• Home
  • »
  • News
  • »
  • business
  • »
  • Salary: ಈ ಕಾಯ್ದೆ ಜಾರಿಗೆ ಬಂದ್ರೆ ಕೆಲಸ ತೊರೆದ ಎರಡೇ ದಿನಗಳಲ್ಲಿ ಸಂಪೂರ್ಣ ವೇತನದ ಪಾವತಿ ಗ್ಯಾರೆಂಟಿ!

Salary: ಈ ಕಾಯ್ದೆ ಜಾರಿಗೆ ಬಂದ್ರೆ ಕೆಲಸ ತೊರೆದ ಎರಡೇ ದಿನಗಳಲ್ಲಿ ಸಂಪೂರ್ಣ ವೇತನದ ಪಾವತಿ ಗ್ಯಾರೆಂಟಿ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸಾಮಾನ್ಯವಾಗಿ ಉದ್ಯೋಗಿಯೊಬ್ಬ ಕೆಲಸ ಬಿಟ್ಟ ತಕ್ಷಣ ಕೆಲವು ಕಂಪನಿಯವರು ಸಂಬಳ ಕೊಡದೇ ಸತಾಯಿಸುತ್ತಾರೆ. ಇದಕ್ಕೆಲ್ಲ ಬ್ರೇಕ್ ಹಾಕಲೆಂದೇ ಸರ್ಕಾರವು ಈಗ ಹೊಸ ವೇತನ ಕಾಯಿದೆ ಒಂದನ್ನು ರೂಪಿಸಿದೆ...

  • Share this:

ಅಯ್ಯೋ ಕೆಲಸ (Work) ಬಿಟ್ಟು ಇಷ್ಟು ದಿನ ಆಯ್ತು. ಇನ್ನೂ ನನ್ನ ಕೊನೆ ತಿಂಗಳ ಸಂಬಳ (Salary) ಬಂದಿಲ್ಲ ಎಂದು ಪ್ರತಿಯೊಬ್ಬ ಉದ್ಯೋಗಿಯೂ ಒಂದಲ್ಲ ಒಂದು ಈ ತೊಂದರೆ ಎದುರಿಸಿಯೇ ಇರ್ತಾರೆ. ಕೆಲಸ ಬಿಟ್ಟ ತಕ್ಷಣ ಕೆಲವು ಕಂಪನಿಯವರು ಸಂಬಳ ಕೊಡದೇ ಸತಾಯಿಸುತ್ತಾರೆ. ಇದಕ್ಕೆಲ್ಲ ಬ್ರೇಕ್ ಹಾಕಲೆಂದೆ ಸರ್ಕಾರವು ಹೊಸ ವೇತನ ಕಾಯಿದೆ (New Wages Act) ಒಂದನ್ನು ರೂಪಿಸಿದೆ. ಈ ಹೊಸ ವೇತನ ಕಾಯಿದೆ ಪ್ರಕಾರ ಎಲ್ಲ ಕಂಪನಿಗಳು (Company) ಉದ್ಯೋಗಿಗಳು (Employees) ಕೆಲಸ ಬಿಟ್ಟು ಎರಡೇ ದಿನಗಳಲ್ಲಿ ಅವರ ಸಂಪೂರ್ಣ ಸಂಬಳವನ್ನು ಸರಿಯಾದ ಸಮಯಕ್ಕೆ ನೀಡಬೇಕು.


ಹೊಸ ವೇತನ ಕಾಯ್ದೆಯಲ್ಲಿ ಏನಿದೆ
ಯಾವುದೇ ಉದ್ಯೋಗಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಲಿ ಅಥವಾ ಆ ಕಂಪನಿಯವರೇ ಅವರನ್ನು ಕೆಲಸದಿಂದ ತೆಗೆದು ಹಾಕಲಿ. ಇವೆರಡರಲ್ಲಿ ಯಾವುದೇ ಆದರೂ ಕೂಡ ಅವರ ಕೆಲಸದ ಕೊನೆ ಅವಧಿ ಆದ ಎರಡು ದಿನಗಳ ಒಳಗೆ ಅವರ ವೇತನವನ್ನು ಸಂಪೂರ್ಣವಾಗಿ ಭರಿಸಬೇಕು.


ಆದರೆ ಪ್ರಸ್ತುತವಾಗಿ ಎಲ್ಲ ಕಂಪನಿಗಳು ಉದ್ಯೋಗಿಗಳು ರಾಜೀನಾಮೆ ಅಥವಾ ಕೆಲಸ ಬಿಟ್ಟಾಗ ಅವರ ವೇತನವನ್ನು ನೀಡಲು ಕೆಲವು ಕಂಪನಿಗಳು 45 ದಿನಗಳು ತೆಗೆದೂಕೊಂಡರೆ ಇನ್ನು ಕೆಲವು ಕಂಪನಿಗಳು 60 ದಿನಗಳು ಮತ್ತೊಂದು ರೀತಿಯ ಕಂಪನಿಗಳು 90 ದಿನಗಳನ್ನು ತೆಗೆದುಕೊಂಡ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ.


ಕಾರ್ಮಿಕ ಸಂಹಿತೆಗಳು
ಭಾರತದ ಹೊಸ ಸುಧಾರಣೆಯ ಪ್ರಕಾರ, ಈಗಾಗಲೇ ಈ ಕಾಯಿದೆಯು ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟಿದೆ, ಇದರ ಜೊತೆ ನಾಲ್ಕು ಕಾರ್ಮಿಕ ಸಂಹಿತೆಗಳು ಇಂತಿವೆ:


  • ವೇತನ,

  • ಸಾಮಾಜಿಕ ಭದ್ರತೆ,

  • ಕಾರ್ಮಿಕ ಸಂಬಂಧಗಳು,

  • ಔದ್ಯೋಗಿಕ ಸುರಕ್ಷತೆ,

  • ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳು ಇವಾಗಿವೆ.


ಕಾರ್ಮಿಕ ಕಾನೂನಿನ ಅಡಿಯಲ್ಲಿ ಹೊಸ ವೇತನ ಸಂಹಿತೆ
"ಒಬ್ಬ ಉದ್ಯೋಗಿಯು ಎಲ್ಲಿ  ಸೇವೆಯಿಂದ ತೆಗೆದು ಹಾಕಲ್ಪಡುತ್ತಾನೆಯೋ ಅಥವಾ ಅವನನ್ನು ವಜಾಗೊಳಿಸಲಾಗುತ್ತದೆಯೋ; ಅಥವಾ  ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದರೆ ಅಥವಾ ಕಂಪನಿ ಮುಚ್ಚುವಿಕೆಯಿಂದಾಗಿ ನಿರುದ್ಯೋಗಿಯಾಗಿದ್ದರೆ, ಅವನು ತೆಗೆದು ಕೊಳ್ಳುತ್ತಿದ್ದ ಪ್ರತಿ ತಿಂಗಳ ವೇತನ ಅವನು ಕೆಲಸ ಬಿಟ್ಟು ಎರಡು ದಿನಗಳಲ್ಲಿ ಸಂಪೂರ್ಣವಾಗಿ ಪಾವತಿಸಬೇಕಾಗುತ್ತದೆ" ಎಂದು ಉಲ್ಲೇಖಿಸಿದೆ.


ಇದನ್ನೂ ಓದಿ: Manipur Landslide: ಮಣಿಪುರ ಭೂಕುಸಿತಕ್ಕೆ 7 ಯೋಧರು ಸೇರಿದಂತೆ 14 ಮಂದಿ ಬಲಿ, 25 ಸೈನಿಕರು ನಾಪತ್ತೆ


ಈ ಹಿಂದಿನ 29 ಕೇಂದ್ರ ಕಾರ್ಮಿಕ ಕಾನೂನುಗಳನ್ನು ಪರಿಶೀಲನೆ ನಡೆಸಿ ಮತ್ತು ಅವುಗಳನ್ನು ಸಂಯೋಜಿಸುವ ಮೂಲಕ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ರಚಿಸಲಾಗಿದೆ. ಜುಲೈ 1 ರೊಳಗೆ ಸರ್ಕಾರವೂ ಈ ಹೊಸ ಕಾನೂನುಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿರುವಾಗ, ಇನ್ನು ಅನೇಕ ರಾಜ್ಯಗಳು ಈ ನಿಯಮಾವಳಿಗಳನ್ನು ಅನುಮೋದಿಸಬೇಕಾಗಿದೆ, ಸಂವಿಧಾನದ ಪ್ರಕಾರ, ಕಾರ್ಮಿಕರು ಏಕಕಾಲೀನ ಪಟ್ಟಿಯಲ್ಲಿರುವುದರಿಂದ ಆ ಕಾಯಿದೆಗಳನ್ನು ಪರಿಣಾಮಕಾರಿಯಾಗಿ ಅನುಮೊದಿಸುವ ಅಗತ್ಯ ಖಂಡಿತ ಇದೆ.


ವೇತನ ಸಂಹಿತೆಯ ಅಡಿಯಲ್ಲಿ ಕರಡು ಮಾರ್ಗಸೂಚಿ  ಬಿಡುಗಡೆ
ಸದ್ಯಕ್ಕೆ, ಕೆಲವು ರಾಜ್ಯಗಳು ಎಲ್ಲಾ ನಾಲ್ಕು ಕಾರ್ಮಿಕ ಕಾನೂನು- ಕಾಯಿದೆಗಳಿಗೆ ಅಗತ್ಯವಿರುವ ಕಾನೂನುಗಳನ್ನು ಇನ್ನೂ ಆರಂಭಿಸಬೇಕಿದೆ. ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವ ರಾಮೇಶ್ವರ್ ತೇಲಿ ಲೋಕಸಭೆಯಲ್ಲಿ ಕಳಿಸಿರುವ ಈ ಕಾಯಿದೆ ಕುರಿತು ನೀಡಿರುವ ಲಿಖಿತ ಪ್ರತಿಕ್ರಿಯೆಯ ಪ್ರಕಾರ, ಕೇವಲ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವೇತನ ಸಂಹಿತೆಯ ಅಡಿಯಲ್ಲಿ ಕರಡು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿವೆ ಎಂದು ಉತ್ತರಿಸಿದ್ದಾರೆ.


ವೇತನ ಸಂಹಿತೆಯನ್ನು ಸೂಕ್ತವಾಗಿ ಕಾರ್ಯಗೊಳಿಸಬೇಕಾದರೆ, ಎಲ್ಲ ಕಂಪನಿಗಳು ತಮ್ಮ ವೇತನದಾರರ ಪ್ರಕ್ರಿಯೆಗಳನ್ನು ಮರುಹೊಂದಿಸಬೇಕಾಗುತ್ತದೆ ಮತ್ತು ಕೆಲಸ ಬಿಟ್ಟ ಎರಡು ದಿನಗಳಲ್ಲಿ ವೇತನದ ಸಂಪೂರ್ಣ ವೇತನ ಪಡೆಯುವುದಕ್ಕೆ ಸಂಬಂಧಿಸಿದಂತೆ ಕಾರ್ಯವಿಧಾನಗಳ ಸುತ್ತ ಕೆಲಸ ಮಾಡಬೇಕಾಗುತ್ತದೆ.


ಇದನ್ನೂ ಓದಿ:  Manipur Landslide: ಭೂಕುಸಿತದಲ್ಲಿ 14 ಮಂದಿ ಸಾವು! ಉತ್ತರದಲ್ಲಿ ಮಳೆಯ ಅವಾಂತರ


ಆದರೆ ರಾಜ್ಯ ಸರ್ಕಾರಗಳಿಗೆ ಸರಿಯೆಂದು ಕಂಡು ಬರುವ ಆಧಾರದ ಮೇಲೆ ಪೂರ್ಣ ಮತ್ತು ಅಂತಿಮವಾದ ಟೈಮ್‌ಲೈನ್ ಅನ್ನು ಹೊಂದಿಸಿಕೊಳ್ಳಲು ಪ್ರತಿ ರಾಜ್ಯಗಳಿಗೆ ಪ್ರತ್ಯೇಕ ಕೋಡ್ ಗಳನ್ನು ನೀಡಲು ಅನುಮತಿಸುತ್ತದೆ. ಇನ್ನೂ, ಕೆಲಸ ಬಿಟ್ಟರೆ ಯಾವುದೇ ಚಿಂತೆ ಇಲ್ಲದೇ ಎರಡು ದಿನಗಳಲ್ಲಿಯೇ ನಿಮ್ಮ ವೇತನ ನಿಮ್ಮ ಕೈ ಸೇರಲಿದೆ.

Published by:Ashwini Prabhu
First published: