Offline payments: ಆಫ್‌ಲೈನ್‌ ಪಾವತಿಗೆ ಮಿತಿ ವಿಧಿಸಿದ ಆರ್‌ಬಿಐ

ಆಫ್‌ಲೈನ್ ವೇದಿಕೆಯ ಮೂಲಕ ಸಣ್ಣ ಮೊತ್ತದ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಚೌಕಟ್ಟಿನ ಭಾಗವಾಗಿ" ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

 ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತದಲ್ಲಿ ಡಿಜಿಟಲ್ ಕ್ರಾಂತಿಯಾದ ನಂತರ ಸ್ಮಾರ್ಟ್‌ಫೋನ್(Smartphone) ಬಳಕೆಯಲ್ಲಿ ದೊಡ್ಡ ಕ್ರಾಂತಿಯೇ (Biggest Revolution) ಆಗಿದೆ. ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್ ಲಭ್ಯವಾಗುತ್ತಿರುವುದು, ಅಗ್ಗದ ದರದಲ್ಲಿ ಅಂತರ್ಜಾಲ ಸಂಪರ್ಕ ದೊರೆಯುತ್ತಿರುವುದು ಭಾರತದಲ್ಲಿ ಡಿಜಿಟಲ್ ವೇದಿಕೆಯ ಬಳಕೆಯನ್ನು ದುಪ್ಪಟ್ಟುಗೊಳಿಸಿದೆ. ಹೀಗಿದ್ದೂ ಶೇ. 41ರಷ್ಟು ಭಾರತೀಯರ ಬಳಿ ಮಾತ್ರ ಸ್ಮಾರ್ಟ್‌ಫೋನ್ ಮತ್ತು ಅಂತರ್ಜಾಲ ಸಂಪರ್ಕ ಲಭ್ಯವಿದೆ ಎಂದು ವಿಶ್ವ ಬ್ಯಾಂಕ್ ದತ್ತಾಂಶದಿಂದ ತಿಳಿದು ಬಂದಿದೆ. ಹೀಗಾಗಿ ದೊಡ್ಡ ಪ್ರಮಾಣದ ಭಾರತೀಯರು ಡಿಜಿಟಲ್ ವೇದಿಕೆ ಬಳಕೆಯಲ್ಲಿ ಇನ್ನೂ ಹಿಂದೆ ಬಿದ್ದಿದ್ದಾರೆ.ಈ ಹಿನ್ನೆಲೆ ಡಿಜಿಟಲ್ ಪಾವತಿ ಉತ್ತೇಜಿಸಲು ಭಾರತೀಯ ರಿಸರ್ವ್ ಬ್ಯಾಂಕ್(Reserve Bank of India) ಆಫ್‌ಲೈನ್ ಪಾವತಿಯನ್ನು (Offline payment) ಜಾರಿಗೊಳಿಸಲು ಮುಂದಾಗಿದೆ. ಆಫ್‌ಲೈನ್ ಪಾವತಿಗೆ ಮಿತಿ 200 ರೂ. ಆಗಿದ್ದರೂ, ಕೆಲ ಸಂದರ್ಭದಲ್ಲಿ 2000 ರೂ. ವರೆಗೆ ಅವಕಾಶವಿದೆ. ಇನ್ನು, 2000 ರೂ. ಗೆ ಮೇಲ್ಪಟ್ಟ ಪಾವತಿಗಳನ್ನು ಕಡ್ಡಾಯವಾಗಿ ಆನ್‌ಲೈನ್ ಮೂಲಕ ಮಾಡಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಡಿಜಿಟಲ್ ಸೇವಾದಾರರಿಗೆ ನಿರ್ದೇಶನ ನೀಡಿದೆ.

ಮುಖಾಮುಖಿ ಮಾತ್ರ
ಸೋಮವಾರ ಈ ಕುರಿತು ವೈಯಕ್ತಿಕ ಆಫ್‌ಲೈನ್ ಪಾವತಿ ವಹಿವಾಟಿಗೆ 200 ರೂ. ಮಿತಿಯನ್ನು ನಿಗದಿಗೊಳಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್, ಇಂತಹ ಪಾವತಿ ವಹಿವಾಟುಗಳು ಮುಖಾಮುಖಿ ಮಾತ್ರ ನಡೆಯಬೇಕು ಎಂದು ಷರತ್ತು ವಿಧಿಸಿದೆ.

ಇದನ್ನೂ ಓದಿ: GPay, Paytm, PhonePe, BHIM ರಕ್ಷಣೆಗೆ ಈ ವಿಧಾನಗಳನ್ನು ಅನುಸರಿಸಿ

"ಆಫ್‌ಲೈನ್ ವೇದಿಕೆಯ ಮೂಲಕ ಸಣ್ಣ ಮೊತ್ತದ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಚೌಕಟ್ಟಿನ ಭಾಗವಾಗಿ" ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರ ಪ್ರಾಯೋಗಿಕ ಪರೀಕ್ಷೆಯನ್ನು ದೇಶದ ಕೆಲವು ಭಾಗಗಳಲ್ಲಿ ಸೆಪ್ಟೆಂಬರ್ 2020ರಿಂದ ಜುಲೈ 2021ರವರೆಗೆ ನಡೆಸಲಾಗಿತ್ತು. ಇದಕ್ಕೂ ಮುನ್ನ ಆಗಸ್ಟ್ 6, 2020ರಂದು ಸಣ್ಣ ಮೊತ್ತದ ಡಿಜಿಟಲ್ ಪಾವತಿಗಳನ್ನು ಆಫ್‌ಲೈನ್ ಮೂಲಕ ನಡೆಸಲು ಸಾಧ್ಯವಾಗುವಂತಹ ತಾಂತ್ರಿಕ ಆವಿಷ್ಕಾರಗಳನ್ನು ಉತ್ತೇಜಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಾಯೋಗಿಕ ಯೋಜನೆಯೊಂದನ್ನು ಜಾರಿಗೊಳಿಸಿತ್ತು.

ಅಂತರ್ಜಾಲ ಅಗತ್ಯವಿಲ್ಲ
ಆಫ್‌ಲೈನ್ ಪಾವತಿಯು ಯಾವುದೇ ಅಂತರ್ಜಾಲ ಅಥವಾ ದೂರವಾಣಿ ಸಂಪರ್ಕದ ಅಗತ್ಯವಿಲ್ಲದ ವಹಿವಾಟಾಗಿದೆ. ಪರವಾನಗಿ ಪಡೆದ ಪಾವತಿ ವ್ಯವಸ್ಥೆ ನಿರ್ವಾಹಕರು ಹಾಗೂ ಪಾವತಿ ವ್ಯವಸ್ಥೆ ಪಾಲುದಾರರು ಸಣ್ಣ ಮೊತ್ತದ ಆಫ್‌ಲೈನ್ ಡಿಜಿಟಲ್ ಪಾವತಿಯನ್ನು ಸರಾಗವಾಗಿಸಿಕೊಳ್ಳಲು ಹೊಸ ಮಾರ್ಗಸೂಚಿಗಳಿಗೆ ಬದ್ಧವಾಗಿರಬೇಕಾಗುತ್ತದೆ ಎಂದು ನಿಯಂತ್ರಕರು ಹೇಳಿದ್ದಾರೆ.

"ಪಾವತಿ ಸಾಧನದ ಒಟ್ಟು ವಹಿವಾಟು ಮಿತಿಯು ಒಂದು ಬಾರಿಗೆ ಗರಿಷ್ಠ 2000 ರೂ. ಮಾತ್ರ ಆಗಿರುತ್ತದೆ. ಈ ಮಿತಿ ದಾಟಿದ ವಹಿವಾಟನ್ನು ಹೆಚ್ಚುವರಿ ಅಂಶದ ಪ್ರಮಾಣೀಕರಣದೊಂದಿಗೆ ಆನ್‌ಲೈನ್ ವೇದಿಕೆಯಲ್ಲಿ ಮಾತ್ರ ಪಾವತಿ ಮಾಡಬಹುದಾಗಿದೆ" ಎಂದು ನಿಯಂತ್ರಣ ಪ್ರಾಧಿಕಾರ ಹೇಳಿದೆ.

ಸಂಪರ್ಕರಹಿತ ವಹಿವಾಟು
ಗ್ರಾಹಕರ ಸ್ಪಷ್ಟವಾದ ಒಪ್ಪಿಗೆ ಪಡೆದ ನಂತರವಷ್ಟೇ ಆಫ್‌ಲೈನ್ ಪಾವತಿ ಮಾಡಲು ಪಾವತಿ ಸಾಧನ ಬಳಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದೆ. ಇದಲ್ಲದೆ 2020ರ ಜನವರಿಯಲ್ಲಿ ಜಾರಿಗೊಳಿಸಲಾಗಿದ್ದ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದ್ದು, ಈ ವಹಿವಾಟುಗಳ ಸಂದರ್ಭದಲ್ಲಿ ಕಾರ್ಡ್‌ಗಳನ್ನು ಸಂಪರ್ಕರಹಿತ ವಹಿವಾಟು ಸಾಧನಕ್ಕೆ ಒಡ್ಡುವ ಅವಶ್ಯಕತೆ ಇರುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಇದನ್ನೂ ಓದಿ: ಮೆಸೇಜ್ ಬರುತ್ತೆ, ಹಣ ಬರಲ್ಲ.. ಅಂಗಡಿಗಳ ಮಾಲೀಕರೇ Google Pay, PhonePe, Paytm ಬಗ್ಗೆ ಇರಲಿ ಎಚ್ಚರ!

"ಗ್ರಾಹಕರು ದೂರುಗಳಿದ್ದಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಸಮಗ್ರ ಒಂಬುಡ್ಸ್‌ಮನ್ ಯೋಜನೆಯನ್ವಯ ಕುಂದುಕೊರತೆ ಸ್ಪಂದನೆ ವಿಭಾಗವನ್ನು ಸಂಪರ್ಕಿಸಬಹುದಾಗಿದೆ. ಆಫ್‌ಲೈನ್ ಮೂಲಕ ಡಿಜಿಟಲ್ ಪಾವತಿ ಸಾಧ್ಯವಾಗಿಸುವ ಯಾವುದೇ ಬಗೆಯ ಪಾವತಿ ವಿಧಾನವನ್ನು ಸ್ಥಗಿತಗೊಳಿಸುವ ಅಥವಾ ಪರಿವರ್ತಿಸುವ ಹಕ್ಕನ್ನು ಕಾಯ್ದಿರಿಸಿಕೊಂಡಿದೆ" ಎಂದು ನಿಯಂತ್ರಣ ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಡಿಜಿಟಲ್ ಪಾವತಿ
ಹಲವಾರು ವರ್ಷಗಳಿಂದ ಆಫ್‌ಲೈನ್ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ ಕಾರ್ಯೋನ್ಮುಖವಾಗಿದ್ದು, ಪಾವತಿ ಹಾಗೂ ತೀರುವಳಿ ವ್ಯವಸ್ಥೆಯನ್ನು ತನ್ನ ಮುನ್ನೋಟ ದಾಖಲೆ 2019-20ರಲ್ಲೂ ಸೇರ್ಪಡೆಗೊಳಿಸಿತ್ತು. ಮೇ 2019ರಲ್ಲಿ ಬಿಡುಗಡೆಯಾಗಿದ್ದ ದಾಖಲೆಯಲ್ಲಿ ಗ್ರಾಹಕರು ಮೊಬೈಲ್ ತಾಂತ್ರಿಕತೆಯನ್ನು ಹೊಂದಿರುವುದರಿಂದ ಡಿಜಿಟಲ್ ಪಾವತಿಯು ವೇಗವಾಗಿ ಬೆಳವಣಿಗೆಯಾಗುತ್ತಿದೆ ಎಂದು ಗ್ರಾಹಕರ ವರ್ತನೆಯನ್ನು ಪರಿಗಣಿಸಿ ಉಲ್ಲೇಖಿಸಲಾಗಿತ್ತು.
Published by:vanithasanjevani vanithasanjevani
First published: