• Home
 • »
 • News
 • »
 • business
 • »
 • PAN Card News: ಆದಾಯ ತೆರಿಗೆದಾರರೇ ಅಲರ್ಟ್: ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯವಾಗಬಹುದು!

PAN Card News: ಆದಾಯ ತೆರಿಗೆದಾರರೇ ಅಲರ್ಟ್: ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯವಾಗಬಹುದು!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ನೀವು ನಿಮ್ಮ ಪಾನ್​ ಅನ್ನು ನಿಮ್ಮ ಆಧಾರ್  ಕಾರ್ಡ್​​ನೊಂದಿಗೆ ಲಿಂಕ್ ಮಾಡಿರುವಿರಾ? ಇಲ್ಲವಾದರೆ ಬೇಗನೆ ಆ ಕೆಲಸ ಮಾಡಿಬಿಡಿ. ಏಕೆಂದರೆ ನಿಮ್ಮ ಪಾನ್ ಕಾರ್ಡ್ ಶೀಘ್ರದಲ್ಲೇ ನಿಷ್ಕ್ರೀಯಗೊಳ್ಳುವ ಎಲ್ಲ ಸಾಧ್ಯತೆಯೂ ಇದೆ.

 • Share this:

  ಇಂದು ತಂತ್ರಜ್ಞಾನ (Technology) ಸಾಕಷ್ಟು ಮುಂದುವರೆದಿದ್ದು ಭಾರತದಂತಹ ದೇಶದಲ್ಲಿ ಬ್ಯಾಂಕ್ (Bank) ವ್ಯವಹಾರಗಳಾದಿಯಾಗಿ ತಂತ್ರಜ್ಞಾನದಿಂದಲೇ ಸಾಕಷ್ಟು ನಿರ್ವಹಿಸಲ್ಪಡುತ್ತವೆ. ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರುವ ದೃಷ್ಟಿಯಿಂದ ಹಾಗೂ ಆಡಳಿತ ವಲಯಕ್ಕೆ ಹಣಕಾಸಿನ ವ್ಯವಹಾರಗಳ ಬಗ್ಗೆ ಸಮರ್ಪಕವಾಗಿ ವಿಷಯಗಳು ತಿಳಿಯುವಂತೆ ಮಾಡುವ ದೃಷ್ಟಿಯಿಂದ ಈಗಾಗಲೇ ಹಲವು ಡಿಜಟಲೀಕರಣದಡಿಯಲ್ಲಿ ಹಲವು ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅದರಲ್ಲಿ ಪಾನ್  ಕಾರ್ಡನ್ನು ಆಧಾರ್ ಕಾರ್ಡಿನೊಂದಿಗೆ ಲಿಂಕ್ (Pan Card Aadhaar Link) ಮಾಡುವುದು ಸಹ ಪ್ರಮುಖವಾಗಿದೆ.


  ನೀವು ನಿಮ್ಮ  ಪಾನ್ ಅನ್ನು ನಿಮ್ಮ ಆಧಾರ್  ಕಾರ್ಡ್​​ನೊಂದಿಗೆ ಲಿಂಕ್ ಮಾಡಿರುವಿರಾ? ಇಲ್ಲವೆಂದಾದಲ್ಲಿ ಬೇಗನೆ ಆ ಕೆಲಸ ಮಾಡಿಬಿಡಿ. ಇಲ್ಲವೆಂದರೆ ನಿಮ್ಮ ಪಾನ್ ಕಾರ್ಡ್ ಶೀಘ್ರದಲ್ಲೇ ನಿಷ್ಕ್ರೀಯಗೊಳ್ಳುವ ಎಲ್ಲ ಸಾಧ್ಯತೆಯೂ ಇದೆ. ಈಗಾಗಲೇ ನಿಮಗೆ ಗೊತ್ತಿರುವಂತೆ ಪಾನ್ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡಲು ಅಂತಿಮ ಗಡುವು ಮಾರ್ಚ್ 31, 2023 ಆಗಿದೆ. ಇದನ್ನೇ ಇತ್ತೀಚೆಗೆ ಆದಾಯ ತೆರಿಗೆ ಇಲಾಖೆಯೂ ಸಹ ತನ್ನ ಟ್ವಿಟರ್ ಹ್ಯಾಂಡಲ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲೆಂದು ಟ್ವಿಟ್ ಮಾಡಿದೆ.
  ಅದು ತನ್ನ ಟ್ವಿಟ್ ನಲ್ಲಿ, "ಇನ್ಕಮ್ ಟ್ಯಾಕ್ಸ್ ಆಕ್ಟ್, 1961 ಅಡಿಯಲ್ಲಿ ವಿನಾಯಿತಿ ಅಡಿಯಲ್ಲಿ ಬರದ ಎಲ್ಲ ತೆರಿಗೆದಾರರು ಪ್ಯಾನ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲು ಅಂತಿಮ ಗಡುವು 31.03.2023 ಆಗಿರುತ್ತದೆ. ಅಲ್ಲಿಯವರೆಗೆ ಯಾರು ತಮ್ಮ ಪ್ಯಾನ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡಲಾಗದವರ ಪ್ಯಾನ್ ಸಂಖ್ಯೆಯು ನಿಷ್ಕ್ರೀಯಗೊಳ್ಳಲಿದೆ. ಹಾಗಾಗಿ ವಿಳಂಬ ಮಾಡದೆ ತ್ವರಿತವಾಗಿ ನಿಮ್ಮ ಪ್ಯಾನ್ ಅನ್ನು ಇಂದೇ ಆಧಾರ್ ನೊಂದಿಗೆ ಲಿಂಕ್ ಮಾಡಿ" ಎಂದು ಬರೆದುಕೊಂಡಿದೆ.


  ಇದನ್ನೂ ಓದಿ: New Rules From December 2022: ಡಿಸೆಂಬರ್ 1ರಿಂದ ಹಲವು ನಿಯಮಗಳಲ್ಲಿ ಬದಲಾವಣೆ


  ಈ ಮಧ್ಯೆ ಪಾನ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ನೀವು ಹೀಗೆ ಮಾಡಿದ್ದಲ್ಲಿ ಮಾತ್ರ ನಿಮ್ಮ ಐಟಿ ರಿಟರ್ನ್ಸ್ ಅನ್ನು ಪೂರ್ಣಗೊಳಿಸಬಹುದಾಗಿದೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಅಲ್ಲದೆ, ಇದೇ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆಯು ತೆರಿಗೆ ವಿನಾಯಿತಿ ಇರುವ ಎಲ್ಲ ಪ್ಯಾನ್ ಕಾರ್ಡ್ ದಾರರಿಗೆ ತನ್ನ ನೋಟಿಫಿಕೇಷನ್ ಸಂಖ್ಯೆ 37/2017 ದಿ. 11 ಮೇ 2017 ರ ಮೂಲಕ ಇಲ್ಲಿಯವರೆಗೆ ಪ್ಯಾನ್ ಅನ್ನು ಲಿಂಕ್ ಮಾಡದವರು ಈ ಕೂಡಲೇ ಅದನ್ನು ತಮ್ಮ ಆಧಾರ್ ನೊಂದಿಗೆ ಲಿಂಕ್ ಮಾಡಲು ಸೂಚಿಸಿದೆ.


   ಪಾನ್ ಅನ್ನು ಹೇಗೆ ಲಿಂಕ್ ಮಾಡಬಹುದು


  ಅದಾಗ್ಯೂ ಕೆಲವರಿಗೆ ಈ ಪ್ಯಾನ್ ಕಾರ್ಡನ್ನು ತಮ್ಮ ಆಧಾರ್ ನೊಂದಿಗೆ ಹೇಗೆ ಲಿಂಕ್ ಮಾಡಬೇಕು ಎಂಬುದರ ಬಗ್ಗೆ ಗೊಂದಲಗಳಿರಬಹುದು. ನಿಮಗೂ ಸಹ ಆ ಬಗ್ಗೆ ಗೊಂದಲವಿದೆಯೇ? ಚಿಂತಿಸ ಬೇಡಿ. ಇದು ಸರಳ ವಿಧಾನವಾಗಿದ್ದು ಇದನ್ನು ಆನ್ಲೈನ್ ಮೂಲಕ ಹೇಗೆ ಸುಲಭವಾಗಿ ಮಾಡಿಕೊಳ್ಳಬಹುದೆಂದು ಇಲ್ಲಿ ತಿಳಿಯೋಣ.
  * ಮೊದಲಿಗೆ ಅಧಿಕೃತ ಜಾಲತಾಣವಾದ ಇನ್ಕಮ್ ಟ್ಯಾಕ್ಸ್ ಇ ಫೈಲಿಂಗ್ ತಾಣಕ್ಕೆ ಭೇಟಿ ನೀಡಿ (https://www.incometax.gov.in/iec/foportal/.)
  * ಅಲ್ಲಿ ಇರುವ ಕ್ವಿಕ್ ಲಿಂಕ್ ಸೆಕ್ಷನ್ ಅಡಿಯಲ್ಲಿ "ಲಿಂಕ್ ಆಧಾರ್" ಆಯ್ಕೆ ಮಾಡಿ
  * ನಿಮ್ಮ ಅಧಿಕೃತ ಪ್ಯಾನ್ ಹಾಗೂ ಆಧಾರ್ ಸಂಖ್ಯೆ ನೀಡಿ ವ್ಯಾಲಿಡೇಟ್ ಅನ್ನು ಒತ್ತಿ
  * ಲಿಂಕ್ ಆಗಿದ್ದಲ್ಲಿ ಈಗಾಗಲೇ ಲಿಂಕ್ ಆಗಿದೆ ಎಂಬ ಸಂದೇಶ ಬರುತ್ತದೆ.
  * ಲಿಂಕ್ ಆಗಿಲ್ಲದಿದ್ದಲ್ಲಿ ನೀವು ಈ ಮುಂಚೆಯೇ ಲಿಂಕ್ ಮಾಡುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಭರಿಸಿದ ಹಣದ ಪ್ವಾತಿಯ ವಿವರವು ನಿಮ್ಮ ಮುಂದೆ ಪಾಪ್ ಅಪ್ ಆಗಿ ಪಾವತಿ ದೃಢೀಕರಿಸಲಾಗಿದೆ ಎಂಬ ಸಂದೇಶ ಬರುತ್ತದೆ. ಅಲ್ಲಿ ನೀವು ಅವಶ್ಯಕವಾದ ಮಾಹಿತಿ ಭರ್ತಿ ಮಾಡಿದ ನಂತರ ನಿಮ್ಮ ಮೊಬೈಲ್ ಸಂಖ್ಯೆ ಓಟಿಪಿ ಒಂದು ಬರುತ್ತದೆ. ಅದನ್ನು ನಮೂದಿಸುವ ಮೂಲಕ ನೀವು ಲಿಂಕ್ ಪ್ರಕ್ರಿಯೆಯನ್ನು ಮುಗಿಸಬಹುದು.


  ಗಮನಿಸಿ: ಈಗ ನೀವು ಪಾನ್ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡಲು ಸಾವಿರ ರೂ. ಗಳ ಶುಲ್ಕ ಪಾವತಿಸಬೇಕಾಗುತ್ತದೆ. ಸದ್ಯ ಪ್ಯಾನ್ ಅನ್ನು ಆಧಾರ್ ಜೊತೆಗೆ ಲಿಂಕ್ ಮಾಡಲು ಕೊನೆಯ ದಿನಾಂಕ 31 ಮಾರ್ಚ್ 2023 ಎಂದು ನಿಗದಿಪಡಿಸಲಾಗಿದ್ದರೂ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ (CBDT) ಅಲ್ಲಿಯವರೆಗೆ ವಿವಿಧ ರೀತಿಯ ದಂಡಗಳನ್ನು ನಿಗದಿಪಡಿಸಿದ್ದು ಅದನ್ನು ಪಾವತಿಸಿದ ನಂತರವೇ ಲಿಂಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೆಕಾಗಿದೆ.

  Published by:Kavya V
  First published: