ನೀವು ಇನ್ನೂ ಆಧಾರ್ ಕಾರ್ಡ್ (Aadhaar Card) -ಪ್ಯಾನ್ ಕಾರ್ಡ್ (Pan Card) ಲಿಂಕ್ ಮಾಡಿಲ್ಲವಾ? ಹಾಗಿದ್ದರೆ ದಂಡ ಕಟ್ಟುವುದಕ್ಕೆ ರೆಡಿಯಾಗಿ. ಜೂನ್ 30ರೊಳಗೆ ಈ ಕೆಲಸವನ್ನು ಮಾಡಿ ಮುಗಿಸಿ. ಏಕೆಂದ್ರೆ ಜುಲೈ 1ರ ಬಳಿಕ 500ರೂ. ಅಲ್ಲ 1000ರೂ. ದಂಡ (Penalty) ಪಾವತಿಸಬೇಕಾಗುತ್ತದೆ. ಈ ಕ್ರಮವು ವಿವಿಧ ಅಕ್ರಮ ಹಣಕಾಸು ವಹಿವಾಟುಗಳಿಗೆ ಬಳಸುವ ನಕಲಿ ಪ್ಯಾನ್ ಕಾರ್ಡ್ಗಳನ್ನು ತೊಡೆದುಹಾಕುವ ಗುರಿಯನ್ನು ಹೊಂದಿದೆ. ಗಡುವಿನ ಮೊದಲು ಲಿಂಕ್ (Link) ಮಾಡುವ ಪ್ರಕ್ರಿಯೆಯನ್ನು ಮಾಡುವುದು ಉತ್ತಮ. ಅನಗತ್ಯ ಶುಲ್ಕಗಳಿಂದ ನಿಮ್ಮನ್ನು ಉಳಿಸಿಕೊಳ್ಳುವುದು ಉತ್ತಮ. ಅಷ್ಟಕ್ಕೂ ಈ ದಂಡ ನೂರು ರೂಪಾಯಿ ಇನ್ನೂರು ರೂಪಾಯಿ ಅಲ್ಲ ಸಾವಿರ ರೂಪಾಯಿ ಆಗಿದೆ. ಕೇಂದ್ರ ಸರ್ಕಾರ ಪ್ಯಾನ್ -ಆಧಾರ್ ಜೋಡಣೆ ಅಂತಿಮ ಗಡುವನ್ನು (Deadline) 2023ರ ಮಾರ್ಚ್ 31ರ ತನಕ ವಿಸ್ತರಿಸಿದೆ.
ಲಿಂಕ್ ಮಾಡದಿದ್ದರೆ ದಂಡ ಕಟ್ಟವುದಕ್ಕೆ ರೆಡಿಯಾಗಿ!
ಈ ವರ್ಷದ ಏಪ್ರಿಲ್ 1ರಿಂದ ತೆರಿಗೆದಾರರು ಆಧಾರ್-ಪ್ಯಾನ್ ಜೋಡಣೆಗೆ ದಂಡ ಪಾವತಿಸಬೇಕಿದೆ. ಈ ಬಗ್ಗೆ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಹೊರಡಿಸಿರುವ ಸುತ್ತೋಲೆಯಲ್ಲಿ 2022 ರ ಏಪ್ರಿಲ್ 1ರಿಂದ ಜೂನ್ 30ರ ತನಕ ತೆರಿಗೆದಾರರು ಆಧಾರ್ ಜೊತೆ ಪ್ಯಾನ್ ಲಿಂಕ್ ಮಾಡಿದ್ರೆ 500ರೂ. ವಿಳಂಬ ಶುಲ್ಕ ಪಾವತಿಸಬೇಕು. ಇನ್ನು ಜುಲೈ 1ರ ಬಳಿಕ ಆಧಾರ್-ಪ್ಯಾನ್ ಜೋಡಣೆಗೆ 1000 ರೂ. ದಂಡ ಪಾವತಿಸಬೇಕು ಎಂದು ತಿಳಿಸಿದೆ.
2021ರಲ್ಲಿ ಸರ್ಕಾರದಿಂದ ಜಾರಿಯಾದ ಈ ನಿಯಮ!
ಸರ್ಕಾರವು 2021 ರ ಹಣಕಾಸು ಮಸೂದೆಗೆ ತಿದ್ದುಪಡಿಯನ್ನು ಪರಿಚಯಿಸಿದೆ, ಅದರ ಅಡಿಯಲ್ಲಿ ಒಬ್ಬ ವ್ಯಕ್ತಿಯು ಆಧಾರ್ ಕಾರ್ಡ್ನೊಂದಿಗೆ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದಲ್ಲಿ ರೂ 1,000 ವರೆಗೆ ವಿಳಂಬ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಪ್ಯಾನ್ ನಿಷ್ಕ್ರಿಯಗೊಂಡರೆ ವ್ಯಕ್ತಿಯು ಎದುರಿಸುವ ಇತರ ಪರಿಣಾಮಗಳ ಜೊತೆಗೆ ರೂ 1,000 ದಂಡವನ್ನು ನೀಡಲಾಗುತ್ತದೆ.
ಇದನ್ನೂ ಓದಿ: ಆಟಿಕೆ ಉತ್ಪಾದನೆ ಬಲವರ್ಧನೆಗೆ ರಿಲಯನ್ಸ್ ಮಹತ್ವದ ಕ್ರಮ
2023ರ ಮಾರ್ಚ್ 31ರೊಳಗೆ ಮಾಡಿದಿದ್ರೆ 10 ಸಾವಿರ ದಂಡ
2023ರ ಮಾರ್ಚ್ 31ರೊಳಗೆ ಪ್ಯಾನ್ ಅನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡದಿದ್ರೆ ಏಪ್ರಿಲ್ ಒಂದರಿಂದ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತೆ. ಒಂದು ಬಾರಿ ನಿಮ್ಮ ಪ್ಯಾನ್ ನಿಷ್ಕ್ರಿಯಗೊಂಡರೆ ತೆರೆಗೆ ರಿರ್ಟನ್ ಸಲ್ಲಿಕೆ ಮಾಡುವುದುಕ್ಕೆ ಸಾಧ್ಯನೇ ಇಲ್ಲ. ಬ್ಯಾಂಕ್ ಅಕೌಂಟ್ ಓಪನ್ ಮಾಡುವುದಕ್ಕೆ, ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡುವುದಕ್ಕೂ ಸಾಧ್ಯವಿಲ್ಲ.ಇನ್ನು 50 ಸಾವಿರ ರೂ.ಗಿಂತ ಅಧಿಕ ಮೊತ್ತದ ಬ್ಯಾಂಕಿಂಗ್ ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಅತ್ಯಗತ್ಯ.
ಇ-ಫೈಲಿಂಗ್ ವೆಬ್ಸೈಟ್ ಮೂಲಕ ಆಧಾರ್ ಕಾರ್ಡ್ ಅನ್ನು ಹೀಗೆ ಲಿಂಕ್ ಮಾಡಿ
- ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ಗೆ ಹೋಗಿ incometaxindiaefiling.gov.in
- ಪೋರ್ಟಲ್ನ ಎಡಭಾಗದಲ್ಲಿರುವ ಲಿಂಕ್ ಆಧಾರ್' ವಿಭಾಗ ಆಯ್ಕೆ ಮಾಡಿಕೊಳ್ಳಿ
- ಪ್ಯಾನ್ ಸಂಖ್ಯೆ, ಆಧಾರ್ ಸಂಖ್ಯೆ, ಹೆಸರು ಮತ್ತು CAPTCHA ಅನ್ನು ನಮೂದಿಸಿ
-ಲಿಂಕ್ ಆಧಾರ್ ಬಟನ್ ಕ್ಲಿಕ್ ಮಾಡಿ
- ಪರಿಶೀಲನೆಯ ನಂತರ, ನಿಮ್ಮ ಪ್ಯಾನ್ ಆಧಾರ್ ಲಿಂಕ್ ಆಗುತ್ತದೆ.
ಇದನ್ನೂ ಓದಿ: ಈ ಖಾತೆ ಹೊಂದಿದವರಿಗೆ ಇಂಡಿಯಾ ಪೋಸ್ಟ್ ಶಾಕ್; ಬಡ್ಡಿದರ ಇಳಿಕೆ
ಎಸ್ಎಮ್ಎಸ್ ಮೂಲಕ ಹೀಗೆ ಲಿಂಕ್ ಮಾಡಿ!
ನಿಮ್ಮ ಪ್ಯಾನ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡಲು, UIDPAN (12-ಅಂಕಿಯ ಆಧಾರ್ ಸಂಖ್ಯೆ) (10-ಅಂಕಿಯ PAN ಸಂಖ್ಯೆ) ಅನ್ನು ಟೈಪ್ ಮಾಡಿ ಮತ್ತು ಅದನ್ನು 567678 ಅಥವಾ 56161 ಗೆ ಕಳುಹಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ