Employee Layoffs: ಜಾಗತಿಕವಾಗಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಒರಾಕಲ್ ಕಂಪನಿ; ಕಾರಣ?

ಕಳೆದೆರಡು ದಿನಗಳಿಂದ ಭಾರತ ಸೇರಿದಂತೆ ಹಲವು ದೇಶಗಳ ಉದ್ಯೋಗಿಗಳನ್ನು ಒರಾಕಲ್ ಕಂಪನಿ ವಜಾಗೊಳಿಸಿದೆ. ಸಾವಿರಾರು ವಜಾಗಳಿಗೆ ಕಾರಣವಾಗಬಹುದಾದ $1 ಶತಕೋಟಿಯಷ್ಟು ವೆಚ್ಚವನ್ನು ಕಡಿತಗೊಳಿಸಲು ಒರಾಕಲ್ ಕಂಪನಿ ಯೋಜಿಸಿದೆ ಎಂದು ಸುದ್ದಿ ಪ್ರಕಟಣೆ ದಿ ಇನ್ಫರ್ಮೇಷನ್ ವರದಿ ಮಾಡಿದೆ.

ಒರಾಕಲ್ ಕಂಪನಿ

ಒರಾಕಲ್ ಕಂಪನಿ

  • Share this:
ಈ ವರ್ಷ ಟಾಪ್ ಕಂಪನಿಗಳಿಂದ (Top Company) ಹಿಡಿದು ಸ್ಟಾರ್ಟ್ ಅಪ್ ಗಳವರೆಗೂ ಅನೇಕ ಸಂಸ್ಥೆಗಳು ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ. ಇದು ಭಾರತಕ್ಕೆ ಮಾತ್ರ ಸೀಮಿತವಾಗದೇ ಜಾಗತಿಕವಾಗಿ ಉದ್ಯೋಗಿಗಳ ವಜಾ (Employee layoff) ನಡೆಯುತ್ತಿದೆ. ಕೋವಿಡ್ ನಂತರ ಆರ್ಥಿಕವಾಗಿ (Financially) ಪೆಟ್ಟು ತಿಂದ ಕಂಪನಿಗಳು ನಂತರದ ಖರ್ಚು-ವೆಚ್ಚ ತಗ್ಗಿಸಲು, ಹೊಸ ಪ್ರತಿಭೆಯ ಅನ್ವೇಷಣೆಗೆ, ನವೋದ್ಯಮಗಳಿಗೆ ಫಂಡ್ ಸಿಗದೇ ಹೀಗೆ ಈ ಎಲ್ಲ ಕಾರಣಗಳಿಂದಾಗಿ ಕಂಪನಿಗಳು ತನ್ನ ಸಿಬ್ಬಂದಿಗಳನ್ನು ತೆಗೆದು ಹಾಕುತ್ತಿದೆ ಎಂಬುದರ ಬಗ್ಗೆ ಸಾಕಷ್ಟು ವರದಿಯಾಗುತ್ತಿದೆ. ಭಾರತದಲ್ಲಿ (India) ಮಿಶೊ, ಬ್ಲಿಂಕಿಟ್, ಅನಾಕಾಡೆಮಿ, ವೇದಾಂತು, ಕಾರ್ಸ್ 24 ಮತ್ತು ಸಿಟಿಮಾಲಿನಂತಹ ಕಂಪನಿಗಳು ಉದ್ಯೋಗಿಗಳನ್ನು ಕೈ ಬಿಟ್ಟರೆ, ವಿದೇಶದಲ್ಲೂ ಇದೇ ರೀತಿಯ ದುಸ್ಥಿತಿ ನಡೆಯುತ್ತಿದೆ.

ಸ್ವಿಟ್ಜರ್ಲ್ಯಾಂಡಿನ ಪ್ರಮುಖ ಬ್ಯಾಂಕ್ ಯುಬಿಎಸ್ 1.75 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದ್ದರಿಂದ ವೆಚ್ಚವನ್ನು ಹೊಂದಿಸಲು 8,700 ಉದ್ಯೋಗಿಗಳನ್ನು ವಜಾಗೊಳಿಸಿರುವ ಬಗ್ಗೆ ವರದಿಯಾಗಿವೆ. ನೆಟ್‍ಫ್ಲಿಕ್ಸ್ ನಂತಹ ಕಂಪನಿಗಳು ಸಹ ಇದಕ್ಕೆ ಹೊರತಾಗಿಲ್ಲ. ಅಮೆರಿಕಾದ ರಾಬಿನ್‍ಹುಡ್ ಮತ್ತು ಹಲವಾರು ಕ್ರಿಪ್ಟೋ ಪ್ಲಾಟುಫಾರ್ಮುಗಳು ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸಲು ಮುಂದಾಗಿವೆ.

ಕೆಲ ದಿನಗಳ ಹಿಂದಿನ ಮಾಹಿತಿ ಪ್ರಕಾರ, ಆ್ಯಪ್ ಆಧಾರಿತ ಕ್ಯಾಬ್ ಸೇವೆಯ ಕಂಪನಿ ಓಲಾ ಕೂಡ ಒಂದು ಸಾವಿರ ಉದ್ಯೋಗಿಗಳನ್ನು ಕೈ ಬಿಡುವ ಬಗ್ಗೆ ಈಗಾಗಲೇ ತಿಳಿಸಿದೆ. ಈದೀಗ ಬಂದ ಹೊಸ ವರದಿಯ ಪ್ರಕಾರ, ಮತ್ತೊಂದು ಕಂಪನಿ $1 ಶತಕೋಟಿಯಷ್ಟು ವೆಚ್ಚವನ್ನು ಕಡಿತಗೊಳಿಸಲು ತನ್ನ ಉದ್ಯೋಗಿಗಳನ್ನು ವಜಾಗೊಳಿಸಿದೆ.

ಸಾವಿರಾರು ಉದ್ಯೋಗಿಗಳನ್ನು ಕೈ ಬಿಟ್ಟ ಒರಾಕಲ್ ಕಂಪನಿ
ಕಳೆದೆರಡು ದಿನಗಳಿಂದ ಭಾರತ ಸೇರಿದಂತೆ ಹಲವು ದೇಶಗಳ ಉದ್ಯೋಗಿಗಳನ್ನು ಒರಾಕಲ್ ಕಂಪನಿ ವಜಾಗೊಳಿಸಿದೆ. ಸಾವಿರಾರು ವಜಾಗಳಿಗೆ ಕಾರಣವಾಗಬಹುದಾದ $1 ಶತಕೋಟಿಯಷ್ಟು ವೆಚ್ಚವನ್ನು ಕಡಿತಗೊಳಿಸಲು ಒರಾಕಲ್ ಕಂಪನಿ ಯೋಜಿಸಿದೆ ಎಂದು ಸುದ್ದಿ ಪ್ರಕಟಣೆ ದಿ ಇನ್ಫರ್ಮೇಷನ್ ವರದಿ ಮಾಡಿದೆ.

ಇದನ್ನೂ ಓದಿ: Googleನಲ್ಲೂ ಜನ ಕೆಲಸ ಕಳೆದುಕೊಳ್ಳೋ ದಿನ ಬೇಗ ಬರುತ್ತಂತೆ, Sundar Pichai ಹೀಗಂದ್ರು!

ಒರಾಕಲ್ 40,000 ಜನರನ್ನು ನೇಮಿಸಿಕೊಂಡು ಯುಎಸ್ ಹೊರಗೆ ಭಾರತವನ್ನು ಅತಿದೊಡ್ಡ ವಿತರಣಾ ಕೇಂದ್ರವೆಂದು ಪರಿಗಣಿಸಿತ್ತು. ಜುಲೈನಲ್ಲಿ, ದಿ ಇನ್ಫಾರ್ಮೇಶನ್, ಉದ್ದೇಶಿತ ಉದ್ಯೋಗ ಕಡಿತಗಳು "ಗ್ರಾಹಕ ಸೇವೆ ಮತ್ತು ಇಕಾಮರ್ಸ್ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸುವ ಸಾಫ್ಟ್ ವೇರ್ ಅಪ್ಲಿಕೇಶನ್‌ಗಳಿಗಾಗಿ ಮಾರ್ಕೆಟಿಂಗ್‌ನಂತಹ ಘಟಕಗಳಲ್ಲಿ ಯುಎಸ್ ಮತ್ತು ಯುರೋಪ್ ಮೂಲದ ಕಾರ್ಮಿಕರ ಮೇಲೆ ಅಸಮಾನವಾಗಿ ಪರಿಣಾಮ ಬೀರಬಹುದು" ಎಂದು ವರದಿ ಮಾಡಿತ್ತು.

ಕಂಪನಿಯಿಂದ ವಜಾಗೊಂಡ ಉದ್ಯೋಗಿಗಳಿಂದ ಪೋಸ್ಟ್
ಒರಾಕಲ್ ನ ವಜಾಗೊಂಡ ಹಲವು ಉದ್ಯೋಗಿಗಳು ಈ ಬಗ್ಗೆ ತಿಳಿಸಿದ್ದು, ಹೊಸ ಕೆಲಸದ ಅನ್ವೇಷಣೆ ಆರಂಭಿಸಿದ್ದಾರೆ. ಒರಾಕಲ್‌ನ ಹೈದರಾಬಾದ್ ಕೇಂದ್ರದ ಪ್ರಧಾನ ಸಾಫ್ಟ್ ವೇರ್ ಅಭಿವೃದ್ಧಿ ಎಂಜಿನಿಯರ್ ವಂಶಿ ಕೃಷ್ಣ ಅವರು ಮಂಗಳವಾರ ತಮ್ಮ ಲಿಂಕ್ಡ್‌ಇನ್ ಪೋಸ್ಟ್ ನಲ್ಲಿ "ಒರಾಕಲ್ ಮಾರ್ಕೆಟಿಂಗ್ ಕ್ಲೌಡ್‌ನಲ್ಲಿ ಸಾಂಸ್ಥಿಕ ಪುನರ್ರಚನೆ ಮತ್ತು ವ್ಯಾಪಕ ವಜಾಗಳಿಂದ ದುರದೃಷ್ಟವಶಾತ್ ಪ್ರಭಾವಿತರಾಗಿದ್ದಾರೆ" ಎಂದು ಹೇಳಿದ್ದಾರೆ. ಕಳೆದ ಆರು ವರ್ಷಗಳಲ್ಲಿ ನನ್ನ ಉದ್ಯೋಗದಲ್ಲಿ ಕಲಿಯಲು ಮತ್ತು ಬೆಳೆಯಲು ಮತ್ತು ನನ್ನ ಸಹೋದ್ಯೋಗಿಗಳು, ವ್ಯವಸ್ಥಾಪಕರು ಮತ್ತು ಗ್ರಾಹಕರ ನಡುವೆ ಉತ್ತಮ ಸಂಬಂಧ ಹೊಂದಲು ಸಮರ್ಥರಾಗಿನಾಗಿದ್ದೆ ಎಂದು ಅವರು ಬರೆದುಕೊಂಡಿದ್ದಾರೆ, ಅಲ್ಲದೇ, ಬೇರೆ ಉದ್ಯೋಗ ಹುಡುಕುವುದಕ್ಕೂ ಆರಂಭಿಸಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ:  US Recession: ಅಮೆರಿಕದ ಆರ್ಥಿಕ ಹಿನ್ನಡೆ ಭಾರತದ ಐಟಿ ಉದ್ಯಮಕ್ಕೆ ಕೊಡಲಿಪೆಟ್ಟು ಕೊಡುತ್ತಾ?

ಉತ್ತರ ಅಮೆರಿಕಾದಲ್ಲಿನ ಒರಾಕಲ್‌ನ ಮಾಜಿ ಹಿರಿಯ ಮಾರಾಟ ನಿರ್ದೇಶಕಿ ರೀನಾ ಎಂ, ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಹಾಕಿ “ದುರದೃಷ್ಟವಶಾತ್, 23 ವರ್ಷಗಳ ನಂತರ, ನನ್ನ ಪ್ರತಿಭಾವಂತ ಸಹೋದ್ಯೋಗಿಗಳಲ್ಲಿ ಇಂದು ನಾನು ವಜಾಗೊಳಿಸುವಿಕೆಯ ಭಾಗವಾಗಿದ್ದೇನೆ. ನಾನು ಈ ಬೇಸಿಗೆಯ ನಂತರ ಕೆಲಸ ಹುಡುಕುವುದಾಗಿ” ಹೇಳಿದ್ದಾರೆ.

ಹೆಚ್ಚಿನ ವಜಾಗೊಳಿಸುವಿಕೆಯನ್ನು ಎದುರಿಸಿದ್ಯಾ ದೇಶ?
ಉದ್ಯೋಗಿಗಳ ವಜಾಗೊಳಿಸುವಿಕೆ ಇಲ್ಲಿಗೆ ನಿಲ್ಲದೇ, ಮುಂದಿನ ದಿನಗಳಲ್ಲಿ ಇದಕ್ಕೂ ಹೆಚ್ಚಿನ ವಜಾಗೊಳಿಸುವಿಕೆಯನ್ನು ದೇಶ ಎದುರಿಸಲಿದೆ ಎಂದು ನೇಮಕಾತಿ ಸಂಸ್ಥೆ ಮಾನ್ಸ್ಟರ್ ಇಂಡಿಯಾ ತಿಂಗಳ ಹಿಂದಷ್ಟೇ ವರದಿ ಮಾಡಿತ್ತು. ಸದ್ಯ ನಡೆಯುತ್ತಿರುವ ವಿದ್ಯಾಮಾನಗಳನ್ನು ಗಮನಿಸಿದರೆ, ವರದಿ ನಿಜವಾಗುತ್ತಿರುವಂತೆ ಕಾಣುತ್ತಿದೆ.
Published by:Ashwini Prabhu
First published: