Aadhar -PAN Link: ಕೆಲವು ವರ್ಷಗಳಿಂದ ನಾವು ಈ ಆಧಾರ್ ಕಾರ್ಡ್ ನಲ್ಲಿರುವ (Aadhar Card) ಸಂಖ್ಯೆಯನ್ನು ಮತ್ತು ಪ್ಯಾನ್ ಕಾರ್ಡ್ ನಲ್ಲಿರುವ (PAN Card) ಸಂಖ್ಯೆಯನ್ನು ಎರಡು ಲಿಂಕ್ ಮಾಡಿ ಅಂತ ಅನೇಕ ಬಾರಿ ಕೇಳಿರುತ್ತೇವೆ. ಎಷ್ಟೋ ಜನರು ಇವೆರಡನ್ನು ಈಗಾಗಲೇ ಲಿಂಕ್ ಮಾಡಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈಗಾಗಲೇ ಅನೇಕ ಬಾರಿ ಈ ಎರಡು ಕಾರ್ಡ್ ಗಳನ್ನು ಲಿಂಕ್ ಮಾಡುವಂತೆ ಅವಧಿಯನ್ನು ವಿಸ್ತರಿಸುತ್ತಲೇ ಬಂದಿದ್ದಾರೆ ಅಂತ ಹೇಳಬಹುದು. ಆದರೆ ಈಗ ನಿಮ್ಮ ಪ್ಯಾನ್ ಕಾರ್ಡ್ ಅನ್ನು ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಮಾಡದಿದ್ದರೆ ಮಾರ್ಚ್ 31, 2023 ರಿಂದ ನಿಷ್ಕ್ರಿಯಗೊಳ್ಳುತ್ತದೆ ಎಂದು ಹೇಳಲಾಗಿದೆ.
ಆದಾಯ ತೆರಿಗೆ ಕಾಯ್ದೆ, 1961 ರ ಪ್ರಕಾರ, ವಿನಾಯಿತಿ ವರ್ಗಕ್ಕೆ ಸೇರದ ಎಲ್ಲಾ ಪ್ಯಾನ್ ಹೊಂದಿರುವವರು ತಮ್ಮ ಪ್ಯಾನ್ ಅನ್ನು ಮಾರ್ಚ್ 31, 2023 ರ ಮೊದಲು ತಮ್ಮ ಆಧಾರ್ ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ.
ಹಾಗೆ ಲಿಂಕ್ ಮಾಡದೆ ಹೋದರೆ ಏಪ್ರಿಲ್ 1, 2023 ರಿಂದ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಕೂಡಲೇ ನಿಷ್ಕ್ರಿಯಗೊಳ್ಳುತ್ತದೆ" ಎಂದು ಆದಾಯ ತೆರಿಗೆ ಇಲಾಖೆ ಇತ್ತೀಚಿನ ಟ್ವೀಟ್ ನಲ್ಲಿ ತಿಳಿಸಿದೆ. ಆದಾಗ್ಯೂ, ಕೇಂದ್ರವು ಸೂಚಿಸಿದಂತೆ ಈ ನಿಯಮಕ್ಕೆ ಇನ್ನೂ ಕೆಲವು ವಿನಾಯಿತಿಗಳಿವೆ ನೋಡಿ.
ಪ್ಯಾನ್-ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆಯಿಂದ ಇವರಿಗೆ ವಿನಾಯಿತಿ ಇದೆಯಂತೆ
ಮೇ 2017 ರಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ ಈ 4 ವರ್ಗಗಳಿಗೆ ಪ್ಯಾನ್-ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆಯಿಂದ ವಿನಾಯಿತಿ ನೀಡಲಾಗಿದೆ.
1.ಅಸ್ಸಾಂ, ಮೇಘಾಲಯ ಮತ್ತು ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳು
2.ಆದಾಯ ತೆರಿಗೆ ಕಾಯ್ದೆ, 1961 ರ ಪ್ರಕಾರ ಅನಿವಾಸಿಗಳು
3.ಹಿಂದಿನ ವರ್ಷಕ್ಕೆ ಎಂಭತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಾದವರು
4.ಭಾರತದ ಪ್ರಜೆಯಲ್ಲದವರು
ಪ್ಯಾನ್-ಆಧಾರ್ ಎರಡನ್ನೂ ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ
*ಇ-ಕಾಮರ್ಸ್ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ ತೆರೆಯಿರಿ.
*"ಲಿಂಕ್ ಆಧಾರ್" ವಿಭಾಗಕ್ಕೆ ಹೋಗಿ.
*ನಿಮ್ಮ ಪ್ಯಾನ್ ಸಂಖ್ಯೆಯನ್ನು ಅಲ್ಲಿ ನಮೂದಿಸಿ
*ನಿಮ್ಮ ಆಧಾರ್ ಸಂಖ್ಯೆಯನ್ನು ಸಹ ಅಲ್ಲಿ ನಮೂದಿಸಿ
*ನಿಮ್ಮ ಆಧಾರ್ ನಲ್ಲಿರುವಂತೆ ಹೆಸರನ್ನು ಸರಿಯಾಗಿ ನಮೂದಿಸಿ
*‘ಐ ಹ್ಯಾವ್ ಒನ್ಲಿ ಇಯರ್ ಆಫ್ ಬರ್ತ್ ಆನ್ ಆಧಾರ್ ಕಾರ್ಡ್’ ಅನ್ನು ಕ್ಲಿಕ್ ಮಾಡಿ
*‘ಐ ಅಗ್ರಿ ಟು ವೆಲಿಡೇಟ್ ಮೈ ಆಧಾರ್ ಡಿಟೈಲ್ಸ್ ವಿತ್ ಯುಐಡಿಎಐ’ ಅನ್ನು ಕ್ಲಿಕ್ ಮಾಡಿ
*ಅಲ್ಲಿರುವ ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ
*ಲಿಂಕ್ ಆಧಾರ್’ ಆಯ್ಕೆಯನ್ನು ನಮೂದಿಸಿ
ಎಸ್ಎಂಎಸ್ ಮೂಲಕ ಪ್ಯಾನ್-ಆಧಾರ್ ಲಿಂಕ್ ಮಾಡುವುದು ಹೇಗೆ?
- ಯುಐಡಿಪಿಎಎನ್ 12 ಅಂಕಿಯ ಆಧಾರ್ ಮತ್ತು > 10 ಅಂಕಿಯ ಪ್ಯಾನ್> ವಿಷಯದೊಂದಿಗೆ ಎಸ್ಎಂಎಸ್ ಸಂದೇಶ ಕಳುಹಿಸಿ.
- ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು 567678 ಅಥವಾ 56161 ಗೆ ಎಸ್ಎಂಎಸ್ ಕಳುಹಿಸಿ.
ಆಫ್ಲೈನ್ ನಲ್ಲಿ ಪ್ಯಾನ್-ಆಧಾರ್ ಲಿಂಕ್ ಮಾಡುವುದು ಹೀಗೆ
*ಮೊದಲಿಗೆ ನೀವು ಎನ್‌ಎಸ್‌ಡಿಎಲ್ ಕಚೇರಿಗೆ ಭೇಟಿ ನೀಡಿ.
*ನಂತರ ಸಂಬಂಧಪಟ್ಟ ಅರ್ಜಿ ನಮೂನೆಯನ್ನು ಅಧಿಕಾರಿಗಳಿಂದ ಕೇಳಿ ಪಡೆಯಿರಿ.
*ಅದನ್ನು ಸಲ್ಲಿಸುವಾಗ ಅಗತ್ಯ ಮಾಹಿತಿಯನ್ನು ನಮೂದಿಸಿ ಮತ್ತು ಪೂರಕ ದಾಖಲೆಗಳನ್ನು ಲಗತ್ತಿಸಿ.
*ಪರಿಶೀಲನೆಯ ನಂತರ ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ ಗಳನ್ನು ಲಿಂಕ್ ಮಾಡಲಾಗುತ್ತದೆ.
ಇದನ್ನೂ ಓದಿ: PAN Card: ನಿಮ್ಮ ಪ್ಯಾನ್ ಕಾರ್ಡ್ ಅಮಾನ್ಯವಾಗಿರಬಹುದು, ಹೀಗೆ ಚೆಕ್ ಮಾಡಿ!
ಪ್ಯಾನ್-ಆಧಾರ್ ಲಿಂಕ್ ಆಗಿರುವುದನ್ನು ನೀವು ಹೇಗೆ ಪರಿಶೀಲಿಸಬಹುದು?
*ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ incometaxindiaefiling.gov.in ಗೆ ಭೇಟಿ ನೀಡಿ.
*ವೆಬ್ಸೈಟ್ ನ ಎಡಭಾಗದಲ್ಲಿರುವ ಲಿಂಕ್ ಆಧಾರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
*ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ರುಜುವಾತುಗಳನ್ನು ನಮೂದಿಸಿ, ಇದರಲ್ಲಿ ಬಳಕೆದಾರ ಐಡಿ, ಪಾಸ್ವರ್ಡ್, ಹುಟ್ಟಿದ ದಿನಾಂಕ ಮತ್ತು ಕ್ಯಾಪ್ಚಾ ಕೋಡ್ ಸೇರಿವೆ.
*ನಿಮ್ಮ ಎರಡೂ ದಾಖಲೆಗಳು (ಆಧಾರ್ ಮತ್ತು ಪ್ಯಾನ್) ಲಿಂಕ್ ಆಗಿದ್ದರೆ ಪುಟದ ಮೇಲಿನ ಡಿಸ್ ಪ್ಲೇ ಅದನ್ನು ಉಲ್ಲೇಖಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ