆ


  ನಾವು ಯಾರಿಗಾದರೂ ಡಿಜಿಟಲ್ ವಿಧಾನದ ಮೂಲಕ ಹಣ ವರ್ಗಾಯಿಸುವಾಗ ಮನಸ್ಸಿಗೆ ಬರುವ ಮೊದಲ ವಿಷಯವೆಂದರೆ ಭದ್ರತೆಯಾಗಿದೆ. ನಿಮ್ಮ Paytm ಲಾಗಿನ್ ಪಾಸ್‌ವರ್ಡ್ ಮತ್ತು ನಿಮ್ಮ ಬ್ಯಾಂಕಿನ ಸುರಕ್ಷಿತ UPI ಪಿನ್ – ಈ ರೀತಿಯ 2-ಅಂಶದ ದೃಢೀಕರಣದ (2-factor authentication) ಮೂಲಕ ಸುರಕ್ಷಿತವಾಗಿರುವ ಎಲ್ಲಾ UPI ಪಾವತಿಗಳಿಗೆ ಸುರಕ್ಷಿತ UPI ಅಪ್ಲಿಕೇಶನ್ ಅನ್ನು ರಚಿಸುವ ಮೂಲಕ Paytm ಈ ವಿಷಯದಲ್ಲಿ ಮುನ್ನಡೆ ಸಾಧಿಸಿದೆ. ಅಲ್ಲದೆ, ನಿಮ್ಮ OTP ಅಥವಾ ಪಾಸ್‌ವರ್ಡ್ ಅನ್ನು ಯಾವುದೇ ಅಪರಿಚಿತ ವ್ಯಕ್ತಿ ಅಥವಾ ಕರೆ ಮಾಡುವ ಅಪರಿಚಿತರೊಂದಿಗೆ ಎಂದಿಗೂ ಹಂಚಿಕೊಳ್ಳಬೇಡಿ.


  Paytm ಆ್ಯಪ್‌ನಲ್ಲಿ ನಿಮ್ಮ ಬ್ಯಾಂಕ್ UPI ಅನ್ನು ಹೊಂದಿಸಲು ತ್ವರಿತ ಮಾರ್ಗ ಇಲ್ಲಿದೆ:


  Paytm ಆ್ಯಪ್‌ ಅನ್ನು ಡೌನ್‌ಲೋಡ್ ಮಾಡುವ ಮೂಲಕ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು SMS ಮೂಲಕ ಪರಿಶೀಲಿಸುವ ಮೂಲಕ ನೀವು ಪ್ರಾರಂಭಿಸಬಹುದು. ಇದರ ನಂತರ, ನಿಮಗೆ ಪ್ರಸ್ತುತಪಡಿಸಿದ ಪಟ್ಟಿಯಿಂದ ನಿಮ್ಮ ಬ್ಯಾಂಕ್ ಅನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಬ್ಯಾಂಕ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯು ನೀವು ಮೊದಲು ನಮೂದಿಸಿದ ಸಂಖ್ಯೆಯೇ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ UPI ಪಿನ್ ಅನ್ನು ಮೊದಲ ಬಾರಿಗೆ ಹೊಂದಿಸಲು, ನಿಮ್ಮ ಡೆಬಿಟ್ ಕಾರ್ಡ್ ವಿವರಗಳನ್ನು ಸಹ ನೀವು ಸಿದ್ಧವಾಗಿ ಇಟ್ಟುಕೊಳ್ಳಬೇಕಾಗುತ್ತದೆ. ಒಮ್ಮೆ ನಿಮ್ಮ ಪಿನ್ ಹೊಂದಿಸಿದರೆ, ನೀವು Paytm ಆ್ಯಪ್‌ನಲ್ಲಿ UPI ಬಳಸಲು ಪ್ರಾರಂಭಿಸಬಹುದು.


  2 – ಬಳಸಲು ಅತಿ ಸುಲಭ


  Paytm ಆ್ಯಪ್‌ನಲ್ಲಿ UPI ಮೂಲಕ ಹಣವನ್ನು ವರ್ಗಾಯಿಸಲು, ನೀವು ಫಲಾನುಭವಿಯ ಬ್ಯಾಂಕ್ ಖಾತೆಯ ವಿವರಗಳನ್ನು ಸೇರಿಸುವ ಮತ್ತು ಫಲಾನುಭವಿಯನ್ನು ಸೇರಿಸಲು ಬ್ಯಾಂಕ್‌ನ ಅನುಮೋದನೆಗಾಗಿ ನಿರೀಕ್ಷಿಸುವ ಅಗತ್ಯವಿಲ್ಲ. ಖಾತೆಗಳ ನಡುವೆ ತಕ್ಷಣವೇ ಹಣವನ್ನು ವರ್ಗಾಯಿಸಲು, ಸ್ವೀಕರಿಸುವವರ ಮೊಬೈಲ್ ಸಂಖ್ಯೆಯನ್ನು ನೀವು ನಮೂದಿಸಿದರೆ ಸಾಕು. IMPS, NEFT ಇತ್ಯಾದಿ ಹಣ ವರ್ಗಾವಣೆಯಂತಹ ಇತರ ಆನ್‌ಲೈನ್ ವಿಧಾನಗಳಿಗಿಂತ ಇದು ಭಿನ್ನವಾಗಿದ್ದು, Paytm ಆ್ಯಪ್‌ನಲ್ಲಿನ UPI ವೈಶಿಷ್ಟ್ಯವು ಪಾವತಿಸುವವರ ವಿವಿಧ ವಿವರಗಳನ್ನು ನಮೂದಿಸುವಲ್ಲಿ ಸಾಕಷ್ಟು ಸಮಯ ಮತ್ತು ಶಕ್ತಿಯನ್ನು ಉಳಿಸುತ್ತದೆ, ಇದರಿಂದಾಗಿ UPI ಹಣ ವರ್ಗಾವಣೆಯು ಸರಳ, ತ್ವರಿತ ಮತ್ತು ತಡೆ-ರಹಿತ ಪ್ರಕ್ರಿಯೆಯಾಗಿದೆ.


  ಇದಲ್ಲದೆ, ಮಾಸಿಕ ಬಿಲ್‌ಗಳನ್ನು ಸ್ವಯಂಚಾಲಿತವಾಗಿ ಪಾವತಿಸಲು ನೀವು UPI ಸ್ವಯಂ ಪಾವತಿ ಸೌಲಭ್ಯವನ್ನು ಸಹ ಬಳಸಬಹುದು, ಇದರಿಂದಾಗಿ ನೀವು ಪ್ರತಿ ತಿಂಗಳು ಟ್ರ್ಯಾಕ್ ಮಾಡಬೇಕಾದ ಇನ್ನೊಂದು ಐಟಂ ಅನ್ನು ಕಡಿಮೆ ಮಾಡಬಹುದು. ಇದು ಅನುಕೂಲವಲ್ಲದಿದ್ದರೆ, ಇನ್ಯಾವುದು ಅನುಕೂಲಕರ ಎಂಬುದು ನಮಗೆ ತಿಳಿದಿಲ್ಲ!


  3 - ಅತ್ಯುತ್ತಮ ಗ್ರಾಹಕ ಬೆಂಬಲ


  ಕೆಲವು ಇತರ ಆ್ಯಪ್‌ಗಳಿಗಿಂತ ಭಿನ್ನವಾಗಿ, ಪ್ರತಿ Paytm UPI ವಹಿವಾಟಿನ ಜೊತೆಗೆ, ನೀವು ಅದರ 24*7 ಗ್ರಾಹಕ ಬೆಂಬಲ ಸೌಲಭ್ಯದೊಂದಿಗೆ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಬಳಸಬಹುದಾದ ರೆಫರೆನ್ಸ್ ಐಡಿಯನ್ನು ಪಡೆಯುತ್ತೀರಿ. ಪರ್ಯಾಯವಾಗಿ, Paytm ನ ಗ್ರಾಹಕ ಬೆಂಬಲದೊಂದಿಗೆ ನಿಮ್ಮ ಪ್ರಶ್ನೆಗಳನ್ನು ಪರಿಹರಿಸಲು ನೀವು 0120-4456-456 ಗೆ ಕರೆಯನ್ನು ಸಹ ಮಾಡಬಹುದು. ಯಾವುದೇ ಮೋಸದ ವಹಿವಾಟಿಗೆ ಅಥವಾ ತಪ್ಪಾಗಿ ವಹಿವಾಟುಗಳನ್ನು ಮಾಡಿದ ಸಂದರ್ಭದಲ್ಲಿ ಇದು ದೊಡ್ಡ ಪರಿಹಾರವಾಗಿದೆ.


  ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರ ಸಂಪರ್ಕ ಸಂಖ್ಯೆಯನ್ನು ಮಾತ್ರ ಬಳಸಿಕೊಂಡು, ನೀವು ಅವರ ಬ್ಯಾಂಕ್ ಖಾತೆಗಳಿಗೆ ತಕ್ಷಣವೇ ನೇರ ವರ್ಗಾವಣೆಯನ್ನು ಮಾಡಬಹುದು. ನಿಮ್ಮ ಮೊಬೈಲ್ ಅನ್ನು ನೀವು ರೀಚಾರ್ಜ್ ಮಾಡಬಹುದು ಮತ್ತು Paytm UPI ಸೇವೆಯ ಮೂಲಕ ಸಬ್‌ಸ್ಕ್ರಿಪ್ಶನ್‌ಗಳನ್ನು ಖರೀದಿಸಬಹುದು. Paytm UPI ಉದ್ಯಮದಲ್ಲೇ-ಅತ್ಯುತ್ತಮವಾದ ಯಶಸ್ಸಿನ ಪ್ರಮಾಣವನ್ನು ಹೊಂದಿದ್ದು, UPI ವಹಿವಾಟುಗಳಿಗೆ ಇನ್ನಷ್ಟು ಆಕರ್ಷಕವಾದ ಆಯ್ಕೆಯನ್ನಾಗಿಸಿದೆ.


  ಹೆಚ್ಚುವರಿಯಾಗಿ, ನಿಮ್ಮ KYC ಅನ್ನು ಮಾಡದೆಯೇ ಸಹ ನೀವು Paytm ನಲ್ಲಿ UPI ವಹಿವಾಟುಗಳನ್ನು ಮಾಡಬಹುದು. Paytm UPI ವಹಿವಾಟುಗಳು ಯಾವುದೇ ರೀತಿಯ ಶುಲ್ಕಗಳು ಮತ್ತು ಹೆಚ್ಚುವರಿ ವೆಚ್ಚಗಳಿಂದ ಸಂಪೂರ್ಣವಾಗಿ ಉಚಿತವಾಗಿದೆ ಎಂಬುದನ್ನು ನೆನಪಿಡಿ.


  4 - ಹೆಚ್ಚಿನ ಮೌಲ್ಯ


  QR ಮತ್ತು ಮೊಬೈಲ್ ಪಾವತಿಗಳಿಗೆ Paytm ಪ್ರವರ್ತಕವಾಗಿದೆ ಮತ್ತು ಶಾಪ್‌ಗಳು/ವ್ಯಾಪಾರಿಗಳ ಸಂಪರ್ಕ ಸಂಖ್ಯೆಗಳನ್ನು ನಮೂದಿಸುವ ಮೂಲಕ ಅಥವಾ ಅವರ QR ಕೋಡ್‌ಗಳನ್ನು ಸ್ಕ್ಯಾನ್ ಮಾಡುವ ಮೂಲಕ ಅವರಿಗೆ ಪಾವತಿಗಳನ್ನು ಮಾಡಲು ನೀವು Paytm ಆ್ಯಪ್‌ ಅನ್ನು ಬಳಸಬಹುದು. Paytm ನೊಂದಿಗೆ Paytm QR ಕೋಡ್‌ಗಳಷ್ಟೇ ಮಾತ್ರವಲ್ಲದೆ ನೀವು ಎಲ್ಲಾ UPI ಸೇವಾ ಪೂರೈಕೆದಾರರ QR ಕೋಡ್‌ಗಳನ್ನು ಸ್ಕ್ಯಾನ್ ಮಾಡಬಹುದು ಮತ್ತು ಆ್ಯಪ್‌ ಅನ್ನು ಬಳಸಲು ಇದು ಇನ್ನಷ್ಟು ಆಕರ್ಷಕ ಕೊಡುಗೆ ಎನಿಸಿದೆ. ಪ್ರತಿ UPI ಪಾವತಿಯಲ್ಲಿ ಕ್ಯಾಶ್‌ಬ್ಯಾಕ್ ಮತ್ತು ವಿವಿಧ ಡಿಸ್ಕೌಂಟ್ ವೋಚರ್‌ಗಳನ್ನು ಗಳಿಸಲು ಆ್ಯಪ್‌ ನಿಮಗೆ ಅನುಮತಿಸುತ್ತದೆ, ಇದು ಇನ್ನಷ್ಟು ಲಾಭದಾಯಕ ಅನುಕೂಲವಾಗಿದೆ.


  ನಿಮಗೆ ಒಂದು ದಿನದಲ್ಲಿ ಖರ್ಚು ಮಾಡಿದ ಒಟ್ಟು ಮೊತ್ತದ INR 1 ಲಕ್ಷದ ಗರಿಷ್ಠ ಮಿತಿಯೊಂದಿಗೆ ವಹಿವಾಟುಗಳನ್ನು ಮಾಡಲು Paytm ಅನುಮತಿಸುತ್ತದೆ ಆದ್ದರಿಂದ ನೀವು ಅಗತ್ಯವಿರುವಷ್ಟು ದೊಡ್ಡ ಅಥವಾ ಸಣ್ಣ ವಹಿವಾಟುಗಳನ್ನು ನೋಡಿಕೊಳ್ಳಬಹುದು. ಗೃಹ ಬಳಕೆಯ ಬಿಲ್‌ಗಳು, ಕ್ರೆಡಿಟ್ ಕಾರ್ಡ್ ಬಿಲ್‌ಗಳು, ಲೋನ್ EMI ಗಳು ಇತ್ಯಾದಿಗಳನ್ನು ಪಾವತಿಸಲು ನೀವು ಈ ಸೌಲಭ್ಯವನ್ನು ಬಳಸಬಹುದು. ನಿಮ್ಮ ಖಾತೆಯಲ್ಲಿ ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ತಪ್ಪಿಸಲು ನಿಮ್ಮ UPI ಪಿನ್ ಅನ್ನು ನೀವು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.


  ಉನ್ನತ ಮಟ್ಟದ ಭದ್ರತೆಯು ಸಂಪೂರ್ಣ ಪ್ರಯೋಜನಗಳು ಮತ್ತು ಉಪಯುಕ್ತ ವೈಶಿಷ್ಟ್ಯಗಳೊಂದಿಗೆ ಸೇರಿಕೊಂಡು UPI ವಹಿವಾಟುಗಳ ವಿಷಯಕ್ಕೆ ಬಂದಾಗ Paytm ಆ್ಯಪ್‌ ಅನ್ನು ಅತ್ಯುತ್ತಮ ಆಯ್ಕೆಯನ್ನಾಗಿ ಮಾಡುತ್ತದೆ. ಸ್ವೀಕರಿಸುವವರ ಸಂಪರ್ಕ ಸಂಖ್ಯೆಯನ್ನು ನಮೂದಿಸಿ ಮತ್ತು Paytm ಅಪ್ಲಿಕೇಶನ್‌ನಲ್ಲಿ UPI ವೈಶಿಷ್ಟ್ಯವನ್ನು ಬಳಸಿಕೊಂಡು ಬಿಲ್‌ಗಳು, ಬಾಡಿಗೆ ಪಾವತಿ, ಶಾಪಿಂಗ್ ಮತ್ತು ಹಣ ವರ್ಗಾವಣೆ ಸೇವೆಗಳನ್ನು ಪಾವತಿಸುವ ಸಂಪೂರ್ಣ ಹೊಸ ವಿಧಾನಕ್ಕೆ ಪ್ರವೇಶವನ್ನು ಪಡೆಯಿರಿ. #PaytmKaro ಜೊತೆಗೆ ನಿಮ್ಮ UPI ಅನುಭವವನ್ನು ಅಪ್‌ಗ್ರೇಡ್ ಮಾಡುವ ಸಮಯವಿದು.


  Brand Connect.

  Published by:Rahul TS
  First published: