ಇತ್ತೀಚೆಗೆ, ವಿವಿಧ ಪ್ರಮುಖ ಕಂಪನಿಗಳು ನಿರಂತರವಾಗಿ ವಜಾ (Layoff) ಗಳನ್ನು ನಡೆಸುತ್ತಿವೆ. ರಷ್ಯಾ-ಉಕ್ರೇನ್ (Russia-Ukraine) ಯುದ್ಧದ ನಂತರದ ಕೊರೊನಾ ವೈರಸ್ (Corona Virus) ಮತ್ತು ಆರ್ಥಿಕ ಕುಸಿತವು ಜಗತ್ತನ್ನು ಆರ್ಥಿಕ ಹಿಂಜರಿತಕ್ಕೆ ತಳ್ಳಿದೆ. ಮೈಕ್ರೋಸಾಫ್ಟ್ (Microsoft) , ಟ್ವಿಟರ್ (Twitter) , ಅಮೆಜಾನ್ (Amazon) ಸೇರಿದಂತೆ ಎಂಎನ್ಸಿ ಕಂಪನಿ (MNC Company) ಗಳಿಂದ ಉದ್ಯೋಗಿಗಳನ್ನು ವಜಾ ಗೊಳಿಸಿಲಾಗಿದೆ. ಜೊತೆಗೆ ಭಾರತ (India) ದ ಹಲವು ಕಂಪನಿಗಳು ಕಳೆದ ಕೆಲವು ತಿಂಗಳುಗಳಿಂದ ವಜಾಗೊಳಿಸುತ್ತಿವೆ. ಇದೀಗ ಓಲಾ (OLA) ಕೂಡ ಈ ಅಖಾಡಕ್ಕೆ ಜಿಗಿದಿದೆ ಎಂದರೆ ತಪ್ಪಾಗಲ್ಲ. ಹೌದು, ಬೆಂಗಳೂರು ಮೂಲದ ಪ್ರಮುಖ ರೈಡ್-ಹೇಲಿಂಗ್ ಕಂಪನಿ ಓಲಾ ತನ್ನ ಟೆಕ್ ಮತ್ತು ಉತ್ಪನ್ನ ತಂಡಗಳಲ್ಲಿ ಕೆಲಸ ಮಾಡುತ್ತಿರುವ 200 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ.
ಓಲಾ ಕಂಪನಿಯಿಂದ 200 ಮಂದಿ ಉದ್ಯೋಗಿಗಳು ವಜಾ!
ಓಲಾ ಕ್ಯಾಬ್ಸ್, ಓಲಾ ಎಲೆಕ್ಟ್ರಿಕ್ ಮತ್ತು ಓಲಾ ಫೈನಾನ್ಶಿಯಲ್ ಸರ್ವಿಸಸ್ನಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಈ ವಜಾಗೊಳಿಸುವಿಕೆಯಿಂದ ತೊಂದರೆಗೀಡಾಗಿದ್ದಾರೆ. ಕಂಪನಿಯನ್ನು ಪುನರ್ರಚಿಸಲು ಮತ್ತು ಕೆಲಸದ ದಕ್ಷತೆಯನ್ನು ಸುಧಾರಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಓಲಾ ವಕ್ತಾರರು ತಿಳಿಸಿದ್ದಾರೆ.
ಆದಾಯ ಕಡಿಮೆಯಾಗಿದ್ದಕ್ಕೆ ಗೇಟ್ಪಾಸ್?
2021 ರ ಹಣಕಾಸು ವರ್ಷದಲ್ಲಿ, ಓಲಾ ರೂ.689.61 ಕೋಟಿ ಆದಾಯ ಗಳಿಸಿದೆ. ಇದು ಹಿಂದಿನ ವರ್ಷಕ್ಕಿಂತ ಶೇ 65ರಷ್ಟು ಕಡಿಮೆಯಾಗಿದೆ. 2021 ರಲ್ಲಿ ರೂ 610.18 ಕೋಟಿ ನಷ್ಟವನ್ನು ಅನುಭವಿಸಿದ ಓಲಾ, 2022 ರಲ್ಲಿ 1000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ.
ಇತ್ತೀಚೆಗೆ, ಅಮೆಜಾನ್ ಕೂಡ 18,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತು. ಭಾರತವೊಂದರಲ್ಲೇ ಸುಮಾರು 1,000 ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. ಕೆಲಸ ಬಿಟ್ಟ ಉದ್ಯೋಗಿಗಳಿಗೆ ಅಮೆಜಾನ್ 5 ತಿಂಗಳ ಬೇರ್ಪಡಿಕೆ ವೇತನವನ್ನು ನೀಡಿದೆ.
ಇದನ್ನೂ ಓದಿ: ಎಲ್ರದ್ದೂ ಆಯ್ತು, ಈಗ ಜೊಮ್ಯಾಟೊ ಸರದಿ! ಇನ್ಮುಂದೆ ಲೇಟಾಗಿ ಬರಬಹುದು ನಿಮ್ಮ ಆರ್ಡರ್!
ಜೊಮ್ಯಾಟೊ ಸಹ ಸಂಸ್ಥಾಪಕ ಮೋಹಿತ್ ಗುಪ್ತಾ ರಾಜೀನಾಮೆ!
ಈಗಾಗಲೇ ಜೊಮ್ಯಾಟೊವನ್ನು ಕಟ್ಟಿ ಬೆಳೆಸಿದ, ಸಹ-ಸಂಸ್ಥಾಪಕ ಮೋಹಿತ್ ಗುಪ್ತಾ ರಾಜೀನಾಮೆ ನೀಡಿದ್ದಾರೆ. ಈ ನಡುವೆ ಸಂಸ್ಥೆಯು ಸುಮಾರು ಶೇಕಡ 3ರಷ್ಟು ಉದ್ಯೋಗ ಕಡಿತವನ್ನು ಮಾಡುವುದಾಗಿ ಘೋಷಣೆ ಮಾಡಿದೆ. ಆ್ಯಪ್ ಆಧಾರಿತ ಖ್ಯಾತ ಆನ್ಲೈನ್ ಆಹಾರ ವಿತರಣಾ ಕಂಪನಿ ಜೊಮ್ಯಾಟೊ ಸಹ-ಸಂಸ್ಥಾಪಕ ಮೋಹಿತ್ ಗುಪ್ತಾ ಶುಕ್ರವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಟ್ವಿಟರ್ ಹಾದಿಹಿಡಿದ ಜೊಮ್ಯಾಟೊ!
ನಾಲ್ಕೂವರೆ ವರ್ಷಗಳ ಹಿಂದೆ ಜೊಮ್ಯಾಟೊಗೆ ಸೇರಿದ್ದ ಗುಪ್ತಾ, ಅದರ ಆಹಾರ ವಿತರಣಾ ವ್ಯವಹಾರದ ಸಿಇಒ ಸ್ಥಾನದಿಂದ 2020ರಲ್ಲಿ ಸಹ-ಸಂಸ್ಥಾಪಕರಾಗಿ ಬಡ್ತಿ ಪಡೆದಿದ್ದರು.ಪ್ರಮುಖವಾಗಿ ಸಂಸ್ಥೆಯಲ್ಲಿ ತನ್ನ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜೊಮ್ಯಾಟೊ ಈ ಹಾದಿಯನ್ನು ಹಿಡಿದಿದೆ. ಈ ಬಗ್ಗೆ ಶನಿವಾರ ಘೋಷಣೆ ಮಾಡಿದೆ. ಹಲವಾರು ಸಾಮಾಜಿಕ ಜಾಲತಾಣ ಸಂಸ್ಥೆಗಳು ತಮ್ಮ ಸಂಸ್ಥೆಯಲ್ಲಿ ನಷ್ಟವನ್ನು ಸರಿದೂಗಿಸಲು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುತ್ತಿರುವ ನಡುವೆಯೇ ಜೊಮ್ಯಾಟೊ ಈ ನಿರ್ಧಾರವನ್ನು ಕೈಗೊಂಡಿದೆ.
ಶೇ.3ರಷ್ಟು ಉದ್ಯೋಗಿಗಳ ವಜಾ ನಿರ್ಧಾರ
ಇತ್ತೀಚಿನ LiveMint ವರದಿಯ ಪ್ರಕಾರ Zomato ಕಂಪನಿಯ ವಿವಿಧ ವಿಭಾಗಗಳಲ್ಲಿನ ಉದ್ಯೋಗಿಗಳನ್ನು ವಜಾಗೊಳಿಸಲು ಪ್ರಯತ್ನಿಸುತ್ತಿದೆ. ಕಂಪನಿಯ 3 ಪ್ರತಿಶತದಷ್ಟು ಉದ್ಯೋಗಿಗಳನ್ನು ಕಡಿತಗೊಳಿಸಲು ಸಿದ್ಧವಾಗಿದೆ. ವಜಾಗೊಳಿಸುವಿಕೆಯ ಪರಿಣಾಮವು ಕಂಪನಿಯ ಹಲವು ವಿಭಾಗಗಳಲ್ಲಿ ಕಂಡುಬರುತ್ತದೆ ಎಂದು ಅದು ಹೇಳಿದೆ. ತಂತ್ರಜ್ಞಾನ, ಉತ್ಪನ್ನ ಮತ್ತು ಮಾರುಕಟ್ಟೆಯಂತಹ ವಿಭಾಗಗಳು ವಜಾಗೊಳಿಸುವಿಕೆಯಿಂದ ಪ್ರಭಾವಿತವಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ