Online Shopping Fraud: ಆರ್ಡರ್ ಮಾಡಿದ್ದು 1 ಲಕ್ಷ ಮೌಲ್ಯದ  iPhone, ಬಂದಿದ್ದು 599 ರೂ.ಯ ಎರಡು ಚಾಕೊಲೇಟ್

ಕೆಲವು ದಿನಗಳಿಂದ ಆನ್​​ಲೈನ್​ ವಂಚನೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ದಿನಬೆಳಗಾದರೇ ಚಿತ್ರ, ವಿಚಿತ್ರ ರೀತಿಯಲ್ಲಿ ಜನ ಆನ್​ಲೈನ್​ನಲ್ಲಿ ಮೋಸ ಹೋಗುತ್ತಿದ್ದಾರೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಆರ್ಡರ್ ವಂಚನೆ ಪ್ರಕರಣಗಳು ನಿಲ್ಲುತ್ತಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
 ಇತ್ತೀಚಿನ ದಿನಗಳಲ್ಲಿ ವಂಚಕರು ನೇರವಾಗಿ ಮೋಸಮಾಡುವುದನ್ನು ಕಡಿಮೆ ಮಾಡಿದ್ದಾರೆ. ಆದರೆ ಆನ್​ಲೈನ್(Online fraud)​ ಮೂಲಕ ವಂಚಿಸಲು ಶುರುಮಾಡಿದ್ದಾರೆ. ಎಲ್ಲೋ ಕೂತು, ಕೇವಲ ಆನ್​ಲೈನ್​ ಮೂಲಕವೇ ಲಕ್ಷ ಲಕ್ಷ ಹಣ ಎಗರಿಸುತ್ತಿದ್ದಾರೆ. ನಮಗೆ ತಿಳಿಯದ ಹಾಗೇ ನಮ್ಮ ಖಾತೆ(Account)ಯಲ್ಲಿರುವ ಹಣ(Money)ವನ್ನು ಕದಿಯುತ್ತಿರುತ್ತಾರೆ. ಕೆಲವು ದಿನಗಳಿಂದ ಆನ್​​ಲೈನ್​ ವಂಚನೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ದಿನಬೆಳಗಾದರೇ ಚಿತ್ರ, ವಿಚಿತ್ರ ರೀತಿಯಲ್ಲಿ ಜನ ಆನ್​ಲೈನ್​ನಲ್ಲಿ ಮೋಸ ಹೋಗುತ್ತಿದ್ದಾರೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಆರ್ಡರ್ ವಂಚನೆ ಪ್ರಕರಣಗಳು ನಿಲ್ಲುತ್ತಿಲ್ಲ. 1 ಲಕ್ಷಕ್ಕೂ ಹೆಚ್ಚು ಮೌಲ್ಯದ ಐಫೋನ್ (iPhone13 Pro Max) ಅನ್ನು ಆರ್ಡರ್ ಮಾಡಿದ ಯುಕೆ ವ್ಯಕ್ತಿಗೆ ಆದರೆ 595 ರೂ ಮೌಲ್ಯದ ಡೈರಿ ಮಿಲ್ಕ್ ಚಾಕೊಲೇಟ್ ಕಳುಹಿಸಲಾಗಿದೆ. ಇದರ ಜೊತೆಗೆ ಫೋನ್‌ನ ಬಾಕ್ಸ್‌ನಲ್ಲಿ 295 ರೂ. ಟಾಯ್ಲೆಟ್ ಪೇಪರ್ ಸಿಕ್ಕಿದೆ.

ಯುಕೆ ಡೇನಿಯಲ್ ಕ್ಯಾರೊಲ್ ಐಫೋನ್ 13 ಪ್ರೊ ಮ್ಯಾಕ್ಸ್ ಅನ್ನು ಆರ್ಡರ್ ಮಾಡಿದ್ದಾರೆ. ಡೇನಿಯಲ್ ಅವರು ಆಪಲ್‌ನ ಅಧಿಕೃತ ವೆಬ್‌ಸೈಟ್‌ನಿಂದ ಡಿಸೆಂಬರ್ 2 ರಂದು ಸುಮಾರು 1 ಲಕ್ಷ ರೂಪಾಯಿ ಪಾವತಿಸುವ ಮೂಲಕ iPhone 13 Pro Max ಅನ್ನು ಆರ್ಡರ್ ಮಾಡಿದ್ದರು. ಡಿಸೆಂಬರ್ 17 ರಂದು ಮೊಬೈಲ್ ಡೇನಿಯಲ್ ಕೈ ಸೇರಬೇಕಿತ್ತು. ಆದರೆ ಆ ದಿನ ಮೊಬೈಲ್ ವಿತರಣೆಯಾಗಲಿಲ್ಲ. ಫೋನ್‌ನ ವಿತರಣೆಯನ್ನು ಜನಪ್ರಿಯ ಕಂಪನಿ DHL ಮಾಡಬೇಕಿತ್ತು.

ಇದನ್ನೂ ಓದಿ:  Explainer: ಸೈಬರ್ ವಂಚನೆಯಲ್ಲಿ ನಿಮ್ಮ ಬ್ಯಾಂಕ್ ಖಾತೆಯಿಂದ ಕದ್ದ ಹಣವನ್ನು ವಾಪಸ್ ಪಡೆಯುವುದು ಹೇಗೆ..? ಇಲ್ಲಿದೆ ವಿವರ

ಕ್ರಿಸ್‌ಮಸ್‌ ಗಾಗಿ ಐಫೋನ್‌ ಖರೀದಿ

ಡೇನಿಯಲ್ ಕ್ರಿಸ್‌ಮಸ್‌ನಲ್ಲಿ ತನ್ನ ಉಡುಗೊರೆಗಾಗಿ ಕಾಯುತ್ತಿದರು. ಆದರೆ, ಎರಡು ವಾರ ಕಳೆದರೂ ಫೋನ್ ಡೆಲಿವರಿ ಆಗಿರಲಿಲ್ಲ. ನಂತರ ಡೇನಿಯಲ್ ಅವರೇ ಪಾರ್ಸೆಲ್ ತೆಗೆದುಕೊಂಡು ಬರಲು ಹೋಗಿದ್ದಾರೆ. ಪಾರ್ಸೆಲ್ ತಂದು ನೋಡಿದಾಗ 120 ಗ್ರಾಂ ತೂಕದ ಎರಡು ಡೈರಿ ಮಿಲ್ಕ್ ಓರಿಯೊ ಚಾಕೊಲೇಟ್‌ಗಳು ಮತ್ತು ಕೆಲವು ಗಬ್ಬು ನಾರುವ ಟಾಯ್ಲೆಟ್ ಪೇಪರ್‌ನಲ್ಲಿ ಸುತ್ತಿರುವುದು ಕಂಡುಬಂದಿದೆ.

ಡೇನಿಯಲ್ ಅವರು ಪಾರ್ಸೆಲ್ ಬಾಕ್ಸ್ ಅನ್ನು ನೋಡಿದಾಗ ಅದರ ಮೇಲೆ ಅಂಟಿಸಲಾಗಿದ್ದ ಟೇಪ್‌ಗಳು ತುಂಬಾ ಸಡಿಲಗೊಂಡಿದ್ದರಿಂದ ಮತ್ತು ಬಾಕ್ಸ್ ಸ್ವಲ್ಪ ಭಾರವಾದಂತೆ ಭಾಸವಾಗಿರೋದು ಅವರ ಗಮನಕ್ಕೆ ಬಂದಿದೆ. ಈ ಸಂದರ್ಭದಲ್ಲಿ ತಮಗೆ ಮೋಸವಾಗಿದೆ ಎಂದು ಡೇನಿಯಲ್ ಅನುಮಾನ ವ್ಯಕ್ತಪಡಿಸಿದ್ದಾರೆ.ಈ ಸಂಬಂಧ ಡೇನಿಯಲ್ DHL ಮತ್ತು Apple ಎರಡಕ್ಕೂ ಈ ಬಗ್ಗೆ ದೂರು ನೀಡಿದ್ದಾರೆ. ಮತ್ತೊಂದೆಡೆ, DHL ಡೇನಿಯಲ್ ಮತ್ತು ಆಪಲ್ ಎರಡರೊಂದಿಗೂ ನಿರಂತರ ಸಂಪರ್ಕದಲ್ಲಿದೆ ಮತ್ತು ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದೆ.

Onlineನಲ್ಲಿ ಕಳೆದುಕೊಂಡ ಹಣವನ್ನು ಮತ್ತೆ ಪಡೆಯಬಹುದು

ವೈಯಕ್ತಿಕ ಹಾಗೂ ಸೂಕ್ಷ್ಮ ಮಾಹಿತಿಯನ್ನು ಕದಿಯುವ ಮೂಲಕ ಸೈಬರ್​ ಕಳ್ಳರು ಜನರ ಖಾತೆಯಿಂದ ಹಣವನ್ನು ಎಗರಿಸುತ್ತಿದ್ದಾರೆ. ಆನ್​​ಲೈನ್​ ವಂಚನೆಯಲ್ಲಿ ಹಣದ ಕಳ್ಳತನ ತುಂಬಾ ಗಂಭೀರವಾಗಿದೆ. ಯಾಕೆಂದರೆ ಖಾತೆಯಿಂದ ಒಮ್ಮೆ ಹಣ ಕಳ್ಳತನವಾದರೆ, ಅದನ್ನು ಮತ್ತೆ ಮರಳಿ ಪಡೆಯಲು ಯಾವುದೇ ದಾರಿಗಳಿರಲ್ಲ. ಆದರೆ ಆನ್​ಲೈನ್​ ವಂಚನೆಗಳನ್ನು ತಪ್ಪಿಸಲು ಕೆಲ ಸುಲಭ ಹಂತಗಳಿವೆ. ಇದಲ್ಲದೇ, ಒಂದು ವೇಳೆ ನಿಮಗೆ ಮೋಸವಾದರೆ, ಮೋಸ ಹೋದ ಹಣವನ್ನು ಮತ್ತೆ ಪಡೆಯಬಹುದು. ನಿಜಕ್ಕೂ ಮೋಸ ಹೋದ ಹಣ ವಾಪಸ್​ ಬರುತ್ತಾ? ಅದನ್ನು ಮರಳಿ ಪಡೆಯುವುದು ಹೇಗೆ? ಇಲ್ಲಿದೆ ನೋಡಿ.

ಇದನ್ನೂ ಓದಿ:  Online ವಂಚನೆಯಿಂದ ಅಕೌಂಟ್​​ಗೆ ಕನ್ನ ಬಿದ್ದರೆ, 10 ದಿನಗಳಲ್ಲಿ ಈ ರೀತಿ ನಿಮ್ಮ ಹಣವನ್ನು ಮರುಪಡೆಯಬಹುದು

ಹಣ ಮರಳಿ ಪಡೆಯುವುದು ಹೇಗೆ?

ಹೆಚ್ಚಿನ ಬ್ಯಾಂಕ್​ಗಳು ತಮ್ಮ ಗ್ರಾಹಕರಿಗೆ ಹಣಕಾಸು ವಂಚನೆ ವಿಮೆಯನ್ನ ಹೊಂದಿವೆ. ಹಣ ವರ್ಗಾವಣೆ ವೇಳೆ ವಂಚನೆಯಾಗಿದ್ದರೆ, ಗ್ರಾಹಕರು ತಕ್ಷಣವೇ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಬ್ಯಾಂಕಿಗೆ ನೀಡಬೇಕು. ಇದಾದ ಬಳಿಕ ವಂಚನೆಯ ಬಗ್ಗೆ ವಿಮಾ ಕಂಪನಿಗೆ ಬ್ಯಾಂಕ್​​ನವರು ವರದಿ ಮಾಡಲಾಗುತ್ತದೆ. ಈ ರೀತಿಯಾಗಿ ವಂಚನೆಗೊಳಗಾಗಿ ಹಣ ಕಳೆದುಕೊಂಡಿದ್ದರೆ, ಆ ಹಣವನ್ನು ಮರಳಿ ಪಡೆಯಬಹುದು.
Published by:Mahmadrafik K
First published: