Organic farming: ಸಾವಯವ ಕೃಷಿ ಮೂಲಕ ವರ್ಷಕ್ಕೆ 35 ಲಕ್ಷ ಆದಾಯ, ಮೈಸೂರಿನ ದಂಪತಿಗಳ ಸಾಧನೆ

ಸಾವಯವ ಕೃಷಿಯ ಮೂಲಕ ಗ್ರಾಹಕರಿಗೆ ಆರೋಗ್ಯಕರ ಉತ್ಪನ್ನಗಳು ನೀಡುತ್ತಿರುವ ಕೃಷಿಕರಲ್ಲಿ ತಂಕಚಾನ್ ಚೆಂಪೊಟ್ಟಿ ಕೂಡ ಒಬ್ಬರು. ಚಿಕ್ಕ ಹುಡುಗನಾಗಿದ್ದ ಕಾಲದಿಂದಲೂ ಕೃಷಿ, ತಂಕಚನ್ ಚೆಂಪೊಟ್ಟಿ ಅವರ ಜೀವನದ ಒಂದು ಭಾಗವಾಗಿಬಿಟ್ಟಿದೆ.

ಸಾವಯವ ಕೃಷಿ ಮಾಡುವ ಮೈಸೂರಿನ ದಂಪತಿಗಳು

ಸಾವಯವ ಕೃಷಿ ಮಾಡುವ ಮೈಸೂರಿನ ದಂಪತಿಗಳು

  • Share this:
ಸಾವಯವ ಕೃಷಿಯ (Organic farming) ಮೂಲಕ ಗ್ರಾಹಕರಿಗೆ (Customer) ಆರೋಗ್ಯಕರ ಉತ್ಪನ್ನಗಳು (Healthy Products) ನೀಡುತ್ತಿರುವ ಕೃಷಿಕರಲ್ಲಿ (Farmer) ತಂಕಚಾನ್ ಚೆಂಪೊಟ್ಟಿ (Thankachan Chempotty) ಕೂಡ ಒಬ್ಬರು. ಚಿಕ್ಕ ಹುಡುಗನಾಗಿದ್ದ (Boy) ಕಾಲದಿಂದಲೂ ಕೃಷಿ, ತಂಕಚನ್ ಚೆಂಪೊಟ್ಟಿ ಅವರ ಜೀವನದ ಒಂದು ಭಾಗವಾಗಿಬಿಟ್ಟಿದೆ. ತಂಕಚನ್ ಕೇರಳದ ಕೋಯಿಕ್ಕೋಡ್‍ನ (Kozhikode, Kerala) ತೆಕ್ಕುಮ್‍ಕುಟ್ಟಿಯ (Thekkumkutty) ಮೂಲದವರು. ಹಲವಾರು ದಶಕಗಳ ಕಾಲ ವಿವಿಧ ಕಾರ್ಪೋರೇಶನ್‍ಗಳಲ್ಲಿ (Corporation) ಕೆಲಸ (Work) ಮಾಡಿರುವ ಅವರು, ಕೆಲಸದ ಜೊತೆ ಜೊತೆಗೆ ಕೃಷಿಯ (Agriculture) ಮೇಲಿನ ಪ್ರೀತಿಯನ್ನು ಹಾಗೆ ಉಳಿಸಿಕೊಂಡು, ಬೆಳೆಸಿಕೊಂಡು ಬಂದವರು.

ಕೃಷಿಯೇ ಇವರ ಮೂಲ ಕಸುಬು
“ನಾನು ಕೃಷಿಕರ ಕುಟುಂಬದಲ್ಲಿ ಬೆಳೆದವನು ಮತ್ತು ಶಾಲೆಗೆ ನಿತ್ಯವೂ ಕಿಲೋಮೀಟರ್ ಗಟ್ಟಲೆ ನಡೆದುಕೊಂಡು ಹೋಗುತ್ತಿದ್ದ ಹಾಗೂ ಶಾಲೆಯ ಅವಧಿಯ ನಂತರ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ತಲೆಮಾರಿಗೆ ಸೇರಿದವನು “ ಎನ್ನುತ್ತಾರೆ ಅವರು. ಬೆಳೆಯುತ್ತಾ ಕಷ್ಟದ ಜೀವನವನ್ನು ಕಂಡಿದ್ದ ಅವರಿಗೆ ಕೃಷಿ ನಿಜಕ್ಕೂ ತುಂಬಾ ಸಹಾಯ ಮಾಡಿದೆ ಮತ್ತು ಜೀವನದಲ್ಲಿ ಮುಂದೆ ಸಾಗಲು ಶಕ್ತಿ ಮತ್ತು ದೃಷ್ಟಿಕೋನವನ್ನು ನೀಡಿದೆಯಂತೆ.

ವಿವಿಧ ರೀತಿಯ ಬೆಳೆಗಳು
ಹಲವಾರು ವರ್ಷಗಳ ಕಾಲ ಅನೇಕ ಎಫ್‍ಎಂಸಿಜಿ ಕಂಪೆನಿಗಳಿಗೆ ಒಬ್ಬ ಸಲಹೆಗಾರರಾಗಿ ಕೆಲಸ ಮಾಡಿರುವ ತಂಕಚನ್, ಈಗ ನಂಜನಗೂಡಿನಲ್ಲಿ 22 ಎಕರೆ ಸಮೃದ್ಧ ಸಾವಯವ ಕೃಷಿ ತೋಟವನ್ನು ಹೊಂದಿದ್ದಾರೆ. ಅವರ ಫಾರ್ಮ್‍ನ ಹೆಸರು ಚೆಂಪೊಟ್ಟಿ ಎಸ್ಟೇಟ್. 58 ವರ್ಷ ವಯಸ್ಸಿನ ತಂಕಚನ್‍ಗೆ ತಮ್ಮ ಫಾರ್ಮ್ ಅತ್ಯಂತ ಇಷ್ಟದ ಜಾಗವಂತೆ. ಅವರ ಪತ್ನಿ ಜೆಸ್ಸಿ ಕೂಡ ಕೃಷಿಯ ಕೆಲಸದಲ್ಲಿ ಪತಿಗೆ ಸಾಥ್ ನೀಡುತ್ತಿದ್ದಾರೆ. “ನಾವು ತೆಂಗು, ಅಡಿಕೆ, ನಟ್‍ಮಗ್, ಕೋಕೋ ಮತ್ತು ಇನ್ನು ಹಲವು ರೀತಿಯ ಹಣ್ಣಿನ ಮರಗಳನ್ನು ಬೆಳೆಸಿದ್ದೇವೆ. ನಾನು ಎಸ್ಟೇಟ್‍ನಲ್ಲಿ ಸುಮಾರು 17,000 ಮರಗಳು ಮತ್ತು ಗಿಡಗಳನ್ನು ಹೊಂದಿದ್ದೇನೆ” ಎಂದು ಹೇಳುತ್ತಾರೆ ತಂಕಚನ್.

“ನಾವು ಸಾವಯವ ಉತ್ಪನ್ನಗಳಿಂದ ಹಲವಾರು ಮೌಲ್ಯವರ್ಧಿತ ಉತ್ಪನ್ನಗಳನ್ನು ಕೂಡ ತಯಾರಿಸುತ್ತೇವೆ. ವೇಸ್ಟೇಜನ್ನು ಕಡಿಮೆ ಮಾಡುವುದು ಮತ್ತು ಉತ್ಪನ್ನಗಳ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸುವುದು ನಮ್ಮ ಗುರಿ” ಎನ್ನುತ್ತಾ ತಂಕಚನ್. ಸಾವಯವ ಕೃಷಿ ತೆಂಕಚನ್ ಅವರ ಕೈ ಬಿಟ್ಟಿಲ್ಲ, ಇಂದು ಅವರು ತಮ್ಮ ಚೆಂಪೊಟ್ಟಿ ಎಸ್ಟೇಟ್‍ನಿಂದ ವರ್ಷಕ್ಕೆ ಸುಮಾರು 35 ಲಕ್ಷ ರೂ.ಗಳಷ್ಟು ಆದಾಯ ಗಳಿಸುತ್ತಿದ್ದಾರೆ.

ಸಾವಯವ ತೋಟವಾದ ರಾಸಾಯನಿಕ ಭೂಮಿ
ತಂಕಚನ್ ಅವರು 2005 ರಲ್ಲಿ ಸಾವಯವ ಕೃಷಿ ಮಾಡಬೇಕು ಎಂದು ನಿರ್ಧರಿಸಿದಾಗ, ರಾಸಾಯಿನಿಕ ಗೊಬ್ಬರಗಳ ಬಳಕೆಗೆ ಒಳಗಾಗಿದ್ದ 22 ಎಕರೆ ವಿಸ್ತಾರದ ಸಾವಯವ ಭೂಮಿಯಾಗಿ ಪರಿವರ್ತನೆ ಮಾಡುತ್ತೇನೆ ಎಂಬ ಆತ್ಮವಿಶ್ವಾಸವನ್ನು ಹೊಂದಿದ್ದರು. “ನಮಗಿಂತ ಮೊದಲು, ಆ ಭೂಮಿಯನ್ನು ವೆನಿಲಾ, ತೆಂಗು, ಚಿಕ್ಕು ಮತ್ತಿತರ ಬೆಳೆಗಳನ್ನು ಬೆಳೆಯಲು ಬಳಸಲಾಗುತ್ತಿತ್ತು. ಅದಕ್ಕಾಗಿ ಅವರು ಅಲ್ಲಿ ಹಲವಾರು ರಾಸಾಯನಿಕ ಮತ್ತು ಕೀಟ ನಾಶಕಗಳನ್ನು ಬಳಸುತ್ತಿದ್ದರು.

ನನಗೆ, ಸಾಕಷ್ಟು ಶ್ರಮ ವಹಿಸಿದರೆ ಮತ್ತು ತಾಳ್ಮೆ ಇಟ್ಟುಕೊಂಡರೆ, ಆ ಭೂಮಿಯನ್ನು ಸಾವಯವ ಫಾರ್ಮ್ ಆಗಿ ಬದಲಾಯಿಸಬಲ್ಲೆ ಎಂದು ಖಂಡಿತವಾಗಿ ಗೊತ್ತಿತ್ತು “ ಎನ್ನುತ್ತಾರೆ ಅವರು.

ನೈಸರ್ಗಿಕ ಸಾಮಾಗ್ರಿಗಳನ್ನು ಬಳಸಿ ತಯಾರಿಸುವ ಮಿಶ್ರಣ
ಆದರೆ, ತಾನು ಅಂದುಕೊಂಡಿದ್ದನ್ನು ಸಾಧಿಸಲು ಅವರಿಗೆ ಐದು ವರ್ಷಗಳು ಬೇಕಾಯಿತು. “ನಾನು ಸುಭಾಶ್ ಪಾಲೇಕರ್ ಅವರ ನೈಸರ್ಗಿಕ ಕೃಷಿ ವಿಧಾನವನ್ನು ಅನುಸರಿಸಿದೆ. ಅಂದರೆ, ಗೋಮೂತ್ರ, ಸೆಗಣಿ ಮತ್ತು ಇತರ ನೈಸರ್ಗಿಕ ಸಾಮಾಗ್ರಿಗಳನ್ನು ಬಳಸಿ ತಯಾರಿಸುವ ಮಿಶ್ರಣವಾದ ಜೀವಾಮೃತವನ್ನು ಬಳಿಸಿದ್ದೇನೆ. ಅದು ಮಣ್ಣಿನ ಗುಣಮಟ್ಟವನ್ನು ಸುಧಾರಿಸಲು ತುಂಬಾ ಸಹಾಯ ಮಾಡಿತು.

ಇದನ್ನೂ ಓದಿ: Amul Product: ಮಾರುಕಟ್ಟೆಗೆ ಬರಲಿದೆ ಅಮುಲ್ ಗೋಧಿ ಹಿಟ್ಟು; ಬೆಲೆ ಎಷ್ಟು ಗೊತ್ತಾ?

ನಾನು ಸುಮಾರು 450 ನುಗ್ಗೆ ಮರಗಳನ್ನು ಮತ್ತು ಸುಮಾರು 500 ಬೇವಿನ ಮರಗಳನ್ನು ಕೂಡ ನೆಟ್ಟೆ. ಅವು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಸಹಾಯ ಮಾಡಿದವು” ಎಂದು ತಾನು ಸಾವಯವ ಕೃಷಿಯನ್ನು ಆರಂಭಿಸಿದ ರೀತಿಯನ್ನು ವಿವರಿಸುತ್ತಾರೆ ತಂಕಚನ್.

ನಾಲ್ಕು ಪದರದ ವಿಧಾನ
ಭೂಮಿ ಸಾವಯವ ಕೃಷಿಗೆ ಸಿದ್ಧವಾದಾಗ, ತಂಕಚನ್ ನಾಲ್ಕು ಪದರದ ವಿಧಾನವನ್ನು ಅಳವಡಿಸಿಕೊಂಡು ವಿವಿಧ ರೀತಿಯ ವಾಣಿಜ್ಯ ಬೆಲೆಗಳನ್ನು ಬೆಳೆಯಲು ನಿರ್ಧರಿಸಿದರು. “ನಾನು ಮೊದಲನೇ ಪದರದಲ್ಲಿ ತೆಂಗಿನ ಮರಗಳನ್ನು ಬೆಳೆಸಿದ್ದೇನೆ. ಎರಡನೇ ಪದರ ಅಡಿಕೆ ಮರಗಳಿಗೆ ಮೀಸಲು ಮತ್ತು ಮೂರನೇ ಪದರದಲ್ಲಿ ಕೋಕೋ ಮರಗಳು ಮತ್ತು ಪೇರಲೆ, ಮಾವಿನ ಹಣ್ಣು ಇತ್ಯಾದಿ ಹಣ್ಣಿನ ಮರಗಳು. ನಾಲ್ಕನೇ ಪದರದಲ್ಲಿ ಶುಂಠಿ, ಅರಸಿನ , ಮರ ಗೆಣಸು, ಗೆಣಸು, ಆಲೂಗಡ್ಡೆ ಇತ್ಯಾದಿಗಳನ್ನು ನೆಟ್ಟಿದ್ದೇವೆ “ ಎಂದು ತಮ್ಮ ಕೃಷಿ ವಿಧಾನದ ಮಾಹಿತಿ ನೀಡುತ್ತಾರೆ ಅವರು.

“ಪ್ರಸ್ತುತ ನಮ್ಮ ಬಳಿ 30 ವರ್ಷಕ್ಕಿಂತ ಹಳೆಯ ಸುಮಾರು 1000 ತೆಂಗಿನ ಮರಗಳಿವೆ, 6 ವರ್ಷಕ್ಕಿಂತ ಹಳೆಯ ಸುಮಾರು 4,000 ಅಡಿಕೆ ಮರಗಳು ಮತ್ತು ಸುಮಾರು 8 ವರ್ಷ ಹಳೆಯ 3,500 ಕೋಕೋ ಗಿಡಗಳಿವೆ” ಎನ್ನುತ್ತಾರೆ ಅವರು. ಆ ಮರಗಿಡಗಳಲ್ಲದೆ, ಚೆಂಪೊಟ್ಟಿ ಎಸ್ಟೇಟ್‍ನಲ್ಲಿ ಚೆರ್ರಿ, ಪ್ಯಾಶನ್ ಫ್ರುಟ್, ಹಲಸು, ಮುಳ್ಳು ರಾಮಫಲ ಮತ್ತು ಇನ್ನೂ ಅನೇಕ ರೀತಿಯ ಹಣ್ಣಿನ ಮರಗಳನ್ನು ಬೆಳೆಸಲಾಗಿದೆ.

ಕೋಕೋ ಮೇಲಿನ ಪ್ರೀತಿ
ತಂಕಚನ್ ಅವರ ಪ್ರಕಾರ, ಅಡಿಕೆ ಮತ್ತು ತೆಂಗು, ಈ ಎರಡೂ ಬೆಳೆಗಳಿಂದ ಉತ್ತಮ ಲಾಭ ಬರುತ್ತದೆ. ಆದರೆ ಅವರಿಗೆ ಹೆಚ್ಚು ಆಸಕ್ತಿದಾಯಕ ಎನಿಸುವುದು ಕೋಕೋ ಗಿಡಗಳಂತೆ. “ಇದು ನೀವು ಹೆಚ್ಚು ಲಾಭ ಪಡೆಯಬಹುದಾದ ಬೆಳೆ” ಎನ್ನುತ್ತಾರೆ ಅವರು.

“ಜನರು ಸಾಮಾನ್ಯವಾಗಿ 45-60 ರೂಗಳಿಗೆ ಕಚ್ಚಾ ಕೋಕೋ ಬೀಜಗಳನ್ನು ಮಾರಾಟ ಮಾಡುತ್ತಾರೆ. ಆದರೆ ನೀವು ಹುದುಗುವಿಕೆಯ ಸಂಸ್ಕರಣೆಯನ್ನು ಮಾಡುವುದು ಸಾಧ್ಯವಾದರೆ, ಅವುಗಳನ್ನು ಬೀಜಗಳ ರೂಪದಲ್ಲಿ ಮಾರಾಟ ಮಾಡುವುದಕ್ಕಿಂತ ಕೊಯ್ಲು ನಾಲ್ಕರಿಂದ 5 ಪಟ್ಟು ಹೆಚ್ಚು ಲಾಭದಾಯಕವಾಗಿ ಇರುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ. ಅವರು ಯಾವಾಗಲೂ ಕೋಕೋವನ್ನು ಹುದುಗಿಸಿದ ಅಥವಾ ಒಣಗಿಸಿದ ರೂಪದಲ್ಲಿ ಮಾರಾಟ ಮಾಡುತ್ತಾರಂತೆ.

ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ
ಚೆಂಪೊಟ್ಟಿ ಎಸ್ಟೇಟ್‍ನಲ್ಲಿ, ಅಲ್ಲಿನ ಸಾವಯವ ಉತ್ಪನ್ನಗಳಿಂದ, ಹೆಚ್ಚಾಗಿ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಆ ಮೂಲಕ ವೇಸ್ಟೇಜ್ ಅನ್ನು ಕಡಿಮೆ ಮಾಡುವ ಮತ್ತು ಹೆಚ್ಚು ಲಾಭ ಪಡೆಯುವ ಗುರಿಯನ್ನು ಸಾಧಿಸುತ್ತಿದ್ದಾರೆ ತಂಕಚನ್. “ಇದರ ಹಿಂದಿನ ಸೃಜನಶೀಲ ಪಾತ್ರ ನನ್ನ ಹೆಂಡತಿ ಜೆಸ್ಸಿಯದ್ದು” ಎನ್ನುತ್ತಾನೆ ತಂಕಚನ್.

ಇದನ್ನೂ ಓದಿ:  Donkey Milk Business: ಕತ್ತೆ ಹಾಲಿನಿಂದ ಕೋಟ್ಯಾಧಿಪತಿ ಆದ ಯುವಕ! ಕತ್ತೆ ಎಂದು ಮೂದಲಿಸುವ ಮುನ್ನ ಎಚ್ಚರ

ಮೂರು ದಶಕಗಳ ಕಾಲ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಜೆಸ್ಸಿ, ಫಾರ್ಮ್‍ನ ಕೆಲಸದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಬೇಕು ಎಂಬ ಉದ್ದೇಶದಿಂದ 2020 ರಲ್ಲಿ ತಮ್ಮ ಪೂರ್ಣಾವಧಿಯ ಉದ್ಯೋಗವನ್ನು ತ್ಯಜಿಸಿದ್ದಾರೆ. “ನಮ್ಮ ಫಾರ್ಮ್‍ನಲ್ಲಿ ಬೆಳೆಯುವ ಯಾವುದೂ ಕೂಡ ಪೋಲಾಗುವುದು ನನಗೆ ಯಾವತ್ತೂ ಇಷ್ಟವಿರಲಿಲ್ಲ. ಹಾಗಾಗಿ, ಪ್ರತಿಯೊಂದರಿಂದಲೂ ಮೌಲ್ಯ ವರ್ಧಿತ ಉತ್ಪನ್ನಗಳನ್ನು ತಯಾರಿಸಲು ನಾನು ಸಾಧ್ಯವಾದಷ್ಟು ಪ್ರಯತ್ನಿಸುತ್ತೇನೆ” ಎನ್ನುತ್ತಾರೆ ಜೆಸ್ಸಿ.

ಕೊಕೋ ಹಣ್ಣಿನ ತಿರುಳಿನಿಂದ ಹಲವಾರು ಉತ್ಪನ್ನಗಳ ತಯಾರಿ
ಅವರು ಕೊಕೋ ಹಣ್ಣಿನ ತಿರುಳಿನಿಂದ, ಹುಳಿ ಖಾರ ರುಚಿಯ ಸಿರಫ್ ತಯಾರಿಸಿದ್ದಾರೆ. ಅಷ್ಟೇ ಅಲ್ಲ, ಕೋಕೋದಿಂದ ವೈನ್, ಲಡ್ಡು ಮತ್ತಿತರ ಹಲವು ಉತ್ಪನ್ನಗಳನ್ನು ತಯಾರಿಸುವಲ್ಲಿ ಜೆಸ್ಸಿ ಸಫಲರಾಗಿದ್ದಾರೆ.

“ಮೌಲ್ಯವರ್ಧಿತ ಉತ್ಪನ್ನಗಳ ಮೂಲಕ , ನಾವು ದೊಡ್ಡ ಪ್ರಮಾಣದ ಗ್ರಾಹಕ ನೆಲೆಯನ್ನು ತಲುಪಲು ಸಾಧ್ಯವಾಯಿತು ಮತ್ತು ಇದು ತುಂಬಾ ಲಾಭವನ್ನು ನೀಡುತ್ತಿದೆ. ನಾವು ಕೋಕೋ ಬೆಳೆಯಿಂದ, ವರ್ಷಕ್ಕೆ 10 ಲಕ್ಷ ರೂ. ಆದಾಯವನ್ನು ಗಳಿಸುತ್ತಿದ್ದೇವೆ” ಎಂದು ಹೇಳುತ್ತಾರೆ ಜೆಸ್ಸಿ.

ಚೆಂಪೊಟ್ಟಿ ತೋಟದಲ್ಲಿ ಬೆಳೆಯುವ ಇತರ ಹಣ್ಣುಗಳನ್ನು ಕೂಡ ಅವರು, ಜ್ಯೂಸ್‍ಗಳು, ವೈನ್, ಜಾಮ್‍ಗಳು, ಉಪ್ಪಿನಕಾಯಿಗಳು, ಚಟ್ನಿಗಳು ಇತ್ಯಾದಿಗಳನ್ನು ತಯಾರಿಸಲು ಬಳಸಿಕೊಳ್ಳುತ್ತಾರೆ. ಅವರು ತಯಾರಿಸುವ ಮೌಲ್ಯವರ್ಧಿತ ಉತ್ಪನ್ನಗಳಲ್ಲಿ, ಸಾಮಾನ್ಯವಾಗಿ ವೈನ್ ಎಲ್ಲಾ ಉತ್ಪನ್ನಗಳಿಗಿಂತ ವೇಗವಾಗಿ ಮಾರಾಟವಾಗುತ್ತದೆಯಂತೆ.

ಕೃಷಿಯ ಬಗ್ಗೆ ಗ್ರಾಹಕರು ಹೇಳಿದ್ದು ಹೀಗೆ
“ನಾವು ಮೊದಲು ಹಣ್ಣು ಮತ್ತು ತರಕಾರಿಗಳನ್ನು ಮಾರುಕಟ್ಟೆಯಿಂದ ಖರೀದಿಸುತ್ತಿದ್ದೆವು. ಆದರೆ ಒಮ್ಮೆ ನಾವು ಅವರಿಂದ ಖರೀದಿಸಲು ಪ್ರಾರಂಭಿಸಿದ ಮೇಲೆ, ನಮಗೆ ಮಾರುಕಟ್ಟೆಯ ಮತ್ತು ಸಾವಯವ ಹಣ್ಣು ತರಕಾರಿಗಳ ನಡುವಿನ ವ್ಯತ್ಯಾಸ ಕಂಡುಕೊಳ್ಳುವುದು ಸಾಧ್ಯವಾಯಿತು. ಅವು ತುಂಬಾ ತಾಜಾವಾಗಿರುತ್ತವೆ ಮತ್ತು ಸಾವಯವ ಕೂಡ. ಅವುಗಳ ರುಚಿ ಕೂಡ ತುಂಬಾ ಚೆನ್ನಾಗಿರುತ್ತದೆ. ನಾನು ಅವರಿಂದ ಪ್ರತಿ ವಾರ ಖರೀದಿಸುತ್ತಿದ್ದೇನೆ. ನಾನು ಅವರಿಂದ ಕೋಕೋ ಲಡ್ಡು ಮತ್ತು ಬೀನ್ಸ್ ಅನ್ನು ಕೂಡ ಖರೀದಿಸಿದ್ದೇನೆ. ಅವುಗಳು ಬಹಳ ಚೆನ್ನಾಗಿವೆ” ಎನ್ನುತ್ತಾರೆ ಚೆಂಪೊಟ್ಟಿ ಎಸ್ಟೇಟ್‍ನ ನಿಯಮಿತ ಗ್ರಾಹಕರಾದ ಅಮಿತಾ ಡಿಕೋಸ್ಟಾ.

ಇದನ್ನೂ ಓದಿ:Sankarsh Chand: 100 ಕೋಟಿಯ ಒಡೆಯ ಈ 23ರ ಯುವಕ! ಕಾಲೇಜು ಓದಿದ್ದು ಎರಡೇ ವರ್ಷ! 

ಚೆಂಪೊಟ್ಟಿ ಎಸ್ಟೇಟ್‍ನ ಎಲ್ಲಾ ಉತ್ಪನ್ನಗಳನ್ನು ಆನ್‍ಲೈನ್ ಮೂಲಕ ಅವರ ವೆಬ್‍ಸೈಟ್‍ನಲ್ಲಿ ಮಾರಲಾಗುತ್ತದೆ. ಅವರ ಫಾರ್ಮ್‍ಗೆ ಹೋಗಿ ಕೂಡ ಉತ್ಪನ್ನಗಳನ್ನು ಖರೀದಿಸಬಹುದು.
Published by:Ashwini Prabhu
First published: