• Home
  • »
  • News
  • »
  • business
  • »
  • Tirupati Laddu: ಟೀಚರ್​ ಕೆಲಸಕ್ಕೆ ಗುಡ್​ಬಾಯ್​ ಹೇಳಿ ತಿರುಪತಿ ಲಡ್ಡುಗಳಿಗೆ ಸಾವಯುವ ಪದಾರ್ಥ ಪೂರೈಸುತ್ತಿದ್ದಾರೆ ಈ ಮಹಿಳೆ!

Tirupati Laddu: ಟೀಚರ್​ ಕೆಲಸಕ್ಕೆ ಗುಡ್​ಬಾಯ್​ ಹೇಳಿ ತಿರುಪತಿ ಲಡ್ಡುಗಳಿಗೆ ಸಾವಯುವ ಪದಾರ್ಥ ಪೂರೈಸುತ್ತಿದ್ದಾರೆ ಈ ಮಹಿಳೆ!

ತಿರುಪತಿ ಲಡ್ಡು

ತಿರುಪತಿ ಲಡ್ಡು

ಶೋಭಾ ಈಗ ಆಂಧ್ರಪ್ರದೇಶದ ನೂರಾರು ಸಣ್ಣ ರೈತರಲ್ಲಿ ಒಬ್ಬರಾಗಿದ್ದಾರೆ. ಅವರು 2015 ರಲ್ಲಿ ಸರ್ಕಾರದಿಂದ ನಡೆಸಲ್ಪಡುವ, ಸಮುದಾಯ-ನಿರ್ವಹಣೆಯ ನೈಸರ್ಗಿಕ ಕೃಷಿ ಕಾರ್ಯಕ್ರಮದ ಭಾಗವಾಗಿದ್ದಾರೆ.

  • Share this:

ಇತ್ತೀಚೆಗೆ ಸಾವಯವ ಕೃಷಿ ಕಡೆ ಮರಳುವ ಜನರು ಹೆಚ್ಚಾಗುತ್ತಿದ್ದಾರೆ. ತಮ್ಮ ಉದ್ಯೋಗಕ್ಕೆ (J0b) ಗುಡ್‌ ಬೈ ಹೇಳಿ ಸಾವಯವ ಕೃಷಿಯನ್ನೆ ತಮ್ಮ ಫುಲ್‌ಟೈಮ್‌ ಜಾಬ್‌ ಮಾಡಿಕೊಳ್ಳುವವರು (Organic Farming) ಗಣನೀಯವಾಗಿ ಏರುತ್ತಲಿದ್ದಾರೆ. ಅವರಲ್ಲಿ ಈಗ ನಾವು ಹೇಳ್ತಿರೋದು ಒಬ್ಬ ಸ್ಕೂಲ್‌ ಟೀಚರ್‌ (School Teacher) ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಸಾವಯವ ಕೃಷಿಯಿಂದ ತಿರುಪತಿ ತಿಮ್ಮಪ್ಪನಿಗೆ ಲಡ್ಡು ಮಾಡುವ ಕೈಕಂರ್ಯದಲ್ಲಿ ಪಾಲ್ಗೊಂಡಿರುವ ಯಶೋಗಾಥೆ ಬಗ್ಗೆ ನಾವಿಂದು ಇಲ್ಲಿ ತಿಳಿಯೋಣ.


ಟೀಚರ್‌ ಕೆಲಸಕ್ಕೆ ಗುಡ್‌ಬೈ ಹೇಳಿದ ದಿಟ್ಟ ಮಹಿಳೆ ಈಕೆ
ಕಡಪ ಪ್ರದೇಶದ ಶೋಭಾ ರಾಣಿ ಅವರು ಪತಿಗೆ ತಮ್ಮ ಮೂರು ಎಕರೆ (1.2-ಹೆಕ್ಟೇರ್) ತೋಟವನ್ನು ನೋಡಿಕೊಳ್ಳಲು ಸಹಾಯ ಮಾಡಲು ಪ್ರಾಥಮಿಕ ಶಾಲಾ ಶಿಕ್ಷಕಿ ಕೆಲಸಕ್ಕೆ ರಾಜೀನಾಮೆ ನೀಡಿದರು. ಕಡಪ ಪ್ರದೇಶವು ದಕ್ಷಿಣ ಭಾರತದ ರಾಜ್ಯವಾದ ಆಂಧ್ರದಲ್ಲಿ ಸಾವಯವ ಕೃಷಿಯತ್ತ ಸಾಗುತ್ತಿರುವ ವಿಶೇಷ ಪ್ರದೇಶವಾಗಿದೆ.


ʼಸಾವಯವ ಕೃಷಿ ಕಷ್ಟ ಆದ್ರೆ ಬೆಸ್ಟ್‌ʼ
"ಸಾವಯವ ಕೃಷಿ ಬಹಳಷ್ಟು ಶ್ರಮವನ್ನು ಬೇಡುವ ಕೆಲಸವಾಗಿದೆ, ಆದರೆ ಸಾವಯವ ಕೃಷಿಯು ತುಂಬಾ ಉತ್ತಮ ಕೃಷಿ" ಎಂದು ಹೈದರಾಬಾದ್‌ನ ಕಡಪಾ ಚಿಲ್ಲೆಯ ದುಗ್ಗನಗರಿಪಲ್ಲಿಯಲ್ಲಿ ವಾಸಿಸುವ ಶೋಭಾ ರಾಣಿ ಅವರು ಸುದ್ದಿ ಮಾಧ್ಯಮವಾದ ಅಲ್ ಜಜೀರಾಗೆ ತಿಳಿಸಿದರು.


ಆಂದ್ರಪ್ರದೇಶದ ಯುವತಿ
ಶೋಭಾ ಈಗ ಆಂಧ್ರಪ್ರದೇಶದ ನೂರಾರು ಸಣ್ಣ ರೈತರಲ್ಲಿ ಒಬ್ಬರಾಗಿದ್ದಾರೆ. ಅವರು 2015 ರಲ್ಲಿ ಸರ್ಕಾರದಿಂದ ನಡೆಸಲ್ಪಡುವ, ಸಮುದಾಯ-ನಿರ್ವಹಣೆಯ ನೈಸರ್ಗಿಕ ಕೃಷಿ ಕಾರ್ಯಕ್ರಮದ ಭಾಗವಾಗಿದ್ದಾರೆ. ಈ ಕಾರ್ಯಕ್ರಮವನ್ನು ಗೊಬ್ಬರ ಮತ್ತು ರಾಸಾಯನಿಕ ವೆಚ್ಚಗಳೊಂದಿಗೆ ರೈತರಿಗೆ ಪರ್ಯಾಯವಾದ ಮಾರ್ಗಗಳನ್ನು ತಿಳಿಸಲು ಪ್ರಾರಂಭಿಸಲಾಗಿದೆ. ಈ ಕಾರ್ಯಕ್ರಮವು ರಾಜ್ಯದಾದ್ಯಂತ ಮುಂದುವರಿದಿದೆ. ಈ ವರ್ಷ ಒಂದು ಮಿಲಿಯನ್ ರೈತರು ಭಾಗಶಃ ಅಥವಾ ಸಂಪೂರ್ಣವಾಗಿ ಸಾವಯವ ಕೃಷಿಯನ್ನು ಕೈಗೊಳ್ಳಲು ಸಹಿ ಹಾಕುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ.


ಆಗಸ್ಟ್ ಮಧ್ಯದಲ್ಲಿ, ಶೋಭಾ ಅವರು ತಮ್ಮ ನೆಚ್ಚಿನ ದೇವತೆಯಾದ ತಿರುಪತಿ ವೆಂಕಟೇಶ್ವರನಿಗೆ ಸಮರ್ಪಿತವಾದ ʼತಿರುಮಲ ತಿರುಪತಿ ದೇವಸ್ಥಾನಂ ದೇವಸ್ಥಾನʼಕ್ಕೆ ಸಾವಯವ ಬೆಂಗಾಲ್ ಅಥವಾ ಕಡೆಲೆ ಕಾಳುಗಳನ್ನು ಪೂರೈಸಲು ರಾಜ್ಯ ಏಜೆನ್ಸಿಯೊಂದಿಗೆ ಸೇರಿಕೊಂಡಿದ್ದಾರೆ.


ಸಾವಯವ ಕೃಷಿಯಿಂದ ತಿರುಪತಿ ತಿಮ್ಮಪ್ಪನ ಲಡ್ಡುವಿನವರೆಗಿನ ಪಯಣ
ದೇಶದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಗೆ ಮತ್ತು ಅಲ್ಲಿ ತಯಾರಾಗುವ ಲಡ್ಡುಗಳಿಗೆ, ದೇವಾಲಯದ ಬೃಹತ್ ಅಡುಗೆಮನೆಯಲ್ಲಿ ತಯಾರಿಸಿದ ಲಡ್ಡುಗಳಿಗೆ ಕಡಲೆ ಹಿಟ್ಟಿನ ಸ್ಥಿರ ಪೂರೈಕೆಯ ಅಗತ್ಯವಿರುತ್ತದೆ.


ಇದನ್ನೂ ಓದಿ: Viral News: ಮೊದಲ ವಿಮಾನ ಪ್ರಯಾಣದಲ್ಲಿ ಜೀವನಪೂರ್ತಿ ಮರೆಯದ ಸಹಾಯ!


ಹತ್ತು ಸಾವಿರ ಲಡ್ಡು ತಯಾರಿಕೆ
ದೇವಸ್ಥಾನವು ಪ್ರತಿ ದಿನ ಹತ್ತಾರು ಸಾವಿರ ಲಡ್ಡುಗಳನ್ನು ಯಾತ್ರಿಕರು ಮತ್ತು ಭಕ್ತರಿಗೆ ತಯಾರಿಸುತ್ತದೆ ಮತ್ತು ಮಾರಾಟ ಮಾಡುತ್ತದೆ. ಲಡ್ಡುಗಳನ್ನೇ ತಿರುಪತಿ ತಿಮ್ಮಪ್ಪನ ಪ್ರಸಾದವೆಂದು ಕರೆಯುತ್ತಾರೆ. ಇದರಲ್ಲಿ ತುಪ್ಪ, ಗೋಡಂಬಿ, ಒಣದ್ರಾಕ್ಷಿ, ಏಲಕ್ಕಿ ಮತ್ತು ಬೆಲ್ಲವೂ ಸಹ ಸೇರಿವೆ. ಇವುಗಳಲ್ಲಿ ಹೆಚ್ಚಿನವು ಈಗ ಸಾವಯವ ಕೃಷಿಕರಿಂದ ಸ್ಥಳೀಯವಾಗಿ ಲಭ್ಯವಾಗುತ್ತಿವೆ.


ರಾಜ್ಯದಾದ್ಯಂತ, ಶೋಭಾ ಅವರಂತಹ ಹೊಸ ಸಾವಯವ ಕೃಷಿಕರನ್ನು ಟಿಟಿಡಿಗೆ ಕಡಲೆ ಮತ್ತು ಅಕ್ಕಿ ಸೇರಿದಂತೆ ತಮ್ಮ ಬೆಳೆಗಳನ್ನು ಪೂರೈಸಲು ಟ್ಯಾಪ್ ಮಾಡಲಾಗುತ್ತಿದೆ. ಇದನ್ನು ದೇವಾಲಯದ ಟ್ರಸ್ಟ್‌ನ ʼಉತ್ತಮ ನಿರ್ಧಾರʼ ಎಂದು ಪ್ರಶಂಸಿಸಲಾಗುತ್ತಿದೆ.


ʼಸಾವಯವ ಆಹಾರವೇ ನಮ್ಮ ಗುರಿʼ
“ಪ್ರತಿದಿನ 60,000 ರಿಂದ 70,000 ಭಕ್ತರು ಬರುವ ಈ ದೇವಾಲಯವು ಮುಂದಿನ ಮೇ ತಿಂಗಳಲ್ಲಿ ಸಂಪೂರ್ಣವಾಗಿ ಸಾವಯವ ಆಹಾರವನ್ನು ನೀಡಲು ನಿರ್ಧರಿಸಿದೆ. ಇದಕ್ಕೆ ಕಾರಣ 2021 ರಲ್ಲಿ ಭಕ್ತರೊಬ್ಬರು ದೇವಸ್ಥಾನಕ್ಕೆ ರಾಸಾಯನಿಕ ಮುಕ್ತ ಅಕ್ಕಿಯನ್ನು ದೇಣಿಗೆ ನೀಡಿದ್ದರಿಂದ, ದೇವಸ್ಥಾನವು ಸಾವಯವ ಆಹಾರಕ್ಕೆ ಪ್ರೇರಣೆಗೊಂಡಿದೆ. ಆದ್ದರಿಂದ ಈ ನಿರ್ಧಾರಕ್ಕೆ ದೇವಸ್ಥಾನ ಮಂಡಳಿ ಬಂದಿದೆ” ಎಂದು ದೇವಸ್ಥಾನದ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಜವಾಹರ್ ರೆಡ್ಡಿ ಅವರು ಸುದ್ದಿ ಮಾಧ್ಯಮವಾದ ಅಲ್‌ ಜಜೀರಾಕ್ಕೆ ತಿಳಿಸಿದ್ದಾರೆ.


1,300 ಟನ್ ಸಾವಯವ ಕಡಲೆ
"ಪ್ರತಿ ದೇವಾಲಯವು ಸಾವಯವ ಉತ್ಪನ್ನಗಳನ್ನು ಬಳಸಿದರೆ, ಅದು ಸುಸ್ಥಿರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ರೈತರನ್ನು ಪ್ರೋತ್ಸಾಹಿಸುತ್ತದೆ ಮತ್ತು ಉತ್ತೇಜಿಸುತ್ತದೆ" ಎಂದು ಜವಾಹರ್‌ ರೆಡ್ಡಿ ಅವರು ಹೇಳಿದರು. ದೇವಸ್ಥಾನವು ಕಳೆದ ವರ್ಷ ಶೋಭಾ ಅವರಂತಹ ರೈತರಿಂದ 1,300 ಟನ್ ಸಾವಯವ ಕಡಲೆಗಳನ್ನು ಪಡೆದಾಗ ಅದರ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಿತು.


ಸಾವಯವ ಬದಲಾವಣೆ
ಈ ಸಾವಯವ ಬದಲಾವಣೆಯನ್ನು ಸಕ್ರಿಯಗೊಳಿಸಲು, ನೈಸರ್ಗಿಕ ಕೃಷಿ ಯೋಜನೆಯನ್ನು ಮೇಲ್ವಿಚಾರಣೆ ಮಾಡುವ ರೈತ ಸಾಧಕರ ಸಂಸ್ಥಾ (ಆರ್‌ವೈಎಸ್‌ಎಸ್ (RySS), ಅಥವಾ ರೈತರ ಸಬಲೀಕರಣಕ್ಕಾಗಿ ಇರುವ ಸಂಸ್ಥೆ) ಎಂಬ ಸರ್ಕಾರಿ ಸ್ವಾಮ್ಯದ ಲಾಭರಹಿತ ಸಂಸ್ಥೆಯೊಂದಿಗೆ ಟಿಟಿಡಿ ಒಪ್ಪಂದವನ್ನು ಮಾಡಿಕೊಂಡಿದೆ.


ಇದರ ಅಡಿಯಲ್ಲಿ, RySS ಈ ರೈತರಿಂದ ಅಕ್ಕಿ, ಬೆಲ್ಲ ಮತ್ತು ಏಲಕ್ಕಿ ಸೇರಿದಂತೆ 12 ಕ್ಕೂ ಹೆಚ್ಚು ಸಾವಯವವಾಗಿ ಬೆಳೆದ ಸರಕುಗಳನ್ನು ಪಡೆದು ದೇವಸ್ಥಾನಕ್ಕೆ ಪೂರೈಸುತ್ತದೆ. ಟಿಟಿಡಿ ತನ್ನ ಗೋಶಾಲೆಗಳಿಂದ ರೈತರಿಗೆ ಜಾನುವಾರುಗಳನ್ನು ಪೂರೈಸುತ್ತದೆ. ಆದ್ದರಿಂದ ಅವುಗಳ ಸಗಣಿಯನ್ನೆ ಗೊಬ್ಬರವಾಗಿ ಬಳಸಬಹುದು.


ರೈತರಿಗೆ ತರಬೇತಿ
"ಸಾವಯವ ಉತ್ಪನ್ನಗಳನ್ನು ಪೂರೈಸುವ ರೈತರನ್ನು ಗುರುತಿಸುವುದು, ತರಬೇತಿ ನೀಡುವುದು ಮತ್ತು ಅವರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವುದು ನಮ್ಮ ಕರ್ತವ್ಯವಾಗಿದೆ” ಎಂದು RySS ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ತಲ್ಲಂ ವಿಜಯ್ ಕುಮಾರ್ ಅವರು ಸುದ್ದಿ ಮಾಧ್ಯಮವಾದ ಅಲ್ ಜಜೀರಾಗೆ ತಿಳಿಸಿದರು.

First published: