Adhar Link: ಫೆಬ್ರವರಿಯಲ್ಲಿ ಬರೋಬ್ಬರಿ 1 ಕೋಟಿ ಮೊಬೈಲ್ ಸಂಖ್ಯೆ ಆಧಾರ್​ಗೆ ಲಿಂಕ್!

ಆಧಾರ್​ ಲಿಂಕ್​

ಆಧಾರ್​ ಲಿಂಕ್​

ಒಂದು ವೇಳೆ ನೀವು ಪ್ಯಾನ್‌ನೊಂದಿಗೆ ಆಧಾರ್ ಅನ್ನು ಲಿಂಕ್ ಮಾಡದಿದ್ದರೆ, ನಿಮ್ಮಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ. ಯುಐಡಿಎಐ ಪ್ರಕಾರ, ಫೆಬ್ರವರಿ ತಿಂಗಳಲ್ಲಿ 26.79 ಕೋಟಿಗೂ ಹೆಚ್ಚು ಎಲೆಕ್ಟ್ರಾನಿಕ್ ಕೆವೈಸಿ ವಹಿವಾಟುಗಳನ್ನು ನಡೆಸಲಾಗಿದ್ದು, ಸಂಚಿತ ಎಣಿಕೆಯು 1,439.04 ಕೋಟಿಯನ್ನು ತಲುಪಿದೆ.

ಮುಂದೆ ಓದಿ ...
  • Share this:
  • published by :

ಒಬ್ಬರು ತಮ್ಮ ಆಧಾರ್ ಸಂಖ್ಯೆಯೊಂದಿಗೆ (Adhar Number) ಪ್ಯಾನ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಅಲ್ಲದೆ, ಐಟಿಆರ್ ಮತ್ತು ಸ್ಕಾಲರ್‌ಶಿಪ್‌ಗಳು, ಪಿಂಚಣಿಗಳು, ಎಲ್‌ಪಿಜಿ ಸಬ್ಸಿಡಿಗಳು ಇತ್ಯಾದಿಗಳಂತಹ ಸರ್ಕಾರದಿಂದ ವಿತ್ತೀಯ ಪ್ರಯೋಜನಗಳನ್ನು ಪಡೆಯಲು ಅರ್ಜಿ ಸಲ್ಲಿಸುವ ಸಮಯದಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ನೀವು ಪ್ಯಾನ್‌ನೊಂದಿಗೆ ಆಧಾರ್ ಅನ್ನು ಲಿಂಕ್ ಮಾಡದಿದ್ದರೆ, ನಿಮ್ಮಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ. ಯುಐಡಿಎಐ ಪ್ರಕಾರ, ಫೆಬ್ರವರಿ ತಿಂಗಳಲ್ಲಿ 26.79 ಕೋಟಿಗೂ ಹೆಚ್ಚು ಎಲೆಕ್ಟ್ರಾನಿಕ್ (electronic) ಕೆವೈಸಿ ವಹಿವಾಟುಗಳನ್ನು ನಡೆಸಲಾಗಿದ್ದು, ಸಂಚಿತ ಎಣಿಕೆಯು 1,439.04 ಕೋಟಿಯನ್ನು ತಲುಪಿದೆ.


ಆಧಾರ್‌ನೊಂದಿಗೆ ಪ್ಯಾನ್ ಸಂಖ್ಯೆಯನ್ನು ಲಿಂಕ್ ಮಾಡುವುದನ್ನು ಆಧಾರ್‌ನಲ್ಲಿನ ಮೊಬೈಲ್ ಸಂಖ್ಯೆಗಳ ಪರಿಶೀಲನೆಯ ಪ್ರಮುಖ ಅಂಶಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇಲ್ಲಿಯವರೆಗೆ 90 ಕೋಟಿ ಆಧಾರ್ ಹೊಂದಿರುವವರು ತಮ್ಮ ವಿಶಿಷ್ಟ ಐಡಿಯೊಂದಿಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಪ್ರಕಾರ ಜನವರಿಯಲ್ಲಿ 56.7 ಲಕ್ಷ ನೋಂದಣಿಯಾಗಿದ್ದು, ಫೆಬ್ರವರಿಯಲ್ಲಿ ಆಧಾರ್‌ನೊಂದಿಗೆ ಮೊಬೈಲ್ ಸಂಖ್ಯೆಗಳನ್ನು ಲಿಂಕ್ ಮಾಡುವಿಕೆಯು 93 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ತಿಳಿಸಿದೆ.


"ಫೆಬ್ರುವರಿ 2023 ರಲ್ಲಿ ಜನರ ವಿನಂತಿಗಳನ್ನು ಅನುಸರಿಸಿ 10.97 ಕೋಟಿ ಮೊಬೈಲ್ ಸಂಖ್ಯೆಗಳನ್ನು ಆಧಾರ್‌ನಲ್ಲಿ ಅಳವಡಿಸಲಾಗಿದೆ, ಹಿಂದಿನ ತಿಂಗಳಿಗೆ ಹೋಲಿಸಿದರೆ, ಫೆಬ್ರವರಿ ತಂಗಳಲ್ಲಿ ಶೇಕಡಾ 93 ಕ್ಕಿಂತ ಹೆಚ್ಚು ಪ್ಯಾನ್‌ ಕಾರ್ಡ್‌ಗಳು ಆಧಾರ್‌ ಕಾರ್ಡ್‌ನೊಂದಿಗೆ ಲಿಂಕ್‌ ಆಗಿವೆ" ಎಂದು ವರದಿಯಾಗಿದೆ.


ಆಧಾರ್‌ನೊಂದಿಗೆ ಪ್ಯಾನ್ ಸಂಖ್ಯೆಯನ್ನು ಲಿಂಕ್ ಮಾಡುವುದನ್ನು ಆಧಾರ್‌ನೊಂದಿಗೆ ಮೊಬೈಲ್ ಸಂಖ್ಯೆಗಳನ್ನು ಸೀಡಿಂಗ್ ಮಾಡುವ ಬೆಳವಣಿಗೆಯ ಒಂದು ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಎಂದು ವರದಿಯಲ್ಲಿ ತಿಳಿಸಿಲಾಗಿದೆ.


ಇದನ್ನೂ ಓದಿ: ಸ್ವಂತ ಬ್ಯುಸಿನೆಸ್​ ಆರಂಭಿಸೋ ಮುನ್ನ, ಆಚಾರ್ಯ ಚಾಣಕ್ಯನ ಈ ಮಾತು ನೆನಪಿನಲ್ಲಿರಲಿ!


ಇಲ್ಲಿಯವರೆಗೆ, ಅಂದಾಜು 90 ಕೋಟಿ ಆಧಾರ್ ಹೊಂದಿರುವವರು ತಮ್ಮ ವಿಶಿಷ್ಟ ಐಡಿ ಗಳೊಂದಿಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿದ್ದಾರೆ.


"ಯುಐಡಿಎಐ ಕಲ್ಯಾಣ ಸೇವೆಗಳನ್ನು ಪಡೆಯಲು ಮತ್ತು ಬಹು ಸ್ವಯಂಸೇವಕ ಸೇವೆಗಳನ್ನು ಪ್ರವೇಶವನ್ನು ಹೊಂದಲು ಹಾಗೂ ಉತ್ತಮ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಸಂವಹನ ನಡೆಸಲು ತಮ್ಮ ಮೊಬೈಲ್ ಸಂಖ್ಯೆಯೊಂದಿಗೆ ತಮ್ಮ ಆಧಾರ್ ಅನ್ನು ಲಿಂಕ್ ಮಾಡಲು ನಿವಾಸಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ" ಎಂದು ವರದಿ ತಿಳಿಸಿದೆ.


ಸುಮಾರು 1700 ಕೇಂದ್ರ ಮತ್ತು ರಾಜ್ಯ ಸಮಾಜ ಕಲ್ಯಾಣ ನೇರ ಲಾಭ ವರ್ಗಾವಣೆ (ಡಿಬಿಟಿ) ಮತ್ತು ಉತ್ತಮ ಆಡಳಿತ ಯೋಜನೆಗಳನ್ನು ಆಧಾರ್ ಬಳಕೆಗೆ ಸೂಚಿಸಲಾಗಿದೆ.


ಜನವರಿಯಲ್ಲಿ ನಡೆಸಲಾದ 199.62 ಕೋಟಿ ವಹಿವಾಟಿಗಿಂತ ಆಧಾರ್ ದೃಢೀಕರಣ ವಹಿವಾಟುಗಳು ಫೆಬ್ರವರಿಯಲ್ಲಿ 226.29 ಕೋಟಿಯಾಗಿದ್ದು 13 ಪ್ರತಿಶತದಷ್ಟು ಹೆಚ್ಚಾಗಿದೆ. ಯುಐಡಿಎಐ ಫೆಬ್ರವರಿ 2023 ರವರೆಗೆ ಒಟ್ಟು 9,255.57 ಕೋಟಿ ಆಧಾರ್ ದೃಢೀಕರಣ ವಹಿವಾಟುಗಳಾಗಿವೆ ಎಂದು ಆಯೋಗ ತಿಳಿಸಿದೆ.


ಇದನ್ನೂ ಓದಿ: ಮಹಿಳೆಯೊಬ್ಬರು ಐಸ್ ಕ್ರೀಂ ಮಾಡೋ ವಿಡಿಯೋ ನೋಡಿ ಬೆರಗಾದ ಆನಂದ್ ಮಹೀಂದ್ರಾ! ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್​


"ಬಹುಪಾಲು ದೃಢೀಕರಣ ವಹಿವಾಟು ಸಂಖ್ಯೆಗಳನ್ನು ಫಿಂಗರ್‌ಪ್ರಿಂಟ್ ಮೂಲಕ ನಡೆಸಲಾಗಿದ್ದರೂ, ಅದನ್ನು (ಡೆಮೊಗ್ರಾಫಿಕ್) ಜನಸಂಖ್ಯಾಶಾಸ್ತ್ರ ಮತ್ತು ಓಟಿಪಿ ಅನುಸರಿಸಲಾಗುತ್ತದೆ" ಎಂದು ಹೇಳಿಕೆ ತಿಳಿಸಿದೆ.


ಯುಐಡಿಎಐ ಪ್ರಕಾರ, ಫೆಬ್ರವರಿ ತಿಂಗಳಲ್ಲಿ 26.79 ಕೋಟಿಗೂ ಹೆಚ್ಚು ಇ-ಕೆವೈಸಿ ವಹಿವಾಟುಗಳನ್ನು ನಡೆಸಲಾಗಿದ್ದು, ಸಂಚಿತ ಎಣಿಕೆ 1,439.04 ಕೋಟಿಗೆ ತಲುಪಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ನಮಗೆ ತಿಳಿದಿದೆ. ದಯವಿಟ್ಟು ನಿಮ್ಮ ಆಧಾರ್ ಅನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡಿ, ಅದನ್ನು ಮರಿಬೇಡಿ.


ಮಾರ್ಚ್ 31ರೊಳಗೆ ಆಧಾರ್ ಮತ್ತು ಪಾನ್ ಲಿಂಕ್ ಮಾಡಿ ಎಂದು ಈ ಹಿಂದೆ ಆದೇಶ ಹೊರಡಿಸಲಾಗಿತ್ತು. ಈಗ ಗಡುವನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಆದ್ದರಿಂದ ಕೊನೆಯ ದಿನಗಳಲ್ಲಿ ಉಂಟಾಗಿದ್ದ ಗೊಂದಲ ಬಗೆಹರಿದಿದೆ. ಕೇಂದ್ರ ಸರ್ಕಾರ ಪಾನ್ ಮತ್ತು ಆಧಾರ್ ಲಿಂಕ್ ಮಾಡಲು ಇರುವ ಗಡುವು ವಿಸ್ತರಣೆ ಮಾಡಿದೆ.

First published: