PAN ಮತ್ತು Aadhaar Card ಲಿಂಕ್ ಮಾಡಲು ಸಮಸ್ಯೆ ಆಗ್ತಿದೆಯಾ? ಕಾರಣ ತಿಳಿದುಕೊಳ್ಳಿ

PAN ಕಾರ್ಡ್ ಹೊಂದಿರುವವರು ತಮ್ಮ ಶಾಶ್ವತ ಖಾತೆ ಸಂಖ್ಯೆ (Permanent account number) ಆಧಾರ್ ಕಾರ್ಡ್ ಸಂಖ್ಯೆಯೊಂದಿಗೆ 31 ಮಾರ್ಚ್ 2022 ರೊಳಗೆ ಲಿಂಕ್ ಮಾಡಲು ಸೂಚಿಸಲಾಗಿದೆ.

ಆಧಾರ್ ಕಾರ್ಡ್ ಮತ್ತು ಪಾನ್ ನಂಬರ್

ಆಧಾರ್ ಕಾರ್ಡ್ ಮತ್ತು ಪಾನ್ ನಂಬರ್

  • Share this:
ಆಧಾರ್ (Aadhaar Card) ಜೊತೆಗೆ ಪ್ಯಾನ್ ಕಾರ್ಡ್ (PAN Card) ಲಿಂಕ್ ಮಾಡುವ ಕೊನೆಯ ದಿನಾಂಕ ಸಮೀಪಿಸುತ್ತಿದೆ. ಆದ್ರೂ ಕೆಲವರು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಿಮ್ಮಎರಡೂ ದಾಖಲೆಗಳಲ್ಲಿ ಮಾಹಿತಿಯ ವ್ಯತ್ಯಾಸದಿಂದ ಈ ಸಮಸ್ಯೆ ಉಂಟಾಗಿರುತ್ತದೆ. PAN ಕಾರ್ಡ್ ಹೊಂದಿರುವವರು ತಮ್ಮ ಶಾಶ್ವತ ಖಾತೆ ಸಂಖ್ಯೆ (Permanent account number) ಆಧಾರ್ ಕಾರ್ಡ್ ಸಂಖ್ಯೆಯೊಂದಿಗೆ 31 ಮಾರ್ಚ್ 2022 ರೊಳಗೆ ಲಿಂಕ್ ಮಾಡಲು ಸೂಚಿಸಲಾಗಿದೆ. ಈ ಗಡುವಿನ ಮೊದಲು ನೀವು ನಿಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ಅನ್ನು ಸಹ ನಿಷ್ಕ್ರಿಯಗೊಳಿಸಬಹುದು. ಇದಲ್ಲದೇ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡಲು ನೀವು ರೂ 1,000 ಪಾವತಿಸಬೇಕಾಗುತ್ತದೆ.

ಏನು ಸಮಸ್ಯೆ?

ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು ಹೆಸರು, ಜನ್ಮ ದಿನಾಂಕ/ವರ್ಷ, OTP ಪಡೆಯಲು ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳು ಪ್ಯಾನ್ ಮತ್ತು ಆಧಾರ್‌ ನಲ್ಲಿ ಹೊಂದಿಕೆಯಾಗದಿದ್ದರೆ, ಬಳಕೆದಾರರು ಎರಡನ್ನೂ ಲಿಂಕ್ ಮಾಡಲು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಲಿಂಕ್ ಮಾಡಲು ಎರಡೂ ದಾಖಲೆಗಳಲ್ಲಿರುವ ಮಾಹಿತಿ ಪೂರ್ಣವಾಗಿ ಹೊಂದುವಂತಿರಬೇಕು.

ಇದನ್ನೂ ಓದಿ:  Income Tax Refund: ಇನ್ನೂ ನೀವು ಐಟಿಆರ್ ಪಡೆದುಕೊಂಡಿಲ್ಲವೇ? ಹಾಗಾದ್ರೆ ಹೀಗೆ ಮಾಡಿ

ದಾಖಲೆ ಮಾಹಿತಿ ಸರಿ ಮಾಡಿಕೊಳ್ಳೋದು ಹೇಗೆ?

ಪ್ಯಾನ್ ಕಾರ್ಡ್ ವಿವರಗಳು ಹೊಂದಿಕೆಯಾಗದಿದ್ದರೆ, ತೆರಿಗೆದಾರರು ಅದನ್ನು ಸರಿಪಡಿಸಲು ಸಂಬಂಧಿಸಿದ ಪ್ರಾಧಿಕಾರಕ್ಕೆ ಹೋಗಬಹುದು. ಪ್ಯಾನ್ ಕಾರ್ಡ್‌ ನಲ್ಲಿ ಹೊಂದಾಣಿಕೆಯಾಗದಿದ್ದಲ್ಲಿ, ತಕ್ಷಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ತೆರಿಗೆದಾರರಿಗೆ ಪರಿಹಾರವನ್ನು ಒದಗಿಸಲಾಗುತ್ತದೆ. ಆಧಾರ್ ಕಾರ್ಡ್ ಅಥವಾ ಆಧಾರ್ ನೋಂದಣಿ ಸಂಖ್ಯೆ (ಆಧಾರ್ ಸೇವಾ ಕೇಂದ್ರ) ಬಳಕೆದಾರರು ಭೇಟಿ ನೀಡುವ ಮೂಲಕ ಅಥವಾ ವೆಬ್‌ಸೈಟ್ ಮೂಲಕ ಮಾಹಿತಿಯನ್ನು ನವೀಕರಿಸಬಹುದು.

Onlineನಲ್ಲಿ ಹೀಗೆ ಮಾಡಿ

>> ಮೊದಲನೆಯದಾಗಿ ಆದಾಯ ತೆರಿಗೆ ವೆಬ್‌ಸೈಟ್‌ಗೆ ಹೋಗಿ.

>> ಆಧಾರ್ ಕಾರ್ಡ್‌ ನಲ್ಲಿ ನೀಡಿರುವಂತೆ ಹೆಸರು, ಪ್ಯಾನ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ.

>> ಆಧಾರ್ ಕಾರ್ಡ್ ನಲ್ಲಿ ಹುಟ್ಟಿದ ವರ್ಷವನ್ನು ಮಾತ್ರ ನೀಡಿದರೆ ಚೌಕವನ್ನು ಗುರುತಿಸಿ.

>> ಈಗ ಕ್ಯಾಪ್ಚಾ ಕೋಡ್ ನಮೂದಿಸಿ.

>> ಈಗ ಲಿಂಕ್ ಆಧಾರ್ ಬಟನ್ ಮೇಲೆ ಕ್ಲಿಕ್ ಮಾಡಿ

>> ನಿಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲಾಗುತ್ತದೆ.

ಆನ್‌ಲೈನ್ ನಲ್ಲಿ ಯಾವ ಮಾಹಿತಿ ನವೀಕರಣ ಮಾಡಬಹುದು|

ನೀವು ಆನ್‌ ಲೈನ್ ‌ನಲ್ಲಿ ಏನನ್ನಾದರೂ ನವೀಕರಿಸಬೇಕಾದರೆ ಹೆಸರು, ಹುಟ್ಟಿದ ದಿನಾಂಕ, ಲಿಂಗ, ವಿಳಾಸದಂತಹ ವೈಯಕ್ತಿಕ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ನವೀಕರಿಸಬಹುದು. OTP ಮೂಲಕ ತೆರೆಯಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ ‌ನಲ್ಲಿ ನೋಂದಾಯಿಸಬೇಕು.

ಇದನ್ನೂ ಓದಿ:  SBI ATM: ಎಟಿಎಂ ಕಾರ್ಡ್ ಇಲ್ಲವೇ? ಹಾಗಾದ್ರೆ ಈ ರೀತಿ ಹಣ ಡ್ರಾ ಮಾಡಿ

ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀವು ನವೀಕರಿಸಬೇಕಾದರೆ ಅಥವಾ ಲಿಂಕ್ ಮಾಡಬೇಕಾದರೆ, ನೀವು ಅದನ್ನು ಆನ್‌ ಲೈನ್‌ನಲ್ಲಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ಇಲ್ಲಿ ನೆನಪಿನಲ್ಲಿಡಿ. ಅದನ್ನು ನವೀಕರಿಸಲು, ನೀವು ಆಧಾರ್ ಸೇವಾ ಕೇಂದ್ರ ಅಥವಾ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕು.

ಪಾನ್-ಆಧಾರ್ ಲಿಂಕ್ ಮಾಡುವುದು ಹೀಗೆ:

* ಮೊದಲು ನೀವು ಇನ್ಕಮ್ ಟ್ಯಾಕ್ಸ್ (Income Tax) ಇ-ಫೈಲಿಂಗ್   ಪೋರ್ಟಲ್ https://incometaxindiaefiling.gov.in ಓಪನ್ ಮಾಡಿ.

* ಇಲ್ಲಿ ನಿಮ್ಮ ಪಾನ್ ಸಂಖ್ಯೆಯನ್ನ ನಿಮ್ಮ ಯೂಸರ್ ಐಡಿ ಆಗಿ ನಮೂದಿಸಬೇಕು. ನಂತರ ಪಾಸ್​ವರ್ಡ್ ಹಾಕಿರಿ, ನಿಮ್ಮ ಜನ್ಮದಿನಾಂಕ ನಮೂದಿಸಿ.

* ಬಳಿಕ ನಿಮ್ಮ ಪಾನ್ ಸಂಖ್ಯೆಯನ್ನ ಆಧಾರ್ ಜೊತೆ ಲಿಂಕ್ ಮಾಡುವಂತೆ ಕೇಳಿ ಪಾಪ್ ಅಪ್ ವಿಂಡೋ ಓಪನ್ ಆಗುತ್ತದೆ.

* ಪಾಪ್ ಅಪ್ ಬರದಿದ್ದರೆ ಇಫೈಲಿಂಗ್ ಪೋರ್ಟಲ್​ನಲ್ಲಿ ಪ್ರೊಫೈಲ್ ಸೆಟಿಂಗ್ಸ್ ಒತ್ತಿದರೆ ಕಾಣಿಸುವ ಮೆನು ಬಾರ್​ನಲ್ಲಿವ Link Aadhaar ಅನ್ನು ಕ್ಲಿಕ್ ಮಾಡಿ.

* ಅದರಲ್ಲಿ ನಿಮ್ಮ ಪಾನ್ ಕಾರ್ಡ್​ನಲ್ಲಿ ನಮೂದಾಗಿರುವ ಜನ್ಮದಿನಾಂಕ, ಲಿಂಗ ಇತ್ಯಾದಿ ವಿವರಗಳು ಮೊದಲೇ ನಮೂದಾಗಿರುತ್ತವೆ.

* ಪಾನ್ ವಿವರಗಳು ಆಧಾರ್​ನಲ್ಲಿರುವ ವಿವರದೊಂದಿಗೆ ಹೊಂದಿಕೆ ಆಗುತ್ತಿದೆಯಾ ಖಚಿತಪಡಿಸಿಕೊಳ್ಳಿ. ತಾಳೆ ಆಗುತ್ತಿಲ್ಲವೆಂದರೆ ಎರಡರಲ್ಲಿ ಒಂದರಲ್ಲಿ ವಿವರವನ್ನು ಸೂಕ್ತವಾಗಿ ಬದಲಾಯಿಸಬೇಕು.

* ಈಗ ಎರಡೂ ಹೊಂದಿಕೆ ಆಗುತ್ತಿದ್ದಲ್ಲಿ Link Now ಬಟನ್ ಕ್ಲಿಕ್ ಮಾಡಿ. ಆಗ ನಿಮ್ಮ ಪಾನ್ ಸಂಖ್ಯೆ ಆಧಾರ್ ಜೊತೆ ಜೋಡಿತವಾಗಿರುತ್ತದೆ.

*  https://www.utiitsl.com ಅಥವಾ https://www.egov-nsdl.co.in ವೆಬ್​ಸೈಟ್​ಗೆ ಹೋದರೂ ಅಲ್ಲಿ ಪಾನ್ ಮತ್ತು ಆಧಾರ್ ಜೋಡಣೆ ಮಾಡಬಹುದು.
Published by:Mahmadrafik K
First published: