ಕೇಂದ್ರ ಸರ್ಕಾರ (Central Government) ಜನಸಾಮಾನ್ಯರಿಗಾಗಿ ಹಲವಾರು ಯೋಜನೆಗಳನ್ನು ತಂದಿದೆ. ಇದರಿಂದ ಸಾಕಷ್ಟು ಮಂದಿಗೆ ಸಹಾಯವಾಗಿದೆ. ರೈತರಿಗೆ (Farmers) , ಮಹಿಳೆಯರಿಗಾಗಿ (Womans) ಹೆಚ್ಚು ಹೆಚ್ಚು ಹೊಸ ಯೋಜನೆಗಳನ್ನು ಕೇಂದ್ರಸ ಸರ್ಕಾರ ತರುತ್ತಿದೆ. ಸಾಕಷ್ಟು ಸರ್ಕಾರದ ಯೋಜನೆಗಳು ಈಗಾಗಲೇ ಜನಪ್ರಿಯವಾಗಿವೆ. ಇವುಗಳಲ್ಲಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (Pradhan Mantri Jeevan Jyoti Bhima) ಮತ್ತು ಪ್ರಧಾನ ಮಂತ್ರಿ ಸುರಕ್ಷಾವಿಮೆ ಯೋಜನೆ ಕೂಡ ಒಂದು. ಈ ಯೋಜನೆಗಳನ್ನು ಜನ ಸುರಕ್ಷಾ ಯೋಜನೆ ಎಂದೂ ಕರೆಯಬಹುದು. ಈ ಯೋಜನೆಗಳು ಜಾರಿಗೆ ಬಂದು 8 ವರ್ಷಗಳಾಗಿವೆ. ಹೀಗಾಗಿ ಸರ್ಕಾರ ಅವರಿಗೆ ಸಾಕಷ್ಟು ಪ್ರಚಾರ ನೀಡುತ್ತಿದೆ. ಈಗ ಈ ಯೋಜನೆಗಳಿಗೆ ಸೇರಿದರೆ ಯಾವೆಲ್ಲಾ ಪ್ರಯೋಜನಗಳಿವೆ ಅಂತ ನೋಡೋಣ ಬನ್ನಿ.
ಇವು ಜನ ಸುರಕ್ಷಾ ಯೋಜನೆಗಳು!
ಮೋದಿ ಸರ್ಕಾರವು ಜನರಿಗಾಗಿ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಎಂಬ ಎರಡು ಮೈಕ್ರೋ ಇನ್ಶೂರೆನ್ಸ್ ಯೋಜನೆಗಳನ್ನು ತಂದಿದೆ. ಇವುಗಳ ಮೂಲಕ ಬಡವರಿಗೆ ಪರಿಹಾರ ಸಿಗಲಿದೆ ಎನ್ನಬಹುದು.
ಆದರೆ, ಕಳೆದ ವರ್ಷ ಜೂನ್ 1ರಿಂದ ಕೇಂದ್ರ ಸರ್ಕಾರ ಜೀವನ್ ಜ್ಯೋತಿ ಬಿಮಾ ಯೋಜನೆಯ ಪ್ರೀಮಿಯಂ ಮೊತ್ತವನ್ನು ರೂ. 330 ರಿಂದ ರೂ. 436ಕ್ಕೆ ಏರಿಕೆಯಾಗಿದೆ. ಸುರಕ್ಷಾ ಬಿಮಾ ಯೋಜನೆಯ ಪ್ರೀಮಿಯಂ ಮೊತ್ತ ರೂ. 12 ರಿಂದ ರೂ. 20ಕ್ಕೆ ಏರಿಕೆಯಾಗಿದೆ.
4 ಲಕ್ಷದವರೆಗೆ ಲಾಭ!
456 ರೂಪಾಯಿ ಕಟ್ಟುವ ಜನರಿಗೆ ಒಟ್ಟಾಗಿ 4 ಲಕ್ಷದವರೆಗೆ ಲಾಭ ಪಡೆಯುತ್ತಾರೆ. ಜೀವನ್ ಜ್ಯೋತಿ ಬಿಮಾ ಯೋಜನೆಗೆ 18 ರಿಂದ 50 ವರ್ಷ ವಯಸ್ಸಿನವರು ಸೇರಿಕೊಳ್ಳಬಹುದು. ಯೋಜನೆಗೆ ಸೇರಿದವರು ಮೃತಪಟ್ಟರೆ ರೂ. 2 ಲಕ್ಷ ವಿಮೆ ಹಣ ಕೂಡ ಸಿಗುತ್ತೆ. ಅಲ್ಲದೆ ಸುರಕ್ಷಾ ಬಿಮಾ ಯೋಜನೆಯಲ್ಲಿ ಆದರೆ ಆಕಸ್ಮಿಕ ಮರಣ ಹೊಂದಿದಲ್ಲಿ ರೂ. 2 ಲಕ್ಷ ವಿಮೆ ಲಭ್ಯವಿದೆ.
ಇದನ್ನೂ ಓದಿ: ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ಡಬಲ್ ಪ್ರಾಫಿಟ್, ಮೋಸದ ಮಾತು ಇಲ್ವೇ ಇಲ್ಲ!
ಈ ಯೋಜನೆಯಲ್ಲಿದ್ದಾರೆ 16.19 ಕೋಟಿ ಜನ!
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯ ಪರಿಚಯವನ್ನು ಸೂಕ್ಷ್ಮವಾಗಿ ಗಮನಿಸಿದರೆ, 16.19 ಕೋಟಿ ಜನರು ಈ ಯೋಜನೆಗೆ ಸೇರಿದ್ದಾರೆ. ಹತ್ತಿರದ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ಗೆ ಹೋಗುವ ಮೂಲಕ ಒಬ್ಬರು ಸುಲಭವಾಗಿ ಈ ಯೋಜನೆಗೆ ಸೇರಬಹುದು. ಆಟೋ ಡೆಬಿಟ್ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಬಹುದು. ಇದರಿಂದ ಪ್ರೀಮಿಯಂ ಮೊತ್ತವನ್ನು ಪ್ರತಿ ವರ್ಷ ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ. ಅಲ್ಲದೆ, 34.18 ಕೋಟಿ ಜನರು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗೆ ಸೇರಿದ್ದಾರೆ.
ಈ ಯೋಜನೆಗಳಲ್ಲೂ ಸಿಗುತ್ತೆ ಹೆಚ್ಚಿನ ಬಡ್ಡಿ!
ಏಪ್ರಿಲ್-ಜೂನ್ 2023 ತ್ರೈಮಾಸಿಕಕ್ಕೆ ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು 70 bps ವರೆಗೆ ಹೆಚ್ಚಿಸಿದೆ. ಇದು ಹಿರಿಯ ನಾಗರಿಕರ ಉಳಿತಾಯ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಸುಕನ್ಯಾ ಸಮೃದ್ಧಿ ಯೋಜನೆ, ಕಿಸಾನ್ ವಿಕಾಸ ಪತ್ರದಂತಹ ಯೋಜನೆಗಳಿಗೆ ಪ್ರಯೋಜನವನ್ನು ನೀಡುತ್ತದೆ. ಹಾಗಾದರೆ ಈ ಎಲ್ಲಾ ಯೋಜನೆಗಳ ಬಗ್ಗೆ ತಿಳಿಯೋಣ.
ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS): 60 ವರ್ಷ ಮೇಲ್ಪಟ್ಟ ಯಾರಾದರೂ ಹೂಡಿಕೆ ಮಾಡಬಹುದು. ಇದಲ್ಲದೇ 55 ವರ್ಷದಿಂದ 60 ವರ್ಷದೊಳಗಿನ ನಿವೃತ್ತಿ ಹೊಂದಿದವರೂ ಇದರಲ್ಲಿ ಹೂಡಿಕೆ ಮಾಡಬಹುದು. ಇಲ್ಲಿ ಬಡ್ಡಿ ದರ ಶೇ.8ರಿಂದ ಶೇ.8.2ಕ್ಕೆ ಏರಿಕೆಯಾಗಿದೆ.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC): ಈ ಯೋಜನೆಯು 5 ವರ್ಷಗಳ ಮೆಚುರಿಟಿ ಅವಧಿಯನ್ನು ಹೊಂದಿದೆ. ಈ ಯೋಜನೆಯಲ್ಲಿ ಕನಿಷ್ಠ ರೂ 1000 ಹೂಡಿಕೆ ಮಾಡಬಹುದು. ಒಂದೇ ಹೋಲ್ಡರ್ ಪ್ರಕಾರದ ಪ್ರಮಾಣಪತ್ರವನ್ನು ಮಗುವಿನ ಹೆಸರಿನಲ್ಲಿ ಖರೀದಿಸಬಹುದು. ಈ ಯೋಜನೆಯ ಬಡ್ಡಿದರವನ್ನು 7 ರಿಂದ 7.7% ಕ್ಕೆ ಹೆಚ್ಚಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ