• Home
  • »
  • News
  • »
  • business
  • »
  • Explained: ತೆರಿಗೆ ಪಾವತಿದಾರರಿಗೆ ಕೇಂದ್ರದಿಂದ ಸಿಹಿ ಸುದ್ದಿ, ಹೊಸ ಪ್ರಸ್ತಾವನೆಯಿಂದ ಸಾರ್ವಜನಿಕರಿಗೆ ನಿರಾಳ

Explained: ತೆರಿಗೆ ಪಾವತಿದಾರರಿಗೆ ಕೇಂದ್ರದಿಂದ ಸಿಹಿ ಸುದ್ದಿ, ಹೊಸ ಪ್ರಸ್ತಾವನೆಯಿಂದ ಸಾರ್ವಜನಿಕರಿಗೆ ನಿರಾಳ

ಇನ್ನು ಮುಂದೆ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಎಲ್ಲಾ ತೆರಿಗೆದಾರರಿಗೆ ಒಂದೇ ಆದಾಯ ತೆರಿಗೆ ರಿಟರ್ನ್ (ITR) ನಮೂನೆಯನ್ನು ನೀಡಿ ಅದರ ಮೂಲಕ ತೆರಿಗೆ ಪಾವತಿ ನೀಡಲು ಅನುಮತಿ ನೀಡಲು ವಿಶೇಷ ಪ್ರಸ್ತಾಪವನ್ನು ಮಾಡಿದೆ.

ಇನ್ನು ಮುಂದೆ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಎಲ್ಲಾ ತೆರಿಗೆದಾರರಿಗೆ ಒಂದೇ ಆದಾಯ ತೆರಿಗೆ ರಿಟರ್ನ್ (ITR) ನಮೂನೆಯನ್ನು ನೀಡಿ ಅದರ ಮೂಲಕ ತೆರಿಗೆ ಪಾವತಿ ನೀಡಲು ಅನುಮತಿ ನೀಡಲು ವಿಶೇಷ ಪ್ರಸ್ತಾಪವನ್ನು ಮಾಡಿದೆ.

ಇನ್ನು ಮುಂದೆ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಎಲ್ಲಾ ತೆರಿಗೆದಾರರಿಗೆ ಒಂದೇ ಆದಾಯ ತೆರಿಗೆ ರಿಟರ್ನ್ (ITR) ನಮೂನೆಯನ್ನು ನೀಡಿ ಅದರ ಮೂಲಕ ತೆರಿಗೆ ಪಾವತಿ ನೀಡಲು ಅನುಮತಿ ನೀಡಲು ವಿಶೇಷ ಪ್ರಸ್ತಾಪವನ್ನು ಮಾಡಿದೆ.

  • Share this:

    ಪ್ರತಿ ವರ್ಷದ ಕೊನೆ ತಿಂಗಳು ಬಂತೆಂದರೆ ಸಾಕು, ತೆರಿಗೆ ಪಾವತಿ ಮಾಡೋರಿಗೆ ತಲೆ ಬಿಸಿ ಶುರು ಆಗಿಬಿಡುತ್ತೆ. ಕೆಲವು ಸಲ ತೆರಿಗೆ ಕಟ್ಟೋದು ಸುಲಭ ಆದ್ರೆ, ಅದನ್ನ ಯಾವ ಪ್ರಕ್ರಿಯೆ ಮೂಲಕ ಪಾವತಿ ಮಾಡಬೇಕು ಅನ್ನೋದು ತೆರಿಗೆ ಪಾವತಿಸುವವರಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತೆ. ಈ ಸಮಸ್ಯೆ ಇನ್ನು ಮುಂದೆ ತೆರಿಗೆ ಪಾವತಿದಾರರು ಎದುರಿಸಬಾರದು ಅಂತ ಕೇಂದ್ರ ಸರ್ಕಾರ ಒಂದು ಪ್ರಮುಖವಾದ ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳಬಹುದು. ಅದೇನು ಅಂತ ಈ ಲೇಖನದಲ್ಲಿ ಸವಿವರವಾಗಿ ನೋಡೋಣ ಬನ್ನಿ.


    ತೆರಿಗೆದಾರರಿಗೆ ಹೊಸ ಪ್ರಸ್ತಾಪನೆಯಿತ್ತ CBDT


    ಇನ್ನು ಮುಂದೆ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಯು ಎಲ್ಲಾ ತೆರಿಗೆದಾರರಿಗೆ ಒಂದೇ ಆದಾಯ ತೆರಿಗೆ ರಿಟರ್ನ್ (ITR) ನಮೂನೆಯನ್ನು ನೀಡಿ ಅದರ ಮೂಲಕ ತೆರಿಗೆ ಪಾವತಿ ನೀಡಲು ಅನುಮತಿ ನೀಡಲು ವಿಶೇಷ ಪ್ರಸ್ತಾಪವನ್ನು ಮಾಡಿದೆ.


    ಇದರ ಡ್ರಾಫ್ಟ್ ಫಾರ್ಮ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಎಲ್ಲಾ ಪಾಲುದಾರರು ಡಿಸೆಂಬರ್ 15 ರವರೆಗೆ ಇನ್‌ಪುಟ್‌ಗಳನ್ನು ಒದಗಿಸಬಹುದು ಎಂದು ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.ಪ್ರಸ್ತುತ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಪ್ರತಿಯೊಬ್ಬ ವ್ಯಕ್ತಿಗೆ ಪ್ರತ್ಯೇಕ ನಮೂನೆ ಲಭ್ಯವಿದೆ.


    ಇದನ್ನೂ ಓದಿ:   EPFO: ಡಿಜಿಲಾಕರ್‌ನಿಂದ UAN ಸೇರಿ ಪ್ರಮುಖ ದಾಖಲೆಗಳನ್ನು ಹೀಗೆ ಡೌನ್‌ಲೋಡ್ ಮಾಡಿ!


    ಇದರಿಂದ ತೆರಿಗೆದಾರರಲ್ಲಿ ಗೊಂದಲ ಉಂಟಾಗುವುದು ಸಾಮಾನ್ಯ. ಆದರೆ ಮುಂಬರುವ ಅವಧಿಯಲ್ಲಿ ಈ ಸಮಸ್ಯೆ ನಿವಾರಣೆಯಾಗಲಿದೆ. ಎಲ್ಲಾ ತೆರಿಗೆದಾರರಿಗೆ ಒಂದೇ ಐಟಿಆರ್ ಫಾರ್ಮ್ ಲಭ್ಯವಾಗುವಂತೆ ಮಾಡಲು ಕೇಂದ್ರವು ಆಶಿಸುತ್ತಿದೆ. ಆದಾಯ ತೆರಿಗೆ ಇಲಾಖೆ ಕೂಡ ಇತ್ತೀಚೆಗೆ ಈ ಕಾಮನ್ ಐಟಿಆರ್ ಅನ್ನು ಪ್ರಸ್ತಾಪಿಸಿದೆ.


    CBDT ಯು ತನ್ನ ಕರಡು ಪ್ರತಿಯಲ್ಲಿ ಏನನ್ನು ಉಲ್ಲೇಖಿಸಿದೆ?


    "ಪ್ರಸ್ತುತ ITR ಗಳು ಗೊತ್ತುಪಡಿಸಿದ ನಮೂನೆಗಳ ರೂಪದಲ್ಲಿವೆ. ಇದರಲ್ಲಿ ತೆರಿಗೆದಾರರು CBDT ಯ ವೇಳಾಪಟ್ಟಿಯನ್ನು ಕಡ್ಡಾಯವಾಗಿ ಅನುಸರಿಸಬೇಕಾಗುತ್ತದೆ. ನಿರ್ದಿಷ್ಟ ವೇಳಾಪಟ್ಟಿ ಅನ್ವಯಿಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ನೋಡದೆಯೇ ತೆರಿಗೆಯನ್ನು ಪಾವತಿಸಬಹುದಾಗಿದೆ. ಇದು ITR ಗಳನ್ನು ಸಲ್ಲಿಸಲು ತೆಗೆದುಕೊಳ್ಳುವ ಸಮಯವನ್ನು ಹೆಚ್ಚಿಸುತ್ತದೆ ಮತ್ತು ತೆರಿಗೆದಾರರು ತೆರಿಗೆ ಪಾವತಿ ಮಾಡುವಾಗ ಎದುರಿಸುವ ತೆರಿಗೆ ಸಮಸ್ಯೆಗಳನ್ನು ಪರಿಹರಿಸುತ್ತದೆ” ಎಂದು CBDT ಯು ತನ್ನ ಕರಡು ಪ್ರತಿಯಲ್ಲಿ ಉಲ್ಲೇಖಿಸಿದೆ ಎಂದು ಸುದ್ದಿ ಮಾಧ್ಯಮ ಎಕನಾಮಿಕ್ ಟೈಮ್ಸ್ ತಿಳಿಸಿದೆ.


    ಈಗ ಎಷ್ಟು ರೀತಿಯ ಆದಾಯ ತೆರಿಗೆ ರಿಟರ್ನ್ (ITR) ಫಾರ್ಮ್‌ಗಳಿವೆ?


    ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ಲಭ್ಯವಿರುವ ಎಲ್ಲಾ ಐಟಿಆರ್ ಫಾರ್ಮ್‌ಗಳನ್ನು ಒಂದು ಐಟಿಆರ್ ಫಾರ್ಮ್‌ಗೆ ತರಲು ಉದ್ದೇಶಿಸಿದೆ. ಆದಾಯ ತೆರಿಗೆ ಇಲಾಖೆಯು ಐಟಿಆರ್ 7 ಹೊರತುಪಡಿಸಿ ಎಲ್ಲಾ ಫಾರ್ಮ್‌ಗಳನ್ನು ತರಲು ಮತ್ತು ಸಾಮಾನ್ಯ ಐಟಿಆರ್‌ನೊಂದಿಗೆ ಬರಲು ಯೋಜಿಸುತ್ತಿದೆ.


    ಪ್ರಸ್ತುತ, 7 ವಿಧದ ಆದಾಯ ತೆರಿಗೆ ರಿಟರ್ನ್ (ITR) ಫಾರ್ಮ್‌ಗಳನ್ನು ವಿವಿಧ ವರ್ಗಗಳ ತೆರಿಗೆದಾರರು ಸಲ್ಲಿಸುತ್ತಾರೆ. ಅವು ಈ ಕೆಳಗಿನಂತಿವೆ:


    • 'ಸಹಜ್' ಎಂದು ಕರೆಯಲಾಗುವ ITR ಫಾರ್ಮ್ 1, ಇದು ಸಣ್ಣ ಮತ್ತು ಮಧ್ಯಮ ತೆರಿಗೆದಾರರಿಗೆ ಇರುವ ಆದಾಯ ರಿಟರ್ನ್‌ ಫಾರ್ಮ್‌ ಆಗಿದೆ. ಈ ಸಹಜ್ ಫಾರ್ಮ್‌ಗಳನ್ನು 50 ಲಕ್ಷದವರೆಗಿನ ಆದಾಯ ಹೊಂದಿರುವ ವ್ಯಕ್ತಿಗಳು, ಸಂಬಳ, ಒಂದು ಮನೆ ಆಸ್ತಿ/ಇತರ ಮೂಲಗಳು ಅಥವಾ ಬಡ್ಡಿಯ ಗಳಿಕೆಯನ್ನಯ ಹೊಂದಿರುವವರು ಸಲ್ಲಿಸಬಹುದು.

    • ITR-2 ಫಾರ್ಮ್‌ ಅನ್ನು ವಸತಿ ಆಸ್ತಿಯ ಆದಾಯ ಇರುವ ಜನರು ಸಲ್ಲಿಸುತ್ತಾರೆ.

    • ITR-3 ಫಾರ್ಮ್‌ ಅನ್ನು ವ್ಯಾಪಾರ/ವೃತ್ತಿಯಿಂದ ಬರುವ ಲಾಭದ ಆದಾಯ ಹೊಂದಿರುವ ತೆರಿಗೆದಾರರು ಸಲ್ಲಿಸುತ್ತಾರೆ.

    • ITR-4 (Sugam) ಫಾರ್ಮ್‌ ಎಂಬುದು ITR-1 (ಸಹಜ್) ನಂತಹ ಸರಳ ರೂಪದ ಆದಾಯ ತೆರಿಗೆ ರಿಟರ್ನ್‌ ಫಾರ್ಮ್‌ ಆಗಿದೆ. ವ್ಯವಹಾರ ಮತ್ತು ವೃತ್ತಿಯಿಂದ 50 ಲಕ್ಷ ರೂ.ವರೆಗಿನ ಒಟ್ಟು ಆದಾಯವನ್ನು ಹೊಂದಿರುವ ಸಂಸ್ಥೆಗಳು ಮತ್ತು ವ್ಯಕ್ತಿಗಳು, ಹಿಂದೂ ಅವಿಭಜಿತ ಕುಟುಂಬಗಳು ಈ ಫಾರ್ಮ್‌ ಅನ್ನು ಸಲ್ಲಿಸಬಹುದು.

    • ITR-5 ಮತ್ತು 6 ಕ್ರಮವಾಗಿ ಸೀಮಿತ ಹೊಣೆಗಾರಿಕೆ ಪಾಲುದಾರಿಕೆಗಳು (LLP ಗಳು) ಮತ್ತು ವ್ಯವಹಾರಗಳಿಗೆ ಸಂಬಂಧಿಸಿದ ಆದಾಯ ತೆರಿಗೆ ರಿಟರ್ನ್‌ ಫಾರ್ಮ್‌ ಅನ್ನು ಸಲ್ಲಿಸಬಹುದು.

    • ITR-7 ಫಾರ್ಮ್‌ ಅನ್ನು ಟ್ರಸ್ಟ್‌ಗಳು ಮತ್ತು ಲಾಭೋದ್ದೇಶವಿಲ್ಲದ ಸಂಸ್ಥೆಗಳು ಸಲ್ಲಿಸುತ್ತವೆ.



    ಹಾಗಿದ್ರೆ ಈ ಹೊಸ ಪ್ರಸ್ತಾಪನೆಯಲ್ಲಿ ಆಗಿರುವ ಪ್ರಮುಖ ಬದಲಾವಣೆಗಳೇನು?


    ಹಣಕಾಸು ಸಚಿವಾಲಯದ ಪ್ರಸ್ತಾವನೆಯ ಪ್ರಕಾರ, ಟ್ರಸ್ಟ್‌ಗಳು ಮತ್ತು ಲಾಭೋದ್ದೇಶವಿಲ್ಲದ ಸಂಸ್ಥೆಗಳನ್ನು ಹೊರತುಪಡಿಸಿ ಎಲ್ಲಾ ತೆರಿಗೆದಾರರು ಒಂದೇ ಐಟಿಆರ್ ಫಾರ್ಮ್ ಮೂಲಕ ರಿಟರ್ನ್ಸ್ ಸಲ್ಲಿಸಬಹುದು. ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು ಈ ವಿಷಯದ ಬಗ್ಗೆ ಉದ್ಯಮದಿಂದ ಸಲಹೆಗಳನ್ನು ಕೇಳಿದೆ. ವರ್ಚುವಲ್ ಡಿಜಿಟಲ್ ಆಸ್ತಿಗಳಿಂದ ಬರುವ ಆದಾಯವನ್ನು ಮಾತ್ರ ಪ್ರತ್ಯೇಕ ನಮೂನೆಯ ಮೂಲಕ ಬಹಿರಂಗಪಡಿಸಬೇಕಾಗುತ್ತದೆ. ಉಳಿದವರಿಗೆ ಒಂದು ಐಟಿಆರ್ ಮಾತ್ರ ಲಭ್ಯವಾಗುವಂತೆ ಮಾಡಬಹುದು.


    ಡಿಸೆಂಬರ್ 15 ರವರೆಗೆ ಗಡುವು


    ಇದಕ್ಕೆ ಸಂಬಂಧಪಟ್ಟ ಸಲಹೆಗಳನ್ನು ನೀಡಲು CBDT ಯು ಎಲ್ಲ ಪಾಲುದಾರರಿಗೆ ಡಿಸೆಂಬರ್ 15 ರವರೆಗೆ ಗಡುವು ನೀಡಲಾಗಿದೆ. ನಂತರ CBDT ಈ ಅಂಶಗಳನ್ನು ಪರಿಶೀಲಿಸಿ ಅಂತಿಮ ನಿರ್ಧಾರಕ್ಕೆ ಬರಲಿದೆ. ಪ್ರಸ್ತಾವಿತ ಏಕ ಸಾಮಾನ್ಯ ITR ಬದಲಾವಣೆಗಳನ್ನು ಸಂಯೋಜಿಸುತ್ತದೆ ಮತ್ತು ಅದನ್ನು ಜಾರಿಗೆ ತರುತ್ತದೆ.


    "CBDT ಯ ಉದ್ದೇಶಿತ ITR ಫಾರ್ಮ್‌ನ ಕರಡು ಪ್ರತಿಯಲ್ಲಿ ITR-7 ಫಾರ್ಮ್‌ ಅನ್ನು ಹೊರತುಪಡಿಸಿ ಅಸ್ತಿತ್ವದಲ್ಲಿರುವ ಎಲ್ಲಾ ಆದಾಯವನ್ನು ವಿಲೀನಗೊಳಿಸುವ ಮೂಲಕ ಕಾಮನ್‌ ITR ಅನ್ನು ಪರಿಚಯಿಸಲು ಪ್ರಸ್ತಾಪಿಸುತ್ತದೆ" ಎಂದು CBDT ಹೇಳಿಕೆ ನೀಡಿದೆ.


    ಎಲ್ಲರಿಗೂ ಒಂದೇ ರೀತಿಯ ಐಟಿಆರ್ ಇರುವುದಿಲ್ಲ


    ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ತೆರಿಗೆ ಪಾವತಿ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಕೇಂದ್ರ ಹಣಕಾಸು ಇಲಾಖೆ ಆಶಿಸುತ್ತಿದೆ. ಅದಕ್ಕಾಗಿಯೇ ಒಂದೇ ಐಟಿಆರ್ ರೂಪವನ್ನು ತರಲು ಯೋಜಿಸುತ್ತಿದೆ. ITR 7 ಹೊರತುಪಡಿಸಿ ಎಲ್ಲವನ್ನೂ ವಿಲೀನಗೊಳಿಸಲಾಗುತ್ತದೆ. ಪ್ರಸ್ತುತ ತೆರಿಗೆದಾರರು ತಮ್ಮ ITR ಅನ್ನು ಸಲ್ಲಿಸಲು ITR 1 ರಿಂದ ITR 7 ವರೆಗಿನ ಫಾರ್ಮ್‌ಗಳನ್ನು ಆರಿಸಬೇಕಾಗುತ್ತದೆ. ಎಲ್ಲರಿಗೂ ಒಂದೇ ರೀತಿಯ ಐಟಿಆರ್ ಇರುವುದಿಲ್ಲ. ಉದ್ಯೋಗಿಗಳು, ವ್ಯಾಪಾರಿಗಳು, ಸ್ವಯಂ ಉದ್ಯೋಗಿಗಳು, ಪ್ರತಿಯೊಬ್ಬರೂ ತಮ್ಮದೇ ಆದ ITR ಅನ್ನು ಹೊಂದಿದ್ದಾರೆ.


    ವೈಯಕ್ತಿಕ ತೆರಿಗೆದಾರರು ಬಳಸುವ ITR-1 (Sahaj) ಮತ್ತು ITR-4 (Sugam) ಅನ್ನು ವಿಥ್‌ಡ್ರಾನ್‌ ಮಾಡಬಹುದೇ?


    “ಇಲ್ಲ. ಇದಕ್ಕೆ ಅವಕಾಶವಿಲ್ಲ. ತೆರಿಗೆ ಪಾವತಿಸಲು, ತೆರಿಗೆದಾರರಿಗೆ ಎರಡು ಆಯ್ಕೆಗಳು ಲಭ್ಯವಿದೆ. ITR 1 ರಿಂದ ITR 4 ರವರೆಗಿನ ಫಾರ್ಮ್‌ಗಳು ಹಾಗೆಯೇ ಮುಂದುವರಿಯುತ್ತವೆ. ಆದ್ದರಿಂದ ತೆರಿಗೆದಾರರು ಇವುಗಳನ್ನು ಆಯ್ಕೆ ಮಾಡಬಹುದು ಅಥವಾ ಹೊಸದಾಗಿ ತರುತ್ತಿರುವ ಕಾಮನ್‌ ITR ಫಾರ್ಮ್ ಅನ್ನು ಕೂಡ ನೀವು ಆಯ್ಕೆ ಮಾಡಬಹುದು. ಯಾವುದೇ ಆಯ್ಕೆ ಇರಲಿ ಅದು ಕೇವಲ ಒಂದೇ ಒಂದು ಆಯ್ಕೆ ಆಗಿರಬೇಕು. ITR ಅನ್ನು ಯಾವುದೇ ರೀತಿಯಲ್ಲಿ ಸಲ್ಲಿಸಲು ನಮ್ಯತೆ ಇದೆ” ಎಂದು CBDT ಯು ಸೂಚಿಸಿದೆ.


    ತಜ್ಞರು ಏನು ಹೇಳ್ತಾರೆ?


    “ವ್ಯಕ್ತಿ ಅಥವಾ ಆದಾಯದ ಮೂಲಗಳನ್ನು ಲೆಕ್ಕಿಸದೆ ಎಲ್ಲಾ ತೆರಿಗೆದಾರರಿಗೆ ಒಂದೇ ITR ಫಾರ್ಮ್ ಅನ್ನು ಬಿಡುಗಡೆ ಮಾಡಲು CBDT ಪ್ರಯತ್ನಿಸಿದೆ. ಆದರೆ, ITR 7 (ಚಾರಿಟೇಬಲ್ ಟ್ರಸ್ಟ್‌ಗಳಿಗೆ ಅನ್ವಯಿಸುವ ಆದಾಯ ತೆರಿಗೆ ರಿಟರ್ನ್‌) ಉಳಿಯುತ್ತದೆ. ಅಲ್ಲದೆ ITR-1(ಸಂಬಳ ಪಡೆಯುವ ವ್ಯಕ್ತಿಗಳು) ಮತ್ತು ITR - 4 ( ತೆರಿಗೆ ಪದ್ಧತಿ) ಹೊಸ ITR ಫಾರ್ಮ್‌ ಅನ್ನು ಹೊಂದಿರುತ್ತೆ.]


    ಇದನ್ನೂ ಓದಿ:  Business Idea: ಮನೆಯಿಂದಲೇ ಈ ಬ್ಯುಸಿನೆಸ್​ ಶುರು ಮಾಡಿ, ವರ್ಷಕ್ಕೆ 5 ಲಕ್ಷ ಸುಲಭವಾಗಿ ಗಳಿಸಿ!


    ಟ್ರಾನ್ಸ್ಫರ್ ಬೆಲೆ, ಆಗಾಗ ಕ್ಲೈಮ್ ಮಾಡಲಾದ ಕಡಿತಗಳು ಮತ್ತು ಕ್ಲಬ್ಬಿಂಗ್‌ನಂತಹ ನಿಬಂಧನೆಗಳಂತಹ ಬಹಳ ದಿನಕ್ಕೆ ಬಳಸಲಾದ ವೇಳಾಪಟ್ಟಿಗಳನ್ನು ಪ್ರತ್ಯೇಕವಾಗಿ ಇರಿಸಿದರೆ ತೆರಿಗೆದಾರರಿಗೆ ಈ ನಿಯಮ ಉತ್ತಮವಾಗಿ ಸಹಾಯಕ್ಕೆ ಬರುತ್ತದೆ” ಎಂದು ಮಾಜಿ IRS ಅಧಿಕಾರಿ ಮತ್ತು Taxbuddy.com ನ ಸಂಸ್ಥಾಪಕ ಸುಜಿತ್ ಬಂಗಾರ್ ಅವರು ಸುದ್ದಿ ಮಾಧ್ಯಮ ಎಕನಾಮಿಕ್ ಟೈಮ್ಸ್‌ಗೆ ತಿಳಿಸಿದರು.


    ಇದು ಸಾರ್ವಜನಿಕರಿಗೆ ಹೇಗೆ ಪ್ರಯೋಜನವಾಗಲಿದೆ?


    ಹಣಕಾಸು ಸಚಿವಾಲಯದ ಪ್ರಕಾರ, ಉದ್ದೇಶಿತ ಫಾರ್ಮ್‌ ಪ್ರತ್ಯೇಕದಡಿಯಲ್ಲಿ ಡಿಜಿಟಲ್ ಸ್ವತ್ತುಗಳ ಆದಾಯದೊಂದಿಗೆ ಬಳಕೆದಾರ ಸ್ನೇಹಿಯಾಗಿದೆ.


    “ಹಣಕಾಸು ಸಚಿವಾಲಯದ ಅಡಿಯಲ್ಲಿ , ITR-1 ಮತ್ತು 4 ನೆಯ ಫಾರ್ಮ್‌ ಗಳು ಯಥಾವತ್ತಾಗಿ ಹಾಗೆಯೇ ಮುಂದುವರಿಯುತ್ತವೆ. ಆದರೆ ತೆರಿಗೆದಾರರು ಕಾಮನ್‌ ITR ರೂಪದಲ್ಲಿ ಆದಾಯವನ್ನು ಸಲ್ಲಿಸುವ ಆಯ್ಕೆಯನ್ನು ಹೊಂದಿರುತ್ತಾರೆ” ಎಂದು CBDT ಯು ಹೇಳಿದೆ.

    Published by:Precilla Olivia Dias
    First published: