ವಿಮೆ (insurance) ಅಥವಾ ಇನ್ಶೂರೆನ್ಸ್ ವ್ಯಕ್ತಿಗಳ ಯೋಗಕ್ಷೇಮ ಹಾಗೂ ಆರ್ಥಿಕ ನಷ್ಟದ ಸಮಯದಲ್ಲಿ ಜೀವರಕ್ಷಕ ಎಂದೆನಿಸಿದೆ. ವಾಹನ, ಕಾರ್ಖಾನೆ, ಸಂಸ್ಥೆಗಳು, ಕೈಗಾರಿಕಾ ಉತ್ಪನ್ನಗಳು ಹೀಗೆ ಮೌಲ್ಯಯುತವಾಗಿರುವ ವಸ್ತುಗಳಿಗೆ ವಿಮೆಗಳನ್ನು ಮಾಡಿಸುವ ನಾವು ಆರೋಗ್ಯ (Health) ಹಾಗೂ ಅತ್ಯಂತ ಬೆಲೆಬಾಳುವ ನಮ್ಮ ಜೀವಕ್ಕಾಗಿ ಇನ್ಶೂರೆನ್ಸ್ ಅನ್ನು ಮಾಡಿಸಲು ಮುಂದಾಗುವುದಿಲ್ಲ. ಜೀವ ವಿಮೆ ಮಾಡಿಸುವವರು ಬಹಳ ಕಮ್ಮಿ ಎಂದು ಸಂಶೋಧನೆಗಳು ತಿಳಿಸಿದ್ದು, ಶೇಕಡಾ ಮೂರಕ್ಕಿಂತ ಕಡಿಮೆ ವ್ಯಕ್ತಿಗಳು (Human) ಟರ್ಮ್ ಇನ್ಶೂರೆನ್ಸ್ ತೆಗೆದುಕೊಂಡಿದ್ದಾರೆ ಎಂದು ಅಧ್ಯಯನ ತಿಳಿಸಿದೆ.
ಟರ್ಮ್ ಇನ್ಶೂರೆನ್ಸ್ ಅನ್ನು ಏಕೆ ಆರಿಸಬೇಕು?
ಜೀವಕ್ಕೆ ರಕ್ಷಾ ಕವಚವಾಗಿರುವ ಟರ್ಮ್ ಇನ್ಶೂರೆನ್ಸ್ ನಾಮಿನಿ ಹಾಗೂ ಅವಲಂಬಿತರಿಗೆ ಸಾವಿನ ಸಂದರ್ಭದಲ್ಲಿ ವಿಮಾ ಮೊತ್ತವನ್ನು ಒದಗಿಸುತ್ತದೆ. ಎಲ್ಲಾ ಲೈಫ್ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಟರ್ಮ್ ಪಾಲಿಸಿಯ ಪ್ರೀಮಿಯಂ ಅತ್ಯಂತ ಕಡಿಮೆ ಮೌಲ್ಯದ್ದಾಗಿದೆ.
ಹಣಕಾಸಿನ ಜವಾಬ್ದಾರಿಯನ್ನು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು ಟರ್ಮ್ ಪಾಲಿಸಿಯನ್ನು ಹೊಂದಿರಬೇಕು. ಅಹಿತಕರ ಘಟನೆಯ ಸಂದರ್ಭದಲ್ಲಿ, ಹತ್ತಿರದ ಮತ್ತು ಆತ್ಮೀಯರ ಜೀವನಕ್ಕೆ ತೊಂದರೆಯನ್ನುಂಟು ಮಾಡುವುದಿಲ್ಲ ಎಂಬ ವಿಶ್ವಾಸವನ್ನು ಈ ಇನ್ಶೂರೆನ್ಸ್ ಉಂಟುಮಾಡುತ್ತದೆ, ಏಕೆಂದರೆ ವಿಮಾದಾರರ ಮರಣದ ಸಮಯದಲ್ಲಿ ಅವರ ಮನೆಯವರು ಪಾಲಿಸಿಯಿಂದ ವಿಮಾ ಮೊತ್ತವನ್ನು ಪಡೆಯುತ್ತಾರೆ.
ಹಣ ಹಿಂತಿರುಗಿಸುವ ಯೋಜನೆಯಲ್ಲ
ವ್ಯಕ್ತಿಯ ಪಾಲಿಸಿಯ ಅವಧಿಯು ಪೂರ್ಣಗೊಂಡರೆ, ಅವರು ಯಾವುದೇ ಹಣವನ್ನು ಪಡೆಯುವುದಿಲ್ಲ ಏಕೆಂದರೆ ಅದು ಹಣವನ್ನು ಹಿಂತಿರುಗಿಸುವ ಯೋಜನೆ ಅಲ್ಲ ಎಂಬುದು ಗಮನದಲ್ಲಿರಲಿ.
ನಿಮ್ಮ ಉಳಿತಾಯ ಅಥವಾ ಹೂಡಿಕೆಗಳು ಕಡಿಮೆ ಮತ್ತು ಜವಾಬ್ದಾರಿಗಳು ಹೆಚ್ಚಿರುವಾಗ ನಿಮ್ಮ ವೃತ್ತಿಜೀವನದ ಆರಂಭದಲ್ಲಿ ಟರ್ಮ್ ಇನ್ಶೂರೆನ್ಸ್ ಹೆಚ್ಚು ಮೌಲ್ಯಯುತವಾಗಿದೆ. ಪಾಲಿಸಿಯ ಅವಧಿಯು ಸಾಮಾನ್ಯವಾಗಿ ವ್ಯಕ್ತಿಯ ಕೆಲಸ ಅಥವಾ ನಿವೃತ್ತಿ ವಯಸ್ಸಿನವರೆಗೆ ಇರಬೇಕು.
ಇದನ್ನೂ ಓದಿ: ಡಿಜಿಲಾಕರ್ನಿಂದ ವ್ಯಾಪಾರಿಗಳಿಗಿದೆ ಇಷ್ಟೆಲ್ಲ ಪ್ರಯೋಜನ! ನೀವೂ ಚೆಕ್ ಮಾಡಿ
ನಿಮ್ಮ ಹೂಡಿಕೆಯು ನಿಮ್ಮ ಹಣಕಾಸಿನ ಜವಾಬ್ದಾರಿಗಿಂತ ಹೆಚ್ಚಾದಾಗ / ಬೆಳೆದಂತೆ ಟರ್ಮ್ ಇನ್ಶೂರೆನ್ಸ್ ಅವಶ್ಯಕತೆಗಳು ಕಡಿಮೆಯಾಗಬಹುದು.
ವಿಮೆ ಮತ್ತು ಹೂಡಿಕೆಯನ್ನು ಸಂಯೋಜಿಸಬೇಡಿ
ವಿಮೆ ಮತ್ತು ಹೂಡಿಕೆಯನ್ನು ಎಂದಿಗೂ ಸಂಯೋಜಿಸಬಾರದು. ವ್ಯಕ್ತಿಗಳು ಸಾಮಾನ್ಯವಾಗಿ ವಿಮಾ ಪಾಲಿಸಿಯನ್ನು ಹೂಡಿಕೆಯ ವಿಧವಾಗಿ ಪರಿಗಣಿಸುತ್ತಾರೆ. ಹಾಗಾಗಿಯೇ ಉತ್ತಮ ಹೂಡಿಕೆ ಮಾಡುವ ವಿಮಾ ಪಾಲಿಸಿಯನ್ನೇ ಖರೀದಿಸುತ್ತಾರೆ.
ಪಾಲಿಸಿಯ ಅವಧಿ ಉಳಿದುಕೊಂಡರೆ ಟರ್ಮ್ ಇನ್ಶೂರೆನ್ಸ್‌ನಲ್ಲಿ ಹಣ ಹಿಂತಿರುಗಿಸುವುದಿಲ್ಲ ಎಂಬ ಅಂಶವು ವ್ಯಥಾ ಹಣವನ್ನು ಖರ್ಚುಮಾಡಿದೆವು ಎಂಬ ಆಲೋಚನೆಗೆ ಕಾರಣವಾಗುತ್ತದೆ.
ವಿಮೆ ಹಾಗೂ ಇತರ ಹೂಡಿಕೆಗಳಿಗಿರುವ ವ್ಯತ್ಯಾಸ
ಮ್ಯೂಚುಯಲ್ ಫಂಡ್‌ಗಳು ಅಥವಾ ಇತರ ಹೂಡಿಕೆ ಉತ್ಪನ್ನಗಳನ್ನು ಲೆಕ್ಕಾಚಾರ ಮಾಡಲು ಸಂಯುಕ್ತ ವಾರ್ಷಿಕ ಬೆಳವಣಿಗೆ ದರ (CAGR) ಅಥವಾ ಆಂತರಿಕ ಆದಾಯದ ದರ ಮೊದಲಾದ ಏಕರೂಪದ ಲೆಕ್ಕಾಚಾರ ವಿಧಾನವನ್ನು ಹಣ ಹಿಂತಿರುಗುವ ವಿಮೆಯಲ್ಲಿ ಜನರು ಬಳಸುವುದಿಲ್ಲ. ಹೂಡಿಕೆ ಹಾಗೂ ವಿಮೆ ಪಾಲಿಸಿಯಲ್ಲಿ ಮರಳಿ ಬರುವ ಹಣವೆಷ್ಟು ಎಂಬುದನ್ನೇ ಲೆಕ್ಕಾಚಾರ ಹಾಕುತ್ತಾರೆ.
ಉದಾಹರಣೆಗೆ, ರೂ 50,000 ವಾರ್ಷಿಕ ಪ್ರೀಮಿಯಂ ಪಾವತಿಗೆ 12 ವರ್ಷಗಳಿಗೆ (14 ರಿಂದ 25 ನೇ ವರ್ಷ) ರೂ 1.13 ಲಕ್ಷದ ಖಾತರಿಯ ಲಾಭವನ್ನು ವಿಮಾ ಕಮ್ ಹೂಡಿಕೆ ಪಾಲಿಸಿ ಒದಗಿಸುತ್ತದೆ. ಈ ಪಾಲಿಸಿಯಲ್ಲಿ ವಿಮಾ ಮೊತ್ತವು 8.1 ಲಕ್ಷ ರೂ ಆಗಿದೆ.
PPF ನಂತಹ ಹೂಡಿಕೆ ಉತ್ಪನ್ನವು ವಾರ್ಷಿಕ 7.1% ದಷ್ಟು ಆದಾಯವನ್ನು ನೀಡುತ್ತದೆ ಆದರೆ ಉತ್ತಮ ಹೂಡಿಕೆಯಲ್ಲ ಎಂಬುದಾಗಿ ಪರಿಗಣಿತವಾಗಿದೆ. ಒಬ್ಬರು PPF ನಲ್ಲಿ ಇದೇ ಮಾದರಿಯಲ್ಲಿ ಹೂಡಿಕೆ ಮಾಡಿದ್ದರೆ ಹೂಡಿಕೆಯು 25 ವರ್ಷಗಳಲ್ಲಿ 21.95 ಲಕ್ಷ ರೂ ಆಗಿದೆ.
ಹಾಗಾಗಿ ವಿಮೆ ಮತ್ತು ಹೂಡಿಕೆ ಎಂಬ ಅಂಶವನ್ನು ಮುಂದಿಟ್ಟುಕೊಂಡು ನೀವು ಮುಂದುವರಿದಲ್ಲಿ ಉತ್ಪನ್ನವು ಅರ್ಥಪೂರ್ಣ ಆದಾಯವನ್ನು ಒದಗಿಸುವುದಿಲ್ಲ ಅಥವಾ ಸಾಕಷ್ಟು ವ್ಯಾಪ್ತಿಯನ್ನು ಒದಗಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ