Ola Scooter Broke: ಓಡಿಸುವಾಗಲೇ ಮುರಿದ ಓಲಾ ಸ್ಕೂಟರ್ ಸಸ್ಪೆನ್ಷನ್! ಬೇರೆ ಸ್ಕೂಟರ್ ಕೊಡುತ್ತಾ ಕಂಪನಿ?

ಮುರಿದುಹೋದ ಸ್ಕೂಟರ್

ಮುರಿದುಹೋದ ಸ್ಕೂಟರ್

Ola Electric Scooter: ರಸ್ತೆ ಅಪಘಾತದಿಂದ ನಮ್ಮ ಜೀವವನ್ನು ಉಳಿಸಿಕೊಡುವಂತೆ ನಾವು ವಿನಂತಿಸುತ್ತೇವೆ. ನಾನು ಖರೀದಿಸಿರುವ ಓಲಾ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್​ನಲ್ಲಿ ಕಳಪೆ ವಸ್ತುಗಳನ್ನು ಬಳಸಲಾಗಿದೆ ಎಂದು ಮೆನನ್ ಬರೆದಿದ್ದಾರೆ.

  • Share this:

ಓಲಾ ಸೇರಿದಂತೆ ಕೆಲವು ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್​ಗಳಿಗೆ ಬೆಂಕಿ ತಗುಲುತ್ತಿರುವ ಘಟನೆಗಳು (Electric Scooter Fire)ಆಗಾಗ ವರದಿಯಾಗುತ್ತಲೇ ಇವೆ. ಬ್ಯಾಟರಿ ದೋಷದಿಂದ ಎಲೆಕ್ಟ್ರಿಕ್ ಸ್ಕೂಟರ್​ಗಳಿಗೆ ಬೆಂಕಿ ತಗುಲುತ್ತಿದೆ ಎಂದು ವರದಿಯಾಗಿದೆ. ಈ ಬೆನ್ನಲ್ಲೇ ಬೆಂಕಿ ತಗುಲುವ ದೂರಿನ ಜೊತೆಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಎಸ್1 ಪ್ರೊನ (Ola S1 Pro) ಮುಂಭಾಗದ ಸಸ್ಪೆನ್ಶನ್ ಸವಾರಿ ಮಾಡುವಾಗ ಮುರಿದಿದೆ (Ola S1 Pro Scooter Suspension Broke)ಎಂದು ಬಳಕೆದಾರರು ದೂರಿದ್ದಾರೆ. ತಮಗೆ ಉಂಟಾದ ಸಮಸ್ಯೆಯನ್ನು ಚಿತ್ರ ಸಮೇತ ಟ್ವೀಟ್ ಮಾಡಿರುವ ಓಲಾ ಗ್ರಾಹಕರಾದ (Ola Customer) ಶ್ರೀನಾಥ್ ಮೆನನ್ ಅವರು ವಾಹನವನ್ನು ಬದಲಿಸಿಕೊಡುವಂತೆ ಓಲಾ ಕಂಪನಿ ಬಳಿ ವಿನಂತಿಸಿದ್ದಾರೆ.


ಸಣ್ಣ ವೇಗದ ಡ್ರೈವಿಂಗ್‌ನಲ್ಲಿಯೂ ಮುಂಭಾಗದ ಸಸ್ಪೆನ್ಶನ್ ಒಡೆಯುತ್ತಿದೆ. ಇದು ನಾವು ಈಗ ಎದುರಿಸುತ್ತಿರುವ ಗಂಭೀರ ಮತ್ತು ಅಪಾಯಕಾರಿ ವಿಷಯವಾಗಿದೆ. ನಮಗೆ ಬದಲಿ ಸ್ಕೂಟರ್ ಅಥವಾ ವಿನ್ಯಾಸ ಬದಲಾವಣೆಯ ಅಗತ್ಯವಿದೆ. ರಸ್ತೆ ಅಪಘಾತದಿಂದ ನಮ್ಮ ಜೀವವನ್ನು ಉಳಿಸಿಕೊಡುವಂತೆ ನಾವು ವಿನಂತಿಸುತ್ತೇವೆ. ನಾನು ಖರೀದಿಸಿರುವ ಓಲಾ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್​ನಲ್ಲಿ ಕಳಪೆ ವಸ್ತುಗಳನ್ನು ಬಳಸಲಾಗಿದೆ ಎಂದು ಮೆನನ್ ಬರೆದಿದ್ದಾರೆ.


ಇನ್ನೂ ಹಲವರಿಂದ ಆರೋಪ
ಅನೇಕ ಇತರ ಬಳಕೆದಾರರು ಸಹ ಈ ಟ್ವೀಟ್​ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್​ನ ಗುಣಮಟ್ಟದ ಸಮಸ್ಯೆಗಳು, ಸ್ಥಗಿತವಾಗುವುದು ಮತ್ತು ಕಳಪೆ ಮಾರಾಟದ ಅನುಭವಗಳ ಸಮಸ್ಯೆಗಳನ್ನು ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: Electric Scooter Ban: ಎಲೆಕ್ಟ್ರಿಕ್ ಸ್ಕೂಟರ್ ಬ್ಯಾನ್? ಇಲ್ಲಿದೆ ಉತ್ತರ


ವಾಹನ ತಯಾರಕರೇ, ತಪ್ಪು ಮಾಡಬೇಡಿ
ಇತ್ತೀಚೆಗೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗಿವೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ವಾಹನ ತಯಾರಕರಿಂದ ತಪ್ಪು ಕಂಡುಬಂದರೆ ಭಾರಿ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದರು.


ಪುನರಾವರ್ತನೆ ಆಗಬಾರದು
ಇದೇ ರೀತಿಯ ಘಟನೆಗಳು ಪುನರಾವರ್ತನೆಯಾಗುವ ಬದಲು ಮರುಪಡೆಯುವಿಕೆಗಳನ್ನು ನೀಡಬಹುದು. ಈ ಮಧ್ಯೆ ತಮ್ಮ ಉತ್ಪನ್ನಗಳನ್ನು ಸರಿಪಡಿಸಬಹುದು ಎಂದು ಸಚಿವರು ಸಲಹೆ ನೀಡಿದರು. ಯಾವುದೇ ಕಂಪನಿಯು ತನ್ನ ಪ್ರಕ್ರಿಯೆಗಳಲ್ಲಿ ನಿರ್ಲಕ್ಷ್ಯ ವಹಿಸಿದರೆ, ಭಾರಿ ದಂಡವನ್ನು ವಿಧಿಸಲಾಗುವುದು ಮತ್ತು ದೋಷಯುಕ್ತ ವಾಹನಗಳನ್ನು ಹಿಂಪಡೆಯಲು ಆದೇಶಿಸಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.


ಇದನ್ನೂ ಓದಿ: Tax Exemption For EV: ಎಲೆಕ್ಟ್ರಿಕ್ ವಾಹನ ಖರೀದಿಸಿದ್ರೆ ತೆರಿಗೆ ವಿನಾಯಿತಿ ಸಿಗುತ್ತಾ? ಇಲ್ಲಿದೆ ಮಾಹಿತಿ

top videos


    ಒಕಿನಾವಾ, ಪ್ಯೂರ್‌ಇವಿ, ಓಲಾ ಎಲೆಕ್ಟ್ರಿಕ್ ಮೊದಲಾದ ಕಂಪನಿಗಳ ಬೈಕ್‌ಗಳು ಈಗಾಗಲೇ ಬೆಂಕಿಗೆ ಆಹುತಿಯಾಗಿವೆ. ಇದು ಈ ಕಂಪನಿಗಳು ತಮ್ಮ ಸ್ಕೂಟರ್‌ಗಳನ್ನು ಮರು-ಪರಿಶೀಲನೆಗಾಗಿ ಹಿಂಪಡೆಯಲು ಪ್ರೇರೇಪಿಸಿದೆ. ಗುರುಗ್ರಾಮ ಮೂಲದ ಒಕಿನಾವಾ ಆಟೋಟೆಕ್ ಈ ತಿಂಗಳ ಆರಂಭದಲ್ಲಿ 3,215 ವಾಹನಗಳನ್ನು ಹಿಂತೆಗೆದುಕೊಂಡರೆ, ಹೈದರಾಬಾದ್ ಮೂಲದ ಪವರ್ ಯೂಸಿಂಗ್ ರಿನ್ಯೂವಬಲ್ ಎನರ್ಜಿ (ಪ್ಯೂರ್) ಇವಿ ಇನ್ನೂ 2,000 ವಾಹನಗಳನ್ನು ಹಿಂಪಡೆದಿದೆ.

    First published: