Business Idea: ಬರೀ 25,000 ರೂಪಾಯಿಗಳಲ್ಲಿ ವ್ಯವಹಾರ ಶುರು ಮಾಡಬೇಕೇ? ಇಲ್ಲಿವೆ ನೋಡಿ 8 ಲಾಭದಾಯಕ ವ್ಯವಹಾರಗಳು

ಹೆಚ್ಚು ಹಣವನ್ನು ಬಂಡವಾಳ ಹಾಕಲು ಆಗದೆ ಇದ್ದವರಿಗೆ ಇಲ್ಲಿವೆ ನೋಡಿ ಕೇವಲ 25,000 ರೂಪಾಯಿಯಲ್ಲಿ ಶುರು ಮಾಡಬಹುದಾದ ಸಣ್ಣ ವ್ಯವಹಾರಗಳು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈ ಕೋವಿಡ್-19 (Covid 19) ಸಾಂಕ್ರಾಮಿಕ ರೋಗದ ಹಾವಳಿಯಿಂದಾಗಿ ನಗರ ಬಿಟ್ಟು ಹಳ್ಳಿ ಸೇರಿದ ಜನರು ಒಂದೆಡೆಯಾದರೆ, ತಮ್ಮ ಕೆಲಸವನ್ನು ಕಳೆದುಕೊಂಡು ಹಳ್ಳಿಗೆ ಬಂದವರು ಇದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದೇ ರೀತಿ, ಕೆಲಸವನ್ನು ಕಳೆದುಕೊಂಡು ನೀವು ಚಿಂತಿತರಾಗಿದ್ದರೆ, ಇಲ್ಲಿವೆ ನೋಡಿ ನಿಮಗಾಗಿ 8 ಆನ್‌ಲೈನ್ (Online) ಸಣ್ಣ ವ್ಯವಹಾರಗಳು (Small Business). ವಿಶೇಷವಾಗಿ ಕೆಲಸ ಕಳೆದುಕೊಂಡ ನಂತರ ಹೆಚ್ಚು ಹಣವನ್ನು (Money) ಬಂಡವಾಳವಾಗಿ ಹಾಕಿ ದೊಡ್ಡ ವ್ಯವಹಾರವನ್ನು ಶುರು ಮಾಡಲು ಹಿಂದೇಟು ಹಾಕುವುದುಂಟು. ಹೀಗೆ ಹೆಚ್ಚು ಹಣವನ್ನು ಬಂಡವಾಳ ಹಾಕಲು ಆಗದೆ ಇದ್ದವರಿಗೆ ಇಲ್ಲಿವೆ ನೋಡಿ ಕೇವಲ 25,000 ರೂಪಾಯಿಯಲ್ಲಿ ಶುರು ಮಾಡಬಹುದಾದ ಸಣ್ಣ ವ್ಯವಹಾರಗಳು. ಇಂತಹ ವ್ಯವಹಾರಗಳನ್ನು ಶುರು ಮಾಡುವುದು ಒಂದು ಕಡೆಯಾದರೆ, ಇದನ್ನು ಯಶಸ್ವಿಯಾಗಿಸುವುದು ಒಂದು ಸುದೀರ್ಘವಾದ ಪ್ರಯಾಣವಾಗಿದೆ ಎಂದು ಹೇಳಬಹುದು. ಆದರೂ, ಪ್ಲ್ಯಾನ್‌ಗಳು ಸರಿಯಾಗಿದ್ದಾಗ, ಇದು ಸ್ಥಾಪಕರು, ಮಧ್ಯಸ್ಥಗಾರರು ಮತ್ತು ತಮ್ಮ ಜೀವನೋಪಾಯಕ್ಕಾಗಿ ಅದನ್ನು ಅವಲಂಬಿಸಿರುವ ಹಲವಾರು ಇತರರಿಗೆ ಪ್ರಯೋಜನಗಳನ್ನು ನೀಡುತ್ತದೆ.

ಇಂದು, ಸಣ್ಣ ಹೂಡಿಕೆಯೊಂದಿಗೆ ಆನ್‌ಲೈನ್ ಮಾಧ್ಯಮದಲ್ಲಿ ವ್ಯವಹಾರವನ್ನು ಪ್ರಾರಂಭಿಸುವುದು ಕಷ್ಟವೇನಲ್ಲ. ಇಲ್ಲಿವೆ ನೋಡಿ 8 ಲಾಭದಾಯಕ ವ್ಯವಹಾರಗಳು. ಇವುಗಳನ್ನು ನೀವು 25,000 ರೂಪಾಯಿ ಬಂಡವಾಳದಲ್ಲಿಯೇ ಮಾಡಬಹುದಾಗಿದೆ.

ಕಡಿಮೆ ಬಂಡವಾಳದ ಕೆಲಸಗಳು:

1. ಕೃತಕ ಆಭರಣಗಳ ವ್ಯವಹಾರ:

ಆಭರಣಗಳ ವ್ಯವಹಾರ ಅದರಲ್ಲೂ ಕೃತಕ ಆಭರಣಗಳ ವ್ಯವಹಾರ ಮಾಡುವುದು ಒಳ್ಳೆಯ ಆಯ್ಕೆ. ಎಂದಿಗೂ ಇದರ ಬೇಡಿಕೆ ಕಡಿಮೆಯಾಗುವುದಿಲ್ಲ. ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿಯೂ, ಹೆಚ್ಚಿನ ವ್ಯವಹಾರಗಳು ಮುಚ್ಚಿದಾಗ, ಕೃತಕ ಆಭರಣಗಳ ಬೇಡಿಕೆ ಮಾತ್ರ ಹಾಗೆಯೇ ಉಳಿದಿತ್ತು ಎಂದು ಹೇಳಬಹುದು.

ಕೃತಕ ಆಭರಣ ವ್ಯವಹಾರವನ್ನು ಶುರು ಮಾಡುವುದಕ್ಕೆ ನಿಮ್ಮ ಬಳಿ 25,000 ರೂಪಾಯಿಗಳಿಗಿಂತಲೂ ಕಡಿಮೆ ಇದ್ದರೂ ಶುರು ಮಾಡಬಹುದು. ಬೆಂಗಳೂರು ಮೂಲದ ಜ್ಯುವೆಲ್ಲರಿ ಬ್ರ್ಯಾಂಡ್ ರುಬಾನ್ಸ್ ಸ್ಥಾಪಕ ಚಿನು ಕಲಾ, ಕೃತಕ ಆಭರಣ ವ್ಯವಹಾರವನ್ನು ಪ್ರಾರಂಭಿಸುವುದು ಉತ್ತಮ ಆಲೋಚನೆಯಾಗಿದೆ ಎಂದು ಹೇಳುತ್ತಾರೆ ಮತ್ತು ದೊಡ್ಡ ಪ್ರಮಾಣದಲ್ಲಿ ಉತ್ಪನ್ನಗಳನ್ನು ಖರೀದಿಸಲು ಒಬ್ಬರು 15,000 ರಿಂದ 20,000 ರೂಪಾಯಿಗಳ ನಡುವೆ ಹೂಡಿಕೆ ಮಾಡಬಹುದು ಎಂದು ಸಲಹೆ ನೀಡುತ್ತಾರೆ.

ಇದನ್ನೂ ಓದಿ: Business Idea: ಒಂದು ಲಕ್ಷ ರೂ. ಹೂಡಿಕೆ ಮಾಡಿ 60 ಲಕ್ಷಕ್ಕೂ ಹೆಚ್ಚು ಲಾಭ ನಿಮ್ಮದಾಗಿಸಿಕೊಳ್ಳಿ

ಟ್ರೇಡ್ ಇಂಡಿಯಾದಂತಹ ಪೋರ್ಟಲ್‌ಗಳಿವೆ, ಅಲ್ಲಿ ಜನರು ಆನ್‌ಲೈನ್ ಅಂಗಡಿಯನ್ನು ಶುರು ಮಾಡುವುದರ ಮೂಲಕ ಕೃತಕ ಆಭರಣಗಳನ್ನು ಸಂಗ್ರಹಿಸಲು ಮತ್ತು ಮಾರಾಟ ಮಾಡಲು ಉತ್ತಮ ತಯಾರಕರೊಂದಿಗೆ ಸಂಪರ್ಕ ಸಾಧಿಸಬಹುದು. ಅಲ್ಲದೇ ವ್ಯವಹಾರದ ಮೊದಲ ಗ್ರಾಹಕರು ಸ್ನೇಹಿತರು ಮತ್ತು ಕುಟುಂಬದವರಾಗಿರಬಹುದು. ಅವರು ತಮ್ಮ ವಲಯದಲ್ಲಿ ಉತ್ಪನ್ನಗಳನ್ನು ಅನುಮೋದಿಸಬಹುದು ಮತ್ತು ಆನ್‌ಲೈನ್‌ನಲ್ಲಿ ಖರೀದಿಸಲು ಅವರನ್ನು ಪ್ರೇರೇಪಿಸಬಹುದು ಎಂದು ಚಿನು ಹೇಳುತ್ತಾರೆ.

2. ಮನೆಯಲ್ಲಿಯೇ ಬೇಕರಿ ಐಟಂಗಳನ್ನು ತಯಾರಿಸುವುದು:

ಹೋಂ ಬೇಕರಿಯ ವ್ಯವಹಾರವನ್ನು ಸ್ಥಾಪಿಸಲು ಭಾರಿ ಹೂಡಿಕೆಯ ಅಗತ್ಯವಿಲ್ಲ. ಆದರೆ ಬೇಕ್ ಮಾಡುವ ಬಲವಾದ ಉದ್ದೇಶ ಮತ್ತು ಓವನ್ ಅನ್ನು ಸಂಗ್ರಹಿಸಲು ಮತ್ತು ಬೇಕಿಂಗ್ ಮಾಡಲು ಪದಾರ್ಥಗಳನ್ನು ಖರೀದಿಸಲು ಸ್ವಲ್ಪ ಹಣ ಬೇಕಾಗುತ್ತದೆ.

ಮಂಗಳೂರಿನ ಬೇಕರ್ಸ್ ಟ್ರೀಟ್ ಸ್ಥಾಪಕ ಮರಿಯಮ್ ಮೊಹಿದ್ದೀನ್, ಉತ್ಸಾಹದಿಂದ ನಿರ್ಮಿಸಲಾದ ಒಂದು ಸಣ್ಣ ಬೇಕರಿ ಸೆಟ್‌ನಿಂದ ಪ್ರಾರಂಭಿಸಿದರು. ಬೇಕಿಂಗ್ ಸಹ ಒಂದು ಕಲೆ ಮತ್ತು ಈ ಉದ್ಯಮದಲ್ಲಿ ವ್ಯವಹಾರವನ್ನು ಸ್ಥಾಪಿಸಲು ಮತ್ತು ಯಶಸ್ವಿಯಾಗಲು ಒಬ್ಬರು ಚೆನ್ನಾಗಿ ಯೋಚಿಸಿ ಶುರು ಮಾಡುವುದು ಒಳ್ಳೆಯದು" ಎಂದು ಅವರು ಹೇಳುತ್ತಾರೆ.

"ಸಣ್ಣ ಪ್ರಮಾಣದಿಂದ ಪ್ರಾರಂಭಿಸುವಾಗ ಬ್ರ್ಯಾಂಡಿಂಗ್ ಮಾಡುವ ಅಗತ್ಯವಿಲ್ಲ. ಆದರೆ ಗುಣಮಟ್ಟದ ಮೇಲೆ ಗಮನ ಹರಿಸಿ ಮತ್ತು ಗ್ರಾಹಕರು ಮೆಚ್ಚುವ ರುಚಿಯನ್ನು ನೀಡಿ" ಎಂದು ಅವರು ಹೇಳುತ್ತಾರೆ. ಮನೆ ಬೇಕರಿಯನ್ನು 15,000 ರೂಪಾಯಿಗಳಿಂದ 25,000 ರೂಪಾಯಿಗಳವರೆಗೆ ಹೂಡಿಕೆಯೊಂದಿಗೆ ಪ್ರಾರಂಭಿಸಬಹುದು.

3. ಮನೆಯಲ್ಲಿ ತಯಾರಿಸಿದ ಮೇಣದ ಬತ್ತಿಗಳು:

ಕಳೆದ ಕೆಲವು ವರ್ಷಗಳಲ್ಲಿ, ಜನರು ತಮ್ಮ ಮನೆಯಲ್ಲಿಯೇ ಉಡುಗೊರೆ ನೀಡುವ ಉದ್ದೇಶಗಳಿಗಾಗಿ ಮತ್ತು ಮನೆಯ ಒಳಾಂಗಣವನ್ನು ಅಲಂಕರಿಸಲು ಹೆಚ್ಚಿನ ಮೇಣದ ಬತ್ತಿಗಳನ್ನು, ವಿಶೇಷವಾಗಿ ಪರಿಮಳಯುಕ್ತ ಮೇಣದ ಬತ್ತಿಗಳನ್ನು ಖರೀದಿಸುವುದನ್ನು ನಾವು ನೋಡುತ್ತೇವೆ. ಮೇಣದ ಬತ್ತಿಯ ವ್ಯವಹಾರವನ್ನು ಮನೆಯಲ್ಲಿ ತಯಾರಿಸುವ ಮೂಲಕ ಅಥವಾ ಮೂರನೇ ವ್ಯಕ್ತಿಯಿಂದ ಖರೀದಿಸುವ ಮೂಲಕ ಕನಿಷ್ಠ ಹೂಡಿಕೆಯೊಂದಿಗೆ ಪ್ರಾರಂಭಿಸಬಹುದು.

ಉದ್ಯಮವನ್ನು ಪ್ರಾರಂಭಿಸಲು ಬಳಸುವ ಕಚ್ಚಾ ವಸ್ತುಗಳಲ್ಲಿ ಮೇಣ, ಬತ್ತಿ, ಅಚ್ಚುಗಳು, ದಾರ, ಸುವಾಸನೆ ಎಣ್ಣೆಗಳು ಮತ್ತು ಹೆಚ್ಚಿನವು ಸೇರಿವೆ. ಇದಲ್ಲದೆ, ನೀವು ಕೆಲವು ಮೇಣದ ಬತ್ತಿ ತಯಾರಿಸುವ ಉಪಕರಣಗಳನ್ನು ಸಹ ಹೊಂದಿರಬೇಕು. ಇದರಲ್ಲಿ ಕರಗುವ ಮಡಿಕೆ, ತಾಪಮಾಪಕ, ಸುರಿಯುವ ಮಡಿಕೆ, ತೂಕದ ಮಾಪಕ, ಸುತ್ತಿಗೆ ಮತ್ತು ಓವನ್ ಸೇರಿವೆ.

ಅನೇಕ ಆರಂಭಿಕ ಮೇಣದ ಬತ್ತಿ ತಯಾರಕರು ತಮ್ಮ ಉತ್ಪನ್ನಗಳನ್ನು ಇಟ್ಸಿ ಬಿಟ್ಸಿಯಲ್ಲಿ ಪಟ್ಟಿ ಮಾಡುವ ಮೂಲಕ ಪ್ರಾರಂಭಿಸಬಹುದು. ಇದು ಮುಂಬೈ, ಬೆಂಗಳೂರು, ಹೈದರಾಬಾದ್, ಚೆನ್ನೈ, ಪುಣೆ, ಅಹಮದಾಬಾದ್, ಮೈಸೂರು, ಶಿವಮೊಗ್ಗ ಮತ್ತು ದೆಹಲಿ ಸೇರಿದಂತೆ ದೇಶಾದ್ಯಂತ 26 ಮಳಿಗೆಗಳನ್ನು ಹೊಂದಿದೆ.

4. ಬೆಡ್‌ಶೀಟ್ ವ್ಯವಹಾರ:

ಆನ್‌ಲೈನ್‌ನಲ್ಲಿ ಬೆಡ್‌ಶೀಟ್ ವ್ಯವಹಾರವನ್ನು ಪ್ರಾರಂಭಿಸುವುದು ಸ್ಥಾಪಕರಿಗೆ ಸಾಕಷ್ಟು ಪಾಕೆಟ್-ಸ್ನೇಹಿಯಾಗಿದೆ, ಏಕೆಂದರೆ ಉತ್ಪನ್ನಗಳನ್ನು ದೊಡ್ಡ ಪ್ರಮಾಣದಲ್ಲಿ ಮತ್ತು ತಯಾರಕರಿಂದ ಅಗ್ಗದ ವೆಚ್ಚದಲ್ಲಿ ಖರೀದಿಸಬಹುದು. ಉದ್ಯಮಿಗಳು ಇಂಡಿಯಾ ಮಾರ್ಟ್ ಮೂಲಕ ಉತ್ಪಾದಕರೊಂದಿಗೆ ಸಂಪರ್ಕ ಸಾಧಿಸಬಹುದು ಅಥವಾ ತಮ್ಮ ಬೆಡ್‌ಶೀಟ್‌ಗಳಿಗೆ ಹೆಸರುವಾಸಿಯಾದ ಪಾಣಿಪತ್, ಜೈಪುರ, ದೆಹಲಿ, ಸೂರತ್ ಮತ್ತು ಕೋಲ್ಕತ್ತಾದಂತಹ ನಗರಗಳಿಂದ ನೇರವಾಗಿ ಖರೀದಿಸಬಹುದು.

ದೆಹಲಿಯ ಸದರ್ ಬಜಾರ್‌ನಿಂದ ಸಹ ನೀವು ಈ ಉತ್ಪನ್ನಗಳನ್ನು ಸಂಗ್ರಹಿಸುವ ಮೂಲಕ ಮನೆಯಿಂದಲೇ ಬೆಡ್‌ಶೀಟ್ ವ್ಯವಹಾರವನ್ನು ಪ್ರಾರಂಭಿಸಿದ್ದೇನೆ ಎಂದು ಜಬಲ್‌ಪುರ ಮೂಲದ ಉದ್ಯಮಿ ರೇಖಾ ಸಭರ್ವಾಲ್ ಹೇಳಿದ್ದಾರೆ.

5. ಹಪ್ಪಳದ ವ್ಯವಹಾರ:

ಅಗತ್ಯವಿರುವ ಸಣ್ಣ ಹೂಡಿಕೆಯಿಂದಾಗಿ ಹಪ್ಪಳದ ವ್ಯವಹಾರವು ಲಾಭದಾಯಕವಾಗಬಹುದು. ಮನೆಯಲ್ಲಿಯೇ ಪಾಪಡ್ ತಯಾರಿಸುವ ಮೂಲಕ ಮೈಕ್ರೋ-ಮಟ್ಟದಲ್ಲಿ ವ್ಯವಹಾರವನ್ನು ಪ್ರಾರಂಭಿಸಬಹುದು ಅಥವಾ ಅಮೃತಸರ್, ಗುರುವಾಯೂರ್ ಮತ್ತು ಬಿಕನೇರ್‌ನಲ್ಲಿರುವ ಹಪ್ಪಳ ತಯಾರಕರೊಂದಿಗೆ ಸಹಯೋಗ ಹೊಂದಬಹುದು.

ಹಪ್ಪಳಗಳು ಅನೇಕ ವಿಧಗಳಲ್ಲಿ ಬರುತ್ತವೆ - ಅಕ್ಕಿ ಹಪ್ಪಳ, ಉದ್ದಿನ ಬೇಳೆ ಹಪ್ಪಳ, ಹೆಸರು ಬೇಳೆ ಹಪ್ಪಳ, ಆಲೂಗೆಡ್ಡೆ ಹಪ್ಪಳ. ನಿಮ್ಮ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಬೇಡಿಕೆಯ ಆಧಾರದ ಮೇಲೆ ನೀವು ಅವುಗಳನ್ನು ಆಯ್ಕೆ ಮಾಡಿಕೊಳ್ಳಿರಿ.

ಲೂಧಿಯಾನ ಮೂಲದ ಉದ್ಯಮಿ ಎಸ್. ಅಮನ್‌ಪ್ರೀತ್‌ ತಿಂಡ್ ಅವರ ಅಜ್ಜ 1937 ರಲ್ಲಿ ಅಮೃತಸರಿ ಪಾಪಡ್ ವ್ಯವಹಾರವನ್ನು 100 ರೂಪಾಯಿಗಳೊಂದಿಗೆ ಪ್ರಾರಂಭಿಸಿದರು. ಇಂದು, ಒಬ್ಬರು ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ಕನಿಷ್ಠ 25,000 ರೂಪಾಯಿಗಳ ಹೂಡಿಕೆಯು ಹಪ್ಪಳಗಳನ್ನು ಸಂಗ್ರಹಿಸಲು ಮತ್ತು ಸಾಮಾಜಿಕ ಮಾಧ್ಯಮ ಚಾನೆಲ್‌ಗಳ ಮೂಲಕ ಅಥವಾ ಇ-ಕಾಮರ್ಸ್‌ನಲ್ಲಿ ಆನ್‌ಲೈನ್‌ನಲ್ಲಿ ಸಹ ಮಾರಾಟ ಮಾಡಲು ಪ್ರಾರಂಭಿಸಲು ಸಾಕಾಗುತ್ತದೆ.

6. ಡಿಸ್ಪೋಸಬಲ್ ಕಟ್ಲರಿ:

ಪ್ಲಾಸ್ಟಿಕ್, ಅಡಿಕೆಯಿಂದ ಹಿಡಿದು ಬಿದಿರಿನ ಚಮಚಗಳು, ಬಟ್ಟಲುಗಳು ಮತ್ತು ತಟ್ಟೆಗಳವರೆಗೆ, ಬಿಸಾಡಬಹುದಾದ ಕಟ್ಲರಿಗಳ ಮಾರುಕಟ್ಟೆಯು ಭಾರತದಲ್ಲಿ ನಿರಂತರ ಬೇಡಿಕೆಯನ್ನು ಹೊಂದಿದೆ. ವಿಶೇಷವಾಗಿ ಕ್ವಿಕ್ ಸರ್ವೀಸ್ ರೆಸ್ಟೋರೆಂಟ್‌ಗಳು, ಚಿಲ್ಲರೆ ವ್ಯಾಪಾರ ಮತ್ತು ಹಲವಾರು ಸಂದರ್ಭಗಳಲ್ಲಿ ಗ್ರಾಹಕರಿಂದ ಸಹ ನೀವು ಆರ್ಡರ್ ಪಡೆಯಬಹುದು.

ಡಿಸ್ಪೋಸಬಲ್ ಕಟ್ಲರಿ ವ್ಯವಹಾರವು ಕಡಿಮೆ ಹೂಡಿಕೆ ಮತ್ತು ಹೆಚ್ಚಿನ ಲಾಭದ ವ್ಯವಹಾರವಾಗಿದೆ. ಏಕೆಂದರೆ ಖರೀದಿಸಿದ ವಸ್ತುಗಳು ಸ್ಥಳೀಯ ಸಗಟು ವ್ಯಾಪಾರಿಗಳು ಅಥವಾ ತಯಾರಕರಿಂದ ಬಂದಿವೆ.

7. ಮಸಾಲೆ ಪದಾರ್ಥಗಳು:

ಭಾರತವು ಸಾಂಬಾರ ಪದಾರ್ಥಗಳ ದೊಡ್ಡ ಮಾರುಕಟ್ಟೆಯಾಗಿದ್ದು, ದೇಶಾದ್ಯಂತದಿಂದ ಹೆಚ್ಚಿನ ಬೇಡಿಕೆ ಬರುತ್ತಿದೆ. ಈ ಮೊದಲು, ನಾವು ಮನೆಯಲ್ಲಿ ತಯಾರಿಸಿದ ತಾಜಾ ಮಸಾಲೆಗಳನ್ನು ಬಳಸುತ್ತಿದ್ದೆವು, ಮತ್ತು ಅದನ್ನು ಮುಂದುವರಿಸುತ್ತಿದ್ದೆವು. ಗರಂ ಮಸಾಲಾ, ಜೀರಾ ಮಸಾಲಾ, ಪರಾಠಾ ಮಸಾಲಾ ಸೇರಿದಂತೆ ಅನೇಕ ಮಸಾಲೆಗಳನ್ನು ಮನೆಯಲ್ಲಿ ತಯಾರಿಸಲಾಗುತ್ತದೆ ಮತ್ತು ಅವುಗಳಿಗೆ ನಿರಂತರ ಬೇಡಿಕೆ ಇದೆ.

ತಾಯಿ-ಮಗಳು ಜೋಡಿ ಊರ್ಮಿಳಾ ಮತ್ತು ಆರತಿ ಸಮಂತ್ ಮುಂಬೈ ಮೂಲದ ಮಸಾಲೆ ಟೋಕ್ರಿ ಎಂಬ ಬ್ರ್ಯಾಂಡ್ ಅನ್ನು ಪ್ರಾರಂಭಿಸಿದರು, ಅದನ್ನು ಅವರು ತಮ್ಮ ಕುಟುಂಬ ಮತ್ತು ಸ್ನೇಹಿತರ ವಲಯದಲ್ಲಿ ಮಾರಾಟ ಮಾಡುವ ಮೂಲಕ ಪ್ರಾರಂಭಿಸಿದರು. ಎರಡು ವರ್ಷಗಳ ಅವಧಿಯಲ್ಲಿ, ಇವರಿಬ್ಬರು ಈಗ 1 ಕೋಟಿ ರೂಪಾಯಿಗಳ ವಹಿವಾಟು ಮುಟ್ಟುವ ಗುರಿಯನ್ನು ಹೊಂದಿದ್ದಾರೆ. ವ್ಯವಹಾರವು ಲಾಭದಾಯಕವಾಗಿದೆ ಮತ್ತು ಕಚ್ಚಾ ವಸ್ತುಗಳನ್ನು ಸಂಗ್ರಹಿಸಲು ಸಣ್ಣ ಹೂಡಿಕೆಯ ಅಗತ್ಯವಿದೆ.

ಇದನ್ನೂ ಓದಿ: Business Ideas: ಸಣ್ಣ ವ್ಯಾಪಾರ, ಕಡಿಮೆ ಬಂಡವಾಳ, ಭಾರೀ ಲಾಭ: ನೀವು ಆರಂಭಿಸಿ ಈ ಬ್ಯುಸಿನೆಸ್

ಮಸಾಲಾಗಳನ್ನು ಊರ್ಮಿಳಾ ಎಚ್ಚರಿಕೆಯಿಂದ ಕ್ಯುರೇಟ್ ಮಾಡುತ್ತಾರೆ. ಮಸಾಲಾ ಚಕ್ಕಿಗಳ ಕುಟುಂಬ ವ್ಯವಹಾರವನ್ನು ನಡೆಸುವ ಅವರ ಹಿನ್ನೆಲೆಯು ದೇಶಾದ್ಯಂತದ ಪ್ರೀಮಿಯಂ ಕಚ್ಚಾವಸ್ತು ಮಾರಾಟಗಾರರೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡಿತು ಎಂದು ಆರತಿ ಹೇಳುತ್ತಾರೆ.

8. ಬಟನ್‌ಗಳು (ಗುಂಡಿಗಳು):

ಯಾವುದೇ ಉಡುಪುಗಳಲ್ಲಿ ಬಟನ್‌ಗಳು ತುಂಬಾನೇ ಮುಖ್ಯವಾಗಿರುತ್ತವೆ. ಮಕ್ಕಳ ಮತ್ತು ಮಹಿಳೆಯರ ಬಟ್ಟೆಯಲ್ಲಿ ಬಟನ್‌ಗಳು ಯಾವಾಗಲೂ ಉಡುಗೆಯ ಸೊಬಗನ್ನು ಹೆಚ್ಚಿಸುತ್ತವೆ ಎಂದು ಹೇಳಬಹುದು. ಬಟನ್ ವ್ಯವಹಾರಕ್ಕೆ ಕನಿಷ್ಠ ಹೂಡಿಕೆಯ ಅಗತ್ಯವಿರುತ್ತದೆ ಮತ್ತು ಮಾರಾಟಕ್ಕಾಗಿ ಆನ್‌ಲೈನ್ ಅಂಗಡಿಯನ್ನು ಸ್ಥಾಪಿಸಲು ಮನೆಯಿಂದ ಪ್ರಾರಂಭಿಸಬಹುದು.

ಪ್ಲಾಸ್ಟಿಕ್‌ನಿಂದ ಹಿಡಿದು ಫ್ಯಾಬ್ರಿಕ್ ಮತ್ತು ಸ್ಟೀಲ್ ಬಟನ್‌ಗಳವರೆಗೆ, ನಿಮ್ಮ ವ್ಯವಹಾರದ ಆಯ್ಕೆಯನ್ನು ಅವಲಂಬಿಸಿ ನೀವು ಆಯ್ಕೆ ಮಾಡಬಹುದಾಗಿದೆ. ಮಾರಾಟದ ಉದ್ದೇಶಗಳಿಗಾಗಿ, ಸಾಮಾಜಿಕ ಮಾಧ್ಯಮ ಚಾನೆಲ್‌ಗಳು ಅಥವಾ ಮೆಸೆಂಜರ್‌ಗಳಲ್ಲಿ ಆನ್‌ಲೈನ್‌ನಲ್ಲಿ ಸ್ಥಳೀಯ ಗುಂಪನ್ನು ರಚಿಸುವುದು ಆರಂಭಿಕ ಹಂತವಾಗಿದೆ.
Published by:shrikrishna bhat
First published: