Pension: ನಿಮ್​ ಹೆಂಡ್ತಿ ಹೆಸ್ರಲ್ಲಿ ಈ ಸ್ಪೆಷಲ್ ಅಕೌಂಟ್​ ಓಪನ್​ ಮಾಡಿ! ಪ್ರತಿ ತಿಂಗಳು 40 ಸಾವಿರಕ್ಕೂ ಹೆಚ್ಚು ಹಣ ಗಳಿಸಿ

ಇಂದು ನಾವು ಇಲ್ಲಿ ಹೊಸದೊಂದು ಹೂಡಿಕೆ (Invest) ಬಗ್ಗೆ ಹೇಳುತ್ತಿದ್ದೇವೆ. ನಿಮ್ಮ ಹೆಂಡತಿ ಹೆಸರಲ್ಲಿ ಇಲ್ಲಿ ಹೂಡಿಕೆ ಮಾಡಿದರೆ,  ಅವರಿಗೆ 60 ವರ್ಷವಾದ ಬಳಿಕ ಪಿಂಚಣಿ (Pension) ರೂಪದಲ್ಲಿ ಹಣ (Money) ಅವರ ಕೈಸೇರಲಿದೆ. ಅದು ಶೇಕಡಾ 10ಕ್ಕಿಂತ ಹೆಚ್ಚಿನ ಲಾಭದ ಜೊತೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹೆಂಡತಿ (Wife) ಯೊಬ್ಬಳು ಮನೆಯೊಳಗೆ ಇದ್ದರೆ ನನಗದು ಕೋಟಿ (Crore) ರೂಪಾಯಿ ಎಂಬ ಹಾಡನ್ನು ಕೇಳಿದ್ದೀರಾ. ಹೌದು, ತಾನೂ ಹುಟ್ಟಿ ಬೆಳೆದ ಮನೆಯನ್ನು ಬಿಟ್ಟು ಬಂದು, ಗಂಡ (Husband) ನ ಮನೆಯನ್ನು ಬೆಳಗುವ ಹೆಂಡತಿ ಬಗ್ಗೆ ಗಂಡಂದಿರು ಹೆಚ್ಚಿನ ಕಾಳಜಿ ವಹಿಸಬೇಕು. ಆಕೆಯ ಮನಸ್ಸಿಗೆ ನೋವುಂಟು ಮಾಡುವ ಕೆಲಸವನ್ನು ಎಂದಿಗೂ ಮಾಡಬಾರದು. ಹೆಂಡತಿಗಾಗಿ ಮೆಡಿಕಲ್​ ಇನ್ಶೂರೆನ್ಸ್ (Medical Insurance) ​, ಟರ್ಮ್ ಇನ್ಶೂರೆನ್ಸ್ (Term Insurance)​ ಎಲ್ಲವನ್ನು ಮಾಡಿಸುವುದು ವಾಡಿಕೆ. ತನಗೆ ವಯಸ್ಸಾದ ಮೇಲೆ, ಅಥವಾ ತಾನು ನಿಧನ ಹೊಂದಿದರೆ ಹೆಂಡತಿ ಕಷ್ಟ ಪಡಬಾರದು ಎಂದು ಎಲ್ಲ ಗಂಡಸರು ಟರ್ಮ್ ಇನ್ಶೂರೆನ್ಸ್​ ಮಾಡಿಸಿರುತ್ತಾರೆ. ಅದರ ಜೊತೆಗೆ ಇಂದು ನಾವು ಇಲ್ಲಿ ಹೊಸದೊಂದು ಹೂಡಿಕೆ (Invest) ಬಗ್ಗೆ ಹೇಳುತ್ತಿದ್ದೇವೆ. ನಿಮ್ಮ ಹೆಂಡತಿ ಹೆಸರಲ್ಲಿ ಇಲ್ಲಿ ಹೂಡಿಕೆ ಮಾಡಿದರೆ,  ಅವರಿಗೆ 60 ವರ್ಷವಾದ ಬಳಿಕ ಪಿಂಚಣಿ (Pension) ರೂಪದಲ್ಲಿ ಹಣ (Money) ಅವರ ಕೈಸೇರಲಿದೆ. ಅದು ಶೇಕಡಾ 10ಕ್ಕಿಂತ ಹೆಚ್ಚಿನ ಲಾಭದ ಜೊತೆ. 

ಎನ್​ಪಿಎಸ್​ ಹೊಸ ಪಿಂಚಣಿ ವ್ಯವಸ್ಥೆ!

ನಿಮ್ಮ ಹೆಂಡತಿಯ ಹೆಸರಿನಲ್ಲಿ ನೀವು  ಹೊಸ ಪಿಂಚಣಿ ವ್ಯವಸ್ಥೆ (NPS) ಖಾತೆಯನ್ನು ತೆರೆಯಬಹುದು. NPS ಖಾತೆಯು ನಿಮ್ಮ ಹೆಂಡತಿಗೆ 60 ವರ್ಷ ವಯಸ್ಸಾದ ಮೇಲೆ ಒಂದು ದೊಡ್ಡ ಮೊತ್ತವನ್ನು ನೀವು ಪಡೆಯಬಹುದು. ಇದರೊಂದಿಗೆ, ಅವರು ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ ನಿಯಮಿತ ಆದಾಯವನ್ನು ಪಡೆಯಲಿದ್ದಾರೆ. ಇಷ್ಟೇ ಅಲ್ಲ, NPS ಖಾತೆಯೊಂದಿಗೆ ನಿಮ್ಮ ಹೆಂಡತಿಗೆ ಪ್ರತಿ ತಿಂಗಳು ಎಷ್ಟು ಪಿಂಚಣಿ ಸಿಗುತ್ತದೆ ಎಂಬುದನ್ನು ಸಹ ನೀವೇ ಡಿಸೈಡ್ ಮಾಡಬಹುದು. ಇನ್ಯಾಕೆ ತಡ ಇಂದೇ ಈ ಹೊಸ ಪಿಂಚಣಿಯಲ್ಲಿ ಹೂಡಿಕೆ ಮಾಡಿ. ಈ ಎನ್​ಪಿಎಸ್​ನಿಂದ ಆಗುವ ಪ್ರಯೋಜನಗಳೇನು ಅಂತ ನೀವೇ ನೋಡಿ.

ಪ್ರತಿ ತಿಂಗಳು ಸಿಗುತ್ತೆ 10 ಸಾವಿರ ರೂಪಾಯಿ ಪಿಂಚಣಿ!

ಪ್ರತಿಯೊಬ್ಬರಿಗೂ ವೃದ್ಧಾಫ್ಯದಲ್ಲಿನ ಆರ್ಥಿಕ ಚಿಂತೆಯ ಪ್ರಶ್ನೆ ಕಾಡುತ್ತಿರುತ್ತಿದೆ. ಮುಂದಿನ ಇಳಿ ವಯಸ್ಸಿನಲ್ಲಿ ನಾವು ಹೇಗೆ ನಮ್ಮ ಆರ್ಥಿಕ ಸ್ವಾವಲಂನೆಯನ್ನು ಸಾಧಿಸಬೇಕೆ ಎಂಬುದು ನಮಗೆ ಆಗಾಗ ಕಾಡುತ್ತಿರುತ್ತದೆ. ಈ ಯೋಜನೆಯಡಿ ಮೂಲಕ ದಂಪತಿಗಳಿಬ್ಬರ ಪ್ರತ್ಯೇಕ ಖಾತೆಗಳ ಮೂಲಕ ಮೂಲಕ ಪ್ರತಿ ತಿಂಗಳಿಗೆ 10,000 ರೂಪಾಯಿ ಪಿಂಚಣಿ ಪಡೆಯಬಹದಾಗಿದೆ.

ಇದನ್ನೂ ಓದಿ:  ಕ್ರೆಡಿಟ್ ಕಾರ್ಡ್ ಬಳಕೆದಾರರೇ ಎಚ್ಚರ; ಈ ಸಲಹೆಗಳನ್ನ ಪಾಲಿಸಿ ಹಣ ಉಳಿಸಿ

2014ರಲ್ಲೇ ಪ್ರಾರಂಭವಾದ ಅಟಲ್​ ಪಿಂಚಣಿ ಯೋಜನೆ!

ಅಟಲ್ ಪಿಂಚಣಿ ಯೋಜನೆ ಯನ್ನು 2014 ರಲ್ಲಿ ಪ್ರಾರಂಭಿಸಲಾಯಿತು. 18 ರಿಂದ 40 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಆ ಸಮಯದಲ್ಲಿ ಇದನ್ನು ಅಸಂಘಟಿತ ವಲಯದಲ್ಲಿನ ಕಾರ್ಮಿಕರಿಗಾಗಿ ಯೋಜಿಸಲಾಗಿತ್ತು ತದನಂತರದ ದಿನಗಳಲ್ಲಿ ಇದನ್ನು ಬದಲಾಯಿಸಲಾಗಿದೆ.ಈ ಯೋಜನೆಯಲ್ಲಿ, ಠೇವಣಿದಾರರು ಅಂದರೆ ಗಂಡ ಮತ್ತು ಹೆಂಡತಿ ಕ್ರಮೇಣ 60 ವರ್ಷ ವಯಸ್ಸಾದ ನಂತರ ಪಿಂಚಣಿ ಪಡೆಯಲು ಪ್ರಾರಂಭಿಸುತ್ತಾರೆ.

ನಿಮ್ಮ ಪತ್ನಿ 30 ವರ್ಷ ವಯಸ್ಸಿನವರಾಗಿದ್ದರೆ ಮತ್ತು ನೀವು ಅವರ NPS ಖಾತೆಯಲ್ಲಿ ಪ್ರತಿ ತಿಂಗಳು 5000 ರೂ. ವಾರ್ಷಿಕವಾಗಿ ಹೂಡಿಕೆಗೆ ಶೇ.10ರಷ್ಟು ಲಾಭ ಬಂದರೆ, 60ನೇ ವಯಸ್ಸಿನಲ್ಲಿ ಅವರ ಖಾತೆಯಲ್ಲಿ ಒಟ್ಟು 1.12 ಕೋಟಿ ರೂಪಾಯಿ ಇರಲಿದೆ. ಅವರು ಪ್ರತಿ ತಿಂಗಳು ಸುಮಾರು 45,000 ರೂಪಾಯಿ ಪಿಂಚಣಿ ಪಡೆಯಲು ಪ್ರಾರಂಭಿಸುತ್ತಾರೆ. ಇದು ಕೇವಲ 5 ವರ್ಷ 10 ವರ್ಷ ಅಂತಲ್ಲ ಪ್ರತಿ ತಿಂಗಳು ಜೀವನಪರ್ಯಂತ ಅವರು ಈ ಪಿಂಚಣಿಯನ್ನು ಪಡೆಯುತ್ತಾರೆ.

ಇದನ್ನೂ ಓದಿ: ಮಕ್ಕಳ ಶಾಲಾ ಪ್ರವೇಶಕ್ಕೆ ಆಧಾರ್ ಕಾರ್ಡ್ ಕಡ್ಡಾಯವೇ? ಇಲ್ಲಿದೆ ಮಾಹಿತಿ

30 ವರ್ಷ ಇಲ್ಲಿ ಹೂಡಿಕೆ ಮಾಡಿದ್ರೆ ಸಿಗುವ ಹಣವೆಷ್ಟು?

ವಯಸ್ಸು - 30 ವರ್ಷಗಳು

ಒಟ್ಟು ಹೂಡಿಕೆಯ ಅವಧಿ - 30 ವರ್ಷಗಳು

ಮಾಸಿಕ ಕೊಡುಗೆ - 5,000 ರೂ.

ಹೂಡಿಕೆಯ ಮೇಲೆ ಅಂದಾಜು ಲಾಭ - 10%

ಒಟ್ಟು ಪಿಂಚಣಿ ನಿಧಿ - 1,11,98,471 ರೂ.(ಮೆಚ್ಯೂರಿಟಿಯಲ್ಲಿ ಮೊತ್ತವನ್ನು ಹಿಂಪಡೆಯಬಹುದು)

ವರ್ಷಾಶನ ಯೋಜನೆಯನ್ನು ಖರೀದಿಸುವ ಮೊತ್ತ - 44,79,388 ರೂ.

ಅಂದಾಜು  ವರ್ಷದ ಬಡ್ಡಿ ದರ 8% - ರೂ 67,19,083 ರೂ.

ಮಾಸಿಕ ಪಿಂಚಣಿ- 44,793 ರೂ.
Published by:Vasudeva M
First published: