SSLC ಟಾಪ್ ಸ್ಟೂಡೆಂಟ್‌ಗೂ ಸಾಲಗಾರರ ಕಾಟ! ಬಾಲಕಿ ಬೆನ್ನಿಗೆ ನಿಂತ ಸಚಿವೆ ನಿರ್ಮಲಾ ಸೀತಾರಾಮನ್

ಆಕೆ 'ಅಪ್ಪಾ ನೀನಿಲ್ಲದೆ ನಾನು ಎತ್ತರವಾಗಿ ನಿಲ್ಲುತ್ತೇನೆ' ಎಂಬ ಕವಿತೆಯನ್ನು ಬರೆದಿದ್ದಳು. ಈಕೆ ಬೇರೆಯಾರು ಅಲ್ಲ,  ಹೆಸರು  ವನಿಶಾ ಪಾಠಕ್ (Vanisha) ​. ಭೋಪಾಲ್​ ಎಸ್​ಎಸ್​ಎಲ್​ಸಿ ಟಾಪರ್ (Bhopal Toper)​. ಈಗ ಈಕೆಗೂ ದೊಡ್ಡ ಸಂಕಷ್ಟ ಎದುರಾಗಿದೆ.

ವನಿಶಾ, ನಿರ್ಮಲಾ ಸೀತಾರಾಮನ್

ವನಿಶಾ, ನಿರ್ಮಲಾ ಸೀತಾರಾಮನ್

  • Share this:
ಮುಕ್ಕೋಟಿ ದೇವರು ಒಟ್ಟಾಗಿ ಬಂದರೂ ಸಮನಲ್ಲ ಅಪ್ಪ (Father) ನ ಎದುರು. ಯಾರು ಹೇಗೆ ಬೆಳೆದರು, ಹೇಗೆ ಮೆರೆದರು ಸಮನಲ್ಲ ಅಪ್ಪ ಸುರಿಸಿದ ಬೆವರಿಗಿರುವ ಬೆಲೆ ಯಾವತ್ತಿಗೂ ಹೆಚ್ಚು. ಈಕೆಗೂ ಕೂಡ ತನ್ನ ತಂದೆಯೇ ಪ್ರಪಂಚ ಅಂದುಕೊಂಡಿದ್ದ, ಇನ್ನೂ ಆಗ ತಾನೇ ಹತ್ತನೇ ತರಗತಿ (SSLC) ಓದುತ್ತಿದ್ದ. ಕೊರೋನಾ (Corona) ಎಂಬ ಪಿಡುಗು ಈಕೆನ ತಂದೆ-ತಾಯಿ ಜೀವವನ್ನು ಕಸಿದುಕೊಂಡು ಬಿಟ್ಟಿತ್ತು. ಈಕೆನಿಗೆ ಬರಸಿಡಿಲು ಬಡಿದಂತಾಗಿತ್ತು. ಈಕೆ ತಾನೇ ಏನು ಮಾಡುತ್ತಾನೆ. ನೋವು ತಿನ್ನುವ ವಯಸ್ಸಲ್ಲ ಅದು. ಮಕ್ಕಳೊಂದಿಗೆ ಆಡಿ ಬೆಳೆಯಬೇಕಿದ್ದ ವಯಸ್ಸು. ಆದರೂ ತನ್ನ ತಂದೆ -ತಾಯಿಯನ್ನು ಕಳೆದುಕೊಂಡ ತಿಂಗಳೊಳಗೆ ನೋವಿನಲ್ಲಿಯೇ ಎಸ್​ಎಸ್​ಎಲ್​ಸಿ ಪರೀಕ್ಷೆ (SSLC Exam) ಯಲ್ಲಿ 99.8%  ಅಂಕ ಗಳಿಸಿದ್ದ. ಜೊತೆಗೆ ಆಕೆ 'ಅಪ್ಪಾ ನೀನಿಲ್ಲದೆ ನಾನು ಎತ್ತರವಾಗಿ ನಿಲ್ಲುತ್ತೇನೆ' ಎಂಬ ಕವಿತೆಯನ್ನು ಬರೆದಿದ್ದಳು. ಈಕೆ ಬೇರೆಯಾರು ಅಲ್ಲ,  ಹೆಸರು  ವನಿಶಾ ಪಾಠಕ್ (Vanisha) ​. ಭೋಪಾಲ್​ ಎಸ್​ಎಸ್​ಎಲ್​ಸಿ ಟಾಪರ್ (Bhopal Toper)​. ಈಗ ಈಕೆಗೂ ದೊಡ್ಡ ಸಂಕಷ್ಟ ಎದುರಾಗಿದೆ.

ಅಪ್ಪ ಮಾಡಿದ್ದ ಲೋನ್​ ತಿರಿಸುವಂತೆ ನೋಟಿಸ್​!

ಭೋಪಾಲ್ ಟಾಪರ್ ವನಿಶಾ ಪಾಠಕ್, ಈಗ ಮನೆಯ ಮೇಲೆ ಕಾನೂನು ನೋಟಿಸ್‌ನೊಂದಿಗೆ ಹೋರಾಡುತ್ತಿದ್ದಾರೆ. ಅವರ ತಂದೆ ತೆಗೆದುಕೊಂಡ ಸಾಲದಿಂದ ಈಗ ಇವರು ಕಷ್ಟ ಎದುರಿಸುತ್ತಿದ್ದಾರೆ. ವನಿಶಾ ಪಾಠಕ್​ ತಂದೆ ಜೀತೇಂದ್ರ ಪಾಠಕ್​ ಎಲ್​ಐಸಿ ಏಜೆಂಟ್​ ಆಗಿ ಕೆಲಸ ಮಾಡುತ್ತಿದ್ದರು. ಕಚೇರಿಯಿಂದ ಸಾಲ ಪಡೆದಿದ್ದರು. ವನಿಶಾ ಇನ್ನೂ ಅಪ್ರಾಪ್ತೆಯಾಗಿರುವುದಿಂದ ತಂದೆಯ ಕಮಿಷನ್​ ಹಾಗೂ ಸೇವಿಂಗ್ಸ್​ ಇನ್ನೂ ಬಂದಿಲ್ಲ. ವನಿಶಾಗೆ 17 ವರ್ಷವಾಗಿರುವುದರಿಂದ ಸಾಲವನ್ನು ಮರುಪಾವತಿಸಲು ಸಮಯ ನೀಡುವಂತೆ ಅಧಿಕಾರಿಗಳಿಗೆ ಹಲವಾರು ಬಾರಿ ಪತ್ರ ಕೂಡ ಬರೆದಿದ್ದಳಂತೆ. ಆದರೂ ಈಗ ನೋಟಿಸ್​ ಜಾರಿಯಾಗಿದೆ.

ಅಪ್ಪನ ಸಾಲ ತೀರಿಸುವ ಭಾರ ಹೊತ್ತ ವನಿಶಾ!

ಸ್ಥಳೀಯ ಎಲ್‌ಐಸಿ ಕಚೇರಿಯನ್ನು ಸಂಪರ್ಕಿಸಿದಾಗ, ಆಕೆಯ ಅರ್ಜಿಯನ್ನು ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು, ಆದರೆ ನೋಡಿಕೊಳ್ಳಲು ಚಿಕ್ಕ ಸಹೋದರನನ್ನು ಹೊಂದಿರುವ ವನಿಶಾ ಮಾತ್ರ ಕಷ್ಟ ಪಡುತ್ತಿದ್ದಾರೆ. ಬಾಕಿ ಪಾವತಿಸಲು ಅಥವಾ ‘ಕಾನೂನು ಕ್ರಮ ಎದುರಿಸಲು ಸಿದ್ಧರಾಗಿ’ ಎಂದು ತನ್ನ ತಂದೆಯ ಹೆಸರಿನಲ್ಲಿ ಲೀಗಲ್ ನೋಟಿಸ್‌ಗಳನ್ನು ವನಿಶಾ ಪಡೆದುಕೊಂಡಿದ್ದಾರೆ. 29 ಲಕ್ಷ ರೂಪಾಯಿ ಮರುಪಾವತಿ ಮಾಡುವಂತೆ ಫೆಬ್ರವರಿ 2, 2022 ರಂದು ಅವರು ಕೊನೆಯ ಕಾನೂನು ನೋಟಿಸ್ ಅನ್ನು ಸ್ವೀಕರಿಸಿದರು.

ಇದನ್ನೂ ಓದಿ: ನೋಟಿನ ಮೇಲೆ ಗಾಂಧಿ ಚಿತ್ರ ಬದಲಾಗಲ್ಲ! ಆರ್​ಬಿಐ ಸ್ಪಷ್ಟನೆ

ಮೇ 2021ರಲ್ಲಿ ವನಿಶಾ ತಂದೆ-ತಾಯಿ ನಿಧನ

ಎರಡನೇ ಅಲೆಯ ಸಮಯದಲ್ಲಿ ವನಿಶಾ ಅವರ ಪೋಷಕರು ಮೇ 2021 ರಲ್ಲಿ ನಿಧನರಾದರು. ಆಘಾತ ಮತ್ತು ಸಂಕಟದ ಮೂಲಕ ಹೋರಾಡುತ್ತಾ, ಅವಳು ತನ್ನ ಕಿರಿಯ ಸಹೋದರನನ್ನು ನೋಡಿಕೊಂಡೇ ಹೋರಾಟ ಮಾಡಿಕೊಂಡೇ ಬಂದಳು. ತನ್ನ 10ನೇ ತರಗತಿಯ ಪರೀಕ್ಷೆಯಲ್ಲಿ ಭೋಪಾಲ್​ಗೆ ಟಾಪ್​ ಬಂದಿದ್ದಳು ವನಿಶಾ.

ಎಲ್​​ಐಸಿಗೆ ಪತ್ರ ಬರೆದ ವನಿಶಾ!

ಅವಳು ಈಗ ತನ್ನ ಚಿಕ್ಕಪ್ಪ ಪ್ರೊ ಅಶೋಕ್ ಶರ್ಮಾ ಅವರ ಆರೈಕೆಯಲ್ಲಿದ್ದಾಳೆ. ಎಲ್‌ಐಸಿಗೆ ಬರೆದ ಪತ್ರದಲ್ಲಿ ಅವರು ಹೀಗೆ ಬರೆದಿದ್ದಾರೆ: “ನನ್ನ ತಂದೆ ಹೆಸರಾಂತ ವಿಮಾ ಕ್ಲಬ್‌ನ ಮಿಲಿಯನ್ ಡಾಲರ್ ರೌಂಡ್ ಟೇಬಲ್ (MDRT) ಕ್ಲಬ್‌ನ ಸದಸ್ಯರಾಗಿದ್ದರು. ನನ್ನ ತಂದೆ ಜೀತೇಂದ್ರ ಪಾಠಕ್ ಮತ್ತು ತಾಯಿ ಸೀಮಾ ಪಾಠಕ್ ಇಬ್ಬರೂ ಮೇ 2021 ರಲ್ಲಿ ಕೋವಿಡ್‌ನಿಂದ ನಿಧನರಾದರು. ನಾನು ಮತ್ತು ನನ್ನ 11 ವರ್ಷದ ಸಹೋದರ ವಿವಾನ್ ಅಪ್ರಾಪ್ತರು ಮತ್ತು ಕೋವಿಡ್ ಅನಾಥರು. ನಾವು ಕಡಿಮೆ ವಯಸ್ಸಿನವರಾಗಿರುವುದರಿಂದ, ನನ್ನ ತಂದೆಯ ಎಲ್ಲಾ ಪಾಲಿಸಿಗಳನ್ನು ಮತ್ತು ಅವರ ಮಾಸಿಕ ಕಮಿಷನ್‌ಗಳನ್ನು ನಿಯಮದ ಪ್ರಕಾರ ಹಿಂಪಡೆಯಲು ಸಾಧ್ಯವಿಲ್ಲ. ಎಲ್ಲಾ ಆರ್ಥಿಕ ಮತ್ತು ಆರ್ಥಿಕ ಆದಾಯದ ಮೂಲಗಳನ್ನು ನಿರ್ಬಂಧಿಸಿರುವುದರಿಂದ, ನಮಗೆ ಯಾವುದೇ ಆದಾಯದ ಮೂಲವಿಲ್ಲ. ಹೀಗಾಗಿ, ನನಗೆ 18 ವರ್ಷ ತುಂಬಿದಾಗ ಮಾತ್ರ ಸಾಲಗಳ ಎಲ್ಲಾ ಮರುಪಾವತಿಯನ್ನು ಮಾಡಬಹುದು.


ನಿರ್ಮಲಾ ಸೀತಾರಾಮನ್​ ಗಮನಕ್ಕೆ ಬಂದ ಸುದ್ದಿ!

ಇನ್ನೂ, ಈ ವಿಚಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್​ ಅವರ ಗಮನಕ್ಕೆ ಬಂದಿದೆ. ಈ ಬಗ್ಗೆ ಟ್ವೀಟ್​ ಮಾಡಿರುವ ಅವರು ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಕೊಡಿ ಎಂದು ಬರೆದುಕೊಂಡಿದ್ದಾರೆ.
Published by:Vasudeva M
First published: